Asianet Suvarna News Asianet Suvarna News

Puneeth Rajkumar: ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ ಅನುಶ್ರೀ

ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಪುನೀತ್ ನೆನೆದು ಅನುಶ್ರೀ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
 

kannada Anchor Anushree unleashed puneeth rajkumar memory gvd
Author
Bangalore, First Published Nov 29, 2021, 11:51 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ (Sandalwood) ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಗಲಿಕೆ ನೋವಿನಿಂದ ಇನ್ನೂ ಜನರು ಹೊರಬಂದಿಲ್ಲ. ಜನರ ಪ್ರೀತಿಯ ಅಪ್ಪುವಿನ ಅಕಾಲಿಕ ಸಾವು ಚಿತ್ರರಂಗಕ್ಕೂ, ಕುಟುಂಬ, ಮಿತ್ರರು, ಅಭಿಮಾನಿಗಳಿಗೆ ಅತೀವ ನೋವು ಕೊಟ್ಟಿದೆ. ಇದೀಗ ಪುನೀತ್ ಅಗಲಿ ಒಂದು ತಿಂಗಳಾಗಿದೆ. ತನ್ನ ನೆಚ್ಚಿನ ನಟನ ಅಕಾಲಿಕ ನಿಧನದ ದುಃಖದಲ್ಲಿದ್ದ ಆಂಕರ್ ಅನುಶ್ರೀ (Anushree) ಕೆಲಕಾಲ ಸೋಷಿಯಲ್ ಮೀಡಿಯಾದಿಂದ ದೂರವಿದ್ದರು. ಇದೀಗ ಮತ್ತೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಮರಳಿದ್ದಾರೆ.

ಹೌದು! ಅನುಶ್ರೀ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಭಾವುಕರಾಗಿ, 'ನೋವು... ದುಃಖ... ಈಗ ಜೀವನದ ಬಲವಾಗಿ ಬದುಕಬೇಕು....' ಎಂದು ಕ್ಯಾಪ್ಷನ್ ಬರೆದು ಜೊತೆಗೆ ಬರಹವಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. 'ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಪುನೀತ್ ಹೆಸರು ಹಾಕದೆ ಬರಹವನ್ನು ಶೇರ್ ಮಾಡಿಕೊಂಡಿದ್ದು, ಈ ಮೂಲಕ ತಮ್ಮ ನೆಚ್ಚಿನ ನಟನನ್ನು ಅನುಶ್ರೀ ನೆನಪಿಸಿಕೊಂಡಿದ್ದಾರೆ.

Puneeth Rajkumar: ಅಪ್ಪು ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾದ ಹರ್ಷಿಕಾ ಪೂಣಚ್ಚ

ಈ ಪೋಸ್ಟ್‌ಗೆ ನೆಟ್ಟಿಗರು, 'ಮೌನ ಎದೆ ಬಿರಿಯುವ ಸದ್ದಾಗಿದೆ. ನಗುವು ಅದರ ಅರ್ಥವನ್ನು ಮರೆತಿದೆ. ಅಳುವು ಅದರ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಯಸಿದೆ. ನಮ್ಮ ಅಪ್ಪು, ಮತ್ತೆ ನಗುವು ಸದ್ದು ಕೇಳಲು ಕನ್ನಡಿಗರ ಮನ ಹಂಬಲಿಸಿದೆ. ನಡೆದ ಘಟನೆ ನೈಜ ಎಂದು ಎಷ್ಟೂ ಹೇಳಿದರು, ಮನ ಒಪ್ಪದೇ ತಡಬಡಿಸಿದೆ. ಅಪ್ಪುವಿನ ಮಾತು ಕೇಳಲು ಮತ್ತು ಆ ನಿಷ್ಕಲ್ಮಷ ನಗು ನೋಡಲು ಕಿವಿ, ಕಣ್ಣು ಚಡಪಡಿಸುತಿದೆ'. 'ಮಿಸ್ ಯೂ ಅಪ್ಪು ಸರ್'. 'ತುಂಬಾ ಸತ್ಯದ ಮಾತು'. ಹಾಗೂ ಅಪ್ಪು ಅಪ್ಪಾಜಿಯಂತೆ ಅಜರಾಮರ ಅಂತೆಲ್ಲ ಪ್ರತಿಕ್ರಿಯೆಯನ್ನು ಕಾಮೆಂಟಿಸಿದ್ದಾರೆ.

ಇತ್ತೀಚೆಗಷ್ಟೇ ಅನುಶ್ರೀ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪುನೀತ್ ಜೊತೆಗೆ ಕಳೆದ ಸುಂದರ ಕ್ಷಣ ಹಾಗೂ ಅವರ ವ್ಯಕ್ತಿತ್ವದ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಿದ್ದರು. ಈ ಬಗ್ಗೆ 'ಕಳೆದ ವರ್ಷ ಹುಟ್ಟುಹಬ್ಬದ ದಿನ ಅಪ್ಪು ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದೆ. ಆಗ ಅನುಶ್ರೀ ಬಂದಿದ್ದಾರೆ ಎಂದು ಅವರು ಕೊಡುವ ಅಪ್ಪುಗೆ ಇದ್ಯಲ್ಲ ಮರೆಯಲು ಸಾಧ್ಯವಾಗಲ್ಲ. ಮನೆಗೆ ಎಲ್ಲರೂ ಸ್ವಾಗತಿಸಿತ್ತಾರೆ. ಆದರೆ ಮನೆಯಿಂದ ಹೊರಡುವಾಗ ಬೀಳ್ಕೊಡುವವರು ಕೆಲರು ಮಾತ್ರ ಆಗಿದ್ದಾರೆ. ಆ ಕೆಲವರಲ್ಲಿ ಅಪ್ಪು ಪ್ರಮುಖರಾಗಿದ್ದಾರೆ. ಅವರ ಮನೆಗೆ ಹೇಗೆ ಸ್ವಾಗತ ಇರುತ್ತೋ ಹಾಗೆಯೇ ಕಳುಹಿಸಿಕೊಡುತ್ತಾರೆ. ಆದರೆ ನಾನು ಅವರ ಮನೆಗೆ ಹೋದರೆ ಸ್ವಾಗತವೂ ಇಲ್ಲ, ಅಪ್ಪು ಸರ್ ಮಲಗಿದ್ದರು ಎಂದು ಹೇಳುತ್ತಾ ಕಣ್ಣೀರಾಗಿದ್ದರು.

Raghavendra Rajkumar on Appu: ನಿನ್ನಿಂದಲೇ ನನಗೆ ಚೈತನ್ಯ ಸಿಕ್ಕಿದ್ದು!

ಇನ್ನು ಅಪ್ಪು ಅಗಲಿ ದಿನಗಳೇ ಕಳೆದರೂ ಅವರ ಅಭಿಮಾನಿಗಳು ನಿತ್ಯ ಒಂದಲ್ಲ ಒಂದು ರೀತಿಯ ಕಾರ್ಯಕ್ರಮವನ್ನು ನಡೆಸಿ ಪುನೀತ್‌ರನ್ನು ಸ್ಮರಿಸುತ್ತಿದ್ದಾರೆ. ದಿನನಿತ್ಯ ಸಾವಿರಾರು ಜನರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸುತ್ತಿದ್ದಾರೆ. ಸ್ಟಾರ್ ನಟ ಅಗಲಿದರೂ ಅಭಿಮಾನಿಗಳಲ್ಲಿ ಮಾತ್ರ ಅಪ್ಪು ನೆನಪು ಹಸಿರಾಗಿದೆ. ಪುನೀತ್ ಅವರು ಅ.29ರಂದು ಹೃದಯಾಘಾತದಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮುಖ್ಯವಾಗಿ ಅಪ್ಪು ನಮ್ಮನೆಲ್ಲ ಅಗಲಿ ಒಂದು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
 

Follow Us:
Download App:
  • android
  • ios