ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿಹಿ ಕಹಿ ಚಂದ್ರು ನಿರ್ದೇಶನದ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್‌ ತಾಯಿ ಪುಷ್ಪ ಭಾಗಿಯಾಗಿದ್ದರು. ಪುತ್ರನ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ತಮ್ಮ ಹಾಸನದ ಶೈಲಿಯಲ್ಲಿ ತಯಾರಿಸಿದ ಸ್ವೀಟ್ ತಯಾರಿಸಿದರು.

ಮಧ್ಯಮ ವರ್ಗ ಕುಟುಂಬದಿಂದ ಬಂದ ಯಶ್; ಯಾರಿಗೂ ಗೊತ್ತಿರದ ಸತ್ಯವಿದು! 

ಯಶ್‌ ಮೂಲತಃ ಹಾಸನದ ಹುಡುಗ, ಮನೆಯಲ್ಲಿ ಅಮ್ಮ ಮಾಡಿದ ಗಿಣ್ಣಿನ ಸ್ವೀಟ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ! ಈ ಕಾರಣ ಪುಷ್ಪ ಅವರು ಹಾಸನದಿಂದ ಗಿಣ್ಣದ ಹಾಲನ್ನು ತಂದು ಕಾರ್ಯಕ್ರಮದಲ್ಲಿ, ಗಿಣ್ಣಿನ ಸ್ವೀಟ್ ತಯಾರಿಸಿದ್ದಾರೆ.  'ಈ ಸ್ವೀಟ್ ಯಶ್‌ಗೆ ಮಾತ್ರವಲ್ಲ, ಅವರು ಮಿಸಸ್‌ ರಾಧಿಕಾ ಹಾಗೂ ಮಗಳು ಐರಾಗೂ ತುಂಬಾನೇ ಇಷ್ಟವಂತೆ. ಮಗ ಇನ್ನು ಚಿಕ್ಕ ಹುಡುಗ. ಅದಕ್ಕಿನ್ನೂ ಈ ಸ್ವೀಟಿನ ರುಚಿ ತೋರಿಸಿಲ್ಲ,' ಎನ್ನುತ್ತಾರೆ  ಯಥರ್ವ್ ಅಜ್ಜಿ. 

'ಚಿತ್ರರಂಗ ಏನೂ ಅಂತಾನೆ ನಮಗೆ ಗೊತ್ತಿಲ್ಲ. ಮಗ ಶಾಲೆಗೆ ಹೋಗುತ್ತಾನೋ ಅಥವಾ ಏನು ಮಾಡುತ್ತಾನೋ ಎಂದು ಅವರ ತಂದೆ ಬಯ್ಯುತ್ತಿದ್ದರು. ಆದರೆ ಯಶ್‌ಗೆ ಉಪೇಂದ್ರ ಸಿನಿಮಾ ಅಂದ್ರೆ ತುಂಬಾನೇ ಇಷ್ಟ. ಕಾಲೇಜು ಗೋಡೆ ಹಾರಿ ಹೋಗಿ, ಸ್ನೇಹಿತರಿಗೆಲ್ಲಾ ಡ್ಯಾನ್ಸ್, ನಾಟಕ ಹೇಳಿ ಕೊಡುತ್ತಿದ್ದ. ಎರಡು ವರ್ಷದ ಪಾಪು ಆಗಿದ್ದಾಗಿನಿಂದಲೇ ಹಾಡು ಕೇಳಿದರೆ ಮಲಗುತ್ತಿದ್ದ ಮತ್ತೆ ಡ್ಯಾನ್ಸ್ ಮಾಡುತ್ತಿದ್ದ. ಆಮೇಲೆ ಮತ್ತೆ ಹೋಗಿ ಮಲಗುತ್ತಿದ್ದ,' ಎಂದು ಪುತ್ರನ ಬಾಲ್ಯದ ಬಗ್ಗೆ ಪುಷ್ಪ ಮಾತನಾಡಿದ್ದಾರೆ. 

ಯಶ್‌ ಎಂಟ್ರಿ ಹಾಗೂ ಸಕ್ಸಸ್‌ ಹಿಂದಿನ ಸೀಕ್ರೆಟ್ ಗೊತ್ತಾ? 

ಕೆಜಿಎಫ್-2 ಟೀಸರ್ ರಿಲೀಸ್ ಆಗಿದ್ದೇ, ಯು ಟ್ಯೂಬಿನಲ್ಲಿ ಟ್ರೆಂಡ್ ಆಗಿದೆ. ಆಗಲೇ 110 ಮಿಲಿಯನ್ ಸಾರಿ ಈ ಟೀಸರ್ ವೀಕ್ಷಣೆ ಆಗಿದೆ. ಕೇವಲ ಸ್ಯಾಂಡಲ್‌ವುಡ್‌ನಲ್ಲಿದ್ದ ಯಶ ಹವಾ ಇದೀಗ ಭಾರತದೆಲ್ಲೆಡೆ ಪಸರಿಸುತ್ತಿದೆ. ಅಭಿಮಾನಿಗಳು ಹೆಚ್ಚಾಗಿದ್ದಾರೆ. ಯಶ್, ಸ್ಟೈಲ್ ಹಾಗೂ ಅಭಿನಯಕ್ಕೆ ಇಡೀ ಭಾರತೀಯ ಚಿತ್ರರಂಗವೇ ಶಹಬ್ಬಾಸ್ ಎಂದು ಹೇಳುತ್ತಿದೆ. ಮಗನ ಕೀರ್ತಿ ಪತಾಕೆ ಎಲ್ಲೆಡೆ ಹಾರುತ್ತಿರುವುದು ನೋಡಿದ ತಾಯಿಯೂ ಫುಲ್ ಖುಷಿಯಾಗಿದ್ದಾರೆ. ಮಗನ ಏಳ್ಗೆ ನೋಡಿ ಸಂತೋಷವಾಗಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)