"ಸೀತಾ ರಾಮ" ಧಾರಾವಾಹಿಯ ರಾಮ್ ಮತ್ತು ಸಿಹಿ ಪಾತ್ರಗಳು ಅಪ್ಪ-ಮಗಳ  ಬಾಂಧವ್ಯವನ್ನು ಚಿತ್ರಿಸುತ್ತವೆ. ಸಿಹಿಗೆ ರಾಮ್ ಆಸರೆಯಾಗಿದ್ದು, ಅವರ ಭಾಂದವ್ಯ ಪ್ರೇಕ್ಷಕರ ಮನಗೆದ್ದಿದೆ. ಧಾರಾವಾಹಿಯಲ್ಲಿ ಸಿಹಿ ಇಲ್ಲದಿದ್ದರೂ, ನಿಜ ಜೀವನದಲ್ಲಿ ಅವರ ಬಾಂಧವ್ಯ ದೃಢವಾಗಿದೆ ಎಂದು ಝೀ ಎಂಟರ್ಟೇನರ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

ತಂದೆ ಮತ್ತು ಮಗಳ ಭಾಂದವ್ಯ (father and daughter relationship) ಯಾವಾಗ್ಲೂ ವಿಶೇಷವಾಗಿಯೇ ಇರುತ್ತೆ. ಅಪ್ಪನೇ ಮಗಳಿಗೆ ಮೊದಲ ಹೀರೋ ಆಗಿರ್ತಾನೆ. ಕೆಲವೊಂದು ಮನೆಗಳಲ್ಲಿ ಅಪ್ಪ ಮಗಳ ಮೇಲಿನ ಪ್ರೀತಿಯನ್ನು ಓಪನ್ ಆಗಿ ಹೇಳದೇ ಹೋದರೂ ಸಹ, ಮಗಳಿಗಾಗಿ ಜೀವವನ್ನೇ ಕೊಡೋದಕ್ಕೆ ರೆಡಿಯಾಗಿರುವಂತಹ ಜೀವ ಅಂದ್ರೆ ಅದು ಅಪ್ಪ. ಈವಾಗ ಇಲ್ಲಿ ಅಪ್ಪ ಮಗಳ ಸಂಬಂಧದ ಬಗ್ಗೆ ವಿವರಿಸೋದಕ್ಕೆ ಕಾರಣ ಸಿಹಿ ಮತ್ತು ರಾಮ್ ನಡುವಿನ ಬಾಂಧವ್ಯ. ಇವರಿಬ್ಬರ ಪ್ರೀತಿಗೆ ಕರಗೋದೋರು ಯಾರೂ ಇರಲಾರರು. 

ಇಂಗ್ಲಿಷ್ ಬರಲ್ಲ ಅಂತ ಇಂಟರ್ವ್ಯೂನಲ್ಲಿ ರಿಜೆಕ್ಟ್ ಆಗಿದ್ದ ಇವರು ಈಗ ಕನ್ನಡ ಪ್ರೇಕ್ಷಕರ ಫೇವರಿಟ್ ನಟ!

ಝೀ ಕನ್ನಡದಲ್ಲಿ (Zee Kannada)ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಸೀತಾ ರಾಮ. ಅದರಲ್ಲೀ ರಾಮ್ ಮತ್ತು ಸಿಹಿಯ ನಡುವಿನ ಬಾಂಧವ್ಯ ಕೂಡ ಸೀರಿಯಲ್ ಹೈಲೈಟ್ ಹೌದು. ಆರಂಭದಲ್ಲಿ ಇಬ್ಬರು ಸ್ನೇಹಿತರು. ಸೀತಾ ಮತ್ತು ರಾಮರ (Seetha Ram) ನಡುವೆ, ನಂಟು ಬೆಸೆಯೋಕೆ ಕಾರಣಕರ್ತಳು ಕೂಡ ಈ ಪುಟ್ಟ ಸಿಹಿ. ಸೀತಾಳಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡ ರಾಮ್ ಗೆ ಸಿಹಿಯನ್ನು ಒಪ್ಪಿಸೋದೆ ಕಷ್ಟದ ಕೆಲಸ ಆಗಿತ್ತು. ರಾಮ್ ತನ್ನ ಫ್ರೆಂಡ್ ಆಗಿರೋದನ್ನು ಒಪ್ಪಿಕೊಂಡಿದ್ದ ಸಿಹಿ, ಆತನನ್ನು ತನ್ನ ಅಪ್ಪನ ಸ್ಥಾನದಲ್ಲಿ ನೋಡೋದಕ್ಕೆ ಇಷ್ಟ ಪಡಲಿಲ್ಲ. ಕಾರಣ, ಅಪ್ಪ ಅಂದ್ರೆ ಬಿಟ್ಟೋಗ್ತಾರೆ, ಅಪ್ಪ ನಮ್ಮ ಜೊತೆಗಿರೋದೇ ಇಲ್ಲ ಎನ್ನುವ ಬಲವಾದ ನಂಬಿಕೆ ಸಿಹಿಯ ಮನದಲ್ಲಿ. ಕೊನೆಗೆ ಅದ್ಯಾವುದೂ ಆಗೋದಿಲ್ಲ, ತಾನು ಯಾವಾಗ್ಲೂ ನಿನ್ನ ಜೊತೆಗೆ ಇರುತ್ತೇನೆ ಎನ್ನುವ ಭರವಸೆ ಮೂಡಿಸುವ ಮೂಲಕ, ಫ್ರೆಂಡ್ ನಿಂದ ಅಪ್ಪನ ಸ್ಥಾನ ಪಡೆದವರು ರಾಮ್. 

ಸಿಹಿ ಇಲ್ಲದ ಸೀತಾ -ರಾಮ ನೋಡೋದೆ ಕಷ್ಟ… Miss You ಸಿಹಿ ಪುಟ್ಟ ಎನ್ನುತ್ತಾ ಕಣ್ಣೀರಿಟ್ಟ ವೀಕ್ಷಕರು!

ಅಪ್ಪ -ಮಗಳಾಗಿ ಸಿಹಿ ಮತ್ತು ರಾಮ್ ಒಡನಾಟವನ್ನು ನೋಡೋದು ಸಹ ತುಂಬಾನೆ ಕ್ಯೂಟ್ ಆಗಿತ್ತು, ಸೀತಾಳನ್ನು ರೇಗಿಸೋದು, ಇಬ್ಬರು ಜೊತೆಯಾಗಿ ಮೋಜು, ಮಸ್ತಿ ಮಾಡೋದು, ಸಿಹಿಗೆ ಸಣ್ಣ ನೋವಾದ್ರೂ ಅದನ್ನು ಸಹಿಸದ ರಾಮ್, ಅಮ್ಮ -ಅಪ್ಪ ಜೊತೆಯಾಗಿರೋದಕ್ಕೆ ತಾನು ಬೋರ್ಡಿಂಗ್ ಗೆ ಸೇರಿಕೊಂಡ ಸಿಹಿ… ಇದೆಲ್ಲಾ ನೋಡಿದ್ರೆ, ಆಹಾ ಎಂತಹ ಮುದ್ದಾದ ಅಪ್ಪ -ಮಗಳ ಜೋಡಿ ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಸದ್ಯ ಸೀರಿಯಲ್ ನಲ್ಲಿ ಸಿಹಿ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ರೆ, ಸೀತಾ ಸಿಹಿ ಸತ್ತ ಶಾಕ್ ಅಲ್ಲಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಇವರಿಬ್ಬರನ್ನು ನೆನಪಿಸಿಕೊಂಡು ರಾಮ್ ಕೊರಗುತ್ತಿದ್ದಾನೆ. 

ಸಿಹಿ ಸಾವಿನಿಂದ ಹುಚ್ಚಿಯಾದ ಸೀತಾ… ಕಥೆ ಹೀಗೆ ಇದ್ರೆ ಸೀತಾ ಅಲ್ಲ ನಮಗೆ ಹುಚ್ಚು ಹಿಡಿಯೋದು ಗ್ಯಾರಂಟಿ ಅಂದ್ರು ಜನ!

ಇದೀಗ ಸಿಹಿ ಮತ್ತು ರಾಮ್ ಝೀ ಎಂಟರ್ಟೇನರ್ (Zee Entertainers) ಕಾರ್ಯಕ್ರಮದ ಹೊಸ ವರ್ಷದ ಶುಭಾರಂಭ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ನಡುವಿನ ಭಾಂದವ್ಯದ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದಾರೆ. ಸೀರಿಯಲ್ ನಲ್ಲಿ ಅಲ್ಲದೇ ನಿಜವಾಗಿಯೂ ಇಬ್ಬರ ಬಾಂಡಿಂಗ್ ಸ್ಟ್ರಾಂಗ್ ಆಗಿದೆ ಅನ್ನೋದನ್ನು ಹೇಳಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಈ ಇಮೋಶನಲ್ ಎಪಿಸೋಡ್ ಇದೇ ಶನಿವಾರ ಮತ್ತು ಭಾನುವಾರ ಝೀ ಕನ್ನಡದಲ್ಲಿ ಪ್ರಸಾರವಾಗಲಿದೆ. 


View post on Instagram