ಮ್ಯಾನರಿಸಂ, ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್, ನಟನೆ, ಕಥೆ, ಸಂಭಾಷಣೆ....ಎಲ್ಲ ಕಾರಣಕ್ಕೆ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಜೊತೆ ಜೊತೆಯಲಿ...' ಎಲ್ಲರ ಹೃದಯದಲ್ಲಿ ಜಾಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 20ರ ಹುಡುಗಿಗೆ, 40ರ ವ್ಯಕ್ತಿ ಮೇಲೆ ಪ್ರೀತಿ ಹುಟ್ಟಿಕೊಳ್ಳುವ ಪರಿ, ಅವನಲ್ಲಿ ಪ್ರೀತಿ ಚಿಗರೊಡೆಯುವ ರೀತಿಯಿಂದ ಹದಿ ವಯಸ್ಸಿನ ಹುಡುಗಿಗೂ, 50ರ ಹರೆಯದ ಮಹಿಳೆಯರಿಗೂ ಈ ಸೀರಿಯಲ್ ಹೆಚ್ಚು ಆಪ್ತವಾಗುತ್ತಿದೆ.

ಅನುಗಾಗಿ ಆರ್ಯವರ್ಧನ್‌ ಚಡಪಡಿಸುವುದನ್ನು ನೋಡಿದ್ರೆ ಅಯ್ಯೋ ಅನ್ಸತ್ತೆ!

ಇಷ್ಟೆಲ್ಲಾ ಜನಮನ್ನಣೆ ಪಡೆದಿರುವ ಧಾರಾವಾಹಿ ಸಹಜವಾಗಿಯೇ ಆರಂಭವಾದ ಮೊದಲ ವಾರದಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ವೃದ್ಧಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ. ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯ ಹಾಗೂ ದೇಶಗಳಲ್ಲೂ ಈ ಧಾರಾವಾಹಿಗೆ ಜನರು ಫಿದಾ ಆಗುತ್ತಿದ್ದು, ನಾಲ್ಕು ಜನರು ಸೇರಿದರೆ ಇದೇ ಮಾತು, ಕಥೆ.

ಆದರೆ, ಕಳೆದ ವಾರ ಈ ಧಾರಾವಾಹಿಯ TRP ಕುಸಿದಿದೆ ಎಂಬೊಂದು ಸುದ್ದಿ ಆನ್‌ಲೈನ್ ಮಾಧ್ಯಮದಲ್ಲಿ ಪ್ರಕಟವಾಗಿದ್ದು, ಎಲ್ಲರ ಮೂಗಿನ ಮೇಲೆ ಬೆರಳ ಮೇಲೆ ಇಡುವಂತೆ ಮಾಡಿತ್ತು. ಅದರಲ್ಲಿಯೂ ಈ ಧಾರಾವಾಹಿಯಲ್ಲಿ ಹೀರೋ, ಹೀರೋಯಿನ್ ಒಬ್ಬರಿಗೊಬ್ಬರು ಇಷ್ಟ ಪಡಲು ಆರಂಭಿಸುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತಿದ್ದು, ಸಹಜವಾಗಿಯೇ ಇಂಟರೆಸ್ಟಿಂಗ್ ಘಟ್ಟಕ್ಕೆ ತಲುಪುತ್ತಿದೆ. ಮತ್ತಷ್ಚು ಕುತೂಹಲದಿಂದ ನೋಡುಗರು ರಾತ್ರಿ 8.30 ಆಗುವುದನ್ನೇ ಕಾಯುತ್ತಿದ್ದಾರೆ. ಇಷ್ಟು ಜನ ಮನ್ನಣೆ ಪಡೆದ ಕಥೆಯೊಂದು ಮೂರನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು. ಈ ಗೊಂದಲಕ್ಕೆ ಇಲ್ಲಿದೆ ಕ್ಲಾರಿಟಿ.

ಕಿರುತೆರೆಯಲ್ಲಿ ಭಾರೀ ಬದಲಾವಣೆ ತಂದ ಆರ್ಯವರ್ಧನ್; ಸಕ್ಸಸ್ ಹಿಂದಿದೆ ಈ ಕಥೆ!

ಪುಟ್ಟ ಗೌರಿ ಸ್ಲಾಟ್‌ನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಮನೋರಂಜನಾ ಕಾರ್ಯಕ್ರಮಗಳ ಪೈಕಿ ಮೊದಲ ಸ್ಥಾನ ಪಡೆದಿತ್ತು. ಆದರೆ, ಯಾವಾಗ ಜೊತೆ ಜೊತೆಯಲಿ ಆರಂಭವಾಯಿತೋ ಅದೇ ಫಸ್ಟ್ ಪ್ಲೇಸ್ ಪಡೆದುಕೊಂಡಿತು. ಅದೇ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಲ್ಲಿಯೂ ಯಶಸ್ವಿಯಾಗಿದೆ. ಹಾಗಂತ ಮಂಗಳ ಗೌರಿಗೇನೂ ವೀಕ್ಷಕರು ಕಡಿಮೆಯಾಗಿಲ್ಲ. ಅದು ತನ್ನ ಜನಪ್ರಿಯತೆಯನ್ನು ಮುಂದುವರಿಸಿಕೊಂಡು ಹೋಗಿದೆ. 

Week 48ರ ಬಾರ್ಕ್ ರಿಪೋರ್ಟ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, 23,2019 ನವೆಂಬರ್‌ಯಿಂದ  29,2019 ನವೆಂಬರ್‌ ಪ್ರಕಾರ 'ಮಂಗಳ ಗೌರಿ ಮದುವೆ' ಮೊದಲ ಸ್ಥಾನ ಪಡೆದುಕೊಂಡಿತ್ತು. ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿ ಮೂರನೇ ಸ್ಥಾನ ಪಡೆದುಕೊಂಡಿರುವುದಾಗಿ ವೆಬ್‌ಸೈಟ್‌‌ವೊಂದು ಸುದ್ದಿ ಪ್ರಕಟಿಸಿತ್ತು. ಆದರೆ, ಮತ್ತೊಂದು ಸುದ್ದಿ ಜೊತೆ ಜೊತೆಯಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿ, ಬಾರ್ಕ್ ರೇಟ್ ಪ್ರಕಟಿಸಿತ್ತು. ಇದರ ಪ್ರಕಾರ 'ಜೊತೆ ಜೊತೆಯಲಿ' ಸ್ಥಾನ ಕುಸಿದಿದೆ.

ಈ ಎರಡು ವರದಿಗಳನ್ನು ಗಮನಿಸಿದ ಪ್ರೇಕ್ಷಕರಿಗೆ ಗೊಂದಲ ಉಂಟಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ವಿಚಾರವು ನಟ ಅನಿರುದ್ಧ ಗಮನಕ್ಕೆ ಬಂದಿದ್ದು 'ಪ್ರತಿಯೊಂದು ಧಾರಾವಾಹಿಯಲ್ಲೂ ತಂಡದ ಪರಿಶ್ರಮವಿದೆ. ಪ್ರೇಕ್ಷಕರನ್ನು ಮನರಂಜಿಸುವುದೊಂದೇ ಎಲ್ಲರ ಪರಮ ಧ್ಯೇಯ. ಎಲ್ಲರಿಗೂ ಶುಭವಾಗಲಿ ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.