ಸೀರಿಯಲ್ ಲೋಕದಲ್ಲೇ ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ಮನೋರಂಜಿಸುತ್ತಾ ಟಾಪ್ ರೆಟೆಡ್‌ ಧಾರಾವಾಹಿ ಸ್ಥಾನ ಪಡೆದುಕೊಂಡಿರುವ 'ಜೊತೆ ಜೊತೆಯಲಿ' ಈಗಾಗಲೆ ಸಾಕಷ್ಟು ಫ್ಯಾನ್ ಪೇಜ್‌ಗಳನ್ನು ಹೊಂದಿದೆ. ಜೊತೆ ಜೊತೆಯಲಿ ಹೆಸರಲ್ಲಿ ಕೆಲವೊಂದು ಫೇಕ್ ಖಾತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಬಗ್ಗೆ ಅನಿರುದ್ಧ ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಹೆಣ್ಣು ಮಗಳ ಅಭಿಮಾನಕ್ಕೆ ಸೋತು ವೇದಿಕೆ ಮೇಲೆ ಅಪ್ಪಿ ಧನ್ಯವಾದ ಹೇಳಿದ ಆರ್ಯವರ್ಧನ್!

ಅರ್ಯವರ್ಧನ್ ಪಾತ್ರ ಮಾಡುತ್ತಿರುವ ಅನಿರುದ್ಧ್ ಬಹುಬೇಗ ಕಿರುತೆರೆಯಲ್ಲಿ ಯಶಸ್ಸು ಕಂಡು ಜನರ ಪ್ರೀತಿ ಗಿಟ್ಟಿಸಿಕೊಂಡವರು. ಅಭಿಮಾನಿಗಳಿಗೆ ಇನ್ನು ಹೆಚ್ಚು ಹತ್ತಿರವಾಗಲು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಧಾರಾವಾಹಿಯ ಕುತೂಹಲಕಾರಿ ಸಂಗತಿಗಳು, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಮನವಿಗೆ ಸ್ಪಂದಿಸುತ್ತಾರೆ.

ಕೆಲದಿನಗಳ ಹಿಂದೆ ಅನಿರುದ್ಧ್ ಅಭಿಮಾನಿಗಳಿಗೆ ಥ್ಯಾಂಕ್ಯೂ ನೋಟ್ ಬರೆದಿದ್ದರು.

ನಿಜ ಜೀವನದ ನಾಲ್ವರು ಅಮ್ಮಂದಿರ 'ಜೊತೆ ಜೊತೆಯಲಿ' ಆರ್ಯವರ್ಧನ್!

'ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಿಗೆ ಸಮಸ್ಕಾರ. ನಿಮ್ಮೆಲ್ಲರ ಪ್ರೀತಿಯಂದ ನನ್ನ ಈ ಅಧಿಕೃತ ಪೇಜ್ ಮೂಲಕ ಒಂದು ಲಕ್ಷ ಸ್ನೇಹಿತರ ಪ್ರೀತಿಯನ್ನು ನಾನು ಪಡೆದಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾ ಸದಾ ಚಿರುಋಣಿ. ಇಂದು ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಮೆಸೆಜ್‌ಗಳು ಬಂದಿವೆ. ನನಗೆ ಬಿಡುವಾದಾಗಲೆಲ್ಲಾ ನಿಮಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಆದರೂ ಸಮಯ ಸಾಲದು. ದಯಮಾಡಿ ಕ್ಷಮೆ ಇರಲಿ. ಮೆಸೆಜ್ ಗಳ ಮೂಲಕ, ಕಮೆಂಟ್ ಗಳ ಮೂಲಕ ನನಗೆ ಪ್ರೀತಿ ತೋರಿದ ಎಲ್ಲರಿಗೂ ಹಾಗೂ ಜೊತೆಜೊತೆಯಲಿ ಧಾರಾವಾಹಿಯನ್ನು ಇಷ್ಟಪಟ್ಟು ನೋಡುವ ಮೂಲಕ ಪ್ರೋತ್ಸಾಹಿಸುತ್ತಿರುವ ಎಲ್ಲಾ ನನ್ನ ತಾಯಂದಿರಿಗೂ, ಸಹೋದರ ಸಹೋದರಿಯರಿಗೂ, ಜೀ ವಾಹಿನಿ ಹಾಗೂ ನನ್ನ ಪ್ರೀತಿಯ ಜೊತೆಜೊತೆಯಲಿ ಸಂಪೂರ್ಣ ತಂಡಕ್ಕೂ ನನ್ನ ಮನಃಪೂರ್ವಕ ಧನ್ಯವಾದಗಳು.. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ.. ಸದಾ ನಿಮ್ಮವ, ನಿಮ್ಮ #Anirudh' ಎಂದು ಬರೆದುಕೊಂಡಿದ್ದಾರೆ.

ಆರ್ಯವರ್ಧನ್ ಜೊತೆ ಲವ್ವಲ್ಲಿ ಬಿದ್ದ ಅನು; ಕುತೂಹಲ ಮೂಡಿಸಿದೆ ಪ್ರಪೋಸ್!