Asianet Suvarna News Asianet Suvarna News

BBK10: ದೊಡ್ಮನೆಯಲ್ಲಿ ಭಾರೀ ಕಾದಾಟ, 'ರೌಡಿಸಂ' ನಡೆಯಲ್ಲ ಎಂದು ವಿನಯ್‌ಗೆ ಕೂಗಾಡಿದ ತನಿಷಾ

ಟಾಸ್ಕ್‌ ವೇಳೆ ಎಲ್ಲರ ಮೇಲೆ ಕೂಗಾಡಿದ ವಿನಯ್‌ಗೆ ತನಿಷಾ ಒಬ್ಬಂಟಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. 'ಇಲ್ಲಿ ರೌಡಿಸಂ ನಡೆಯಲ್ಲ. ಟಾಸ್ಕ್‌ ಬಂದಾಗ ಸಾಮರ್ಥ್ಯ ಇದ್ದರೆ ಟಾಸ್ಕ್ ಮಾಡಿ ತೋರಿಸಬೇಕು. ಕೂಗಾಡಿ ಎಲ್ಲರನ್ನು ಡೌನ್ ಮಾಡಿ ಗೆಲ್ಲಬೇಕೆಂದು ಹೊಂಚು ಹಾಕಿದರೆ ಇಲ್ಲಿ ಯಾರೂ ಕೇಳಲ್ಲ' ಎಂದು ತನಿಷಾ ಕೂಗಾಡಿದ್ದಾರೆ. 

Tanisha and Vinay Gowda controversy at Bigg Boss Kannada Season 10 srb
Author
First Published Oct 18, 2023, 12:52 PM IST

ಬಿಗ್ ಬಾಸ್ ಮನೆ ಇಬ್ಭಾಗವಾಗಿದೆ ಎನ್ನಬಹುದು. ಕಾರ್ತಿಕ್ ಮಹೇಶ್ ಟೀಮ್ ಮತ್ತು ವಿನಯ್ ಗೌಡ ಟೀಮ್ ಎಂದು ಎರಡು ಭಾಗಗಳಾಗಿ ಬಿಗ್ ಬಾಸ್ ಮನೆ ವಿಭಾಗವಾಗಿದೆ. ಟಾಸ್ಕ್‌ನಲ್ಲಿ ಟೀಮ್ ಡಿವೈಡ್ ಆದಾಗಲೇ ಮನಸ್ಸು ಕೂಡ ಇಬ್ಭಾಗವಾಗಿದೆ ಎನ್ನಬಹುದು. ನಿನ್ನೆ ಟಾಸ್ಕ್‌ ವೇಳೆ ವಿನಯ್ ಗೌಡ ಮತ್ತು ತನಿಷಾ ಕಿತ್ತಾಡಿಕೊಂಡಿದ್ದಾರೆ. 'ನೀನು ರೌಡಿ ತರ ಆಡ್ಬೇಡ' ಎಂದು ತನಿಷಾ ವಿನಯ್ ಮೇಲೆ ಬಹಿರಂಗವಾಗಿಯೇ ಕೂಗಾಡಿದ್ದಾರೆ. ಈ ಮೊದಲು ಕೂಡ ಸಾಕಷ್ಟು ವೇಳೆ ವಿನಯ್ ಗೌಡ ಮೇಲೆ 'ರೌಡಿ' ಅಟಿಟ್ಯೂಡ್ ಎಂಬ ಆರೋಪ ಕೇಳಿ ಬಂದಿತ್ತು. 

ಟಾಸ್ಕ್‌ ವೇಳೆ ಎಲ್ಲರ ಮೇಲೆ ಕೂಗಾಡಿದ ವಿನಯ್‌ಗೆ ತನಿಷಾ ಒಬ್ಬಂಟಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. 'ಇಲ್ಲಿ ರೌಡಿಸಂ ನಡೆಯಲ್ಲ. ಟಾಸ್ಕ್‌ ಬಂದಾಗ ಸಾಮರ್ಥ್ಯ ಇದ್ದರೆ ಟಾಸ್ಕ್ ಮಾಡಿ ತೋರಿಸಬೇಕು. ಕೂಗಾಡಿ ಎಲ್ಲರನ್ನು ಡೌನ್ ಮಾಡಿ ಗೆಲ್ಲಬೇಕೆಂದು ಹೊಂಚು ಹಾಕಿದರೆ ಇಲ್ಲಿ ಯಾರೂ ಕೇಳಲ್ಲ' ಎಂದು ತನಿಷಾ ಕೂಗಾಡಿದ್ದಾರೆ. ವಿನಯ್ ವಿರುದ್ಧ ತನಿಷಾ ಮಾತಿಗೆ ಎಲ್ಲರೂ ತಲೆದೂಗಿದ್ದಾರೆ. ತನಿಷಾಗೆ ಸಿಕ್ಕ ಸಪೋರ್ಟ್ ನೋಡಿ ವಿನಯ್ ಕೋಪ ನೆತ್ತಿಗೇರಿದೆ. 

ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ದುಡ್ಡು ಪಡೆಯೋ ಸ್ಪರ್ಧಿ ಇವ್ರೇ; ಜಸ್ಟ್ ಒಂದೇ ವಾರಕ್ಕೆ 12 ಲಕ್ಷ ರೂ. ಸಂಭಾವನೆ!

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲಿ ಲವ್ ಮ್ಯಾಟರ್ ಸದ್ದು ಮಾಡಿತ್ತು. ಮೊದಲ ದಿನವೇ 'ಲವ್ ಅಟ್ ಫಸ್ಟ್‌ ಸೈಟ್ ' ಎಂಬಂತೆ ಕಾರ್ತಿಕ್ ಮತ್ತು ಸಂಗೀತಾ ಲವ್ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿತ್ತು. ಬಳಿಕ ಸ್ನೇಹಿತ್ ಮತ್ತು ಈಶಾನಿ ಲವ್ ಶುರುವಾಗಿ ಅದೂ ಸುದ್ದಿಯಾಗಿತ್ತು. ಕಾರ್ತಿಕ್-ಸಂಗೀತಾ ಲವ್ ದಿನೇದಿನೇ ಬೆಳೆಯುತ್ತಾ ಅವರಿಬ್ಬರೂ ಅಮರಪ್ರೇಮಿಗಳಾಗಿ ಬದಲಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈಶಾನಿ ಹೆಸರು ಈಗ ಸ್ನೇಹಿತ್ ಬದಲು ಮೈಕೆಲ್ ಅಜಯ್ ಜತೆ ಕೇಳಿ ಬರುತ್ತಿದೆ. 

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿಗೆ ಗೌರವ ಪ್ರದಾನ

ಒಟ್ಟಾರೆ, ಬಿಗ್ ಬಾಸ್ ಮನೆ ಹೊಸ ಜಗಳಕ್ಕೆ ನಾಂದಿ ಹಾಡಿದೆ. ವಿನಯ್-ತನಿಷಾ ಜಗಳ ತಾರಕಕ್ಕೆ ಹೋಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಮೊದಲು ಶುರುವಾಗಿದ್ದು ವಿನಯ್ ಗೌಡ ಮತ್ತು ಸಂಗೀತಾರ ಜಗಳ. ಅವರಿಬ್ಬರೂ ಬಿಗ್ ಬಾಸ್ ಮನೆಗೆ ಬರುವ ಮೊದಲೇ ಒಂದು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದರು. ಮೊದಲೇ ಪರಸ್ಪರ ಪರಿಚಯವಿದ್ದರೂ ಕೂಡ ಕಿತ್ತಾಡಿಕೊಂಡಿದ್ದರು. ಈಗ ತನಿಷಾ ಮತ್ತು ವಿನಯ್ ಸರದಿ. ಮುಂದೇನಾಗುತ್ತೋ ಮಹಾದೇವನೇ ಬಲ್ಲ ಎಂಬಂತಿದೆ ಬಿಗ್ ಬಾಸ್ ಮನೆಯ ಪರಿಸ್ಥಿತಿ ಎನ್ನಬಹುದು. 

ಈ ವಾರದ ಆಟದ ರೋಚಕ ಘಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್‌ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದಲ್ಲಿ ನೋಡಬಹುದು. ಶುಕ್ರವಾರದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ ಆ ದಿನದ ವಿಶೇಷತೆಗಳನ್ನು (https://jiocinema.onelink.me/fRhd/z17wt8x0) ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು. 

Follow Us:
Download App:
  • android
  • ios