Zee Kannada Naa Ninna Bidalaare : ಯಾವ್ದೆ ಫೋಟೋ ಇರಲಿ, ವಿಡಿಯೋ ಇರಲಿ ಕಂಟೆಂಟ್ ಕ್ರಿಯೇಟರ್ ಅನುಮತಿ ಇಲ್ದೆ ಬಳಸುವಂತಿಲ್ಲ. ಅದು ಅಪರಾಧ. ಇದು ಗೊತ್ತಿದ್ದೂ ಜೀ ಕನ್ನಡ ಒಂದು ತಪ್ಪು ಮಾಡಿದ್ದು. ಈಗ ಕ್ಷಮೆ ಕೇಳಿದೆ.

ನಮಗೆ ಅರಿವಿಲ್ಲದೆ ನಮ್ಮ ವಿಡಿಯೋ (video)ಗಳನ್ನು ಅಥವಾ ಫೋಟೋವನ್ನು ಬೇರೆಯವರು ಬಳಸಿದಾಗ ನೋವಾಗೋದು ಸಹಜ. ಅದ್ರಲ್ಲೂ ಜೀ ಕನ್ನಡದಂತಹ ದೊಡ್ಡ ಚಾನೆಲ್ ಗಳು ನಮ್ಮ ವಿಡಿಯೋ ಬಳಕೆ ಮಾಡ್ಕೊಂಡಾಗ ಒಂದ್ಕಡೆ ಖುಷಿಯಿದ್ರೂ ಒಪ್ಪಿಗೆ ಕೇಳ್ಬೇಕಿತ್ತು, ಕ್ರೆಡಿಟ್ ನೀಡ್ಬೇಕಿತ್ತು ಎಂಬ ನೋವಿರುತ್ತದೆ. ಇಂಥ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು, ಗಲಾಟೆ, ಕೋರ್ಟ್ ಅಂತ ಹೋಗುವವರಿದ್ದಾರೆ. ಆದ್ರೆ ಸ್ತುತಿ ಭಟ್ ಈ ವಿಷ್ಯವನ್ನು ಬುದ್ಧಿವಂತಿಕೆಯಿಂದ ಹ್ಯಾಂಡಲ್ ಮಾಡಿ, ಬಳಕೆದಾರರಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ.

ಸ್ತುತಿ ಭಟ್ (sthuthi bhat) ಕ್ಷಮೆ ಕೇಳಿದ ಜೀ ಕನ್ನಡ :

ಸ್ತುತಿ ಭಟ್ ಹಾಡುಗಾರ್ತಿ. ಮಿನಿ ವ್ಲಾಗರ್. ಹಾಗೆಯೇ ಯೂಟ್ಯೂಬ್ ಹೊಂದಿದ್ದಾರೆ. ಸುಂದರ ವಿಡಿಯೋಗಳನ್ನು ಶೂಟ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ಸ್ತುತಿ ಭಟ್ ವಿಡಿಯೋ ಒಂದನ್ನು ಪ್ಲೇ ಮಾಡಲಾಗಿದೆ. ಶರತ್ ಗೆ ಬಾಲ್ಯದ ದಿನಗಳು ನೆನಪಾಗುತ್ವೆ. ಆ ಸಂದರ್ಭದಲ್ಲಿ ಸ್ತುತಿ ಭಟ್, ಮಗು ಜೊತೆ ಮಾಡಿದ ವಿಡಿಯೋ ಕ್ಲಿಪ್ ಪ್ಲೇ ಆಗಿದೆ. ಈ ವಿಡಿಯೋ ಕ್ಲಿಪ್ ಬಳಸುವ ಮೊದಲು ಸ್ತುತಿಗೆ ಜೀ ಕನ್ನಡ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಸ್ತುತಿ ಭಟ್ ಸಂಪರ್ಕಿಸಿದ ಜೀ ಕನ್ನಡ, ತಮ್ಮ ತಪ್ಪಿಗೆ ಕ್ಷಮೆ ಕೇಳಿದೆ.

BBK 12: ಮಸ್ಕಾ ಹೊಡಿತಿದ್ದ ಗಿಲ್ಲಿ ನಟ; ಅದೊಂದು ಪ್ರಶ್ನೆಯಿಂದ ಮತ್ತೆ ಮಾತೇ ಆಡದಂತೆ ಮಾಡಿದ ರಕ್ಷಿತಾ

ಸ್ತುತಿ ಭಟ್, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೀ ಕನ್ನಡದ ಬ್ಯುಸಿನೆಸ್ ಹೆಡ್ ಹಾಗೂ ನಾ ನಿನ್ನ ಬಿಡಲಾರೆ ಸೀರಿಯಲ್ ನ ಪ್ರೊಡಕ್ಷನ್ ತಂಡ ನನ್ನನ್ನು ಸಂಪರ್ಕಿಸಿ ಕ್ಷಮೆ ಕೇಳಿದೆ. ನನ್ನ ಕೆಲ್ಸಕ್ಕೆ ಗೌರವ ನೀಡಿದೆ. ನನಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಕಾನೂನು ಕ್ರಮ ಕೈಗೊಳ್ಳುವಂತೆ ಕೆಲವರು ಸೂಚನೆ ನೀಡಿದ್ರು. ಜೀ ಕನ್ನಡದ ಉನ್ನತ ಹುದ್ದೆಯಲ್ಲಿರುವ ಇಬ್ಬರೂ ಕ್ಷಮೆ ಕೇಳಿದ್ರಿಂದ ಹಾಗೆ ನನಗೆ ಪುಟಾಣಿ ಮಕ್ಕಳಿರೋದ್ರಿಂದ ಕೋರ್ಟ್ ಅಗತ್ಯವಿಲ್ಲ ಅನ್ನಿಸ್ತು ಎಂದಿರುವ ಸ್ತುತಿ ಭಟ್, ಸೋಶಿಯಲ್ ಮೀಡಿಯಾದಲ್ಲಿ ಇಂಥ ಘಟನೆ ನಡೆಯುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ನಿಮ್ಮ ಧ್ವನಿ ಎತ್ತಿ. ಅತಿ ಬೇಗ ನಿಮ್ಮ ಧ್ವನಿ ತಲುಪಬೇಕಾದ ಜಾಗ ತಲುಪುತ್ತೆ. ಜನರು ಬರೀ ಮನರಂಜನೆಗಾಗಿ ಅಲ್ಲ, ಕಷ್ಟ ಬಂದಾಗ ಸಹಾಯ ಮಾಡಲೂ ಮುಂದೆ ಬರ್ತಾರೆ ಎಂಬುದು ನನಗೆ ಗೊತ್ತಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

BBK 12: ರಕ್ಷಿತಾಗೆ ಅನ್ಯಾಯ ಮಾಡಿದ್ರಾ ಅಶ್ವಿನಿ ಗೌಡ? ಧನುಷ್ ಅಚ್ಚರಿ ಹೇಳಿಕೆ, ಪುಟ್ಟಿಗೆ ಸಿಗಲಿಲ್ಲ ಮನ್ನಣೆ?

ಇದಕ್ಕೂ ಮುನ್ನ ಸ್ತುತಿ ಭಟ್, ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ಬಂದ ತಮ್ಮ ಕ್ಲಿಪ್ ಬಗ್ಗೆ ಧನಿ ಎತ್ತಿದ್ದರು. ಜೀ ಕನ್ನಡದಲ್ಲಿ ನನ್ನ ಕ್ಲಿಪ್ ಬಳಕೆ ಮಾಡಿದ್ದು ಖುಷಿಯಾಗಿದ್ರೂ ನನಗೆ ತಿಳಿಯದೆ ಮಾಡಿದ್ದು ನೋವು ತಂದಿದೆ ಎಂದಿದ್ದರು. ಕ್ಲಿಪ್ ಬಳಸುವಾಗ, ಮಕ್ಕಳಿಗೆ ಯಾವುದೇ ಹಾನಿ ಮಾಡಿಲ್ಲ ಅಂತ ಹಾಕಿದ್ರು. ಆದ್ರೆ ನನ್ನ ಹೆಸರನ್ನು ಎಲ್ಲಿಯೂ ಹೇಳಿಲ್ಲ. ನನಗೂ ಈ ವಿಷ್ಯ ತಿಳಿದಿರಲಿಲ್ಲ. ಸ್ನೇಹಿತರು, ಫಾಲೋವರ್ಸ್ ಈ ವಿಷ್ಯ ತಿಳಿಸಿದ್ರು. ಹೀಗೆ ಕಂಟೆಂಟ್ ಕ್ರಿಯೇಟರ್ ಕ್ಲಿಪ್ ತೆಗೆದು ಹಾಕೋದು, ಕ್ರಿಯೇಟರ್ಸ್ ಗೆ ಅವಮಾನ ಮಾಡಿದಂತೆ ಅಂತ ಬೇಸರ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸ್ತುತಿ ಭಟ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿತ್ತು. ಜನರು ಜೀ ಕನ್ನಡಕ್ಕೆ ಟ್ಯಾಗ್ ಮಾಡಿದ್ದರು. ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

View post on Instagram