Asianet Suvarna News Asianet Suvarna News

ಸೀತಾರಾಮ: ಸೀತಾ ಮತ್ತು ರಾಮಂಗೆ ನೀವು ತಾವು ಅನ್ನೋ ಖಾಯಿಲೆ ಅಂತಿದ್ದಾರೆ ತಾತ, ನೀವ್ ನಿಮ್ಮ ಪಾರ್ಟ್ನರ್‌ನ ಏನಂತ ಕರೀತೀರ?

ಸೀತಾರಾಮ ಸೀರಿಯಲ್‌ನಲ್ಲಿ ತಾತ ಸೂರಿಗೆ ಮೊಮ್ಮಗು ನೋಡುವ ಆಸೆ. ರಾಮ ಮತ್ತು ಸೀತಾ ನಡುವೆ ಫಿಸಿಕಲ್ ರಿಲೇಶನ್‌ಶಿಪ್ ಇಲ್ಲದಿರುವುದು ಅವರ ಸಮಸ್ಯೆ. ತಾತನ ಕಿಲಾಡಿ ಡೈಲಾಗ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ.

zee kannada channel seetharama serial suri guiding seetha and ram
Author
First Published Aug 17, 2024, 10:08 AM IST | Last Updated Aug 17, 2024, 10:13 AM IST

ಸೀತಾರಾಮ ಸೀರಿಯಲ್‌ನಲ್ಲಿ ಒಂದು ಕಡೆ ಗಂಭೀರ ಕಥೆ ನಡೀತಿದೆ. ಇನ್ನೊಂದು ಕಡೆ ತಾತ ಸೂರಿಗೆ ತಾನು ಕಣ್ಮುಚ್ಚೋದ್ರೊಳಗೆ ಮರಿ ಮೊಮ್ಮಗು ನೋಡೋ ಆಸೆ. ಅದನ್ನೇ ಮತ್ತೆ ಮತ್ತೆ ರಾಮಂಗೆ ಹೇಳ್ತಾ ಇದ್ದಾರೆ. ರಾಮ ಸೀತಾ ಪ್ರೀತಿಸಿ ಮದುವೆ ಆಗಿದ್ರೂ ಇವರ ನಡುವೆ ಯಾವುದೇ ಫಿಸಿಕಲ್ ರಿಲೇಶನ್‌ಶಿಪ್ ಇಲ್ಲ ಅನ್ನೋದು ಅವರಿಗೆ ಗೊತ್ತಾದ ಹಾಗಿದೆ. ಆದರೆ ಅವರಿಗೆ ಇವರಿಬ್ಬರಲ್ಲಿ ಎಲ್ಲ ಬಗೆಯ ರಿಲೇಶನ್‌ಶಿಪ್ ಇರಬೇಕು. ಹೊಸತಾಗಿ ಮದುವೆ ಆಗಿರೋ ಗಂಡ ಹೆಂಡತಿ ಥರ ಇವರಿಬ್ಬರೂ ರೊಮ್ಯಾಂಟಿಕ್ ಆಗಬೇಕು. ಇದೇ ಮುಂದುವರಿದು ಇವರಿಗೊಂದು ಮರಿ ಮೊಮ್ಮಗುವೂ ಬರಬೇಕು ಅನ್ನೋದು ಅವರ ಆಸೆ. ಅದಕ್ಕಾಗಿ ರಾಮನ ಬಳಿ ಅವಕಾಶ ಸಿಕ್ಕಾಗಲೆಲ್ಲ ಈ ವಿಚಾರವನ್ನೇ ಮತ್ತೆ ಮತ್ತೆ ಪ್ರಸ್ತಾಪ ಮಾಡುತ್ತಿದ್ದಾರೆ. ಎಮೋಶನಲ್ ಆಗಿ ಮಾತಾಡ್ತಾ ಇವರಿಬ್ಬರ ನಡುವೆ ರಿಲೇಶನ್‌ಶಿಪ್ ಇಂಪ್ರೂವೈಸ್ ಆಗ್ಬೇಕು ಅಂತ ಸಲಹೆ ಕೊಡ್ತಾ ಇದ್ದಾರೆ. ಆದರೆ ಅವರ ಮಾತು ಸಖತ್ ಇಂಟರೆಸ್ಟಿಂಗ್ ಆಗಿದೆ.

'ಸಿಹಿಯನ್ನು ಸ್ಕೂಲಿಗೆ ಬಿಟ್ಟಮೇಲೆ ಎಲ್ಲಿಗೆ ಓಡಾಡ್ತೀರಿ? ನೀವಿಬ್ರೂ ಜವಾಬ್ದಾರಿ ಮರೆತು ಓಡಾಡಿದ್ರೆ ನೀವು ತಾವು ಅನ್ನೋ ಖಾಯಿಲೆ ವಾಸಿಯಾಗುತ್ತೇನೋ ಅಂತ' ಹೀಗೆ ತಾತ ಕಿಲಾಡಿ ಡೈಲಾಗ್‌ ಬಿಡ್ತಿದ್ರೆ ರಾಮ ಕಿಡಿಕಿಡಿಯಾಗ್ತಾನೆ. 'ಅದೇನು ಖಾಯಿಲೆ ಅಂತಿದ್ದೀರಿ.. ಅದು ಖಾಯಿಲೆ ಅಲ್ಲ. ನಾವು ಚೆನ್ನಾಗೇ ಇದ್ದೀವಿ' ಅಂತಾನೆ.

 ಟಿಆರ್‌ಪಿಗಾಗಿ ದಿನದಿಂದ ದಿನಕ್ಕೆ ಕುರೂಪಿ ಆಗ್ತಿದ್ದಾಳ ಬ್ರಹ್ಮಗಂಟು ದೀಪ! ಅವ್ಳು ಸುರ ಸುಂದರಿಯಾಗಿ ಬದಲಾಗೋ ದಿನ ಬರುತ್ತಾ?

ಆದರೆ ತಾತ ಬಿಡೋದಿಲ್ಲ. 'ಅದೇನು ಹಳೇ ಕಾಲದವ್ರ ಥರ ಮಾತಾಡ್ತಿ.. ನೀವು ತಾವು ಅನ್ನೋದನ್ನೆಲ್ಲ ಹೊರಗೆ ಇಟ್ಕೋಬೇಕು. ಈ ನಾನು, ನೀನು ಅನ್ನೋದು ಬಹಳ ಚೆನ್ನಾಗಿರುತ್ತೆ. ಅದರಿಂದ ಇಬ್ಬರ ನಡುವಿನ ಅಂತರ ಕಡಿಮೆ ಆಗುತ್ತೆ' ಅಂತ ಗುಟ್ಟು ಹೇಳೋ ಥರ ಹೇಳ್ತಾರೆ. ಆದರೆ ರಾಮ, 'ತಾತ, ಇದು ಮ್ಯೂಚ್ಯುವಲ್ ರೆಸ್ಪೆಕ್ಟ್. ಅದಕ್ಕೂ ಪ್ರೀತಿಗೂ ಸಂಬಂಧ ಇಲ್ಲ' ಅಂತಾನೆ.

ಆಗ ತಾತ, 'ದೊಡ್ಡದಾಗಿ ನಂಗೇ ಡೆಫಿನಿಷಿನ್ ಹೇಳಕ್ಕೆ ಬರ್ತಾನೆ. ನಿನ್ನನ್ನು ಬೆಳೆಸಿದವನೇ ನಾನು. ನಂಗೆ ನಿನ್ನ ಬಗ್ಗೆ ಗೊತ್ತಿಲ್ವಾ? ನಂಗೆಷ್ಟು ಅನುಭವ ಇದೆ ಅಂದ್ರೆ ಮುಖ ನೋಡ್ತನೇ ಗಂಡ ಹೆಂಡತಿ ಎಷ್ಟು ಹತ್ತಿರ ಇದ್ದಾರೆ ಅಂತ ಹೇಳಬಲ್ಲೆ' ಎನ್ನುತ್ತಾ, ರಾಮನ ಮಾತನ್ನು ರಾಮನಿಗೇ ತಿರುಗಿಸ್ತಾರೆ. 'ಸ್ನೇಹ, ಗೌರವ, ವಿಶ್ವಾಸ ಬೇಕು, ಆದರೆ ಅದೇ ಸಂಸಾರ ಅಲ್ಲ ' ಅನ್ನೋ ಅವರ ಮಾತಿಗೆ ವೀಕ್ಷಕರು ಕ್ಲಾಪ್ ಮಾಡಿ ವಿಷಲ್ ಹೊಡ್ತಿದ್ದಾರೆ.

ಈಗಂತೂ ಎಲ್ಲ ಸೀರಿಯಲ್‌ಗಳಲ್ಲೂ ಇದೇ ಟ್ರೆಂಡ್ ಆಗಿದೆ. ಗಂಡನನ್ನ ಹೆಂಡ್ತಿ ಹಾಗೂ ಹೆಂಡ್ತಿಯನ್ನು ಗಂಡನನ್ನ ಚಿತ್ರ ವಿಚಿತ್ರ ಹೆಸರಿಂದ ಕರೀತಿದ್ದಾರೆ. 'ಹೊಂಗನಸು' ಸೀರಿಯಲ್‌ನಲ್ಲಿ ನಾಯಕಿ ವಸುಧಾರ ತನ್ನ ಗಂಡನನ್ನು 'ರುಷಿ ಸರ್' ಅಂತ ಕರೀತಾಳೆ. 'ರಾಮಾಚಾರಿ' ಸೀರಿಯಲ್‌ನಲ್ಲಿ ರಾಮಾಚಾರಿ ತನ್ನ ಹೆಂಡ್ತೀನ 'ಚಾರು ಮೇಡಂ' ಅಂತ ಕರೆದರೆ, ಚಾರು ಗಂಡನನ್ನು 'ಲೋ ರಾಮಾಚಾರಿ' ಅಂತ ಕರೀತಾಳೆ. 'ಅಮೃತಧಾರೆ' ಸೀರಿಯಲ್‌ನಲ್ಲಿ ಇಬ್ಬರೂ ಇಬ್ಬರನ್ನೂ ಫುಲ್ ರೆಸ್ಪೆಕ್ಟ್‌ನಲ್ಲಿ 'ಅವರೆ..' 'ಇವರೇ' ಅಂತ ಕರೀತಾರೆ. 'ಶ್ರೀರಸ್ತು ಶುಭಮಸ್ತು' ಸೀರಿಯಲ್‌ನಲ್ಲೂ ಇದೇ ಪರಂಪರೆ ಇದೆ.

ಹೊಂಗನಸು ಸೀರಿಯಲ್ ರಿಷಿ ಸಾರ್ ಅಂತಲೇ ಫೇಮಸ್ ಆಗಿರೋ ಮುಖೇಶ್ ಗೌಡ ಈ ಬಾರಿಯ Biggboss kannada 11ಗೆ ಬರ್ತಿದ್ದಾರಂತೆ! ನಿಜಾನ?

ಹೀಗೆ ಸೀರಿಯಲ್ ಲಿಸ್ಟ್ ತೆಗೆದು ನೋಡಿದ್ರೆ ಗಂಡ ಹೆಂಡ್ತೀರು ಒಂದೊಂದು ಹೆಸರಲ್ಲಿ ಒಬ್ಬೊಬ್ಬರನ್ನು ಕರೀತಾರೆ. ಇವೆಲ್ಲ ನಾರ್ಮಲ್ ಆಗಿಲ್ಲ ಅನ್ನೋದು ಸಹಜ ಆದರೂ ಕಥೆಗೆ ಪೂರಕವಾಗಿರೋ ಕಾರಣ ಜನ ಇದನ್ನು ಫನ್ನಿಯಾಗೇ ಸ್ವೀಕರಿಸಿದ್ದಾರೆ. ಅದ್ಸರಿ ನೀವು ನಿಮ್ಮ ಪಾರ್ಟನರ್‌ನ ಹೇಗೆ ಕರೀತೀರ?

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios