Asianet Suvarna News Asianet Suvarna News

Anushree Birthday: ಆ್ಯಂಕರ್ ಅನುಶ್ರೀಗೆ ವಯಸ್ಸೇ ಆಗಲ್ವಾ? ಮದ್ವೆ ಕತೆ ಏನು ಅಂದರೆ ಏನಂತಾರೆ?

ಆಂಕರ್‌ ಅನುಶ್ರೀಗೆ ಇಂದು ಹ್ಯಾಪಿ ಬರ್ತ್ ಡೇ. ಹುಟ್ಟಾ ಮಾತಿನ ಹುಡುಗಿ ಅನಿಸಿಕೊಂಡಿರುವ ಈಕೆಗೆ ಇತ್ತೀಚೆಗೆ ಮದ್ವೆ ಬಗ್ಗೆನೇ ಪ್ರಶ್ನೆಗಳು ಎದುರಾಗ್ತಿವೆ. ಅದಕ್ಕೆ ಅನುಶ್ರೀ ಕೊಡೋ ಉತ್ತರ ಏನ್ ಗೊತ್ತಾ?

 

Zee Kannada acnhor Anushree celebrating birthday and reveals about wedding
Author
Bengaluru, First Published Jan 25, 2022, 1:29 PM IST

ಆಂಕರ್‌ ಅನುಶ್ರೀಗೆ (Anchor Anushree) ಇಂದು ಹ್ಯಾಪಿ ಬರ್ತ್ ಡೇ (Birth day). ಮಂಗಳೂರಿನ (Mangalore) ಒಂದು ಮೂಲೆಯಿಂದ ಆಂಕರ್‌ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ಕನಸನ್ನು ನನಸಾಗಿಸುವಲ್ಲಿ ಅವರ ಶ್ರಮ ದೊಡ್ಡದು. ಯಾಕೆಂದರೆ ಅನು ಬದುಕಿನ ಕಷ್ಟಗಳನ್ನು ಬಹಳ ಹತ್ತಿರದಿಂದ ಕಂಡವರು. ಇವರು ಚಿಕ್ಕ ವಯಸ್ಸಿಂದಲೇ ಅಪ್ಪ ಪ್ರೀತಿಯಿಂದ ವಂಚಿತರಾದವರು. ತಮ್ಮ, ಅಮ್ಮನ ಜವಾಬ್ದಾರಿಯನ್ನು ಅಂಜಿಕೆ ಅಳುಕು ಇಲ್ಲದೇ ನಿಭಾಯಿಸಿದವರು. ಬಹಳ ಬೇಗ ಕನ್ನಡದ ಟಾಪ್ ಆಂಕರ್ ಆಗಿ ಗುರುತಿಸಿಕೊಂಡರು. ಯಶಸ್ಸು, ಜನ ಪ್ರೀತಿಗಳ ನಡುವೆ ತಮ್ಮ 34ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. 
ಅನುಶ್ರೀಗೆ ಈಗ ಎಲ್ಲಿ ಹೋದರೂ ಎರಡು ಪ್ರಶ್ನೆ ಪದೇ ಪದೇ ಎದುರಾಗುತ್ತೆ. ಮೊದಲನೇ ಪ್ರಶ್ನೆ- ಮೇಡಂ ನಿಮ್ಗೆ ವಯಸ್ಸೇ ಆಗಲ್ವಾ? ಯಾವಾಗಿಂದ ನಿಮ್ಮನ್ನು ನೋಡುತ್ತಾ ಇದ್ದೀವಿ. ಇನ್ನೂ ಹಾಗೇ ಇದ್ದೀರಿ ಅನ್ನೋದು. ಇದನ್ನು ಕಾಂಪ್ಲಿಮೆಂಟ್‌ ಅಂತ ತಗೋಬೇಕಾ ಅಥವಾ ನೆಗೆಟಿವ್‌ ಕಮೆಂಟ್‌ ಅಂತ ಭಾವಿಸಬೇಕಾ ಅನ್ನೋದು ಸ್ವತಃ ಅನುಶ್ರೀ ಅವರನ್ನೂ ಕಾಡಿದಂತಿದೆ.

Anchor Anushree Post: ಚಿನ್ನು! ಇದೇ ಕೊನೆಯದಾಗಿ ತೆಗೆದ 'ಅವನ' ಚಿತ್ರ, ಅನುಶ್ರೀ ನೋವಿನ ಪೋಸ್ಟ್

ಅವರದಕ್ಕೆ ಸಮರ್ಥ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಎಲ್ಲರಿಗೂ ವಯಸ್ಸು ಆಗೋ ಹಾಗೆ ನನಗೂ ವಯಸ್ಸಾಗುತ್ತೆ. ಈ ಪ್ರಶ್ನೆ ಕೇಳುತ್ತಿರುವ ನಿಮಗೂ ವಯಸ್ಸೇನೂ ನಿಲ್ಲಲ್ಲ. ನೀವೂ ಒಮ್ಮೆ ತಾತ ಆಗಲೇ ಬೇಕು. ನಿಮ್ಮ ಹೆಂಡತಿ ಅಜ್ಜಿ ಆಗ್ತಾರೆ. ನಿಮ್ಮ ತಂಗಿ ಅಕ್ಕಂದಿರಿಗೂ ವಯಸ್ಸಾಗುತ್ತೆ. ಅವರಿಗೆ ಅಂತೇನು ಎಲ್ಲರಿಗೂ ವಯಸ್ಸಾಗೇ ಆಗುತ್ತೆ. ನಾವೇನು ದೇವಲೋಕದಿಂದ ಅಮೃತ ಕುಡಿದು ಬಂದವರಲ್ಲವಲ್ಲಾ ವಯಸ್ಸಾಗದೇ ಇರೋದಕ್ಕೆ ಅನ್ನೋ ಉತ್ತರ ಕೊಟ್ಟಿದ್ದಾರೆ ಅನುಶ್ರೀ. ಅದನ್ನವರು ಸಿಟ್ಟಲ್ಲಿ ಹೇಳಿದ ಹಾಗೆ ಕಂಡರೂ ಅದು ಫ್ಯಾಕ್ಟ್ ಅನ್ನೋದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇದನ್ನೆಲ್ಲ ಅರಿತು ಸ್ವೀಕರಿಸಿ ಮುಂದೆ ಹೋಗುತ್ತಿರಬೇಕು ಅನ್ನುವ ಅನು ಮಾತಲ್ಲೂ ಸತ್ಯ ಇದೆ. 
ಅನುಶ್ರೀಗೆ ಎದುರಾಗುವ ಇನ್ನೊಂದು ಪ್ರಶ್ನೆ ಮದ್ವೆ (Marriage) ಬಗ್ಗೆ. ಯಾವುದೇ ಫಂಕ್ಷನ್‌ಗಳಿಗೆ ಹೋದರೂ ಸೆಲೆಬ್ರಿಟಿ(Celebrity) ಗಳಿಂದ ಹಿಡಿದು ಕಾಮನ್‌ ಮ್ಯಾನ್‌ವರೆಗೆ ಅವರಿಗೆ ಈ ಪ್ರಶ್ನೆ ಕೇಳಿಯೇ ಕೇಳ್ತಾರೆ. ಅವರು ಖಾಸಗಿ ಚಾನೆಲ್‌ಗಳ ಕಾರ್ಯಕ್ರಮ ನಿರೂಪಣೆ ಮಾಡುವ ಕಾರಣ ಅಲ್ಲೂ ಸೆಲೆಬ್ರಿಟಿಗಳು ಈ ವಿಚಾರಕ್ಕೆ ಅನುಶ್ರೀ ಕಾಲೆಳೆಯೋದು ಕಾಮನ್‌ ಆಗಿದೆ. ಸ್ಟೇಜ್‌ ಮೇಲೆ ಆ ತಮಾಷೆಯನ್ನು ತಮಾಷೆಯಾಗಿ ಸ್ವೀಕರಿಸುವ ಅನುಶ್ರೀ, ಕೆಲವೊಮ್ಮೆ ಈ ವಿಚಾರಕ್ಕೆ ಸಿಟ್ಟಿಗೇಳೋದೂ ಇದೆ. ಆದರೆ ಸಮಾಧಾನ, ತಾಳ್ಮೆ ಅವರ ಸ್ವಭಾವದಲ್ಲೇ ಇದೆಯೋ ಅಥವಾ ಈ ಪ್ರೊಫೆಶನ್‌ ಅವರನ್ನು ಹಾಗೆ ತಿದ್ದಿ ತೀಡಿದೆಯೋ ಗೊತ್ತಿಲ್ಲ. ಒಂದು ಹಂತದವರೆಗೆ ಅನುಶ್ರೀ ಎಂಥಾ ಪ್ರಶ್ನೆಯನ್ನೂ ಸಮಾಧಾನದಿಂದಲೇ ನೋಡುತ್ತಾರೆ. ಮದುವೆ ಬಗೆಗಿನ ಪ್ರಶ್ನೆಗೂ ಅಷ್ಟೇ. ಅವರು ಇಂಥಾ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕೇಳಿದಾಗ 'ಅದಕ್ಕೇನಂತೆ, ಆಗೋಣ. ಆದರೆ ಮದುವೆ ಪ್ರಶ್ನೆ ಸಾಕು, ಅದನ್ನು ಬಿಟ್ಟು ಬೇರೇನಾದ್ರೂ ಕೇಳಿ' ಅಂತ ಹೇಳಿದ್ದಾರೆ. ಅಲ್ಲಿಗೆ ಅನುಶ್ರೀ ಮದುವೆ ವಿಚಾರ ಸದ್ಯಕ್ಕಿಲ್ಲ ಅಂತ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 

Anchor Anushree: ಸ್ಯಾಂಡಲ್‌ವುಡ್‌ಗೆ ಮತ್ತೆ ಅನುಶ್ರೀ.. ಯಾರ ಚಿತ್ರ?

ಈ ಹಿಂದೆ ಅನುಶ್ರೀ ಮದುವೆ ಆಗಿದ್ದಾರೆ ಅನ್ನೋ ಬ್ರೇಕಿಂಗ್ (Breaking news) ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ ವೈರಲ್‌ (Viral news) ಆಗಿತ್ತು. ಆದರೆ ಆ ಬಗ್ಗೆ ಕ್ರಾಸ್ ಚೆಕ್ ಮಾಡಿದಾಗ ಅದು ಸಿನಿಮಾದ ಮದುವೆ ಸೀನ್ ಅನ್ನೋದು ಗೊತ್ತಾಯ್ತು. ಇನ್ನೊಮ್ಮೆ ಚಿಕ್ಕಣ್ಣ ಅವರ ಜೊತೆಗೆ ಅನುಶ್ರೀ ಮದುವೆ ಆಗುತ್ತಿದ್ದಾರೆ ಅಂತ ಯಾರೋ ಗಾಳಿಸುದ್ದಿ ಹಬ್ಬಿಸಿದರು. ಆ ಸುದ್ದಿಯೂ ಹೆಚ್ಚು ಕಾಲ ನಿಲ್ಲಲಿಲ್ಲ. ಮನರಂಜನಾ ಕ್ಷೇತ್ರದಲ್ಲಿರುವ ಹಲವು ಹೆಣ್ಣುಮಕ್ಕಳಿಗೆ ಮದುವೆ ಆದರೆ ಅವಕಾಶ ವಂಚಿತರಾಗುತ್ತೇವೆ ಅನ್ನುವ ಭಯ ಇರುತ್ತದೆ. ನಮ್ಮ ಸಮಾಜದಲ್ಲಿರುವ ಕೆಲವು ಪೂರ್ವಾಗ್ರಹಗಳೂ ನಟಿಯರು ಹೀಗೆ ಯೋಚನೆ ಮಾಡುವಂತೆ ಮಾಡುತ್ತವೆ. ಗಂಡುಮಕ್ಕಳಿಗೆ ಇದು ಅನ್ವಯಿಸೋದಿಲ್ಲ ಅನ್ನೋದು ಮತ್ತೊಂದು ಬೇಸರದ ವಿಚಾರ. ಇರಲಿ, ಅನುಶ್ರೀ ಅವರೂ ಈ ಕಾರಣಕ್ಕೇ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಾ, ಮದುವೆ ಆದ ಮೇಲೆ ಸಾಧನೆ ಮಾಡೋದು ಕಷ್ಟ ಅನ್ನೋದೇನಾದರೂ ಅವರ ತಲೆಗೆ ಬರ್ತಿದೆಯಾ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ. ಸದ್ಯಕ್ಕೆ ಅನುಶ್ರೀ ಇದಕ್ಕೆಲ್ಲ 'ಆಲ್ ರೈಟ್‌ ಮುಂದಕ್ಕೋಗೋಣ' ಅನ್ನೋ ಸ್ಟೈಲ್‌ನಲ್ಲೇ ಆನ್ಸರ್‌ ಮಾಡಿದ್ದಾರೆ. ಅವರ ಪ್ರತಿಭೆ ಇನ್ನಷ್ಟು ಬೆಳಗಲಿ ಅಂತ ಆಶಿಸ್ತಾ, ಅನುಶ್ರೀಗೆ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ!

Puneeth Rajkumar: ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ ಅನುಶ್ರೀ

 

Follow Us:
Download App:
  • android
  • ios