ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತನ ಸೈಕೋತನದ ಇನ್ನೊಂದು ಮುಖ ರಿವೀಲ್ ಆಗುತ್ತಿದೆ. ಜಯಂತನ ಗೆಳೆಯ ಸಚಿನ್‌ನಿಂದ ಜಾಹ್ನವಿ ಬಗ್ಗೆ ಸತ್ಯ ಹೊರಬೀಳುವ ಭಯ ಜಯಂತನನ್ನು ಕಾಡುತ್ತಿದೆ. ವೆಂಕಿಯ ಮಾತು ಕಳೆದುಕೊಳ್ಳಲು ಜಯಂತನೇ ಕಾರಣ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.
ಲಕ್ಷ್ಮೀ ನಿವಾಸ ಸೀರಿಯಲ್ ಈಗ ಮತ್ತೆ ನಂ.೧ ಸೀರಿಯಲ್ ಆಗಿ ಗುರುತಿಸಿಕೊಂಡಿದೆ. ಈ ವಾರ ಈ ಸೀರಿಯಲ್ ಟಿಆರ್‌ಪಿ ರೇಸ್‌ನಲ್ಲಿ ಮುಂದಿದೆ. ಈ ಸೀರಿಯಲ್ ಆರಂಭದಿಂದಲೂ ಹತ್ತಾರು ಸಬ್ ಸ್ಟೋರಿ ಲೈನ್‌ಗಳ ಮೂಲಕ ಗಮನ ಸೆಳೆಯುತ್ತಾ ಬಂತು. ಆದರೆ ಈ ಸೀರಿಯಲ್‌ನಲ್ಲಿ ಟಿಆರ್‌ಪಿ ಹೆಚ್ಚೆಚ್ಚು ತರುತ್ತಿದ್ದ ಎಪಿಸೋಡ್ ಅಂದರೆ ಅದು ಸೈಕೋ ಜಯಂತ ಮತ್ತು ಜಾಹ್ನವಿ ಎಪಿಸೋಡ್. ಜೊತೆಗೆ ಸಿದ್ದೇಗೌಡ - ಭಾವನಾ ಕಥೆ ಬಂದರೂ ವೀಕ್ಷಕರು ಇಷ್ಟಪಟ್ಟು ನೋಡ್ತಾರೆ. ಇನ್ನು ಲಕ್ಷ್ಮೀ ಮತ್ತು ಶ್ರೀನಿವಾಸ್ ಅವರ ಮೂಲ ಮನೆಯ ಕಥೆಗೆ ಬಂದರೆ ಅಲ್ಲು ಒಂದಿಲ್ಲೊಂದು ಕಷ್ಟಗಳ ಸರಮಾಲೆ, ಮಗ ಸಂತೋಷನ ದರ್ಪ, ದೌಲತ್ತು, ಸೊಸೆ ವೀಣಾಳ ಒಳ್ಳೆತನ ಇತ್ಯಾದಿಗಳು ಬರುತ್ತಿವೆ. ಸಂತೋಷನ ಸ್ವಾರ್ಥಕ್ಕೆ ವೀಕ್ಷಕರು ಅದೆಷ್ಟು ಶಾಪ ಹಾಕ್ತಾರೋ.. ಅದೇ ರೀತಿ ವೀಣತ್ತಿಗೆ ಅಂದರೆ ಜನರಿಗೆಲ್ಲ ಅಚ್ಚುಮೆಚ್ಚು. ಆಕೆ ಹೇಳುವ ಪ್ರತಿಯೊಂದು ಮಾತನ್ನೂ ತಮ್ಮ ಲೈಫಿಗೆ ಕನೆಕ್ಟ್ ಮಾಡಿಕೊಂಡು ಆಕೆಯನ್ನು ಎತ್ತಿ ಮೆರೆಸೋದು ಇದೆ. ಆದರೂ ಇವರಲ್ಲಿ ಜಯಂತ ಮತ್ತು ಜಾಹ್ನವಿ ಲೈಫ್ ಬಗ್ಗೆ ಅವರಿಗೆ ವಿಶೇಷ ಕುತೂಹಲ. ಕಾರಣ ಜಯಂತನ ಸೈಕೋ ಬಿಹೇವಿಯರ್. ಸದ್ಯ ಆತನ ಸೈಕೋತನದ ಇನ್ನೊಂದು ಮುಖ ರಿವೀಲ್ ಆಗ್ತಾ ಇದೆ. ಇದಕ್ಕೆ ಕಾರಣ ಆತನ ಗೆಳೆಯ ಸಚಿನ್.
ಜಯಂತ್ ಮನೆಗೆ ಗೆಳೆಯ ಸಚಿನ್ ಬಂದಾಗಿನಿಂದ ಜಾನುಗೆ ಎಲ್ಲಿ ಇವನು ತನ್ನ ಬಗ್ಗೆ ಹೇಳುತ್ತಾನೋ ಎಂದು ಜಯಂತ್‌ಗೆ ಭಯ ಕಾಡುತ್ತಿರುತ್ತದೆ. ನಿಮ್ಮ ಫ್ರೆಂಡ್ ಚೆನ್ನಾಗಿ ಮಾತನಾಡುತ್ತಾರೆ. ಅವರು ಬಂದಾಗಿನಿಂದ ನನಗೆ ಚೆನ್ನಾಗಿ ಟೈಮ್ ಪಾಸ್ ಆಗುತ್ತಿದೆ ಎಂದು.
ಅದ್ಭುತವಾದ ಟಾಸ್ಕ್ ಗೆದ್ದು ಬಿಗ್‌ಬಾಸ್‌ನ ಹೊಸ ಕ್ಯಾಪ್ಟನ್ ಆದ ರಜತ್, ಫಿನಾಲೆಗೆ ಒಂದೇ ಸ್ಟೇಪ್!
ಜಾಹ್ನವಿ ಗಂಡನ ಬಳಿ ಹೇಳುತ್ತಾಳೆ. ಅವನಿಗೆ ಯಾವ ಸಮಯದಲ್ಲಿ ಏನು ಮಾತನಾಡಬೇಕು ಎಂದು ಗೊತ್ತಿಲ್ಲ, ಯಾರೊಂದಿಗೋ ಓಡಾಡುವುದು, ಬೇಕಾಬಿಟ್ಟಿ ಜೀವನ ನಡೆಸುವುದು ಅವನಿಗೆ ಅಭ್ಯಾಸ, ಮತ್ತೊಂದು ದೇಶಕ್ಕೆ ಹೋಗಿ ನಮ್ಮ ದೇಶದ ರೀತಿ ನೀತಿಯನ್ನು ಮರೆತಿದ್ದಾನೆ, ಅವನ ಮಾತುಗಳನ್ನು ನೀನು ಇಷ್ಟಪಟ್ಟಿದ್ದೀಯ ಎಂದರೆ ಏನು ಹೇಳಬೇಕೋ ಗೊತ್ತಿಲ್ಲ ಎಂದು ಜಯಂತ್ ಹೇಳುತ್ತಾನೆ.
ಇವನನ್ನು ಮನೆಯಲ್ಲೇ ಬಿಟ್ಟರೆ ನನ್ನ ಬಗ್ಗೆ ಎಲ್ಲವನ್ನೂ ಹೇಳುತ್ತಾನೆ ಎಂದು ಸಚಿನ್‌ನನ್ನೂ ತನ್ನೊಂದಿಗೆ ಆಫೀಸಿಗೆ ಕರೆದೊಯ್ಯುತ್ತಾನೆ. ಜಾಹ್ನವಿ ನೀನು ಅಂದುಕೊಂಡಷ್ಟು ಒಳ್ಳೆಯವರಲ್ಲ, ಅವರು ಒಂದು ಸಮಯದಲ್ಲಿ ಇರುವ ಹಾಗೇ ಯಾವಾಗಲೂ ಇರುವುದಿಲ್ಲ. ಅವರಿಗೆ ನೀನು ಇಲ್ಲಿ ಬಂದಿರುವುದು ಇಷ್ಟವಿಲ್ಲ. ಅವರು ಇಲ್ಲಿ ಏಕೆ ಬಂದಿದ್ದಾರೆ? ಎಂದು ಕೇಳುತ್ತಿದ್ದಾಳೆ ಎನ್ನುತ್ತಾನೆ. ಇದನ್ನು ಕೇಳಿ ಸಚಿನ್‌ಗೆ ಆಶ್ಚರ್ಯವಾದರೂ, ಸರಿ ನಾನು ವಾಪಸ್ ಹೋಗುವೆ ಎಂದು ಒಪ್ಪಿಕೊಳ್ಳುತ್ತಾನೆ. ಇಲ್ಲೇ ಸ್ವಲ್ಪ ದಿನ ಇರಲು ಬಂದ ಜಯಂತ್ ಗೆಳೆಯ ವಾಪಸ್ ಹೋಗುತ್ತಿದ್ದಾನೆ ಎಂದು ತಿಳಿದು ಜಾಹ್ನವಿ ಕೂಡಾ ಆಶ್ಚರ್ಯಗೊಳ್ಳುತ್ತಾಳೆ. ಆದರೆ ಕೊನೆಯಲ್ಲಿ ಸಚಿನ್‌ಗೆ ಜಾಹ್ನವಿ ತುಂಬ ಒಳ್ಳೆಯವಳು, ಇದೆಲ್ಲ ತನ್ನ ಗೆಳೆಯನದೇ ಪಿತೂರಿ ಅಂತ ಗೊತ್ತಾಗಿದೆ. ಅಷ್ಟೇ ಅಲ್ಲ, ಅವನಿಗೆ ವೆಂಕಿಯ ಬಗೆಗೂ ಸತ್ಯ ಗೊತ್ತಿದೆ. ಆ ಸತ್ಯವನ್ನು ಜಾಹ್ನವಿಗೆ ಹೇಳು ಅಂತ ಸಚಿನ್ ದುಂಬಾಲು ಬಿದ್ದಿದ್ದಾನೆ. ಆದರೆ ಆ ಸತ್ಯ ಜಾಹ್ನವಿಗೆ ಹೇಳಿದರೆ ತನ್ನ ಪರಿಸ್ಥಿತಿ ಹಾರಿಬಲ್ ಆಗಿರುತ್ತೆ ಅನ್ನೋದನ್ನು ಊಹಿಸಿಕೊಂಡು ಆತ ಗೆಳೆಯ ಸಚಿನ್ ಮೇಲೇ ಮಾರಣಾಂತಿಕ ಹಲ್ಲೆ ಮಾಡಿ ಮನೆಯಿಂದ ಆಚೆ ದಬ್ಬುತ್ತಾನೆ. ಇದನ್ನೆಲ್ಲ ಅಜ್ಜಿ ನೋಡುತ್ತಿರುತ್ತಾಳೆ. ಅವಳಿಗೆ ತನ್ನ ಮೊಮ್ಮಗಳ ಗಂಡ ಅಂದುಕೊಂಡಷ್ಟು ಸಾಚಾ ಅಲ್ಲ ಅನ್ನೋದು ಗೊತ್ತಾಗುತ್ತೆ.
ತುಳಸಿಗೆ ಸಾಥ್ ಕೊಡಲು ಗ್ಯ್ರಾಂಡ್ ಎಂಟ್ರಿ ಕೊಟ್ಟ ದತ್ತ ತಾತ... ವೀಕ್ಷಕರು ಫುಲ್‌ಖುಶ್
ಇದೀಗ ವೀಕ್ಷಕರ ಮುಂದಿರೋ ಪ್ರಶ್ನೆ ಅಂದರೆ ಈ ವೆಂಕಿ ಮಾತು ಕಳ್ಕೊಳ್ಳೋದಕ್ಕೆ ಜಯಂತನೇ ಕಾರಣವಾ? ಆತ ತನ್ನ ಸ್ವಾರ್ಥಕ್ಕಾಗಿ ವೆಂಕಿಯ ಮಾತನ್ನೇ ಕಿತ್ತುಕೊಂಡಿರಬಹುದಾ? ಈತ ವೆಂಕಿಯನ್ನು ಆ ಲೆವೆಲ್‌ಗೆ ಅವಾಯ್ಡ್ ಮಾಡೋದು ಯಾಕೆ? ಹಳೆಯ ಫೋಟೋ ವೆಂಕಿ ಕೈಗೆ ಸಿಕ್ಕಾಗ, ಆತ ಅಷ್ಟು ಎಮೋಶನಲ್ ಆದಾಗಲೂ ಆ ಬಗ್ಗೆ ಸತ್ಯ ಯಾಕೆ ಹೇಳಿಲ್ಲ.. ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
