ಜಗದೀಶ್-ಹಂಸಾ ರೊಮ್ಯಾನ್ಸ್ ಇಷ್ಟವಾಯಿತೆಂದ ಲಾಯರ್ 2ನೇ ಪತ್ನಿ, ಮತ್ತೊಂದು ಗುಟ್ಟೂ ರಟ್ಟು!
ಬೆಳಿಗ್ಗೆ, ಸಂಜೆ ತಮ್ಮ ಭಿನ್ನ ವ್ಯಕ್ತಿತ್ವ ತೋರಿಸುವ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮನೆಯಲ್ಲಿ ಹೇಗಿರ್ತಾರೆ? ಅವರ ಸ್ವಭಾವ ಏನು? ಹಂಸ ಜೊತೆ ರೋಮ್ಯಾನ್ಸ್ ಪತ್ನಿಗೆ ಇಷ್ಟವಾಯ್ತಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11)ರ ಡೈನಾಮಿಕ್ ಜಗದೀಶ್ (Dynamic Jagadish) ಸೋಶಿಯಲ್ ಮೀಡಿಯಾದಲ್ಲಿ ಫೇಮಸ್. ಅವರು ಈಗಾಗ್ಲೇ ಜೈಲಿಗೆ ಹೋಗಿ ಬಂದಿದ್ದಾರೆ. ಆದ್ರೂ ಜಗದೀಶ್ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಅವರು ಯಾರು, ಎಲ್ಲಿಯವರು, ಅವರ ಸ್ವಭಾವ ಏನು ಎಂಬುದನ್ನು ಅವರ ಎರಡನೇ ಪತ್ನಿ ಸೌಮ್ಯ ಬಿಚ್ಚಿಟ್ಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸವಿರುಚಿಯಲ್ಲಿ ಕಾಣಿಸಿಕೊಂಡಿದ್ದ ಸೌಮ್ಯ, ಈ ವೇಳೆ ಅನೇಕ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಜಗದೀಶ್ ಬಿಗ್ ಬಾಸ್ ಮನೆಯಲ್ಲಿರುವಂತೆ ಮನೆಯಲ್ಲೂ ಇರ್ತಾರೆ ಎಂದಿದ್ದಾರೆ ಸೌಮ್ಯ. ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಆಟವನ್ನು ಸೌಮ್ಯ ಮೆಚ್ಚಿಕೊಂಡಿದ್ದಾರೆ. ಅವರ ಜಗಳ, ಆಟ, ಡಾನ್ಸ್ ಎಲ್ಲವೂ ನನಗೆ ಇಷ್ಟವಾಗ್ತಿದೆ ಎಂದಿದ್ದಾರೆ. ಹಂಸ ಜೊತೆ ಜಗದೀಶ್ ರೋಮ್ಯಾನ್ಸ್ ಮಾಡಿದ್ದು, ಸೌಮ್ಯಗೆ ಟೆನ್ಷನ್ ನೀಡಿಲ್ಲ. ಹಂಸ ಜೊತೆ ಜಗದೀಶ್ ಜಗಳವಾಡಿದ್ರೂ ಸ್ವಲ್ಪ ಕ್ಲೋಸ್ ಆಗಿದ್ದಾರೆ. ಇಬ್ಬರು ಸುದೀಪ್ ಮುಂದೆ ಡಾನ್ಸ್ ಕೂಡ ಮಾಡಿದ್ದರು. ಇದನ್ನು ನೋಡಿ ಪತ್ನಿ ಸೌಮ್ಯ ಖುಷಿಯಾಗಿದ್ದಾರೆ. ಇದು ಕಾಮನ್ ಎಂದಿದ್ದಾರೆ.
ಲಾಯರ್ ಜಗದೀಶ್- ನಟ ರಂಜಿತ್ ಹೊಡೆದಾಟ; ಬಿಗ್‌ಬಾಸ್ ಮನೆಯಿಂದ ಹೊರ ಬಂದ ಫೋಟೋ ವೈರಲ್?
ಎಷ್ಟೆಲ್ಲ ಕೂಗಾಡುವ ಜಗದೀಶ್ ರೋಮ್ಯಾಂಟಿಕ್ ಅಲ್ಲವಂತೆ. ಬಿಗ್ ಬಾಸ್ ಮನೆಯಲ್ಲಿ ಅವರ ಡಾನ್ಸ್ ನೋಡಿ ಖುಷಿಯಾಗಿದ್ದೇನೆ. ಮನೆಯಲ್ಲಿ ನಾನು ಡಾನ್ಸ್ ಮಾಡ್ತೇನೆ. ಅವರು ನಗ್ತಾ ಕುಳಿತಿರ್ತಾರೆ. ಸ್ವಲ್ಪ ನಾಚಿಕೆ ಸ್ವಭಾವ ಅವರದ್ದು. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವರ ಹಾಡು, ಡಾನ್ಸ್ ನೋಡಿ ನನಗೆ ಖುಷಿಯಾಯ್ತು ಎಂದಿದ್ದಾರೆ ಸೌಮ್ಯ. ಜಗದೀಶ್ ಮೂಲತಃ ಬೆಂಗಳೂರಿನ ಕೊಡಗೇರಿಯವರು. ಸೌಮ್ಯ ಹರಿಹರದವರು. ಇಬ್ಬರ ಪರಿಚಯ ಮ್ಯಾಟ್ರಿಮೋನಿಯಾ ಮೂಲಕವಾಯ್ತು. ಜಗದೀಶ್ ಸ್ವಭಾವ ನೋಡಿ, ಸೌಮ್ಯ ಮದುವೆಯಾಗುವ ನಿರ್ಧಾರಕ್ಕೆ ಬಂದ್ರು. ಅವರಿಗೆ ಈಗ ಒಬ್ಬ ಮಗನಿದ್ದಾನೆ.
ಜಗದೀಶ್ ಬಗ್ಗೆ ಹಿಂದಿನಿಂದ ಮಾತನಾಡುವ ಸ್ಪರ್ಧಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸೌಮ್ಯ, ಇದು ಆಟ. ಬಿಗ್ ಬಾಸ್ ಮನೆಯಲ್ಲಿ ಇದೆಲ್ಲ ಕಾಮನ್. ಅದು ನನಗೆ ನೋವು ನೀಡುವುದಿಲ್ಲ ಎಂದಿದ್ದಾರೆ. ಜಗದೀಶ್ ಆಟವನ್ನು ನಾನು ಎಂಜಾಯ್ ಮಾಡ್ತಿದ್ದೇನೆ. ಅವರು ಸ್ಕ್ರೀನ್ ಮೇಲೆ ಬಂದಾಗ ತಪ್ಪದೆ ನೋಡ್ತೇನೆ ಎಂದಿದ್ದಾರೆ ಸೌಮ್ಯ.
ಜಗದೀಶ್ ಸಮಾಜ ಸೇವೆಯಲ್ಲಿ ಮುಂದಿದ್ದಾರೆ. ತಮಗೆ ಸರಿ ಎನ್ನಿಸಿದ್ದರ ಪರ ಸದಾ ನಿಲ್ಲುವ ಅವರು, ಸರ್ಕಾರಿ ಶಾಲೆಯನ್ನು ಸುಂದರ ಶಾಲೆಯನ್ನಾಗಿ ಮಾಡಿದ್ದಾರೆ. ಕೊಡಗೇರಿಯಲ್ಲಿ ಹಾಳಾಗಿದ್ದ ಶಾಲೆಯನ್ನು ಸುಂದರಗೊಳಿಸಿದ್ದು, ಯಾವುದೇ ಖಾಸಗಿ ಶಾಲೆಗೆ ಇದು ಕಡಿಮೆ ಇಲ್ಲ ಎಂದು ಸೌಮ್ಯ ಪತಿ ಕೆಲಸವನ್ನು ಹೊಗಳಿದ್ದಾರೆ.ಜಗದೀಶ್ ಯಾವಾಗ್ಲೂ ನೇರವಾಗಿ ಮಾತನಾಡ್ತಾರಂತೆ. ಬಿಗ್ ಬಾಸ್ ಮನೆಯಲ್ಲೂ ಅವರು ಅದನ್ನೇ ಮಾಡಿದ್ದರು. ಅದು ಸ್ಪರ್ಧಿಗಳಿಗೆ ಇಷ್ಟವಾಗಲ್ಲ ಎಂದ ಸೌಮ್ಯ, ಪತಿ ಪರ ಬ್ಯಾಟ್ ಬೀಸಿದ್ದಾರೆ.
ಬಾತ್ ರೂಮ್ ಕನ್ನಡಿ ಮುಂದೆ ಹಾಟ್ ಕ್ವೀನ್, ರಾಗಿಣಿ ವಿಡಿಯೋಗೆ ಫ್ಯಾನ್ಸ್ ಬೋಲ್ಡ್
ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮತ್ತೆ ಉಗ್ರವಾಗಿದ್ದಾರೆ. ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ರಂಜಿತ್ ಜೊತೆ ಕಿತ್ತಾಡಿ, ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂಬ ಬಿಗ್ ನ್ಯೂಸ್ ಹೊರಗೆ ಬಿದ್ದಿದೆ. ಅವರ ಫೋಟೋ ಒಂದು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿದೆ. ಹಿಂದಿನ ಭಾನುವಾರ ಯಾವುದೇ ಸ್ಪರ್ಧಿ ಮನೆಯಿಂದ ಹೊರಗೆ ಹೋಗಿರಲಿಲ್ಲ. ವಾರದ ಮಧ್ಯೆ ಸ್ಪರ್ಧಿಯೊಬ್ಬರು ಮನೆಯಿಂದ ಹೊರಗೆ ಹೋಗುವ ಸಾಧ್ಯತೆ ಇದೆ ಎಂದು ಸುದೀಪ್ ಹಿಂಟ್ ನೀಡಿದ್ರು. ಮೋಸ್ಟ್ಲಿ ಈ ಪ್ರಕ್ರಿಯೆಯಲ್ಲಿ ಜಗದೀಶ್ ಹೊರಗೆ ಹೋಗಿದ್ದಾರೆ ಎಂಬ ಸಂಶಯ ಮೂಡಿದೆ. ಇದು ನಿಜವಾದ್ರೆ ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಆರ್ಭಟ ನೋಡಲು ಇನ್ಮುಂದೆ ವೀಕ್ಷಕರಿಗೆ ಸಿಗೋದಿಲ್ಲ.