ಸೀರಿಯಲ್ ಲೋಕದ ನಂ 1 ಧಾರಾವಾಹಿ 'ಜೊತೆ ಜೊತೆಯಲಿ' ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ.  ವಿಭಿನ್ನವಾದ ಕಥೆ, ಮನಮುಟ್ಟುವ ಸಂಭಾಷಣೆ, ಆರ್ಯವರ್ಧನ್- ಅನು ನಡುವಿನ ನವಿರಾದ ಪ್ರೀತಿ ಎಲ್ಲವೂ ಧಾರಾವಾಹಿಯನ್ನು ಇನ್ನಷ್ಟು ರಿಚ್ ಆಗಿಸಿದೆ. 

ಹೆಣ್ಣು ಮಗಳ ಅಭಿಮಾನಕ್ಕೆ ಸೋತು ವೇದಿಕೆ ಮೇಲೆ ಅಪ್ಪಿ ಧನ್ಯವಾದ ಹೇಳಿದ ಆರ್ಯವರ್ಧನ್!

ಅನುಗೆ ಆರ್ಯವರ್ಧನ್ ಮೇಲೆ ಮನಸ್ಸಾಗಿದೆ. ಆರ್ಯನಿಗೂ ಇಷ್ಟವಿದೆ. ಆದರೆ ಒಬ್ಬರಿಗೊಬ್ಬರು ಹೇಳಿಕೊಳ್ಳಲು ಸೂಕ್ತ ಸಮಯ ಸಿಗುತ್ತಿಲ್ಲ. ಇನ್ನೊಂದೆಡೆ ಅನು ತಾಯಿ ಮಗಳಿಗೆ ಹುಡುಗನನ್ನು ನೋಡಿದ್ದು ಅವನನ್ನೇ ಮದುವೆಯಾಗಲು ಅನುಗೆ ಹೇಳಿ ಎಂದು ಆರ್ಯವರ್ಧನ್ ಗೆ ಜವಾಬ್ದಾರಿ ವಹಿಸಿದ್ದಾರೆ. ಆರ್ಯವರ್ಧನ್ ಗೆ ಉಭಯ ಸಂಕಟ. ಅಂತೂ ಅನು ಬಳಿ ಆ ಹುಡುಗನನ್ನೇ ಮದುವೆಯಾಗು ಎಂದು ಒತ್ತಾಯಪಡಿಸುತ್ತಿದ್ದಾರೆ. ಆದರೆ ಅನುಗೆ ಮಾತ್ರ ಸುತಾರಾಂ ಮನಸ್ಸಿಲ್ಲ. 

ಆರ್ಯವರ್ಧನ್ ರನ್ನು ಪ್ರೀತಿಸುತ್ತಿರುವ ವಿಚಾರವನ್ನು ಅನುಗೆ ಹೇಳುವ ಕಾಲ ಬಂದಿದೆ. ಆರ್ಯವರ್ಧನ್ ತಾಯಿಗೂ ಮಗ ಮದುವೆಯಾಗಲಿ ಎಂದು ಆಸೆಪಡುತ್ತಿದ್ದಾರೆ. ಅನು- ಆರ್ಯವರ್ಧನ್ ಮದುವೆಯಾಗುತ್ತಾರಾ? ಆರ್ಯವರ್ಧನ್ ಗೆ ಹೇಗೆ ತನ್ನ ಪ್ರೀತಿಯನ್ನು ಹೇಳುತ್ತಾಳೆ? ಅನು ತಂದೆ-ತಾಯಿ ಹೇಗೆ ಪ್ರತಿಕ್ರಿಯಿಸಬಹುದು? ಎಂಬ ಕುತೂಹಲ ಹಂತಕ್ಕೆ ಬಂದಿದೆ. 

'ಜೊತೆ ಜೊತೆಯಲಿ'ಗೂ ತಟ್ಟಿದ ಕಳಂಕ: ಜೀ ಟಿವಿ ಸ್ಪಷ್ಟನೆ ಇದು!

ಆರ್ಯನ ಅಮ್ಮನ ಪಾತ್ರದಲ್ಲಿ ವಿಜಯ್ ಲಕ್ಷ್ಮೀ ಸಿಂಗ್ ಕಾಣಿಸಿಕೊಂಡಿದ್ದಾರೆ.  ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಆರ್ಯವರ್ಧನ್ ಕುಟುಂಬವನ್ನು ಪರಿಚಯಿಸಲಾಗಿದೆ. ಕಥೆ ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಆರ್ಯ- ಅನು ಮದುವೆಯಾಗ್ತಾರಾ?  ಮುಂದೇನಾಗಬಹುದು ಎಂಬ ಕುತೂಹಲದ ಘಟ್ಟಕ್ಕೆ ಬಮದು ತಲುಪಿದೆ.