Colors Kannada Serial: ಯಜಮಾನ ಧಾರಾವಾಹಿಯಲ್ಲಿ ರಾಘವೇಂದ್ರನನ್ನು ಬಾಡಿಗೆ ಗಂಡನನ್ನಾಗಿ ಮಾಡಿಕೊಂಡ ಜಾನ್ಸಿ. ಮದುವೆಯಾದ ಮೊದಲ ರಾತ್ರಿಯ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Yajamana Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ. ಹಣದ ಬಲದಿಂದ ಮಧ್ಯಮ ವರ್ಗದ ಹುಡುಗ ರಾಘವೇಂದ್ರನನ್ನು ಬಾಡಿಗೆ ಗಂಡನನ್ನಾಗಿ ಮಾಡಿಕೊಳ್ಳಲು ಜಾನ್ಸಿ ಸಕ್ಸಸ್ ಆಗಿದ್ದಾಳೆ. ಕೇವಲ ಒಂದು ತಿಂಗಳಿನ ಒಪ್ಪಂದದ ಮೇಲೆ ರಾಘವೇಂದ್ರ ಪರಿಸ್ಥಿತಿಯ ಗೊಂಬೆಯಾಗಿ ಹಠಮಾರಿ, ಜಂಬದ ಕೋಳಿ ಜಾನ್ಸಿಯನ್ನು ಮದುವೆಯಾಗಿದ್ದಾನೆ. ಆದ್ರೆ ಇದು ಒಂದು ತಿಂಗಳ ಒಪ್ಪಂದ ಮದುವೆ ಅನ್ನೋ ವಿಷಯ ಜಾನ್ಸಿ ಅಜ್ಜ ಸೇರಿದಂತೆ ಬಹುತೇಕ ಯಾರಿಗೂ ಗೊತ್ತಿಲ್ಲ. ಹಾಗಾಯೇ ಮದುವೆ ಪೂರ್ವ ಮತ್ತು ನಂತರದ ಶಾಸ್ತ್ರಗಳನ್ನು ಜಾನ್ಸಿ ಕುಟುಂಬಸ್ಥರು ಆಯೋಜಿಸಿದ್ದರು.
ಹಾಗೆಯೇ ಮದುವೆಯಾದ ಮೊದಲ ರಾತ್ರಿಯ ಶಾಸ್ತ್ರವನ್ನು ಸಹ ಗ್ರ್ಯಾಂಡ್ ಆಗಿ ಮಾಡಲಾಗಿತ್ತು. ಜಾನ್ಸಿ ಮತ್ತು ರಾಘವೇಂದ್ರನ ಕೋಣೆಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಆದ್ರೆ ತನ್ನನ್ನು ಮುಟ್ಟುವಂತಿಲ್ಲ ಎಂಬ ಷರತ್ತನ್ನು ಮೊದಲೇ ಹಾಕಿದ್ದಳು. ಆದ್ರೆ ನಿರ್ದೇಶಕರು ಹಳೆಯ ಟ್ರಿಕ್ ಬಳಸಿ ಜಾನ್ಸಿ ಮತ್ತು ರಾಘವೇಂದ್ರನನ್ನು ಒಂದು ಮಾಡಿದ್ದರು. ಅದೇ ಹಲ್ಲಿ, ಜಿರಳೆ ಕಂಡ್ರೆ ಹುಡುಗಿಯರು ನೂರು ಕಿಲೋ ಮೀಟರ್ ದೂರ ಓಡುತ್ತಾರೆ. ಇಲ್ಲಿಯೂ ನಿರ್ದೇಶಕರು ಹಲ್ಲಿ ಬಳಸಿ ಜಾನ್ಸಿಯನ್ನು ಹೆದರಿಸಿ ರೆಡಿಮೇಡ್ ಗಂಡ ರಾಘವೇಂದ್ರನನ್ನು ತಬ್ಬಿಕೊಳ್ಳುವಂತೆ ಮಾಡಿದ್ರು.
ಇದೀಗ ಸೋಶಿಯಲ್ ಮೀಡಿಯಾ ರಾಘವೇಂದ್ರ ಮತ್ತು ಜಾನ್ಸಿಯ ಮೊದಲ ರಾತ್ರಿ ಶೂಟಿಂಗ್ ಹೇಗಿತ್ತು ಎಂಬುದರ ವಿಡಿಯೋ ವೈರಲ್ ಆಗುತ್ತಿದೆ. ಸುಮಾರು 10 ರಿಂದ 20 ನಿಮಿಷ ದೃಶ್ಯದ ಚಿತ್ರೀಕರಣಕ್ಕಾಗಿ ಎಷ್ಟೆಲ್ಲಾ ಜನರು ತೆರೆಯ ಹಿಂದೆ ಕೆಲಸ ಮಾಡಿದ್ದಾರೆ ಅನ್ನೋದನ್ನು ಮೇಕಿಂಗ್ ವಿಡಿಯೋದಲ್ಲಿ ಗಮನಿಸಹುದು.
ಇದನ್ನೂ ಓದಿ: ಚಿನ್ನುಮರಿಯ ಒಂದೇ ಅವಾಜ್‌ಗೆ ಥಂಡಾ ಹೊಡೆದ ಸೈಕೋ ಜಯಂತ್; ಈಗ ಮಜಾ ಬರ್ತಿದೆ ಎಂದ ವೀಕ್ಷಕರು!
ಕೆಂಪು ಸೀರೆ ಧರಿಸಿ ಓಪನ್ ಹೇರ್ ಬಿಟ್ಕೊಂಡಿರುವ ಜಾನ್ಸಿ ಎಂದಿನಂತೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಘವೇಂದ್ರ ಸಹ ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾ ಧರಿಸಿ ಎರಡು ದಿಂಬುಗಳನ್ನು ತಬ್ಬಿಕೊಂಡ ಅಪ್ಪಟ ವರನಂತೆ ಕಾಣಿಸುತ್ತಿದ್ದಾನೆ. ಈ ವಿಡಿಯೋದಲ್ಲಿ ಹಲ್ಲಿ ಬೀಳುತ್ತಿದ್ದಂತೆ ರಾಘವೇಂದ್ರನನ್ನು ಜಾನ್ಸಿ ತಬ್ಬಿಕೊಳ್ಳುವುದನ್ನು ನೋಡಬಹುದು. ಹಾಗೆಯೇ ಚಿತ್ರೀಕರಣ ಸಿಬ್ಬಂದಿ ಕ್ಯಾಮೆರಾ ಸೆಟ್ ಅಪ್ ಮಾಡಿಕೊಳ್ಳುವುದು, ಕೆಲವರು ಮಂಚವನ್ನು ಹೂಗಳಿಂದ ಅಲಂಕರಿಸುತ್ತಿರೋದನ್ನು ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.
ಒಂದು ಧಾರಾವಾಹಿ ಅಂದ್ರೆ ಕಲಾವಿದರು ಸೇರಿದಂತೆ ಇನ್ನುಳಿದ ಸಿಬ್ಬಂದಿ ಹಗಲು -ರಾತ್ರಿ ಅಂತ ನೋಡದೇ ಕೆಲಸ ಮಾಡುತ್ತಾರೆ. ರಾತ್ರಿಯ ದೃಶ್ಯಗಳನ್ನು ಆ ಸಮಯದಲ್ಲಿಯೇ ಶೂಟಿಂಗ್ ಮಾಡಲಿ ಪ್ಲಾನ್ ಮಾಡಲಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಶೂಟಿಂಗ್ ಬೆಳಗಿನ ಜಾವ 5 ಗಂಟಯವರೆಗೂ ನಡೆಯುತ್ತಿರುತ್ತದೆ. ಯಜಮಾನ ಸೀರಿಯಲ್ ಈ ಮೇಕಿಂಗ್ ವಿಡಿಯೋದಲ್ಲಿ ಕೆಲ ಸಿಬ್ಬಂದಿ ಕುಳಿತಲ್ಲೇ ನಿದ್ದೆ ಮಾಡುತ್ತಿದ್ದಾರೆ. ಬಹುತೇಕರು ನಿದ್ದೆ ಮಂಪರಿನಲ್ಲಿದ್ದಾರೆ.
ಇದನ್ನೂ ಓದಿ:ಅಕ್ಕಾ, ದಯವಿಟ್ಟು ಹೀಗೆ ಫೋಟೋಶೂಟ್ ಮಾಡಿಸಬೇಡಿ; ಪಾರುಗೆ ಫ್ಯಾನ್ಸ್ ಮನವಿ; ವೈರಲ್ ಫೋಟೋ ನೋಡಿ
