ಅನು ಸಿರಿಮನೆ ಮಾಡಿರುವ ಈ ಒಂದು ಪೋಸ್ಟ್‌ಗೆ ನೆಟ್ಟಿಗರು ಗರಂ. ನಿಜಕ್ಕೂ ಅನುನೇ ಮಾಡಿರುವುದಾ ಅಥವಾ ಸುಳ್ಳು ಸುದ್ದೀನಾ ನೋಡಿ....
ಧಾರಾಮಾಹಿಯಿಂದ ಕೊಂಚ ನೇಮ್ ಆ್ಯಂ ಫೇಮ್ ಸಿಕ್ಕರೆ ಸೋಷಿಯಲ್ ಮೀಡಿಯಾದಲ್ಲಿ ಅವರದ್ದೇ ಹವಾ! ಏನೇ ಫೋಸ್ಟ್ ಮಾಡಲಿ ಸುದ್ದಿ ಮಾಡುವವರೆಗೂ ಟ್ರೋಲಿಗರು ಬಿಡುವುದಿಲ್ಲ ಹಾಗಿಯೇ ನಟಿ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಹಾಕಿರುವ ಈ ಒಂದು ಪೋಸ್ಟ್‌ನಿಂದ ಗೊಂದಲ ಸೃಷ್ಟಿಯಾಗಿದೆ.
ಚಂದನ್ ಶೆಟ್ಟಿ ಜೊತೆಯಾದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ; 'ನೋಡು ಶಿವಾ' ಹಿಟ್?
ಹೌದು! ಗಣರಾಜ್ಯೋತ್ಸವದ ಪ್ರಯುಕ್ತ ಅನು ಸಿರಿಮನೆ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಭಾರತ ಧ್ವಜದ ಬದಲು Ireland ಧ್ವಜ ಹಾಕಿದ್ದಾರೆ ಎನ್ನಲಾಗಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಮೇಘಾ ಶೆಟ್ಟಿ ಅವರ ಅಸಲಿ ಖಾತೆ ತೆರೆದು ನೋಡಿದರೆ ಶುಭಾಶಯ ಜತೆ ಕೇವಲ 'IN' ಎಂದು ಬರೆದುಕೊಂಡಿದ್ದಾರೆ. ಹಾಗಾದರೆ ಯಾವುದು ನಿಜ, ಯಾವುದು ಸುಳ್ಳು?
![]()
ಈ ಫೋಟೋಗೆ ಬಂದಿರುವ ಕಾಮೆಂಟ್‌ಗಳ ಪ್ರಕಾರ ಮೇಘಾ ಶೆಟ್ಟಿ ತಿಳಿಯದೇ ಹಾಕಿದ್ದರೂ ಅದನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ, ತಿಳಿಯದೇ ಮಾಡಿರುವ ತಪ್ಪಿಗೆ ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳು ಅನು ಪರವೂ ಬ್ಯಾಟಿಂಗ್ ಮಾಡಿದ್ದಾರೆ. ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ಮೇಘಾ ಶೆಟ್ಟಿ, ಬಣ್ಣದ ಲೋಕಕ್ಕೆ ಬಾರದಿದ್ದರ IAS ಅಧಿಕಾರಿ ಆಗುತ್ತಿದ್ದೆ ಎಂದಿದ್ದರು. ಇದೇ ಮಾತನ್ನು ನೆನೆದು ಟ್ರೋಲಿಗರು ನಿಮಗೆ ಭಾರತದ ಧ್ವಜ ಯಾವುದು ಅಂತಾನೇ ಗೊತ್ತಿಲ್ಲ, ಪರೀಕ್ಷೆ ಹೇಗೆ ಪಾಸ್ ಆಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ನೆಟ್ಟಿಗರ ಮೂಗಿನ ನೇರಕ್ಕೆ ನೋಡಿದರೆ ಮೇಘಾ ಶೆಟ್ಟಿ ಕಾಲು ಎಳೆಯುವುದಕ್ಕೆ ಪೋಟೋವನ್ನು ಸುಳ್ಳು ಸುಳ್ಳಾಗಿ ಹೀಗೆ ಎಡಿಟ್ ಮಾಡಿದ್ದಾರೆ ಎನ್ನಲಾಗಿದೆ.
