Asianet Suvarna News Asianet Suvarna News

ಲಕ್ಷ್ಮೀ ನಿವಾಸ ಸೀರಿಯಲ್ ಲಕ್ಷ್ಮೀ ರಿಯಲ್‌ ಲೈಫಲ್ಲೂ ಕಷ್ಟಗಳ ಕಾರ್ಮೋಡ, ಆ ದುರಂತದ ಬಗ್ಗೆ ನಟಿ ಶ್ವೇತಾ ಏನು ಹೇಳ್ತಾರೆ ಕೇಳಿ..

ಜನಪ್ರಿಯ ನಟಿ ಶ್ವೇತಾ ಅವರ ಬದುಕಿನಲ್ಲಿ ನಡೆದ ದುರಂತ ಘಟನೆಗಳು ಅವರನ್ನು ಸಿನಿಮಾರಂಗದಿಂದ ದೂರ ಮಾಡಿದವು. ಪತಿಯ ಅಪಘಾತ ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ಕುಟುಂಬ ನಿರ್ವಹಣೆ ಮಾಡುತ್ತಿದ್ದ ನಟಿ, ಈಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

zee kannada lakshmi nivasa serial lakshmi fame actress Shwetha life story
Author
First Published Aug 19, 2024, 8:42 AM IST | Last Updated Aug 19, 2024, 1:16 PM IST

'ಚೈತ್ರದ ಪ್ರೇಮಾಂಜಲಿ' ಅನ್ನೋ ಸಿನಿಮಾವನ್ನು ಒಂದು ಜನರೇಶನ್ ಮಂದಿ ಮರೆಯೋದಿಲ್ಲ. ಅದರ ಹಾಡುಗಳು ಅಷ್ಟು ಇಂಪು, ಕಥೆ ಅಷ್ಟು ನವಿರಾದದ್ದು, ಇನ್ನು ನಟನೆ ವಿಚಾರ ಕೇಳೋದೇ ಬೇಡ. ಈ ಬ್ಲಾಕ್‌ಬಸ್ಟರ್‌ ಸಿನಿಮಾದ ನಾಯಕಿ ಶ್ವೇತಾ. ಸಿನಿಮಾ ಪ್ರೀತಿಯೇ ಇವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಳ್ಕೊಂಡು ಬರುತ್ತೆ. ಸ್ಯಾಂಡಲ್‌ವುಡ್ ಸೇರಿದಂತೆ ಸುಮಾರು ೭೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ವೇತಾ ನಟಿಸಿದ್ದಾರೆ. ಅವರು ನಟಿಸಿದ ಕನ್ನಡದ ಕೊನೆಯ ಸಿನಿಮಾ ಇಪ್ಪತ್ತು ವರ್ಷಕ್ಕೂ ಹಿಂದೆ ರಿಲೀಸ್ ಆಗಿರೋ 'ಕುಟುಂಬ'. ಆಮೇಲೆ ಅವರು ಮರು ಎಂಟ್ರಿ ಕೊಟ್ಟಿದ್ದು ಕನ್ನಡ ಸೀರಿಯಲ್‌ಗೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ನಿವಾಸದ ಲಕ್ಷ್ಮೀ ಪಾತ್ರದಲ್ಲಿ ಈ ಶ್ವೇತಾ ಮನೆಮಾತು. ಕನ್ನಡಿಗರಿಗೆ ಇವರು ಶ್ವೇತಾ ಅಂತ ಚಿರ ಪರಿಚಿತರು. ಆದರೆ ಬೇರೆ ಭಾಷೆಗೆ ಹೋದರೆ ಅಲ್ಲಿ ಅವರನ್ನು ವಿನೋದಿನಿ ಅಂತ ಕರೀತಾರೆ. ಈ ಬಹುಭಾಷಾ ನಟಿ ತಮಿಳು, ಮಲೆಯಾಳಂ ಭಾಷೆಯ ಸಿನಿಮಾಗಳಲ್ಲೆಲ್ಲ ವಿನೋದಿನಿ ಅನ್ನೋ ಹೆಸರಲ್ಲಿ ನಟಿಸಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಿಂದ ಆಚೆ ಹೋದರೆ ಅವರು ವಿನೋದಿನಿ ಅನ್ನೋ ಹೆಸರಲ್ಲೇ ಫೇಮಸ್ಸು.

ಲಕ್ಷ್ಮೀ ನಿವಾಸ ಸೀರಿಯಲ್ ಸೀರಿಯಲ್ ಟಿಆರ್‌ಪಿಯಲ್ಲಿ ಹಿಂದೆ ಬಿದ್ದಿದ್ದಿಲ್ಲ. ಇದರಲ್ಲಿ ನಾಲ್ಕೈದು ಎಳೆಗಳಲ್ಲಿ ಕಥೆ ಸಾಗುತ್ತೆ. ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತನ್ನ ಪಾತ್ರದಂತೆ ಈಕೆಯ ಲೈಫಲ್ಲಿ ಬಂದಿದ್ದು ಕಷ್ಟಗಳ ಸರಮಾಲೆ ಅಂತಾನೇ ಹೇಳಬಹುದು. ದಾಂಪತ್ಯದಲ್ಲಿ ನೋವುಗಳು ಹೆಚ್ಚಾದ್ರೆ ಎಷ್ಟೋ ಜನ ಡಿವೋರ್ಸ್‌ಗೆ ಮುಂದಾಗ್ತಾರೆ. ಆದರೆ ಒಂದಷ್ಟು ಜನ ಇಂತಹ ವಿಚಾರದಲ್ಲಿ ಮಾದರಿಯಾಗಿ ನಿಂತುಕೊಳ್ಳುತ್ತಾರೆ. ಅಂತಹವರಲ್ಲಿ ಒಬ್ಬರು ನಟಿ ಶ್ವೇತಾ ಅಥವಾ ವಿನೋದಿನಿ.

ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಅಂದ್ರೆ ವೀಕ್ಷಕರ ಫೇವರಿಟ್… ಈ ನಟಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಈ ಹಿರಿಯ ನಟಿ ಮೂಲತಃ ತಮಿಳುನಾಡಿನವರಾದರೂ ಕನ್ನಡದಲ್ಲೂ ದೊಡ್ಡ ಹೆಸರು ಗಳಿಸಿದ್ರು.. ಇಂತಹ ಶ್ವೇತ ಬದುಕಿನಲ್ಲೊಂದು ದುರಂತ ನಡೆಯಿತು. ಈ ನಟಿಯ ಪತಿಯ ಹೆಸರು ಶ್ರೀಧರ್. ಇಬ್ಬರೂ ಉತ್ತಮ ಜೋಡಿಯಾಗಿ ಅನೇಕ ಫೋಟೋಗಳಲ್ಲಿ, ಆಪ್ತರ ಮನಸ್ಸಿನಲ್ಲಿ ಸೆರೆಯಾಗಿದ್ದರು. ಆದರೆ ನಟಿಯ ಗಂಡನಿಗೆ ಹಣದಲ್ಲಿ ಮೋಸವಾಗುತ್ತೆ. ಇಡೀ ಕುಟುಂಬ ಏಕಾಏಕಿ ಕಷ್ಟದಲ್ಲಿ ಬೀಳುತ್ತೆ. ಗಾಯದ ಮೇಲೆ ಬರೆ ಎಳೆದ ಹಾಗೆ ಶ್ರೀಧರ್‌ ಅವರಿಗೆ ಬೈಕ್‌ ಆಪಘಾತವಾಗುತ್ತೆ. ಅದರಿಂದ ಬದುಕು ಬಹಳ ದಾರುಣ ಹಂತ ತಲುಪುತ್ತದೆ. ಸ್ವತಂತ್ರವಾಗಿ ಇಂದಿಗೂ ಓಡಾಡಲಾಗದ ಶ್ರೀಧರ್‌ಗೆ ವೀಲ್‌ ಚೇರ್‌ ಆಧಾರ. ಈ ಎಲ್ಲ ವಿಚಾರವನ್ನು ನಟಿ ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ಶ್ವೇತಾ ಅವರ ಪತಿಗೆ ದುಡಿಯಲಾಗದೇ

ಕುಟುಂಬದ ಜವಾಬ್ದಾರಿಯೆಲ್ಲ ಈಕೆಯ ಹೆಗಲ ಮೇಲೆ ಬೀಳುತ್ತೆ. ಒಂದು ಕಡೆ ಗಂಡ, ಮತ್ತೊಂದು ಕಡೆ ಮಕ್ಕಳು.. ಎಲ್ಲವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇರುವುದರಿಂದ ಈ ಪ್ರತಿಭಾವಂತ ನಟಿ ಸಿನಿಮಾರಂಗದಿಂದಲೇ ದೂರವಾಗುತ್ತಾರೆ.

ಅಕ್ಕ-ತಂಗಿ ಜಗಳದಲ್ಲಿ 'ಅಮೃತಧಾರೆ'ಗೆ ಟಿಆರ್‌ಪಿ!

ಎಷ್ಟೋ ಸಮಯದ ನಂತರ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಈಗ ಕಿರುತೆರೆಗೆ ಕಾಲಿಟ್ಟಿದ್ದು ಅದೆಷ್ಟೋ ಕನ್ನಡ ಸಿನಿಪ್ರೇಮಿಗಳಿಗೆ ಹಬ್ಬದಂತಾಗಿದೆ. ಇವರ ಅದ್ಭುತ ಅಭಿನಯಕ್ಕೆ ಸೀರಿಯಲ್‌ ಪ್ರೇಮಿಗಳು ಸಹ ಫುಲ್‌ ಫಿದಾ ಆಗಿದ್ದಾರೆ. ಸೀರಿಯಲ್‌ನಲ್ಲಿ ಸದ್ಯ ದುಡಿಮೆ ಇಲ್ಲದ ಗಂಡ, ತಾತ್ಸಾರ ಮಾಡುವ ಮಕ್ಕಳ ನಡುವೆ ಬಲುಕಷ್ಟದಿಂದ ದಿನದೂಡುವ ಪಾತ್ರ ಇವರದು. ಮಾಗಿದ ಇವರ ನಟನೆಗೆ ಎಲ್ಲೆಡೆಯಿಂದ ಭರಪೂರ ಮೆಚ್ಚುಗೆ ಹರಿದುಬರುತ್ತಿದೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios