ಎಂಬಿಬಿಎಸ್ ಪದವೀಧರೆ ಪಾರ್ವತಿ, ಗಂಡ ಶಿವು ಜೊತೆ ಗೃಹಿಣಿಯಾಗಿರುತ್ತಾಳೆ. ವೈದ್ಯಕೀಯ ವೃತ್ತಿ ಮುಂದುವರೆಸಲು ಶಿವು ಬಯಸಿದರೂ, ಪಾರ್ವತಿಯ ತಂದೆ ವೀರಭದ್ರ ಅವಳ ವೈದ್ಯಕೀಯ ಪರವಾನಗಿಯನ್ನು ಹರಿದು ಹಾಕುತ್ತಾನೆ. ಶಿವು ಪತ್ನಿಗೆ ಆಸ್ಪತ್ರೆ ಕಟ್ಟಿಸುವ ಮತ್ತು ಪರವಾನಗಿ ಪಡೆಯುವ ಪಣ ತೊಟ್ಟಿದ್ದಾನೆ. ಈ ಘಟನೆಯಿಂದ ಕೆಂಡಾಮಂಡಲನಾದ ಶಿವು, ಮಾವನ ವಿರುದ್ಧ ಸಿಡಿದೆದ್ದಿದ್ದಾನೆ.
ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪಾರ್ವತಿ ಎಂಬಿಬಿಎಸ್ ಮಾಡಿದ್ದಾಳೆ. ಆದರೆ ಅವಳೀಗ ಶಿವು ಪತ್ನಿಯಾಗಿ ಮನೆಯಲ್ಲಿಯೇ ಇದ್ದಾಳೆ. ನನಗೀಗ ಕೆಲಸ ಮಾಡಲು ಇಷ್ಟ ಇಲ್ಲ. ನಾನು ನನ್ನ ನಾದಿನಿಯರು, ಗಂಡನನ್ನು ನೋಡಿಕೊಳ್ಳಬೇಕು. ಅದರ ಮಧ್ಯೆ ಕೆಲಸ ಮಾಡೋಕೆ ಆಗೋದಿಲ್ಲ ಎಂದು ಅವಳು ಹೇಳಿದರೂ ಕೂಡ, ಪತ್ನಿ ಓದಿರೋದು ಹಾಳಾಗಬಾರದು ಅಂತ ಶಿವು ಪಣತೊಟ್ಟಿದ್ದಾನೆ. ಆದರೆ ಅವಳಿಗೆ ಲೈಸೆನ್ಸ್ ಸಿಗೋದು ಕಷ್ಟ ಆಗಿದೆ.
ಲೈಸೆನ್ಸ್ ಹರಿದು ಹಾಕಿದ ವೀರಭದ್ರ!
ಪಾರ್ವತಿ ಕಂಡರೆ ಅವಳ ತಂದೆಗೆ ಆಗೋದಿಲ್ಲ. ತಂದೆಯ ನೀಚತನದ ವಿರುದ್ಧ ಅವಳು ಯಾವಾಗಲೂ ಸಿಡಿದೇಳುತ್ತಾಳೆ. ಅವಳಿಗೆ ಬುದ್ಧಿ ಕಲಿಸಲು ಇದು ಒಳ್ಳೆಯ ಅವಕಾಶ ಅಂತ ಅವಳ ತಂದೆ ಲೈಸೆನ್ಸ್ ಹರಿದು ಹಾಕಿದ್ದಾರೆ. ಈ ವಿಷಯ ಶಿವುಗೆ ಗೊತ್ತಾಗಿದ್ದು, ಅವನು ಕೆಂಡಾಮಂಡಲವಾಗಿದ್ದಾನೆ. ಪತ್ನಿಗೆ ಆಸ್ಪತ್ರೆ ಕಟ್ಟಿಕೊಡಬೇಕು, ಅವಳ ಲೈಸೆನ್ಸ್ ಬೇಕು ಅಂತ ಅವನು ಮಾವನ ಮನೆಗೆ ಬಂದಿದ್ದಾನೆ. “ಪಾರುಗೆ ಆಸ್ಪತ್ರೆ ಕಟ್ಟಿಕೊಡ್ತೀನಿ, ಅವಳ ಲೈಸೆನ್ಸ್ ಬೇಕಿತ್ತು” ಎಂದಾಗ ವೀರಭದ್ರ, “ಪಾರು ಲೈಸೆನ್ಸ್ ಬಂದಿಲ್ಲ” ಅಂತ ಸುಳ್ಳು ಹೇಳಿದ್ದಳು. ಆಮೇಲೆ ವೀರಭದ್ರನ ಪತ್ನಿ ಶಿವು ಮುಂದೆ ಬಂದು, “ಲೈಸೆನ್ಸ್ ಬಂದಿದೆ. ಅದನ್ನು ನಿನ್ನ ಮಾವನೇ ಹರಿದು ಹಾಕಿದ್ದಾನೆ. ಅದಕ್ಕೆ ಸಾಕ್ಷಿ ಇಲ್ಲಿದೆ” ಎಂದು ಹರಿದ ಲೈಸೆನ್ಸ್‌ನ್ನು ಜೋಡಿಸಿ ಕೊಟ್ಟಿದ್ದಾಳೆ. ಇದನ್ನು ಕಂಡು ಶಿವು ಕೆಂಡಾಮಂಡಲವಾಗಿದ್ದಾನೆ.
ಸಿಟ್ಟಾದ ಮಾರಿಗುಡಿ ಶಿವು!
ತನ್ನ ಬೆಲ್ಲದಚ್ಚು ಪಾರುಗೆ ಹೀಗೆಲ್ಲ ಆದರೆ ಅವನು ಹೇಗೆ ಸುಮ್ಮನಿರುತ್ತಾನೆ? ಚಾನ್ಸ್ ಇಲ್ಲ. ನನ್ನ ತಂಗಿಯರು, ಪಾರು ವಿಷಯಕ್ಕೆ ಯಾರೇ ಬಂದರೂ ಕೂಡ ಅವನು ಸುಮ್ಮನೆ ಇರುವ ಮಾತೇ ಇಲ್ಲ. ಮಾವ ದೇವರು ಎನ್ನುತ್ತಿದ್ದ ಶಿವು ಈಗ ಏನ್ ಮಾಡ್ತಾನೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿದೆ.
ಪಾರು ಏನ್ ಮಾಡ್ತಾಳೆ?
ನಾನು ಇಷ್ಟು ವರ್ಷ ಕಷ್ಟಪಟ್ಟು ಓದಿದ್ದೇನೆ. ಆದರೆ ನನ್ನ ತಂದೆ ಲೈಸೆನ್ಸ್ ಹರಿದಿದ್ದಾರೆ ಎಂದು ತಿಳಿದಾಗ ಅವಳು ಏನ್ ಮಾಡ್ತಾಳೆ ಅಂತ ಕಾದು ನೋಡಬೇಕಿದೆ. ಮಾರಿಗುಡಿ ಡಾನ್ ಎಂದು ಸಾಬೀತುಪಡಿಸಿರೋ ಪಾರು, ಬುದ್ಧಿವಂತೆ, ವಿದ್ಯಾವಂತೆ. ಈಗ ಅವಳು ಸುಮ್ಮನೆ ಇರೋದು ಡೌಟ್.
ಶಿವು-ಪಾರು ಲವ್ ಸ್ಟೋರಿ
ಪರಸ್ಪರ ಶಿವು ಹಾಗೂ ಪಾರು ಲವ್ ಮಾಡ್ತಿರೋ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಶಿವು ರೊಮ್ಯಾನ್ಸ್ ವಿಚಾರದಲ್ಲಿ ಹಿಂದುಳಿದಿದ್ದಾನೆ ಎನ್ನೋದು ಪಾರುಗೆ ಬೇಸರ ಆಗಿದೆ. ಯಾವಾಗಲೂ ಪಾರು ಮಾತ್ರ ಶಿವು ಬಳಿ ಮುತ್ತು ಕೊಡು, ಮುದ್ದು ಮಾಡು ಅಂತ ಪೀಡಿಸುತ್ತಿರುತ್ತಾಳೆ. ಆದರೆ ಶಿವುಗೆ ಮಾತ್ರ ನಾಚಿಕೆ. ಮುಂದಿನ ದಿನಗಳಲ್ಲಿ ಈ ಜೋಡಿ ಕೆಮಿಸ್ಟ್ರಿ ಹೇಗಿರಲಿದೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ವೀರಭದ್ರ ಸುಮ್ನನೆ ಇರ್ತಾನಾ?
ಶಿವು ಬಳಿ 150 ಎಕರೆ ಆಸ್ತಿ ಇದೆ. ಇದು ಅವನಿಗೆ ಗೊತ್ತಿಲ್ಲ. ವೀರಭದ್ರ ಈ ಆಸ್ತ ಕಬಳಿಸಲು ಶಿವು ತಾಯಿ ಶಾರದಾ ಜೈಲು ಪಾಲಾಗುವಂತೆ ಮಾಡಿದ್ದನು. ಗಂಡನನ್ನು ಬಿಟ್ಟು ಬೇರೆಯವನ ಜೊತೆ ಓಡಿ ಹೋದವಳು ಅಂತ ಸುಳ್ಳು ಸೃಷ್ಟಿ ಮಾಡಿದ್ದಾನೆ. ತಾಯಿ ಓಡಿ ಹೋದವಳು ಅಂತ ಶಿವು ಸಿಟ್ಟಾಗಿದ್ದಾನೆ. ಇವನಿಗೆ ಎಲ್ಲ ವಿಷಯ ಗೊತ್ತಿಲ್ಲ. ಆದರೆ ಪಾರು ಇದನ್ನೆಲ್ಲ ಬಯಲಿಗೆಳೆಯುತ್ತಾಳಾ ಅಂತ ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಶಿವು- ವಿಕಾಶ್ ಉತ್ತಯ್ಯ
ಪಾರು-ನಿಶಾ ರವಿಕೃಷ್ಣನ್
ವೀರಭದ್ರ- ನಾಗೇಂದ್ರ ಶಾ


