ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಿಸ್ಟರಿ ಕ್ರಿಯೇಟ್‌ ಮಾಡಲು 'ನೋಡು ಶಿವಾ' ಎಂಬ rap ಸಾಂಗ್ ಸಿದ್ಧವಾಗುತ್ತಿದೆ. 3 ಪೆಗ್ ಫೇಮ್ ಚಂದನ್ ಶೆಟ್ಟಿ ಹಾಡಲಿರುವ ಈ ಹಾಡಿಗೆ ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ಹೆಜ್ಜೆ ಹಾಕಲಿದ್ದಾರೆ. 

ಮೊದಲ ದೀಪಾವಳಿಗೆ ಚಂದನ್ ಶೆಟ್ಟಿ ನಿವೇದಿತಾ ಹೇಗೆ ಕಂಗೊಳ್ಳಿಸುತ್ತಿದ್ದಾರೆ ನೋಡಿ! 

ಎಎಂಸಿ ಗ್ರೂಪ್ ಆಫ್‌ ಇನ್ಸಿಟ್ಯೂಷನ್ ಸಂಸ್ಥೆಯ ವೈಸ್ ಪ್ರೆಸಿಡೆಂಟ್‌ ಮೋನಿಕಾ ಕಲ್ಲೂರಿ ಈ rap ಸಾಂಗ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಈ ಹಾಡಿನ ವಿಶೇಷತೆಗಳ ಬಗ್ಗೆ ಖಾಸಗಿ ಸಂದರ್ಶವೊಂದರಲ್ಲಿ ಮಾತನಾಡಿದ್ದಾರೆ. 

ಜನರು ತಮ್ಮ ಜೀವನದಲ್ಲಿ ಅಂದುಕೊಂಡ ಸಾಧನೆ ಮಾಡಲು ಸಾಧ್ಯವಾಗದಿದ್ದರೆ, ತಮ್ಮನ್ನೇ ಶಪಿಸಿಕೊಳ್ಳುತ್ತಾರೆ.ಈಡೇರದ ಆಸೆ, ಯಶಸ್ಸು ಇಲ್ಲದ ಜೀವನ ಕಂಡಿರುವ ಮನುಷ್ಯ ದೇವರ ಹತ್ತಿರ ಹೇಗೆ ಸಂಭಾಷಣೆ ನಡೆಸುತ್ತಾನೆ, ಎಂಬುವುದು ಫನ್ನಿಯಾಗಿದೆ. ಆದನ್ನೇ ಈ rap ಸಾಂಗಿನ ಮೂಲಕ ತೋರಿಸಲಾಗುತ್ತದೆ. 

ಇಂಥ ನೋವು ಯಾರಿಗೂ ಬರಬಾರ್ದು, ಇಂದಿಗೂ ಮರೆಯೋಕೆ ಆಗ್ತಿಲ್ಲ: ಕಣ್ಣೀರಿಟ್ಟ ಅನು ಸಿರಿಮನೆ 

ಪರಭಾಷೆಯಲ್ಲೂ ರಿಲೀಸ್ ಆಗುತ್ತಿರುವ ಈ ಹಾಡಿಗೆ 30 ಲಕ್ಷ ರೂಪಾಯಿ ಬಜೆಟ್‌ ಸಿದ್ಧತೆ ಮಾಡಲಾಗಿದೆ. 200 ಜನ ಈ ಆಲ್ಬಂ ಹಿಂದೆ ಕೆಲಸ ಮಾಡಲಿದ್ದು, 60 ಡ್ಯಾನ್ಸರ್‌ಗಳು ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ ಯಾರೂ ನೋಡಿರದ ಹೊಸತನ ಈ ಹಾಡಿನಲ್ಲಿ ಇರಲಿದೆ ಎಂಬ ಭರವಸೆಯನ್ನು ಮೋನಿಕಾ ವೀಕ್ಷಕರಿಗೆ ನೀಡಿದ್ದಾರೆ.