'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಆರ್ಯವರ್ಧನ್ ತನ್ನ ಪ್ರಾಣ ಒತ್ತೆ ಇಟ್ಟು ಅನುವನ್ನು ಕಾಪಾಡಿದ್ದಾನೆ. ಇಲ್ಲೀವರೆಗೆ ಅನು ಮನಸ್ಸಲ್ಲಿ ವಿಲನ್‌ ಆಗಿದ್ದ ಆರ್ಯ ಇದೀಗ ಮತ್ತೆ ಹಿಂದಿನ ಪ್ರೇಮಿಯ ಸ್ಥಾನ ಪಡೆದುಕೊಳ್ಳುವ ಸೂಚನೆ ಕಾಣ್ತಾ ಇದೆ. ಇಲ್ಲಿಗೆ ಸೀರಿಯಲ್‌ ಮುಕ್ತಾಯವಾಗುತ್ತಾ ಅನ್ನೋ ಅನುಮಾನ ಇದೆ. ಇದಕ್ಕೆ ಪೂರಕವಾಗಿ ಒಂದು ವಿಚಾರ ರಿವೀಲ್‌ ಆಗಿದೆ. ಏನು ಆ ವಿಚಾರ?

'ಜೊತೆ ಜೊತೆಯಲಿ' (Jothe Jotheyali) ಸೀರಿಯಲ್‌ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಸೀರಿಯಲ್(Serial) ಶುರುವಾಗಿ ಅದಾಗಲೇ ಮೂರು ವರ್ಷ ಕಳೆದಿದೆ. ಕಾಲ ಕಾಲಕ್ಕೆ ಕಥೆಯಲ್ಲೊಂದು ರೋಚಕ ತಿರುವು ತರುತ್ತಾ ಕುತೂಹಲವನ್ನು ಇಲ್ಲೀವರೆಗೆ ಹಿಡಿದಿಟ್ಟಿಕೊಂಡಿರುವುದು ಈ ಸೀರಿಯಲ್‌ನ ಹೆಚ್ಚುಗಾರಿಕೆ. ಇದರ ಆರಂಭದಲ್ಲಿ ಮಧ್ಯ ವಯಸ್ಕ ದೊಡ್ಡ ಬ್ಯುಸಿನೆಸ್‌ಮ್ಯಾನ್(Businessman) ಆರ್ಯವರ್ಧನ್‌(Arya Vardhan)ಗೂ ಇಪ್ಪತ್ತರ ಹರೆಯದ ಚಿಕ್ಕ ಹುಡುಗಿ ಅನು ಸಿರಿಮನೆ(Anu Sirimane)ಗೂ ಪ್ರೀತಿಯಾಗಿತ್ತು. ಇದಕ್ಕೆ ನೂರಾರು ಅಡ್ಡಿ ಆತಂಕಗಳಿದ್ದವು. ಅದನ್ನೆಲ್ಲ ದಾಟಿ ಕೊನೆಗೂ ಇವರಿಬ್ಬರ ಮದುವೆ ಆದಮೇಲೆ ಪುನರ್ಜನ್ಮ, ಆತ್ಮದ ಕಥೆ ಸೇರಿಕೊಂಡು ಸೀರಿಯಲ್‌ ಮತ್ತೊಂದು ತಿರುವು ಪಡೆದುಕೊಂಡಿತು. ಇದಾಗಿ ಹೀರೋ ಆರ್ಯವರ್ಧನ್ ವಿಲನ್‌(Villon) ಆಗಿ ಬದಲಾದ ಘಟನೆಯೂ ನಡೆಯಿತು. ಆತನೇ ತನ್ನ ಮೊದಲ ಹೆಂಡತಿ ರಾಜನಂದಿನಿಯನ್ನು ಕೊಲೆ(Murder) ಮಾಡಿದ ಅನ್ನೋ ಅನುಮಾನ ಅನುವಿಗೆ ಶುರುವಾಯ್ತು. ಆಕೆಯೇ ರಾಜ ನಂದಿನಿಯಾಗಿ ಬದಲಾದಳು. ಅಷ್ಟೊತ್ತಿಗೆ ಅನು ಗರ್ಭಿಣಿ (Pregnent) ಅನ್ನೋದು ಗೊತ್ತಾಯ್ತು. ಅಷ್ಟರಲ್ಲಿ ಅನು ಹೊಸ ಅವತಾರದಿಂದ ತನ್ನ ಬಣ್ಣ, ಕುಕೃತ್ಯ ಬಯಲಾಗೋ ಭಯದಿಂದ ಝೇಂಡೆ ಅನುವನ್ನು ಅಪಹರಿಸಿ ಕೊಲ್ಲಲು ಪ್ಲಾನ್(Plan) ಮಾಡಿದ. ಆದರೆ ಇಲ್ಲಿ ಮತ್ತೆ ಹೀರೋ ನಂತೆ ಬಂದ ಆರ್ಯವರ್ಧನ್ ತನ್ನ ಜೀವವನ್ನೇ ಪಣವಾಗಿಟ್ಟು ಅನುವನ್ನು ಕಾಪಾಡಿದ.

ಇದನ್ನೂ ಓದಿ: 3 ಕೋಟಿ ಜನರ ಪ್ರೀತಿ ಪಡೆದ ಜೊತೆ ಜೊತೆಯಲಿ ಶೀರ್ಷಿಕೆ ಗೀತೆ!

ಸದ್ಯಕ್ಕೀಗ ಅನುವಿಗೆ ಗೊಂದಲ ಶುರುವಾಗಿದೆ. ಪ್ರಾಣವನ್ನೇ ಲೆಕ್ಕಿಸದೇ ತನ್ನ ಜೀವ ಉಳಿಸಿದ ಆರ್ಯವರ್ಧನ್ ಏನು ಅನ್ನೋ ಗೊಂದಲ ಹೆಚ್ಚಾಗಿದೆ. ಈ ವಿಚಾರ ಬಯಲಾದ ಮೇಲೆ ಬಹುಶಃ ಅನು - ಆರ್ಯ ಮತ್ತೆ ಒಂದಾಗುವ ಸಾಧ್ಯತೆ ಇದೆ. ಅಲ್ಲಿ ಈ ಸೀರಿಯಲ್ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಅನು ಪಾತ್ರದಲ್ಲಿ ನಟಿಸಿರುವ ಮೇಘಾ ಶೆಟ್ಟಿ(Megha Shetty) ಹಂಚಿಕೊಂಡಿರುವ ವೀಡಿಯೋ ಒಂದಿದೆ. ಅದೊಂದು ಸೆಲೆಬ್ರೇಶನ್‌ನ ಪಾರ್ಟಿಯ ಥರ ಕಾಣ್ತಿದೆ. ಈ ಗೆಟ್‌ ಟು ಗೆದರ್(Get together) ಸೀರಿಯಲ್ ಮುಕ್ತಾಯದ ನಂತರ ನಡೆದದ್ದಾ ಎಂಬುದು ಹಲವರ ಪ್ರಶ್ನೆ. ಮಹದೇವಪುರದ ರೆಸಾರ್ಟ್(Resort) ನಲ್ಲಿ ಈ 'ಜೊತೆ ಜೊತೆಯಲಿ' ಸೀರಿಯಲ್‌ ಟೀಮ್‌ನ ಹೆಚ್ಚಿನೆಲ್ಲ ಕಲಾವಿದರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದರಲ್ಲಿ ಮೇಘಾ ಶೆಟ್ಟಿ ಟ್ರಾಂಪೊಲಿನ್‌ನಲ್ಲಿ ಜಿಗಿದು, ಆಟದ ಕಾರು ಓಡಿಸಿ, ವಾಲ್‌ ಕ್ಲೈಂಬಿಕ್ ಮಾಡಿ ಸಖತ್ ಆಕ್ಟಿವ್ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: ಉಪವಾಸ ಮಾಡಿ ಆಸ್ಪತ್ರೆ ಸೇರಿದ ಬಿಗ್ ಬಾಸ್ ಖ್ಯಾತಿಯ ಸೋಫಿಯಾ

ಇದರಲ್ಲಿ ಸೀರಿಯಲ್ ನಟ ನಟಿಯರ ಕುಟುಂಬದವರೂ ಭಾಗವಹಿಸಿದ್ದಾರೆ. ಈ ವೇಳೆ ಈ ಸೀರಿಯಲ್‌ನ ಹೀರೋ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಜತ್ಕರ್(Anirudha Jathkar) ತನ್ನ ಪತ್ನಿ ಕೀರ್ತಿ(Keerthy) ಅವರೊಂದಿಗೆ ಡ್ಯಾನ್ಸ್(Dance) ಮಾಡಿರೋ ವೀಡಿಯೋ ಸಖತ್ ಗಮನ ಸೆಳೆಯುತ್ತಿದೆ. ಜೊತೆಗೆ ಉಳಿದವರು ಕೇಕ್ ಕತ್ತರಿಸಿ, ಡ್ಯಾನ್ಸ್ ಮಾಡಿ, ಅಡ್ವೆಂಚರ್ ಆಕ್ಟಿವಿಟಿಯಲ್ಲಿ ಮಜಾ ಉಡಾಯಿಸಿದ್ದಾರೆ. ಆದರೆ ಈ ಸೆಲೆಬ್ರೇಶನ್ ನೋಡಿ ಈ ಸೀರಿಯಲ್ ಫ್ಯಾನ್ಸ್ ಕೆಲವರು ಬೇಸರದಿಂದ ಕಮೆಂಟ್ಸ್(Comments) ಮಾಡ್ತಿದ್ದಾರೆ. ಅವರ ಮಾತಿನಲ್ಲಿ ಈ ಸೀರಿಯಲ್ ನಿಂತುಹೋಗ್ತಿದೆಯಾ ಅನ್ನುವ ಅನುಮಾನ ಎದ್ದು ಕಾಣ್ತಿದೆ.

View post on Instagram

ಒಟ್ಟಾರೆ ಇದು ಸೀರಿಯಲ್ ಕೊನೆಯ ಪಾರ್ಟಿ ಅಂತಾದರೆ ಬಹಳಷ್ಟು ಜನ ಫ್ಯಾನ್ಸ್‌ಗೆ ಬೇಜಾರಾಗೋದು ಖಂಡಿತಾ. ಏಕೆಂದರೆ ಆರಂಭದಿಂದ ಇಲ್ಲೀವರೆಗೂ ಈ ಸೀರಿಯಲ್ ಮೆಚ್ಚಿ ನೋಡ್ತಾ ಬಂದವರು ಲಕ್ಷಾಂತರ ಜನ. ಈ ಸೀರಿಯಲ್‌ನಲ್ಲಿ ನಟಿಸಿದ ಬಳಿಕ ಅನಿರುದ್ಧ ಜತ್ಕರ್ ಹಣೆಬರಹ ಬದಲಾಗಿದೆ. ಇದರ ನಾಯಕಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Hitler Kalyana: ಮನೆಬಿಟ್ಟು ಟೆಂಟ್ ಸೇರಿದ ಅಜ್ಜಿ, ಈಗಲಾದ್ರೂ ಎಜೆ ಲೀಲಾ ಒಂದಾಗದೇ ವಿಧಿಯಿಲ್ಲ

ಹೀಗೆ ಸಾಕಷ್ಟು ಕಲಾವಿದರಿಗೆ ತಂತ್ರಜ್ಞರಿಗೆ ಹೊಸ ಬದುಕು ಕೊಟ್ಟ ಈ ಸೀರಿಯಲ್ ಇನ್ನೂ ಮುಂದುವರಿದರೂ ನಮಗೇನೂ ಬೇಜಾರಿಲ್ಲ ಅಂತಿದ್ದಾರೆ ಜನ.