ಎಲ್ಲಾ ವರ್ಗದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ 'ಜೊತೆ ಜೊತೆಯಲಿ' ಉತೂಹಲ ಘಟ್ಟಕ್ಕೆ ಬಂದು ತಲುಪಿದೆ.  ಇನ್ನೇನೂ ಅನು ಸಿರಿಮನೆ ಆರ್ಯವರ್ಧನ್ ಕೈ ತಪ್ಪಿ ಹೋಗಿಯೇ ಬಿಡ್ತಾರೆ ಎಂದು ಪ್ರೇಕ್ಷಕರು ಬೇಸರಿಸಿಕೊಳ್ಳುತ್ತಿರುವಾಗಲೇ ಅದಕ್ಕೊಂದು ಹೊಸ ಟ್ವಿಸ್ಟ್ ಸಿಕ್ಕಿದೆ.  ಮೋಸದಿಂದ ಆಗುತ್ತಿರುವ ಅನು ಮದುವೆಯನ್ನು ಆರ್ಯವರ್ಧನ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸೀರಿಯಲ್ ಲೋಕದ ಸೆನ್ಸೇಷನ್ 'ಜೊತೆ ಜೊತೆಯಲಿ' ಯಲ್ಲಿ ಭಾರೀ ಬದಲಾವಣೆ?

ಈಗ ಆರ್ಯವರ್ಧನ್ ಮನಸ್ಸಲ್ಲಿ ಅನು ಎಂಬ ಚಿಟ್ಟೆ ಹಾರಾಡಲು ಶುರುವಾಗಿದೆ. ಅತ್ತ ಅನು ಮನಸ್ಸು ಕೂಡಾ ಕಳೆದು ಹೋಗಿದೆ. ಯಾವತ್ತೂ ಕೆಲಸದ ಬಗ್ಗೆ ನಿರುತ್ಸಾಹ ತಾಳದ ಆರ್ಯವರ್ಧನ್ ಈಗೀಗ ಎಲ್ಲೋ ಕಳೆದು ಹೋಗುತ್ತಿದ್ದಾರೆ.  ಮನಸ್ಸು ನಿಂತಲ್ಲೇ ನಿಲ್ಲುತ್ತಿಲ್ಲ. ಆರ್ಯವರ್ಧನ್ ನಲ್ಲಿ ಆದ ಬದಲಾವಣೆಯನ್ನು ಜೆಂಡೇ ಗಮನಿಸಿದ್ದಾರೆ. ಧಾರಾವಾಹಿ ಕುತೂಹಲ ಹಂತಕ್ಕೆ ಬಂದು ನಿಂತಿದೆ. 

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

 

ಅತ್ತ ಅನೂ, ಇತ್ತ ಆರ್ಯವರ್ಧನ್‌ ಪ್ರೀತಿಯ ಮೊದಲ ಹಂತದಲ್ಲಿದ್ದಾರೆ. ಇಬ್ಬರಿಗೂ ಹೇಳಿಕೊಳ್ಳಲಾಗುತ್ತಿಲ್ಲ. ಆದರೆ ಇಬ್ಬರಿಗೂ ಗೊತ್ತಾಗುತ್ತಿದೆ. ಆರ್ಯವರ್ಧನ್ ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಹೇಗೆ ಹೇಳಿಕೊಳ್ಳುತ್ತಾರೆ? ಎಂಬುದೇ ಸೀರಿಯಲ್‌ನ ಬಿಗ್ ಟ್ವಿಸ್ಟ್!