ರಾಕೇಶ್ ಕೈ ಸೇರಿತು ಕಾಮಿಡಿ ಕಿಲಾಡಿ ಟ್ರೋಫಿ ; ಸಿಕ್ತು 8 ಲಕ್ಷ ರೂ ಬಹುಮಾನ!
ಕಾಮಿಡಿ ಕಿಲಾಡಿಗಳು -ಸೀಸನ್3 ಟ್ರೋಫಿಯನ್ನು ಉಡುಪಿಯ ರಾಕೇಶ್ ತಮ್ಮದಾಗಿಸಿಕೊಂಡಿದ್ದಾರೆ.
ವೀಕೆಂಡ್ ಬಂತದ್ರೆ ಸಾಕು ಜಗ್ಗಣ್ಣನ ಪಂಚಿಂಗ್ ಡೈಲಾಗ್, ಸ್ಪರ್ಧಿಗಳ ಕಾಮಿಡಿ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುವಂತೆ ಮಾಡುತ್ತಿದ್ದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3 ಮುಕ್ತಾಯಗೊಂಡಿದೆ.
ಅಂಧ ಗಾಯಕಿಯರ ಮನೆ ರೆಡಿ: ಕೊಟ್ಟ ಮಾತು ಉಳಿಸಿಕೊಂಡ ನವರಸ ನಾಯಕ!
ಶನಿವಾರ (ಫೆ.29) ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ 'ಕಾಮಿಡಿ ಕಿಲಾಡಿಗಳು-3' ಗ್ರ್ಯಾಂಡ್ ಫಿನಾಲೆ ನಡೆದಿದ್ದು ಉಡುಪಿ ಮೂಲದ ರಾಕೇಶ್ ವಿನ್ನರ್ ಟ್ರೋಫಿ ಹಾಗೂ 8 ಲಕ್ಷ ರೂಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆರ್ಯವರ್ಧನ್ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!
ಮೊದಲನೇ ಸ್ಥಾನ ರಾಕೇಶ್ ಪಡೆದುಕೊಂಡರೆ ಮೊದಲನೇ ರನ್ನರ್ ಅಪ್ ಸ್ಥಾನವನ್ನು ಹಾಸನದ ಸಂತೋಷ್ ಪಡೆದುಕೊಂಡಿದ್ದಾರೆ. ಅವರಿಗೆ 4 ಲಕ್ಷ ರೂ. ಹಾಗೂ ಟ್ರೋಫಿ ಸಿಕ್ಕಿದೆ. ಎರಡನೇ ರನ್ನರ್ ಅಪ್ ಆಗಿ ಮನೋಹರ್ ಹಾಗೂ 'ಬಾ ಮಲಿಕ್ಕೋ' ಡೈಲಾಗ್ ಖ್ಯಾತಿಯ ದಾನಪ್ಪ ಟ್ರೋಫಿ ಹಾಗೂ 2ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ.