Asianet Suvarna News Asianet Suvarna News

ಗಟ್ಟಿಮೇಳದ ಬೆಂಕಿ ಸೀನ್ ಅಣ್ಣಯ್ಯದಲ್ಲೂ ರಿಪೀಟ್? ಸೇಮ್ ಹೀರೋಯಿನ್‌, ಅಲ್ಲಿ ಹೀರೋ ವೇದಾಂತ್ ಇಲ್ಲಿ ಶಿವು

ಜನಪ್ರಿಯ ಕಿರುತೆರೆ ಸೀರಿಯಲ್ 'ಅಣ್ಣಯ್ಯ' ಇತ್ತೀಚಿನ ಸಂಚಿಕೆಯಲ್ಲಿ 'ಗಟ್ಟಿಮೇಳ' ಸೀರಿಯಲ್‌ನ ಜನಪ್ರಿಯ ಸನ್ನಿವೇಶವನ್ನು ಹೋಲುವ ದೃಶ್ಯವನ್ನು ಬಳಸಿಕೊಂಡಿದೆ. ಈ ದೃಶ್ಯದಲ್ಲಿ ನಾಯಕ ಶಿವು, ನಾಯಕಿ ಪಾರುಳನ್ನು ಬೆಂಕಿಯಿಂದ ರಕ್ಷಿಸುವುದು 'ಗಟ್ಟಿಮೇಳ'ದಲ್ಲಿ ವೇದಾಂತ್ ಮಾಡಿದ ರಕ್ಷಣೆಯನ್ನು ನೆನಪಿಸುತ್ತಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

zee kannada gattimela serial scene repeats in annayya viewers comments goes viral
Author
First Published Sep 26, 2024, 10:50 AM IST | Last Updated Sep 26, 2024, 11:41 AM IST

ಹತ್ತಾರು ಸೀರಿಯಲ್‌ಗಳು ಕಿರುತೆರೆಯನ್ನು ಆಳ್ತಾ ಇವೆ. ಈ ಹಿಂದೆ 'ಗಟ್ಟಿಮೇಳ' ಸೀರಿಯಲ್ ಸಖತ್ ಫೇಮಸ್ ಆಗಿತ್ತು. ಅಲ್ಲಿ ನಾಯಕ ರಕ್ಷ್. ನಾಯಕಿ ನಿಶಾ ರವಿಕೃಷ್ಣನ್. ಈ ಸೀರಿಯಲ್ ನಂ.೧ ಅಥವಾ ನಂ.೨ ರೇಸ್‌ನಲ್ಲೇ ಸದಾ ಇರ್ತಿತ್ತು. ತೀರಾ ಇತ್ತೀಚೆಗೆ ಬಂದ ಸೀರಿಯಲ್ 'ಅಣ್ಣಯ್ಯ'. ಇದರ ಹೀರೋಯಿನ್ ಸೇಮ್ ನಿಶಾ ರವಿಕೃಷ್ಣನ್. ಹೀರೋ ವಿಕಾಸ್ ಉತ್ತಯ್ಯ. ಸದ್ಯ ಈ ಸೀರಿಯಲ್ ಟಾಪ್ 5ನಲ್ಲಿ ಒಂದಾಗಿ ಗುರುತಿಸಿಕೊಳ್ತಿದೆ. ಪ್ರೈಮ್ ಟೈಮ್‌ನಲ್ಲಿ ಬರೋ ಕಾರಣಕ್ಕೋ ಏನೋ ಈ ಸೀರಿಯಲ್‌ಗೆ ಟಿಆರ್‌ಪಿಯೂ ಚೆನ್ನಾಗಿಯೇ ಬರುತ್ತಿದೆ. ಆದರೆ ವೀಕ್ಷಕರ ಮೆಮೊರಿ ಕಮ್ಮಿ ಅಂತ ಅಂದುಕೊಂಡಿರೋದೇ ಈ ಸೀರಿಯಲ್‌ಗೆ ಜನ ಕ್ಲಾಸ್ ತಗೊಳ್ಳೋಹಾಗಾಗಿದೆ. ಅಷ್ಟಕ್ಕೂ ಅಣ್ಣಯ್ಯ ಸೀರಿಯಲ್‌ನಲ್ಲಿ ಏನಾಗ್ತಿದೆಯಪ್ಪಾ ಅನ್ನೋದು ಈ ಸೀರಿಯಲ್ ನೋಡೋರಿಗೆ ಗೊತ್ತೇ ಇರುತ್ತೆ. ಉಳಿದವರು ಅಟ್‌ಲೀಸ್ಟ್ ಪ್ರೊಮೋ ನೋಡಿ ಆದ್ರೂ ಕತೆ ಏನು ಅಂತ ತಿಳ್ಕೊಂಡಿರ್ತಾರೆ.

ಏಕೆಂದರೆ ಈಗ ಬರೋ ಸೀರಿಯಲ್ ಪ್ರೋಮೋನೇ ಆ ದಿನದ ಸೀರಿಯಲ್‌ನ ಒನ್‌ಲೈನ್ ಹೇಳುತ್ತೆ. ಹೀಗಾಗಿ ಅರ್ಧ ಗಂಟೆ ಅಥವಾ ಒಂದು ಗಂಟೆ ಕೂತು ಸೀರಿಯಲ್ ನೋಡೋವಷ್ಟು ಟೈಮ್ ಇಲ್ದೇ ಇರೋರೆಲ್ಲ ಪ್ರೋಮೋದಲ್ಲೇ ಕಥೆ ನೋಡಿ ಅದು ಇದೂ ಕಾಮೆಂಟ್ ಮಾಡಿ ಸುಮ್ಮನಾಗ್ತಾರೆ.

ನರ್ಸ್ ಗೆ ಅಮೃತದಾರೆಯಲ್ಲಿ ಅವಮಾನ, ರೊಚ್ಚಿಗೆದ್ದ ಫ್ಯಾನ್ಸ್

ಈಗ ಹೇಳೋಕೆ ಹೊರಟಿರೋ ವಿಷ್ಯಕ್ಕೂ, ಸೀರಿಯಲ್‌ಗಳ ಪ್ರೋಮೋಗೂ ಏನ್ ಸಂಬಂಧ ಅಂತ ನೀವು ಕೇಳಬಹುದು, ಸಂಬಂಧ ಇದ್ದೇ ಇದೆ. ಈ ಸೀರಿಯಲ್‌ ಪ್ರೋಮೋಗಳೇ ವೀಕ್ಷಕರು, ಸೀರಿಯಲ್ ಟೀಮ್ ಹಾಗೂ ಚಾನೆಲ್ ಮಧ್ಯೆ ಸೇತುವೆ ಥರ ನಿಂತಿದೆ ಅಂದ್ರೆ ತಪ್ಲಲ್ಲ. ಏಕೆಂದರೆ ಇಲ್ಲಿ ವೀಕ್ಷಕರು ಕೊಡೋ ಎಷ್ಟೋ ಸಲಹೆಗಳನ್ನು ಸೀರಿಯಲ್ ಟೀಮ್‌ನವ್ರ ತಗೊಂಡು ಇಂಪ್ಲಿಮೆಂಟ್ ಮಾಡಿರೋ ಉದಾಹರಣೆ ಸಾಕಷ್ಟಿದೆ. ಆದರೆ ಈಗ ಇದೇ ಪ್ರೋಮೋದಲ್ಲಿ ಬಂದಿರೋ ಕಾಮೆಂಟ್‌ಗಳು ಸೀರಿಯಲ್ ಟೀಮ್‌ಗೆ ತಲೆನೋವಾಗಿದೆ. ಜನರ ಮೆಮೊರಿ ತುಂಬ ಶಾರ್ಟ್ ಅಂತ ಬಹಳ ಜನ ಡೈಲಾಗ್ ಹೊಡೀತಾರೆ. ಆದರೆ ಅದು ಸುಳ್ಳು ಅನ್ನೋದನ್ನು ಜನ ಸಾಬೀತು ಮಾಡ್ತಾನೇ ಬಂದಿದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ 'ಅಣ್ಣಯ್ಯ' ಸೀರಿಯಲ್‌ನ ಒಂದು ಸೀನ್‌ಗೆ ಜನ ರಿಯಾಕ್ಟ್ ಮಾಡಿರೋ ರೀತಿ.

ಇದರಲ್ಲಿ ದೀಪೋತ್ಸವದ ಸೀನ್ ಸಾಕಷ್ಟು ದಿನಗಳಿಂದ ನಡೀತಾ ಇತ್ತು. ಈ ದೀಪೋತ್ಸವದಲ್ಲಿ ವಿಲನ್‌ಗಳು ಬೇರೇ ಸ್ಕೀಮ್‌ನಲ್ಲಿದ್ರು. ಆದರೆ ಸೀರಿಯಲ್‌ ಟೀಮ್‌ಗೆ ಇದು ಅಣ್ಣಯ್ಯ ಶಿವಣ್ಣದ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ದೀಪೋತ್ಸವದಲ್ಲಿ ನಾಯಕಿ ಪಾರು ಇರೋ ರೂಮಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹೊರಗಿಂದ ಲಾಕ್ ಆಗಿಬಿಟ್ಟಿದೆ. ಆಕೆ ಬೆಂಕಿ ನಡುವೆ ಇದ್ದಾಳೆ. ಪ್ರಾಣ ರಕ್ಷಣೆಗೆ ಕೂಗಿಕೊಳ್ತಾ ಇದ್ದಾಳೆ. ಅಲ್ಲಿ ನೂರಾರು ಜನ ಇದ್ದರೂ ಎಲ್ಲರೂ ಕೂಗಿಕೊಳ್ಳೋದ್ರಲ್ಲೇ ನಿರತರಾಗಿದ್ದಾರೆಯೇ ಹೊರತು ಯಾರೊಬ್ಬರೂ ನಾಯಕಿ ಪಾರು ರಕ್ಷಣೆ ಬಂದಿಲ್ಲ. ಜನರ ಈ ಬುದ್ಧಿ ಬಗ್ಗೆ ಮೊದಲೇ ಗೊತ್ತಿರುವ ಪಾರು ತನ್ನನ್ನು ಕಾಪಾಡುವಂತೆ ಶಿವೂಗೆ ಮೊರೆ ಇಡುತ್ತಾಳೆ. 'ಮಾವ... ಕಾಪಾಡೂ...' ಅಂತ ಕೂಗಿಕೊಳ್ತಾಳೆ.

ಕಪ್ಪಗಿರೋದು ಅಂದ್ರೆ ಕುರೂಪನ? ರೇಸಿಸಂ ಮಾಡ್ತಿದ್ದೀರ? ದೃಷ್ಟಿಬೊಟ್ಟು ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ

ತಂಗಿಯರು ಅಡ್ಡಗಟ್ಟಿದರೂ ಬಿಡದೇ ಶಿವು ಜಮಖಾನವನ್ನೇ ನೆನೆಸಿ ಬೆಂಕಿಗೆ ಹಾರಿ ಪಾರುವನ್ನು ರಕ್ಷಣೆ ಮಾಡ್ತಾನೆ. ಪಾರುವನ್ನು ತನ್ನ ತೋಳುಗಳಿಂದ ಎತ್ಕೊಂಡು ಹೊರಗೆ ಬರ್ತಾನೆ. ಪಾರು ಅಪ್ಪ ಕುತಂತ್ರಿ. ಆತನಿಗೆ ತನ್ನ ಮಗಳು ಶಿವಣ್ಣನ ಜೊತೆ ಓಡಾಡೋದು ಸ್ವಲ್ಪವೂ ಇಷ್ಟ ಇಲ್ಲ. ಇದಕ್ಕಾಗಿ ಆತ ಸಾಕಷ್ಟು ಸಲ ಪಾರುಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದೀಗ ಶಿವೂನೆ ತನ್ನ ಮಗಳನ್ನು ಕಾಪಾಡಿದಾಗ ಆತನಿಗೆ ಬಾಯಿ ಕಟ್ಟಿಬಿಡುತ್ತೆ. ಅತ್ತ ಪಾರು ಸಿದ್ಧಾರ್ಥನನ್ನು ಪ್ರೀತಿಸಿದರೂ ಪರಮ ದಯಾಳು ಮಾವ ಶಿವು ಪಾರುವಿನ ಕೈ ಬಿಟ್ಟಿಲ್ಲ.

ಇದು ಸದ್ಯದ ಕಥೆ. ಆದರೆ ಈ ಸೀನ್ ನೋಡಿದ ಸೀರಿಯಲ್ ಪ್ರಿಯರಿಗೆ ಗಟ್ಟಿಮೇಳ ಸೀರಿಯಲ್ ಕಥೆಯೇ ನೆನಪಾಗಿದೆ. ಸಾಕಷ್ಟು ಮಂದಿ 'ಈ ಸೀನ್ ಡಿಟ್ಟೋ ಗಟ್ಟಿಮೇಳದ ಸೀನ್ ಥರನೇ ಇದೆ. ಅಲ್ಲಿ ವೇದಾಂತ್ ಇದ್ದ, ಇಲ್ಲಿ ಶಿವು ಇದ್ದಾನೆ' ಅಂತ ಕಾಮೆಂಟ್ ಮಾಡ್ತಿದ್ದಾರೆ. ಸೋ, ಇದು ಸೀರಿಯಲ್ ಟೀಮ್‌ಗೆ ಪಾಠ. ಸಣ್ಣ ಸೀನ್ ರಿಪೀಟ್ ಮಾಡೋಕೂ ಮುಂಚೆ ಎಷ್ಟು ಎಚ್ಚರಿಕೆಯಿಂದಿದ್ರೂ ಸಾಲದು, ವೀಕ್ಷಕರದು ಶಾರ್ಟ್‌ ಮೆಮೊರಿ ಖಂಡಿತಾ ಅಲ್ಲ ಅನ್ನೋದನ್ನು ಸದಾ ತಲೆಯಲ್ಲಿ ಇಟ್ಕೋಬೇಕು ಅನ್ನೋದನ್ನು ಈ ಕಾಮೆಂಟ್‌ಗಳೇ ಪ್ರೂವ್ ಮಾಡಿವೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios