Youtuber Varun Araydya: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ಅವರಿಗೆ ಹಳೆ ಮನೆಯ ವಿಚಾರವಾಗಿ ಮೋಸ ಆಗಿತ್ತು, ಆಮೇಲೆ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಯುಟ್ಯೂಬರ್‌, ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹೊಸ ಮನೆಯಲ್ಲಿ ಪೂಜೆ ಕೂಡ ಮಾಡಿಸಿದ್ದಾರೆ. ಈ ಹಿಂದಿನ ಮನೆಯ ವಿಚಾರವಾಗಿ ಮೋಸ ಹೋಗಿದ್ದರು.

Add Asianetnews Kannada as a Preferred SourcegooglePreferred

ಯಾರನ್ನೂ ಕೇಳಿರಲಿಲ್ಲ

ವರುಣ್‌ ಆರಾಧ್ಯ ಅವರ ತಾಯಿ ಯುಟ್ಯೂಬ್‌ ವಿಡಿಯೋನಲ್ಲಿ ಮಾತನಾಡಿದ್ದು, “ಎರಡು ವರ್ಷಗಳ ಕಾಳ ಲೀಸ್‌ಗೆ ಹಾಕ್ಕೊಂಡಿದ್ವಿ. ಇದು ಹೊಸ ಕಟ್ಟಡ ಆಗಿತ್ತು, ಕನ್‌ಸ್ಟ್ರಕ್ಷನ್‌ ಕೆಲಸ ನಡೆಯುತ್ತಿತ್ತು. ನಾವು ಯಾರನ್ನೂ ವಿಚಾರಿಸದೆ, ಈ ಮನೆಗೆ ಬಂದೆವು. ಎರಡು ವರ್ಷ ಆದಮೇಲೆ ದುಡ್ಡು ಕೊಡಿ ಎಂದು ಕೇಳಿದೆವು, ಆಗ ಅವರು ದುಡ್ಡು ಇಲ್ಲ ಎಂದರು. ಹೀಗಾಗಿ ನಾವು ಇಲ್ಲೇ ಉಳಿದುಕೊಂಡೆವು” ಎಂದು ಹೇಳಿದ್ದಾರೆ.

ತಲೆ ಕೆಡಿಸಿಕೊಳ್ಳಬೇಡಿ

“ಮೊದಲು ಯಾರೂ ಇಲ್ಲಿಗೆ ಬರುತ್ತಿರಲಿಲ್ಲ. ಆಮೇಲೆ ಬ್ಯಾಂಕ್‌ನವರು ಬಂದರು. ಲೋನ್‌ ತಗೊಂಡಿರಬೇಕು, ಕಟ್ಟುತ್ತಾರೆ ಎಂದು ನಾವು ಅಂದುಕೊಂಡೆವು. ಮತ್ತೊಬ್ಬರು ಬಂದು, ಇದು ನಮ್ಮದೇ ಮನೆ ಎಂದು ಡಾಕ್ಯುಮೆಂಟ್‌ ತೋರಿಸಿದರು. ನಮ್ಮ ಹಳೆ ಮಾಲೀಕರು ಕೂಡ ನಮ್ಮದೇ ಮನೆ, ತಲೆ ಕೆಡಿಸಿಕೊಳ್ಳಬೇಡಿ ಎಂದರು” ಎಂದು ಹೇಳಿದ್ದಾರೆ.

ಲೀಸ್‌ಗೆ ಹಾಕಿಕೊಂಡಿದ್ದೇನೆ

“ಒಟ್ಟಾರೆಯಾಗಿ ಇಲ್ಲಿ 32 ಮನೆಗಳು ಇವೆ. ನಮ್ಮ ಮನೆಗೆ ಮೂರು ನೋಟೀಸ್‌ ಕೊಟ್ಟಿದ್ದಾರೆ. ಬ್ಯಾಂಕ್‌ನವರು ಬಂದು ಕೆಲವರ ಮನೆಯ ಐಟಮ್‌ಗಳನ್ನು ಹೊರಗಡೆ ಹಾಕಿದ್ದಾರೆ. ಈ ಮನೆಯ ಮಾಲೀಕ ಲೋನ್‌ ತಗೊಂಡು, ಹಣ ಕಟ್ಟದೆ ಇರೋದು ಅವನ ತಪ್ಪು. ಹೀಗಾಗಿ ಬ್ಯಾಂಕ್‌ನವರ ತಪ್ಪು ಎಂದು ಹೇಳೋಕೆ ಆಗೋದಿಲ್ಲ. ಅಪ್ಪ ಕಷ್ಟಪಟ್ಟು ಇಟ್ಟಿದ್ದ ಹಣವನ್ನು, ನಾನು ದುಡಿದ ಹಣವನ್ನು ಸೇರಿಸಿ ಈ ಮನೆಯಲ್ಲಿ ಲೀಸ್‌ಗೆ ಹಾಕಿಕೊಂಡಿದ್ದೇನೆ” ಎಂದು ವರುಣ್‌ ಆರಾಧ್ಯ ಹೇಳಿದ್ದರು.

ಹೊಸ ಮನೆಗೆ ಯಾಕೆ ಹೋದರು?

“ಈ ಮನೆಯಲ್ಲಿ ನೀರಿನ ಸಮಸ್ಯೆ ಇದೆ, ಕಿರಿಕಿರಿ ಇದೆ. ಈಗ ನಾವು ಈ ಮನೆಯನ್ನು ಬಿಟ್ಟರೆ ಅವರಿಗೆ ಸುಲಭ ಆಗುತ್ತದೆ. ಹೀಗಾಗಿ ಈ ಮನೆಯ ಕೀಯನ್ನು ನಾವು ತಗೊಂಡು ಹೋಗ್ತಿದ್ದೇವೆ. ಗುಣ ಈ ಮನೆಯಲ್ಲಿ ಹುಟ್ಟಿದ್ದಾನೆ. ನಮಗೆ ಈ ಮನೆಯಲ್ಲಿ ಸಾಕಷ್ಟು ನೆನಪುಗಳಿವೆ” ಎಂದು ವರುಣ್‌ ಆರಾಧ್ಯ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹೊಸ ಮನೆಯಲ್ಲಿ ಪೂಜೆ ಮಾಡಿಸಿದ್ದರು. ಹಳೆ ಮನೆಯ ಕೀ ಲಾಕ್‌ ಮಾಡಿಕೊಂಡು, ಹೊಸ ಮನೆಗೆ ಕಾಲಿಟ್ಟಿದ್ದಾರೆ” ಎಂದು ಹೇಳಿದ್ದಾರೆ.

YouTube video player