ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾಮಿಡಿ ಶೊ ' ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟಿ ಮೊದಲ ಸಲ  ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ಅದೂ ಕನ್ನಡದಲ್ಲಿ ಸ್ಟೇಟಸ್ ಹಾಕದ ಕಾರಣಕ್ಕೆ ! 

ಹೌದು! ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಸಕ್ರಿಯರಾಗಿರುವ ನಯನಾ ತಮ್ಮ ಕೆಲಸದ ವಿಚಾರ, ಕುಟುಂಬದ ಫೋಟೋ ಅಥವಾ ಫೋಟೋ ಶೂಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಇದಕ್ಕೊಂದೆರೆಡು ಸಾಲುಗಳನ್ನು ಬರೆದು ಪೋಸ್ಟ್‌ ಮಾಡುತ್ತಾರೆ. ಆದರೆ ಇತ್ತೀಚಿಗೆ ಅಪ್ಲೋಡ್ ಮಾಡಿದ ಫೋಟೋಗೆ ಇಂಗ್ಲಿಷ್‌ನಲ್ಲಿ ಸಾಲುಗಳನ್ನು ಬರೆದಿರುವುದಕ್ಕೆ ಅಭಿಮಾನಿಯೊಬ್ಬ ಕಾಮೆಂಟ್‌ ಮಾಡಿದ್ದಾರೆ. ಈ ಕಾಮೆಂಟ್‌ಗೆ ನಯನಾ ಪ್ರತಿಕ್ರಿಯಿಸಿರುವ ರೀತಿ ತುಂಬಾನೇ ವೈರಲ್ ಆಗುತ್ತಿದೆ. 

'ಫೇಮಸ್‌ ಆಗೋತನಕ ಕನ್ನಡ ಬೇಕು ಆಮೇಲೆ ಇಂಗ್ಲೀಷ್ ಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಯನಾ ಅವರು 'ಅಪ್ಪಾ ಕನ್ನಡದ ಭಕ್ತ ಮುಚ್ಕೊಂಡ್ ನಿನ್ನ  ಕೆಲಸ ನೋಡ್ಕೋ' ಎಂದು ರಿಪ್ಲೈ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ನಯನಾ ವಿರುದ್ಧ ಗರಂ ಆಗಿದ್ದಾರೆ.

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ರಿಯಲ್‌ ಲೈಫ್‌ ಲವ್‌ ಸ್ಟೋರಿ ಇದು!

ಜನರು ಅಭಿಪ್ರಾಯ:

ಒಂದು ಸಣ್ಣ ಹಳ್ಳಿಯಿಂದ ಬಂದ ಹುಡುಗಿ ನಯನಾ ಈಗ ಕರ್ನಾಟಕವೇ ಗುರುತಿಸುವಂತ ಮಟ್ಟಕ್ಕೆ ಸಾಧನೆ ಮಾಡಿರುವುದು  ಕನ್ನಡ ಭಾಷೆಯ ಮೂಲಕ ಅದರಲ್ಲೂ ಹೆಚ್ಚು ಗ್ರಾಮೀಣ ಶೈಲಿಯಲ್ಲಿ ಕನ್ನಡ ಮಾತನಾಡುವ ರೀತಿಗೆ ಅನೇಕರು ಫಿದಾ ಆಗಿದ್ದರು ಆದರೀಗ ಇದಕ್ಕಿದ್ದಂತೆ ಇಂಗ್ಲಿಷ್ ಕ್ಯಾಪ್ಶನ್ ನೋಡಿ ಜನರು ಪ್ರಶ್ನಿಸಿದ್ದಾರೆ.

'ನೀವು ಈ ಹಿಂದೆ ಕನ್ನಡದಲ್ಲಿ ಅನೇಕ ಕ್ಯಾಪ್ಶನ್ ಬರೆದಿದ್ದೀರಾ ಇದು ಒಂದು ಮಾತ್ರ ಯಾಕೆ ಇಂಗ್ಲೀಷ್ ನಲ್ಲಿ ಬರೆದದ್ದು ಎನ್ನುವುದನ್ನು  ತಾಳ್ಮೆಯಿಂದ ಉತ್ತರಿಸಬಹುದಿತ್ತು' ಎಂದು ಕೆಲವರು ಹೇಳಿದರೆ ಇನ್ನು ಕೆಲವರು ' ಇವರು ನಮ್ಮ ಕನ್ನಡದವರು ಎಂದು ಬೆಳೆಸಿದೆವು,ವೋಟ್ ಕೇಳಲು ನಾವು ಬೇಕಿತ್ತು ಆದರೆ ಯಾಕೆ ಮೇಡಂ ಹೀಗೆ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ  ತಿರುಗಿ ಬಿದಿದ್ದಾರೆ' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಕುರುಕ್ಷೇತ್ರ 100ನೇ ಸಂಭ್ರಮ; 'ಕಾಮಿಡಿ ಕಿಲಾಡಿ' ನಯನಾ ಕಮಾಲ್‌ ನೋಡಿ!

ಈ ಕಾಮೆಂಟ್‌ಗಳು ವೈರಲ್ ಆಗುತ್ತಿದ್ದಂತೆ ನಯನಾ ಅನೇಕ ಕಾಮೆಂಟ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಕೆಲವರು ನಯನಾ ಪರ ಮಾತನಾಡಿದ್ದಾರೆ ಮೇಡಂ ದಯವಿಟ್ಟು ಕ್ಷಮೆ ಕೇಳಿ. ನೀವು ಅವರನ್ನು ಅವಮಾನಿಸಿದ ರೀತಿಗೆ ನಿಮ್ಮ ಮೇಲೆ ಇದ್ದ ಗೌರವವೇ ಹೋಯ್ತು' ಎಂದು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡಿಗರು ಮೃದು ಮನಸ್ಸಿನವರು ಸಣ್ಣ ಪುಟ್ಟ ಪದಗಳು ಆಡು ಭಾಷೆಯ ರೀತಿಯಲ್ಲಿ ಮಾತನಾಡುತ್ತಾರೆ ಆದರೆ ಇದರಿಂದ ಕೆಲವರಿಗೆ ನೋವುಂಟಾಗುತ್ತದೆ. ಪ್ರತಿ 100 ಮೀಟರಿಗೂ ಕನ್ನಡ ಭಾಷೆಯಲ್ಲಿ ಕೊಂಚ ಬದಲಾವಣೆ ಇರುತ್ತದೆ. ಇದನ್ನು ನಾವು ಒಪ್ಪಿಕೊಂಡು ಪ್ರೀತಿಸಿ ನಡೆಯಬೇಕು....