Asianet Suvarna News Asianet Suvarna News

ಬರೀ ನೆಗೆಟಿವ್, ಯಾರಿಗ್ಬೇಕು: ಜನಪ್ರಿಯ ಸೀರಿಯಲ್ಸ್‌ಗೆ ಹಿಡಿಶಾಪ ಹಾಕ್ತಿರೋ ವೀಕ್ಷಕರು

ಸೀರಿಯಲ್‌ಗಳಲ್ಲಿ ನೆಗೆಟಿವ್ ಸ್ಟೋರಿ ಕಾಮನ್. ಆದರೆ ಎಲ್ಲ ಸೀರಿಯಲ್‌ಗಳಲ್ಲೂ ಅದದೇ ನೆಗೆಟಿವ್ ಕಥೆ ನೋಡಿ ಜಿಗುಪ್ಸೆ ಪಟ್ಕೊಳ್ತಿದ್ದಾರೆ ವೀಕ್ಷಕರು.

 

Why So much negativity in Kannada tv serials viewers angers
Author
First Published Aug 8, 2024, 12:23 PM IST | Last Updated Aug 8, 2024, 12:23 PM IST

ಸೀರಿಯಲ್‌ಗಳಲ್ಲಿ ಟ್ವಿಸ್ಟ್, ಟರ್ನ್ ಕಾಮನ್. ಕಥೆಯನ್ನ ಭದ್ರವಾಗಿ ಹಿಡ್ಕೊಳ್ಳೋ ಬೇರಿದು ಅಂತಾನೂ ಹೇಳಬಹುದು. ಆದರೆ ಸೀರಿಯಲ್‌ನಲ್ಲಿ ಬರೀ ನೆಗೆಟಿವ್‌ಗಳೇ ತುಂಬಿ ಹೋದರೆ ಯಾರಿಗೂ ಇಷ್ಟ ಆಗಲ್ಲ. ಈ ಕಾರಣಕ್ಕೆ ಎಷ್ಟೋ ಜನ ಸೀರಿಯಲ್ ವೀಕ್ಷಣೆಗೆ ಗುಡ್‌ ಬೈ ಹೇಳ್ತಾರೆ. ಇದೀಗಲೂ ಕನ್ನಡ ಟಿವಿ ಸೀರಿಯಲ್ (Kannada TV Serials) ವೀಕ್ಷಕರು ಅಂಥಾದ್ದೊಂದು ಸ್ಟೇಜ್‌ಗೆ ಬಂದಿದ್ದಾರೆ. ಕಾರಣ ಸೀರಿಯಲ್‌ಗಳಲ್ಲಿ ಹಿಂಸೆ ಕೊಡ್ತಿರೋ ನೆಗೆಟಿವ್ ಸ್ಟೋರಿಗಳು. ಹೆಚ್ಚಿನೆಲ್ಲ ಸೀರಿಯಲ್‌ಗಳು ಇದೀಗ ನೆಗೆಟಿವ್ ಸ್ಟೋರಿಯ ಹಿಂದೆ ಬಿದ್ದಿರೋದೇ ಕಾಣ್ತಿದೆ. ನೆಗೆಟಿವ್ ಪಾಸಿಟಿವ್ ಗೋಜಿಗೆ ಹೋಗದೇ ಕಥೆ ಎನ್‌ಜಾಯ್ ಮಾಡುವವರಿಗೆ ಇದು ಹೆಚ್ಚಿನ ಸಮಸ್ಯೆ ಆಗದಿದ್ದರೂ, ಸೀರಿಯಲ್ ಪಾತ್ರಗಳೊಂದಿಗೆ ತಮ್ಮನ್ನು ಕನೆಕ್ಟ್ ಮಾಡಿಕೊಂಡು ಎಮೋಶನಲ್ ಆಗಿ ಧಾರಾವಾಹಿ ನೋಡುವವರಿಗೆ ಇಂಥಾ ಕಹಿಯನ್ನು ಜೀರ್ಣಿಸಿಕೊಳ್ಳಲಾಗ್ತಿದೆ.

ಲೈಫಲ್ಲೂ ಕಷ್ಟ ಪಡೋದೆ. ಇನ್ನು ಸ್ಕ್ರೀನ್‌ನಲ್ಲೂ ಕಷ್ಟ ನೋಡಬೇಕಾ ಅನ್ನೋದು ಕನ್ನಡ ಸೀರಿಯಲ್ ವೀಕ್ಷಕರ ವಾದ. 'ಸೀತಾರಾಮ' ಸೀರಿಯಲ್‌ನಲ್ಲಿ ಪುಟಾಣಿ ಸಿಹಿ ಅಂದರೆ ಎಲ್ಲರಿಗೂ ಇಷ್ಟ. ಇದೀಗ ಭಾರ್ಗವಿ ಪಾತ್ರದ ಮೂಲಕ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ (Boarding School) ಸೇರಿಸುವ ಸಂಚು ನಡೀತಿದೆ. ಚಟಪಟ ಮಾತಾಡೋ ಈ ಪುಟ್ಟ ಹುಡುಗಿ ಜೊತೆ ಸೀರಿಯಲ್ ಆರಂಭದಿಂದಲೂ ಕನೆಕ್ಟ್ ಆಗಿದ್ದ ವೀಕ್ಷಕರಿಗೆ ಇದ್ದಕ್ಕಿದ್ದಂತೆ ಸಿಹಿಯನ್ನು ಬೋರ್ಡಿಂಗ್ ಸ್ಕೂಲಿಗೆ ಕಳಿಸೋ ಎಪಿಸೋಡ್‌ಗಳು ಇಷ್ಟ ಆಗ್ತಿಲ್ಲ. ಇದರ ಹಿನ್ನೆಲೆಯಲ್ಲಿ ಭಾರ್ಗವಿ ಮಾತ್ರ ಅಲ್ಲ ಓವರ್ ಆಕ್ಟಿಂಗ್ ಮಾಡೋ ರಾಮನ ಮೇಲೂ ವೀಕ್ಷಕರಿಗೆ ಸಿಟ್ಟಿದೆ. 

ಇನ್ನೊಂದೆಡೆ ಜನ ಮೆಚ್ಚಿಕೊಂಡಿರೋ ಅಮೃತಧಾರೆ ಸೀರಿಯಲ್‌ನಲ್ಲೂ ವಿಲನ್ ಮೇಲುಗೈ ಸಾಧಿಸಿದ್ದಾಳೆ. ವಿಲನ್ ಶಕುಂತಳಾ ಭೂಮಿಕಾಳ ತಂಗಿಯನ್ನು ತನ್ನ ಮಗ ಪಾರ್ಥನಿಗೆ ಮದುವೆ ಮಾಡಲು ಮುಂದಾಗಿದ್ದಾಳೆ. ತನ್ನ ತಂಗಿ ಹಾಗೂ ಪಾರ್ಥನ ಲವ್‌ಸ್ಟೋರಿ ಗೊತ್ತಿದ್ದೂ ಸಪೋರ್ಟ್ ಮಾಡದ ಭೂಮಿಕಾ ತನ್ನ ತಂಗಿ ಹಾಗೂ ಮೈದುನನ ಕಣ್ಣಲ್ಲಿ ವಿಲನ್ ಆಗ್ತಿದ್ದಾಳೆ. ಇದು ಸೀರಿಯಲ್ ಪೂರ ಕಹಿಯಂತೆ ಪಸರಿಸೋ ಸಾಧ್ಯತೆಯೇ ವೀಕ್ಷಕರಿಗೆ ಇಷ್ಟ ಆಗ್ತಿಲ್ಲ. ಇನ್ನೊಂದೆಡೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಕೀರ್ತಿಯನ್ನು ಕಾವೇರಿ ಬೆಟ್ಟದಿಂದ ತಳ್ಳಿ ಬಿಟ್ಟಿದ್ದಾಳೆ. ಮುಂದೇನಾಗುತ್ತೋ ಗೊತ್ತಿಲ್ಲ. 

ಕೀರ್ತಿ ಕಥೆ ಮುಗಿಸಿದ ಕಾವೇರಿ... ಕೀರ್ತಿನ ಯಾರಾದ್ರೂ ಉಳಿಸಿ, ನ್ಯಾಯ ಕೊಡ್ಸಿ... ಕಣ್ಣೀರಿಟ್ಟ ವೀಕ್ಷಕರು!

ಒಟ್ಟಾರೆ ಸಾಲು ಸಾಲು ಸೀರಿಯಲ್‌ಗಳಲ್ಲಿ ಕಹಿ ಕಥೆ ಕೇಳಿ ಕೇಳಿ ವೀಕ್ಷಕರು ಬೇಸತ್ತಿದ್ದಾರೆ. ನಾವು ಸೀರಿಯಲ್‌ನಲ್ಲಿ ನೋವಿನ ಪಾರ್ಟೇ ಇರಬಾರದು ಅಂತಿಲ್ಲ. ಅಲ್ಲಲ್ಲಿ ನೋವಿನ, ಬೇಜಾರಿನ, ವಿಷಾದದ, ಸಿಟ್ಟು ಬರಿಸುವಂಥಾ ಕಥಾಹಂದರ ಬರಲಿ. ಆದರೆ ಇದೇ ಮೇಲುಗೈ ಸಾಧಿಸದಿರಲಿ. ನಮಗೆ ಮನರಂಜನೆ ಬೇಕು. ಲೈಫಲ್ಲಿ ದಿನಾ ಏಗೋದು, ನೋವುಣ್ಣೋದನ್ನೇ ಮತ್ತೆ ಮತ್ತೆ ಸ್ಕ್ರೀನ್‌ ಮೇಲೂ ನೋಡಿದ್ರೆ ನಮಗೆ ಲೈಫಲ್ಲಿ ಖುಷಿ ಎಲ್ಲಿ ಸಿಗುತ್ತೆ.. ಸೋ ಕಥೆ ಸೋಬರ್ ಆದಾಗ ನಾವು ಚಾನೆಲ್ ಚೇಂಜ್ ಮಾಡ್ತೀವಿ ಅಂತಾರೆ ವೀಕ್ಷಕರು. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಹಿಂದೊಮ್ಮೆ 'ರಾಮಾಚಾರಿ' ಸೀರಿಯಲ್ ಟೀಮ್ ವೀಕ್ಷಕರಿಗೆ ಅಳುಮುಂಜಿ ಚಾರು ಬೇಕಾ, ತುಂಟಿ ಚಾರು ಬೇಕಾ ಅನ್ನೋ ಆಯ್ಕೆ ಇಟ್ಟಿದ್ದರು. ಹಂಡ್ರೆಡ್ ಪರ್ಸೆಂಟ್ ಜನ ನಮಗೆ ತುಂಟಾಟ ಮಾಡೋ ಚಾರುನೇ ಬೇಕು ಅಂತ ಓಟ್ ಮಾಡಿದ್ದರು. ಅಲ್ಲಿಗೆ ಅಳೋದು, ಗೋಳು ಯಾರಿಗೂ ಬೇಕಾಗಿಲ್ಲ. ವೀಕ್ಷಕಿ ಬದಲಾಗಿದ್ದಾಳೆ, ಅಕ್ಸೆಪ್ಟ್‌ ಮಾಡ್ಕೊಳ್ತಾರ ಸೀರಿಯಲ್ ಟೀಮ್‌ನವ್ರು ಅನ್ನೋದು ನಮ್ಮ ಮುಂದಿರೋ ಪ್ರಶ್ನೆ.

ಅಕ್ಕಾರೆ..ಅಕ್ಕೋರೆ ಎನ್ನುತ್ತಾ ಭೂಮಿಕಾ ಹಿಂದೆ ಸುತ್ತೋ ಅಮೃತಧಾರೆಯ ಮುಗ್ಧೆ ಮಲ್ಲಿ ಇವರೇನಾ?
 

Latest Videos
Follow Us:
Download App:
  • android
  • ios