- Home
- Entertainment
- TV Talk
- ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಅಂದ್ರೆ ವೀಕ್ಷಕರ ಫೇವರಿಟ್… ಈ ನಟಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ
ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಅಂದ್ರೆ ವೀಕ್ಷಕರ ಫೇವರಿಟ್… ಈ ನಟಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೀಣಾ ಪಾತ್ರದಲ್ಲಿ ಮಿಂಚುತ್ತಿರುವ, ಜನರ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ನಟಿ ಲಕ್ಷ್ಮಿ ಹೆಗಡೆ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಝೀ ಕನ್ನಡದಲ್ಲಿ ಪ್ರವಾಸವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಎಲ್ಲಾ ಪಾತ್ರವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇದರಲ್ಲಿ ಸೊಸೆ ವೀಣಾ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಲಕ್ಷ್ಮಿ ಶ್ರೀನಿವಾಸರ ಕುಟುಂಬದಲ್ಲಿ ಒಂದೊಂದು ಮಕ್ಕಳು ಒಂದೊಂದು ರೀತಿ, ಹೆಣ್ಣುಮಕ್ಕಳು ಒಂದು ರೀತಿಯಾದರೆ, ಗಂಡು ಮಕ್ಕಳು ತಮ್ಮ ಬಗ್ಗೆ ಮಾತ್ರ ಚಿಂತಿಸುವ ಸ್ವಾರ್ಥಿಗಳು. ಅಮ್ಮ- ಅಪ್ಪನ ಬಗ್ಗೆ ಯೋಚನೆ ಮಾಡದೇ ತಾವು ಹೇಗೆ ಶ್ರೀಮಂತರಾಗೋದು, ಅಪ್ಪನ ಹಣ ಹೇಗೆ ತೆಗೆದುಕೊಳ್ಳೋದು ಅಂತ ಯೋಚ್ನೆ ಮಾಡೋರು. ಆದ್ರೆ ಹಿರಿಯ ಸೊಸೆ ವೀಣಾ ಮಾತ್ರ ಅಪ್ಪಟ ಅಪರಂಜಿ.
ಮನೆಯ ಹಿರಿಯ ಮಗ, ಕಂಜೂಸ್ ಜುಗ್ಗ ಆಗಿರುವ ಸಂತೋಷ್ ಪತ್ನಿಯೇ ವೀಣಾ. ಮನೆಯ ಎಲ್ಲಾ ಕೆಲಸವನ್ನು ಮಾಡುತ್ತಾ, ಯಾರು ಏನು ಕೇಳಿದರೂ ಅದನ್ನ ಅವರಿಗಾಗಿ ಮಾಡ್ತಾ, ಅತ್ತೆ ಮಾವನ ಸೇವೆಗೆ ಸದಾ ಸಿದ್ಧವಾಗಿರೋ ಸೊಸೆ ವೀಣಾ. ತನ್ನ ಗಂಡ ಅಪ್ಪ ಅಮ್ಮನ ಮಾರ್ಯಾದೆ ತೆಗೆಯುವಂತೆ ಮಾತನಾಡಿದಾಗ, ಗಂಡನಿಗೆ ಬುದ್ಧಿ ಹೇಳಿ ದೇವರಂತ ಅತ್ತೆ ಮಾವನ ವಿರುದ್ಧ ಮಾತನಾಡಿದ ಗಂಡನ ವಿರುದ್ಧವೇ ತಿರುಗಿ ಬಿದ್ದ ವೀಣಾ ಪಾತ್ರ ಪ್ರತಿಯೊಬ್ಬ ವೀಕ್ಷಕರಿಗೂ ಮೆಚ್ಚುಗೆಯಾಗಿತ್ತು. ತಮ್ಮ ಅದ್ಭುತ ಅಭಿನಯದಿಂದ ವೀಕ್ಷಕರ ಮನಸ್ಸು ಗೆದ್ದಿರುವ ಈ ವೀಣಾ ಪಾತ್ರಧಾರಿ ಯಾರು ಅವರ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.
ವೀಣಾ ಪಾತ್ರಧಾರಿಯ ನಿಜವಾದ ಹೆಸರು ಲಕ್ಷ್ಮಿ ಹೆಗಡೆ (Lakshmi Hegde) . ಇವರು ಈಗಾಗಲೇ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಲಕ್ಷ್ಮಿ ನಿವಾಸದ ವೀಣಾ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿದೆ. ಲಕ್ಷ್ಮೀ ಪಾತ್ರ, ಅಭಿನಯ, ಮಾತು ಎಲ್ಲವನ್ನೂ ಜನರು ಇಷ್ಟಪಟ್ಟಿದ್ದಾರೆ.
ಇನ್ನು ಲಕ್ಷ್ಮೀ ಹೆಗಡೆ ಬಗ್ಗೆ ಹೇಳೋದಾದರೆ ಇವರು ಮೂಲತಃ ಶಿರಸಿಯವರು. ಡಿಗ್ರಿ ಶಿಕ್ಷಣ ಪಡೆದಿರುವ ಈ ನಟಿ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲೂ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲ ಇವರು ಮೂಲತಃ ಗಾಯಕಿ ಕೂಡ ಹೌದು.
ಸರಸಮ್ಮನ ಸಮಾಧಿ, ಕುರುನಾಡು, ಜೊತೆಗಾತಿ, ಟ್ಯಾಬ್ ಸೇರಿ ಹಲವಾರು ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದಾರೆ. ಹಲವು ಸೀರಿಯಲ್ ಗಳಲ್ಲೂ ನಟಿಸಿರುವ ಲಕ್ಷ್ಮಿ ಕೆಲವೊಂದು ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ ಗಳಲ್ಲೂ ನಟಿಸಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿ ಇವರಿಗೆ ಹೆಚ್ಚಿನ ಪ್ರಾಮುಖ್ಯತೆ ತಂದು ಕೊಟ್ಟಿದೆ.
ಲಕ್ಷ್ಮೀ ನಿವಾಸ ಧಾರಾವಾಹಿಯ ಲಕ್ಷ್ಮಿ ಪಾತ್ರಕ್ಕೆ ಅಪಾರ ಮೆಚ್ಚಿಗೆ ವ್ಯಕ್ತಪಡಿಸಿರುವ ವೀಕ್ಷಕರು, ಇವರ ಪಾತ್ರ ನೋಡಿದ್ರೆ, ನಮ್ಮ ಮನೆ ಸದಸ್ಯೆಯನ್ನೇ ನೋಡಿದಂತಾಗುತ್ತೆ. ವೀಣಾ ಡೈಲಾಗ್ ಡೆಲಿವರಿ ಮಾಡೋ ರೀತಿನೇ ಚೆಂದ, ಅವರ ಮಾತು ಕೇಳಿದ್ರೆ, ಕೇಳ್ತಾ ಇರಬೇಕು ಅನಿಸುತ್ತೆ. ಈ ಸೀರಿಯಲ್ ನ (serial) ಫೇವರಿಟ್ ನಟಿ ವೀಣಾ ಎಂದು ವೀಕ್ಷಕರು ಹೇಳಿದ್ದಾರೆ.
ವೀಣಾರದ್ದು ಅತ್ಯುತ್ತಮ ಕ್ಯಾರೆಕ್ಟರ್ ಎಂದು ಹೇಳಿರುವ ಜನರು, ಲಕ್ಷ್ಮೀ ಅಭಿನಯಿಸುತ್ತಿರುವ ಅತ್ತಿಗೆ ಪಾತ್ರವನ್ನು ಸಿಂಹಾದ್ರಿಯ ಸಿಂಹ ಸಿನಿಮಾದ ಅತ್ತಿಗೆಯ ಪಾತ್ರಕ್ಕೆ ಹೋಲಿಸಿ. ಇಂಥಹ ಅತ್ತಿಗೆಯರು ಇದ್ರೆ, ಯಾವ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ ಎಂದಿದ್ದಾರೆ.