ಶ್ರೇಷ್ಠಾ ಮತ್ತು ತಾಂಡವ್ ವಿಷಯ ಭಾಗ್ಯಳಿಗೆ ತಿಳಿಸುವುದಕ್ಕಾಗಿ ಪೂಜಾ ಮಾಡಿರುವ ಮಂತ್ರವಾದಿ ಪ್ಲ್ಯಾನ್ ಸಕ್ಸಸ್ ಆಗುತ್ತಾ? ಸೀರಿಯಲ್ ಮುಗಿಯುತ್ತಾ?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಈಗ ಏನಿದ್ದರೂ ಇರುವ ಗುಟ್ಟು ಒಂದೇ. ಅದು ತಾಂಡವ್ ಮತ್ತು ಶ್ರೇಷ್ಠಾಳ ಗುಟ್ಟು ರಟ್ಟಾಗುವುದು ಮಾತ್ರ. ಭಾಗ್ಯ ಮತ್ತು ತಾಂಡವ್ ಒಂದಾಗುವುದು ಈ ಸೀರಿಯಲ್ ಮುಖ್ಯ ಉದ್ದೇಶವಾಗಿದ್ದರೂ, ತಾಂಡವ್ ಮತ್ತು ಶ್ರೇಷ್ಠಾಳನ್ನು ದೂರ ಮಾಡುವುದು ಅಷ್ಟೇ ಮುಖ್ಯವಾಗಿದೆ. ಇದಾಗಲೇ ಭಾಗ್ಯ ತನ್ನನ್ನು ತಾನು ಪ್ರೂವ್ ಮಾಡಿಕೊಂಡಾಗಿ ಹೋಗಿದೆ. ಅವಳೂ ಲಕ್ಷ ಲಕ್ಷದಲ್ಲಿ ದುಡಿಯುತ್ತಿದ್ದಾಳೆ. ಸಾಮಾನ್ಯ ಗೃಹಿಣಿಯೊಬ್ಬಳು ಏನಾದರೂ ಸಾಧನೆ ಮಾಡಬಹುದು ಎನ್ನುವುದನ್ನು ಅವಳು ಸಾಬೀತು ಮಾಡಿದ್ದಾಳೆ. ಇದೀಗ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ.
ತಾಂಡವ್ ಮತ್ತು ಶ್ರೇಷ್ಠಾಳ ಸಂಬಂಧವನ್ನು ನೇರವಾಗಿ ಹೇಳಲಾಗದೇ ಒದ್ದಾಡುತ್ತಿದ್ದಾಳೆ ಪೂಜಾ. ಆದ್ದರಿಂದ ಹೇಗಾದರೂ ಮಾಡಿ ಅದನ್ನು ಪರೋಕ್ಷವಾಗಿ ತನ್ನ ಅಕ್ಕ ಭಾಗ್ಯಳಿಗೆ ತಿಳಿಸುವ ಪ್ರಯತ್ನ ಆಕೆಯದ್ದು. ಅದೇ ಇನ್ನೊಂದೆಡೆ ತಾಂಡವ್ನ ನಕಲಿ ಅಮ್ಮ ಆಗಿರುವ ಸುಂದ್ರಿ ಕೂಡ ಪೂಜಾಳ ಕೈಜೋಡಿಸಿದ್ದಾಳೆ. ಅದೇ ಇನ್ನೊಂದೆಡೆ, ತಾಂಡವ್ ಮತ್ತು ಶ್ರೇಷ್ಠಾ ಮದುವೆಯವರೆಗೂ ಬಂದಿದ್ದಾರೆ. ನಿಶ್ಚಿತಾರ್ಥವೂ ಆಗಿದೆ, ಪ್ರೀ ವೆಡ್ಡಿಂಗ್ ಶೂಟ್ ಕೂಡ ಆಗಿದೆ. ಅದೇ ಇನ್ನೊಂದೆಡೆ ಪದೇ ಪದೇ ಭಾಗ್ಯಳಿಗೆ ಡಿವೋರ್ಸ್ ಕೊಡು ಎಂದು ಪೀಡಿಸುತ್ತಿದ್ದಾನೆ ತಾಂಡವ್. ಭಾಗ್ಯ ತನಗೆ ವಿಚ್ಛೇದನ ಕೊಡಲಿ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾನೆ. ಆಕೆಗೆ ಕೋಪ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆಕೆಯನ್ನು ಪ್ರವೋಕ್ ಮಾಡುತ್ತಿದ್ದಾನೆ. ಆದರೆ ಭಾಗ್ಯ ವಿಚ್ಛೇದನಕ್ಕೆ ಸುತರಾಂ ಒಪ್ಪುತ್ತಿಲ್ಲ.ತನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಡಿವೋರ್ಸ್ ಕೊಡುವುದೇ ಇಲ್ಲ ಎಂದು ಕಡ್ಡಿ ತುಂಡು ಮಾಡಿ ಹೇಳಿದ್ದಾಳೆ. ಕುಸುಮಾ ಕೂಡ ಭಾಗ್ಯಳಿಗೆ ಸಪೋರ್ಟ್ ಮಾಡುತ್ತಿದ್ದಾಳೆ.
ಭೂತ ಅಪ್ಪ-ಅಮ್ಮನನ್ನು ಏನಂತ ಕರೀತಾರೆ? ವೈಷ್ಣವಿ ಪ್ರಶ್ನೆಗೆ ಸೀತಾರಾಮ ತಂಡ ಫುಲ್ ಸುಸ್ತು!
ಇಷ್ಟಾದರೂ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಾಂಡವ್ಗೆ ಇನ್ನೊಂದು ಸಂಬಂಧ ಇದೆ ಎನ್ನುವುದು ಗೊತ್ತಾಗುತ್ತಲೇ ಇಲ್ಲ.ಆತನ ಬಿಹೇವಿಯರ್ನಲ್ಲಿ ಎಷ್ಟೊಂದು ಬದಲಾವಣೆ ಆಗಿದ್ದರೂ ಅದು ಯಾಕೆ ಎಂದು ನೋಡುವ ಗೋಜಿಗೂ ಹೋಗುತ್ತಿಲ್ಲ. ಶ್ರೇಷ್ಠಾ ಒಳ್ಳೆಯವಳಲ್ಲ ಎನ್ನುವುದು ಭಾಗ್ಯಳಿಗೆ ತಿಳಿದಿದ್ದರೂ, ತನ್ನ ಗಂಡನನ್ನೇ ಆಕೆ ಬುಟ್ಟಿಗೆ ಹಾಕಿಕೊಂಡಿರುವ ವಿಷಯ ತಿಳಿಯುತ್ತಿಲ್ಲ. ಶ್ರೇಷ್ಠಾಳ ಮದುವೆ ಎನ್ನುವುದು ಗೊತ್ತು. ಆದರೆ ಅದು ತಾಂಡವ್ ಜೊತೆ ಎಂದು ಇದುವರೆಗೆ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಿಳಿದಿಲ್ಲ. ಪೂಜಾಗೆ ತಿಳಿದಿದ್ದರೂ ಅದನ್ನು ಹೇಗೆ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಪೂಜಾ, ಸುಂದರಿ ಮತ್ತು ಹಿತಾ ಸೇರಿ ಸದ್ಯ ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೀಗ ವರ್ಕ್ಔಟ್ ಆಗಿದೆ.
ಹಿತಾ ಮಂತ್ರವಾದಿ ವೇಷ ತೊಟ್ಟಿದ್ದಾಳೆ. ಶ್ರೇಷ್ಠಾಳನ್ನು ಆ ಜಾಗಕ್ಕೆ ಸುಂದ್ರಿ ಕರೆದುಕೊಂಡು ಬಂದಿದ್ದಾಳೆ. ಪೂಜಾ ಹೇಗೇಗೋ ಅಕ್ಕ ಭಾಗ್ಯಳನ್ನು ಪುಸಲಾಯಿಸಿ ಮಂತ್ರವಾದಿ ಇರುವಲ್ಲಿಗೆ ಕರೆಸಿದ್ದಾಳೆ. ಇಲ್ಲಿ ಶ್ರೇಷ್ಠಾ ಮತ್ತು ಭಾಗ್ಯ ಮುಖಾಮುಖಿಯಾಗಿದ್ದಾರೆ. ಮಂತ್ರವಾದಿಯಾಗಿರುವ ಹಿತಾ ಶ್ರೇಷ್ಠಾಳಿಗೆ ನೀನು ಮದುವೆಯಾಗುತ್ತಿರುವವ ವಿವಾಹಿತ. ಎರಡು ಮಕ್ಕಳ ಅಪ್ಪ ಎಂದಿದ್ದಾಳೆ. ಇದು ಭಾಗ್ಯಳ ಕಿವಿಗೆ ಬಿದ್ದು ಶಾಕ್ ಆಗಿದೆ. ಗುಟ್ಟು ರಟ್ಟಾಗಿ ಹೋಗಿದೆ. ಭಾಗ್ಯಳಿಗೆ ಆ ಎರಡು ಮಕ್ಕಳ ತಂದೆ ತಾಂಡವ್ ಎನ್ನುವುದು ಈಗಾದ್ರೂ ತಿಳಿಯುತ್ತೋ ಇಲ್ಲವೋ ಎಂದು ಕೇಳುತ್ತಿದ್ದಾರೆ ನೆಟ್ಟಿಗರು. ಗುಟ್ಟು ರಟ್ಟಾದರೆ ಸೀರಿಯಲ್ ಮುಗಿದ ಹಾಗೆ. ಹಾಗಿದ್ದರೆ ಭಾಗ್ಯಲಕ್ಷ್ಮಿ ಸೀರಿಯಲ್ ಶೀಘ್ರದಲ್ಲಿಯೇ ತೆರೆಬೀಳಲಿದೆ ಎಂದು ಹಲವರ ಅಭಿಪ್ರಾಯ.
ವೈಫೈ ಪಾಸ್ವರ್ಡ್ ಸೇರಿದಂತೆ ಜೀವನದ ಇಷ್ಟೊಂದು ರಹಸ್ಯ ಹೇಳಿಯೇ ಬಿಟ್ರಲ್ಲಾ ಸಪ್ತಮಿ ಗೌಡ!
