ಆಂಕರ್ ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅನು ಕೊನೆಯದಾಗಿ ತೆಗೆದ 'ಅವನ' ಚಿತ್ರ ಹಾಕಿದ್ದಾರೆ. 'ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ. ಆತನೀಗ ನಿದ್ರಿಸಿದ್ದಾನೆ' ಎಂದು ಅನುಶ್ರೀ ಎಮೋಶನಲ್ ಆಗಿ ಹೇಳಿರೋದು ಯಾರಿಗೆ?
ಮಂಗಳೂರಿನ (Mangalore) ಬೆಡಗಿ ಅನುಶ್ರೀ (Anushree) ಆಂಕರ್ ಅನುಶ್ರೀ ಅಂತಲೇ ಫೇಮಸ್. ಅರಳು ಹುರಿದಂಥಾ ಮಾತು, ಕ್ಯೂಟ್ ಲುಕ್ ಜೊತೆಗೆ ಡ್ಯಾನ್ಸ್‌ನಲ್ಲೂ ಕಮಾಲ್ ಮಾಡ್ತಿರೋ ಈಕೆ ಸದ್ಯ ಅಗಲಿಕೆಯ ನೋವಿನಲ್ಲಿದ್ದಾರೆ. ಅಗಲಿದವರ ಜೊತೆಗಿನ ಫೋಟೋ ಹಾಕಿ 'ಚಿನ್ನು' ಅಂತ ಬರೆದು ಅದಕ್ಕೆ ಲವ್ (Love) ಸಿಂಬಲ್ ಹಾಕಿದ್ದಾರೆ. ಇದರ ಜೊತೆಗೆ ಕೆಲವರ ಅಗಲಿಕೆಯ ಬಗ್ಗೆ ಮಾತನಾಡುವುದು ಕಷ್ಟ ಎಂಬ ನೋವಿನ ಸ್ಟೇಟ್‌ಮೆಂಟ್ಅನ್ನೂ ನೀಡಿದ್ದಾರೆ. ಆಂಕರ್ (Anchor) ಅನುಶ್ರೀ ಅವರ ಹೃದಯ ಛಿದ್ರವಾಗುವಂತೆ ಮಾಡಿದ ಆ ಘಟನೆ ಯಾವುದು, ಅನುಶ್ರೀ ಯಾರ ಅಗಲಿಕೆ ಬಗ್ಗೆ ಮಾತಾಡುತ್ತಿದ್ದಾರೆ. ಯಾಕೆ ಇತ್ತೀಚಿನ ವರ್ಷಗಳು ಅನುಶ್ರೀ ಅವರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ ಎಂಬುದು ಸದ್ಯ ಮುಂದಿರುವ ಪ್ರಶ್ನೆ.
ಅನುಶ್ರೀ ಎಂಬ ಪ್ರತಿಭಾವಂತೆ ಬಹಳ ಕಿರಿಯ ವಯಸ್ಸಿನಿಂದಲೇ ಟಿವಿ ಪರದೆ ಮೇಲೆ ಮಿಂಚಿದವರು. ಹೈಸ್ಕೂಲ್ ದಿನಗಳಲ್ಲೇ ಮಂಗಳೂರಿನಲ್ಲಿ ಪ್ರಾದೇಶಿಕ ಚಾನಲ್ ಗಳಲ್ಲಿ ಆಂಕರಿಂಗ್ ಮಾಡುತ್ತಿದ್ದವರು. ಅನುಶ್ರೀ ಅವರ ವಿಶೇಷತೆ ಅಂದರೆ ಆನ್ ಸ್ಪಾಟ್ ಮಾತು. ಸ್ಕ್ರಿಪ್ಟ್‌ನ ರೆಫರೆನ್ಸ್, ಡೀಟೈಲ್ಸ್ ಒಮ್ಮೆ ನೋಡಿಕೊಂಡರೆ ಸಾಕು, ಆಮೇಲೆ ರೀಟೇಕ್ ಪ್ರಶ್ನೆಯೇ ಇಲ್ಲ. ಪಟ ಪಟ ಮಾತಿನ ಪ್ರವಾಹ ಹರಿಯುತ್ತಲೇ ಹೋಗುತ್ತದೆ. ಅವರ ಮಾತಲ್ಲಿ ಜೋಶ್ ಇರೋ ಜೊತೆಗೆ ಕಾಮಿಡಿಯ ಟಚ್ ಇರುತ್ತೆ. ಟಿವಿ ಕಾರ್ಯಕ್ರಮಗಳ ನಿರೂಪಣೆ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಎಮೋಶನಲ್ ಸನ್ನಿವೇಶಗಳನ್ನೂ ಈಕೆ ಎಷ್ಟು ಲೀಲಾಜಾಲವಾಗಿ ನಿಭಾಯಿಸುತ್ತಾರೆ ಅಂತ. ಹಾಗೆಂದು ಅನುಶ್ರೀ ಬರೀ ಟಿಆರ್‌ಪಿಗೋಸ್ಕರ ಕಣ್ಣೀರು ಹಾಕಲ್ಲ.
Anchor Anushree: ಸ್ಯಾಂಡಲ್‌ವುಡ್‌ಗೆ ಮತ್ತೆ ಅನುಶ್ರೀ.. ಯಾರ ಚಿತ್ರ?
ಅಪ್ಪು ಅವರ ಅಗಲಿಕೆಯ ಬಳಿಕ ಜೀ ಟಿವಿಯ ರಿಯಾಲಿಟಿ ಶೋದಲ್ಲಿ ಅವರ ಆಂಕರಿಂಗ್ ನೋಡಿದ ಗಣ್ಯರೂ ಕಣ್ಣೀರು ಹಾಕಿದ್ದಾರೆ. ಆ ಕಾರ್ಯಕ್ರಮ ವೀಕ್ಷಿಸುತ್ತಿದ್ದವರ ಕಣ್ಣಲ್ಲೂ ಕಣ್ಣೀರು ಬಂದಿದೆ. ಅನುಶ್ರೀ ಪುನೀತ್ ರಾಜ್‌ಕುಮಾರ್ ಜೊತೆಗೆ ಬಹಳ ಆತ್ಮೀಯ ಒಡನಾಟ ಹೊಂದಿದ್ದವರು. ಅವರಿಂದ ಕಾಲೆಳೆಸಿಕೊಂಡು, ಅವರ ಕಾಲೆಳೆಯಲು ಪ್ರಯತ್ನಿಸುತ್ತಾ ಕೀಟಲೆಯ ಹುಡುಗಿಯಾಗಿ ಅಪ್ಪು ಫ್ಯಾನ್ಸ್ ಮನಗೆದ್ದವರು. ಅಪ್ಪು ಅವರ ಸಂದರ್ಶನವನ್ನೂ ಮಾಡಿದ್ದಾರೆ. ಹೀಗೆಲ್ಲ ಅಪ್ಪು (Appu) ಸಾರ್ ಬಗೆಗೆ ಸಾಕಷ್ಟು ನೆನಪುಗಳಿರುವಾಗ ಅವರ ಅಗಲಿಕೆ ಈಕೆಗೆ ಕೊಟ್ಟ ಶಾಕ್ ಸಣ್ಣದಲ್ಲ. ಅದರಿಂದ ಇನ್ನೂ ಚೇತರಿಸಿಕೊಳ್ಳೋಕೇ ಆಗುತ್ತಿಲ್ಲ ಎಂಬ ಮಾತನ್ನು ಅನುಶ್ರೀ ಹೇಳುತ್ತಾರೆ.
ಇಂಥಾ ಹೊತ್ತಲ್ಲೇ ಅನುಶ್ರೀ ಅವರು ಮತ್ತೊಂದು ನೋವಿನ ಪೋಸ್ಟ್ ಹಾಕಿದ್ದಾರೆ. ಇದು ಅವರ ಬದುಕಿನ ಭಾಗವೇ ಆದಂತಿದ್ದ ಜೀವವೊಂದರ ಅಗಲಿಕೆಯ ನೋವು. ಈಕೆಯನ್ನು ಅದೆಷ್ಟು ಹರ್ಟ್ ಮಾಡಿದೆ ಅಂದರೆ ಆತನ ಅಗಲಿಕೆ ವಿಷಯವನ್ನೂ ನನಗೆ ಹೇಳೋಕೆ ಸಾಧ್ಯವಾಗುತ್ತಿಲ್ಲ ಎಂದು ಅನು ದುಃಖದಿಂದ ಬರೆದುಕೊಂಡಿದ್ದಾರೆ.
Celebrity Divorces: ವಿಚ್ಚೇದನೆಯಾದ್ರೂ ದ್ವೇಷ, ಕಿತ್ತಾಟವಿಲ್ಲ. ಇದು ನಿಜಕ್ಕೂ ಸಾಧ್ಯವಾ?
'ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ. ಆತನೀಗ ನಿದ್ರಿಸಿದ್ದಾನೆ' ಎಂಬ ಬಹಳ ಎಮೋಶನಲ್ (Emotional) ಆದ ಸ್ಟೇಟ್ ಮೆಂಟ್‌ಅನ್ನೂ ಅನುಶ್ರೀ ಈ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಸಾಕುಪ್ರಾಣಿಗಳು ಉಳಿದವರ ಕಣ್ಣಿಗೆ ಏನೇ ಆಗಿರಬಹುದು, ಆದರೆ ನಮ್ಮೆಲ್ಲ ನೋವಿಗೆ, ನಮ್ಮ ದುಃಖ, ಸುಖಕ್ಕೆ ಸಾಕ್ಷಿಯಾಗಿ ನಮ್ಮ ಬದುಕಿನ ಭಾಗವೇ ಆಗಿರುವ ಈ ಪೆಟ್‌ಗಳ (Pets) ಬಗೆಗಿನ ಎಮೋಶನ್ ಬಹಳ ದೊಡ್ಡದು. ಅದರಲ್ಲೂ ನಾಯಿಗಳು ಎಷ್ಟು ಆಪ್ತವಾಗುತ್ತವೆ ಅಂದರೆ ಅವುಗಳ ಅಗಲಿಕೆ ತೀರಾ ಆತ್ಮೀಯರನ್ನು ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ಆಘಾತ ನೀಡುತ್ತದೆ. ಅನುಶ್ರೀ ಇಲ್ಲಿ ಹಾಕಿರೋ ಫೋಟೋ ತಮ್ಮ ಪ್ರೀತಿಯ ನಾಯಿಯದ್ದು. ಅದನ್ನವರು 'ಚಿನ್ನು' ಎಂದು ಕರೆದಿದ್ದಾರೆ. 'ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ, ಆತನೀಗ ನಿದ್ರಿಸಿದ್ದಾನೆ' ಎಂಬ ಎಮೋಶನಲ್ ಸ್ಟೇಟ್‌ಮೆಂಟ್ ಹಾಕಿದ್ದಾರೆ. ಜೊತೆಗೆ 'ಕ್ಷಮಿಸಿ ಅವನ ಅಗಲಿಕೆ ಬಗ್ಗೆ ಹೇಳಿಲ್ಲ, ಕೆಲವೊಮ್ಮೆ ನೋವನ್ನು ಕೂಡ ಮುಚ್ಚಿಡುವಷ್ಟು ಸ್ವಾಮಿತ್ವ ನಮ್ಮನ್ನು ಆವರಿಸುತ್ತವೆ' ಎಂದೂ ಅನುಶ್ರೀ ಹೇಳಿದ್ದಾರೆ.
ಅವರ ಪ್ರೀತಿಯ ಚಿನ್ನು ಅವರಿಂದ ದೂರಾಗಿ ಎಷ್ಟು ಕಾಲವಾಯ್ತೋ ಗೊತ್ತಿಲ್ಲ. ಆದರೆ ಈ ಪೋಸ್ಟ್ ನೋಡುತ್ತಿದ್ದರೆ ಅನುಶ್ರೀ ಇನ್ನೂ 'ಚಿನ್ನು'ವನ್ನು ಕಳೆದುಕೊಂಡ ದುಃಖ ಭರಿಸಲಾರದ ಸ್ಥಿತಿಯಲ್ಲಿದ್ದಾರೆ ಎಂಬುದಂತೂ ಸತ್ಯ!
Bollywood Chain Smokers: ಈ ಬಾಲಿವುಡ್ ಹೀರೋಯಿನ್ಸ್ ಚೈನ್ ಸ್ಮೋಕರ್ಸ್
