Asianet Suvarna News Asianet Suvarna News

ಟಿವಿಯಲ್ಲಿ ಬರ್ತಿದೆ ಯಶ್ ನಟನೆಯ ಬ್ಲಾಕ್ ಬಸ್ಟರ್ ಕೆಜಿಎಫ್ ಚಾಪ್ಟರ್-2; ಯಾವಾಗ?

ಇಡೀ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್2 ಸಿನಿಮಾ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಕೆಜಿಎಫ್-2 ಬಳಿಕ ಒಟಿಟಿಗೆ ಲಗ್ಗೆ ಇಟ್ಟಿತ್ತು. ಎರಡು ಕಡೆ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ ಟಿವಿಯಲ್ಲಿ ಬರಲು ಸಜ್ಜಾಗಿದೆ. 

yash starrer kgf 2 world Television premiere in zee Kannada soon sgk
Author
Bengaluru, First Published Aug 11, 2022, 3:03 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್-2 ಸಿನಿಮಾ ದೇಶವಿದೇಶಗಳಲ್ಲಿ ಭಾರಿ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆಬಂದ ಕನ್ನಡ ಈ ಸಿನಿಮಾಗೆ ಕನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದರು. ಕೆಜಿಎಫ್-2 ಸಿನಿಮಾವನ್ನು ಸಂಭ್ರಮಿಸಿದ್ದರು. ಏಪ್ರಿಲ್ 14ರಂದು ದೇಶ-ವಿದೇಶಗಳಲ್ಲಿ ತೆರೆಗೆ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲವು ದಾಖಲಿಸಿತ್ತು. ಭಾರತ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ ಕೆಜಿಎಫ್-2 ಕೂಡ ಸ್ಥಾನಗಿಟ್ಟಿಸಿಕೊಂಡಿದೆ. ಕನ್ನಡದ ಹೆಮ್ಮೆಯ ಕೆಜಿಎಫ್ -2  2018ರಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾದ ಸೀಕ್ವೆಲ್ ಆಗಿದೆ. ಅಂದಹಾಗೆ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ 1300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿಯಲ್ಲೇ ಬರೋಬ್ಬರಿ 435 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

ಇಡೀ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್2 ಸಿನಿಮಾ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ಏಪ್ರಿಲ್ 14ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದ ಕೆಜಿಎಫ್-2 ಬಳಿಕ ಒಟಿಟಿಗೆ ಲಗ್ಗೆ ಇಟ್ಟಿತ್ತು. ಎರಡು ಕಡೆ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ ಟಿವಿಯಲ್ಲಿ ಬರಲು ಸಜ್ಜಾಗಿದೆ. ಹೌದು ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ರೈಟ್ಸ್ ಜೀ ವಾಹಿನಿಗೆ ಮಾರಾಟವಾಗಿದೆ. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. ಜೀ ವಾಹಿನಿ ಸದ್ಯ ಪ್ರೋಮೋ ರಿಲೀಸ್ ಮಾಡಿದ್ದು ಕೆಜಿಎಫ್-2 ಟಿವಿಯಲ್ಲಿ ಪ್ರಚಾರ ಆಗುವ ಬಗ್ಗೆ ಬಹಿರಂಗ ಪಡಿಸಿದರು. ಅಂದಹಾಗೆ ಸದ್ಯ ಟಿವಿಯಲ್ಲಿ ಬರ್ತಿದೆ ಎಂದು ಮಾತ್ರ ರಿವೀಲ್ ಮಾಡಿದೆ. ಶೀಘ್ರದಲ್ಲಿ ಎಂದು ಹೇಳಿದೆ. ಆದರೆ ಯಾವಾಗ ಎಂದು ರಿವೀಲ್ ಮಾಡಿಲ್ಲ. 

ಶತದಿನೋತ್ಸವದ ಸಂಭ್ರಮದಲ್ಲಿ 'ಕೆಜಿಎಫ್-2'; ವಿಡಿಯೋ ಹಂಚಿಕೊಂಡು ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್

'ಅವನು ಬರ್ತಿದ್ದಾನೆ.. ಅದೂ ಒನ್ ವೇಯಲ್ಲಿ.. ರಾಕಿಂಗ್ ಸ್ಟೈಲಲ್ಲಿ..! ಕೆಜಿಎಫ್ ಚಾಪ್ಟರ್-2 , ಅತಿ ಶೀಘ್ರದಲ್ಲಿ' ಎಂದು ಮಾತ್ರ ಬಹಿರಂಗ ಪಡಿಸಿದೆ. ಅಂದಹಾಗೆ ಮೂಲಗಳ ಪ್ರಕಾರ ಸಿನಿಮಾ ಕೆಜಿಎಫ್-2 ಗೌರಿ-ಗಣೇಶ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವಾಗ ಎಂದು ಕಾದುನೋಡಬೇಕು. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಕೆಜಿಎಫ್ -2 ನೋಡಲು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಟುಂಬ ಸಮೇತರಾಗಿ ರಾಕಿಂಗ್ ಸ್ಟಾರ್ ಸಿನಿಮಾ ನೋಡಬಹುದು.


ರಾಕಿ ಭಾಯ್ ಮೇಲೆ ಸ್ಯಾಮ್‌ಗೆ ಕ್ರಶ್; ಸಮಂತಾಗೆ ಬೇಕಂತೆ ಯಶ್ ವಾಯ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆ, ಸಂಜಯ್ ದತ್ ಪಾತ್ರ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಮತ್ತೊಮ್ಮೆ ಮನೆಯಲ್ಲೇ ಕುಳಿತು ಕುಟುಂಬ ಸಮೇತ ಕೆಜಿಎಫ್-2 ಆನಂದಿಸಬಹುದು.

Follow Us:
Download App:
  • android
  • ios