ಇದೊಂದು ಕೆಟ್ಟ ಕನಸಾಗಿ ಉಳಿಯಬೇಕು ದಯವಿಟ್ಟು ಬಾ ಎಂದು ಸಹೋದರನ ಜೊತೆ ಫೋಟೋ ಹಂಚಿಕೊಂಡು ಭಾವುಕ ಪತ್ರ ಬರೆದ ನಿರೂಪಕಿ ಶ್ವೇತಾ ಚಂಗಪ್ಪ.
ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆ ಜನಪ್ರಿಯಾ ನಟ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ಸಹೋದರನನ್ನು ಕಳೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಗಿರಿಗೆ ಪತ್ರ ಬರೆದ
'ನನ್ನ ಪ್ರೀತಿಯ ಸಹೋದರ ಗಿರಿ,
ಸಾಮಾನ್ಯವಾಗಿ ನಾನು ತುಂಬಾ ಎಕ್ಸ್‌ಪ್ರೆಸ್ ಮಾಡುವ ವ್ಯಕ್ತಿ ಆದರೆ ಮೊದಲ ಸಲ ನನ್ನ ಬಳಿ ಪದಗಳಿಲ್ಲ. ಯಾರಾದರೂ ಬಂದು ಇದು ಪ್ರ್ಯಾಂಕ್ ಅಂತ ಒಮ್ಮೆ ಹೇಳಬೇಕು, ನಿದ್ರೆಯಿಂದ ನನ್ನನ್ನು ಎಬ್ಬಿಸಿ ಇದೊಂದು ಕೆಟ್ಟ ಕನಸು ಎಂದು ಹೇಳಬೇಕು, ಅಥವಾ ಆಕ್ಷನ್ ಕಟ್ ಹೇಳಿ ಸೀನ್ ಕಟ್ ಹೇಳಿ ಏನ್ ಗಿರಿ ನೀನು ಇಷ್ಟೊಂದು ಸೂಪರ್ ಅಗಿ ಆಕ್ಟಿಂಗ್ ಮಾಡಿದ್ರಿ ಅಂತ ನಾನು ರೇಗಿಸಬೇಕು. ನ್ಯಾಚುರಲ್ ಅಗಿ ಆಕ್ಟ್ ಮಾಡಿದ್ರಾ ಅಂತ ಹೇಳಬೇಕು.
ಸತ್ಯ ಹೇಳಬೇಕು ಅಂದ್ರೆ ನಡೆದಿರುವ ಘಟನೆಯನ್ನು ಮರೆಯುವುದಕ್ಕೆ ಆಗುತ್ತಿಲ್ಲ ನನ್ನ ಜೀವನದ ಅತ್ಯಂತ ಕೆಟ್ಟ ಎರಡು ದಿನ ಇದಾಗಿದೆ. ನಾವು ಮನೆಗೆ ತೆರಳಿದ ತಕ್ಷಣ ನನ್ನ ಪುತ್ರ ಜಿಯಾನ್ ಗಿರಿ ಮಾಮ ಎಲ್ಲಿ ಯಾವರಿಗೆ ಎನಾಗಿತ್ತು ಎಂದು ಕೇಳಿದ. ಗಿರಿ ಮಾಮ ದೇವರ ಬಳಿ ಹೋಗಿದ್ದಾರೆ ಎಂದು ಹೇಳಿದೆ. ಯಾವಾಗ ಬರ್ತಾರೆ ಗಿರಿ ಮಾಮ ಎಷ್ಟೊತ್ತು ಆಗ ಬಹುದು ಎಂದು ಮತ್ತೊಮ್ಮೆ ಜಿಯಾನ್ ಪ್ರಶ್ನೆ ಮಾಡಿದ ಆಗ ನಾನು ಗಿರಿ ಮಾಮ ಎಂದೂ ಬರುವುದಿಲ್ಲ ಎಂದ. ತಕ್ಷಣವೇ ಜಿಯಾನ್ ಹಾಸಿಗೆ ಮೇಲೆ ಮಲಗಿಕೊಂಡು ಗಿರಿ ಮಾಮ ಬರುವುದಿಲ್ಲ ಅಂದ್ರೆ ಅವರು ನನ್ನ ಫ್ರೆಂಡ್ ಅಲ್ಲ ನನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಅಳುವುದಕ್ಕೆ ಶುರು ಮಾಡಿದ. ಗಿರಿ ಜೊತೆ ಶುದ್ಧ ಸಂಬಂಧ ಹೊಂದಿರುವ ಪುಟ್ಟ ಹುಡುಗನ ಕಥೆ ಇದು.
20 ವರ್ಷ ಟಿವಿ- ಸಿನಿಮಾ ಜರ್ನಿ; ವಿಶೇಷ ಕೇಕ್ ಜೊತೆ ದ್ವೇಷಿಸುವವರಿಗೂ ಪತ್ರ ಬರೆದ ನಟಿ ಶ್ವೇತಾ ಚಂಗಪ್ಪ
ನನ್ನ ಪತಿ ಕಿರಣ್ ನಿಮ್ಮ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ನೋಡಿಕೊಂಡು ನಿಲ್ಲಿಸದಂತೆ ಅಳುತ್ತಿದ್ದಾರೆ. ಈ ಘನಟೆ ಎದುರಾಗುತ್ತದೆ ಎಂದು ಅವರಿಗೆ ನಂಬಲಾಗುತ್ತಿಲ್ಲ. ಕಿರಣ್‌ಗಿದ್ದ ಬೆಸ್ಟ್ ಫ್ರೆಂಡ್, ಬೆಸ್ಟ್ ಬರ್ದರ್ ಅಂದ್ರೆ ನೀವೇ ಗಿರಿ ನನಗೆ ಗೊತ್ತು. ನಿಜ ಹೇಳಬೇಕು ಅಂದ್ರೆ ಮೊದಲ ಸಲ ಕಿರಣ್ ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ ಅವರನ್ನು ಬಿಟ್ಟು ನೀವು ಒಬ್ಬರೆ ಹೋಗಿರುವುದಕ್ಕೆ. bade achhe lagte Hain ಹಾಡನ್ನು ಮತ್ತೊಮ್ಮೆ ನಿಮ್ಮಿಂದ ಕೇಳಬೇಕು ಎಂದು ಅರ್ಜುನ್ ಅಪ್ಪ ಕಾಯುತ್ತಿದ್ದಾರೆ. ಈ 10-11 ವರ್ಷಗಳ ಸ್ನೇಹದಲ್ಲಿ ಗಿರಿ ನೀವು ತುಂಬಾ ಪ್ರಾಮಾಣಿಕ, ಲಾಯಲ್, ಫನ್ ಹಾಗೂ ಖುಷಿ ವ್ಯಕ್ತಿಯಾಗಿದ್ದು ನಮ್ಮನ್ನು ಹಾಗೆ ನೋಡಿಕೊಂಡಿದ್ದೀರಿ. ಒಂದು ನೆಗೆಟಿವ್ ವಿಚಾರಗಳು ಇಲ್ಲ. ನನ್ನ ಜೀವನದ ಬೆಸ್ಟ್ ಚಾಪ್ಟರ್ ನೀವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ. ನನ್ನ ಸ್ನೇಹಿತನಾಗಿ ಸಹೋದರನಾಗಿ ನಮ್ಮ ಹಿತೈಷಿಯಾಗಿ ನನ್ನ ಕುಟುಂಬವಾಗಿ ಅದಕ್ಕೂ ಮೀರಿದ ವ್ಯಕ್ತಿಯಾಗಿದ್ದವರು ನೀವು ನಿಮ್ಮನ್ನು ಯಾರೂ ರೀ-ಪ್ಲೇಸ್ ಮಾಡಲಾಗದು. ನನ್ನ ಕೊನೆ ಉಸಿರು ಎಳೆಯುವವರೆಗೂ ನನ್ನ ಕಣ್ಣೀರು ನಿಲ್ಲಿಸುವುದಿಲ್ಲ. ನೀವಿಲ್ಲದೆ ಫ್ಯಾಬ್ 4 ಕಂಪ್ಲೀಟ್ ಆಗುವುದಿಲ್ಲ.
ಏನಮ್ಮಿ ಒಂದ್ ಮಗು ಇದ್ರೂ ಇಷ್ಟೊಂದು ಹಾಟ್ ಆಗಿದ್ಯಾ?; ಶ್ವೇತಾ ಚಂಗಪ್ಪ ಲುಕ್ ಮೆಚ್ಚಿದ ನೆಟ್ಟಿಗರು
ನನ್ನ ಜೀವನಕ್ಕೆ ಎಂಟ್ರಿ ಕೊಟ್ಟಿದಕ್ಕೆ ಥ್ಯಾಂಕ್ಸ್ ಗಿರಿ. ಒಳ್ಳೊಳ್ಳೆ ಕ್ಷಣಗಳನ್ನು ನೆನಪಾಗಿ ಕೊಟ್ಟಿದ್ದೀರಿ. ನೀವು ನಮ್ಮ ಜೊತೆ ಸದಾ ಜೊತೆಗಿರುತ್ತೀರಿ. ಹನಿ ಮತ್ತು ದಿವ್ಯಾ ಸುರಕ್ಷಿತವಾಗಿರುತ್ತಾರೆ ತಲೆ ಕೆಡಿಸಿಕೊಳ್ಳಬೇಡಿ ಗಿರಿ. ನಾವು ಅವರ ಜೊತೆ ಸದಾ ಇರುತ್ತೇವೆ ನಾವು ಒಂದು ಕುಟುಂಬ. ಯಾರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಗಿರಿ. ಒಂದೇ ಒಂದು ಸಲ ನಮಗೆ ಪ್ರತಿಕ್ರಿಯೆ ಕೊಡು ಗಿರಿ ದಯವಿಟ್ಟು ಮರುಳಿ AAP BADE ACHHE LAGTE HAIN ಹಾಡನ್ನು ಒಮ್ಮೆ ಹಾಡಿ
