Asianet Suvarna News Asianet Suvarna News

ಇವರಿಬ್ಬರಲ್ಲಿ ಅಮ್ಮ ಯಾರು ಮಗಳು ಯಾರು ನೀವೇ ಹೇಳಿ: ಸೌಂದರ್ಯದಲ್ಲಿ ಮಗಳ ಮೀರಿಸುತ್ತಿರುವ ಕಿರುತೆರೆ ನಟಿ

ಹಿಂದಿ ಕಿರುತೆರೆ ಲೋಕದ ತಾರೆ ಶ್ವೇತಾ ತಿವಾರಿ ಕೂಡ ತಮ್ಮ ಮಗಳು ನಟಿ ಪಾಲಕ್ ತಿವಾರಿ ಜೊತೆ ಆಮೀರ್ ಖಾನ್ ಪುತ್ರಿ ಇರಾ ಖಾನ್  ಮದ್ವೆಯಲ್ಲಿ ಕಾಣಿಸಿಕೊಂಡಿದ್ದರು. ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಮ್ಮ ಮಗಳು ಇಬ್ಬರನ್ನು ಜೊತೆಯಲ್ಲಿ ನೋಡಿದ ಅನೇಕರು ಇದರಲ್ಲಿ ಅಮ್ಮ ಯಾರು ಮಗಳು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

Who is the mother and who is the daughter among these two Hindi Actress Shwetha tiwari appeared with her daughter Palak tiwari In Ira khan reception akb
Author
First Published Jan 14, 2024, 4:48 PM IST

ಹಿಂದಿ ಕಿರುತೆರೆ ಲೋಕದ ರಾಣಿ ಎಂದೇ ಖ್ಯಾತಿ ಗಳಿಸಿರುವ ಶ್ವೇತಾ ತಿವಾರಿ ವಯಸ್ಸು ಮುಂದೆ ಹೋಗುವ ಬದಲು ಹಿಂದಕ್ಕೆ ಚಲಿಸುತ್ತಿದೆಯೋ ಏನೋ ಎಂಬುದು ಆಕೆಯ ಅಭಿಮಾನಿಗಳ ಸಂಶಯ. ಇದಕ್ಕೆ ಕಾರಣ ಆಕೆಯ ವಯಸ್ಸಿಗೂ ಮೀರಿದ ಬ್ಯೂಟಿ. ಹೌದು ನಿನ್ನೆಯಷ್ಟೇ ಆಮೀರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಫಿಟ್‌ನೆಸ್ ಟ್ರೈನರ್ ನೂಪುರ್ ಶಿಖರೆ ಮದ್ವೆ ಆರತಕ್ಷತೆ ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು, ಶಾರುಖ್ ಖಾನ್ ಸಲ್ಮಾನ್ ಖಾನ್, ಕತ್ರೀನಾ ಕೈಫ್ ಸೇರಿದಂತೆ ಬಾಲಿವುಡ್‌ನ ಬಹುತೇಕ ತಾರಾ ಜೋಡಿ ಈ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ವಧುವರರಿಗೆ ಶುಭಹಾರೈಸಿದ್ದಲ್ಲೇ ಮದುವೆಗೆ ತಾರಾ ರಂಗು ನೀಡಿದ್ದರು. ಅದೇ ರೀತಿ ಹಿಂದಿ ಕಿರುತೆರೆ ಲೋಕದ ತಾರೆ ಶ್ವೇತಾ ತಿವಾರಿ ಕೂಡ ತಮ್ಮ ಮಗಳು ನಟಿ ಪಾಲಕ್ ತಿವಾರಿ ಜೊತೆ ಕಾಣಿಸಿಕೊಂಡಿದ್ದರು. 

ಇವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಮ್ಮ ಮಗಳು ಇಬ್ಬರನ್ನು ಜೊತೆಯಲ್ಲಿ ನೋಡಿದ ಅನೇಕರು ಇದರಲ್ಲಿ ಅಮ್ಮ ಯಾರು ಮಗಳು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಮಗಳಿಗಿಂತ ಅಮ್ಮನೇ ಯಂಗ್ ಆಗಿ ಕಾಣಿಸುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಈಕೆ ಸಂತೂರ್ ಮಮ್ಮಿ ಎಂದು ಸಂತೂರ್ ಜಾಹೀರಾತಿಗೆ ಹೋಲಿಕೆ ಮಾಡಿದ್ದಾರೆ. ಮಗಳಿಗಿಂತ ಅಮ್ಮನೇ ಚೆನ್ನಾಗಿ ಕಾಣಿಸುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಕೆಲವರು ಇವರಿಬ್ಬರು ಅಕ್ಕ ತಂಗಿಯರಂತೆ ಕಾಣಿಸುತ್ತಿದ್ದಾರೆ ಅಮ್ಮ ಮಗಳಂತೆ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಮ್ಮ ಶ್ವೇತಾ ತಿವಾರಿ ಕಪ್ಪು ಬಣ್ಣದ ರೆಡಿ ಸಾರಿ ಧರಿಸಿದ್ದರೆ, ಮಗಳು ಪಾಲಕ್ ತಿವಾರಿ ಪಿಸ್ತಾ ಹಸಿರು ಬಣ್ಣದ ರೆಡಿ ಶೈನಿಂಗ್ ಸೀರೆ ಧರಿಸಿದ್ದಾರೆ. 

18ಕ್ಕೆ ಮದುವೆಯಾಗಿ 2 ಬಾರಿ ವಿಚ್ಚೇದನ ಪಡೆದ ಈ ನಟಿಗೆ 43 ಆದ್ರೂ ಸೌಂದರ್ಯ ಕುಗ್ಗಿಲ್ಲ!

ಇನ್ನು ಶ್ವೇತಾ ತಿವಾರಿ ಹಿಂದಿ ಸೀರಿಯಲ್ ಲೋಕದ ಧ್ರುವತಾರೆ ಎನಿಸಿದ್ದು,  ಹಿಂದಿಯ ಆನೆ ವಾಲ ಪಲ್,ಕರಂ ಕಯಿ ಕಿಸಿ ರೋಜ್, ಕಸುತಿ ಜಿಂದಗಿ ಕ್ಯಾ, ಕ್ಯಾ ಹದ್‌ಸಾ ಕ್ಯಾ ಹಕಿಕತ್,  ಮೇ ಹೂ ಅಪರಾಜಿತಾ, ಮೆರೆ ಡಾಡ್ ಕಿ ದುಲ್ಹನ್, ಬೇಗುಸರಾಯಿ, ಬಾಲ್ವೀರ್‌, ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ  ಹಿಂದಿಯ ಡಾನ್ಸ್ ರಿಯಾಲಿಟಿ ಶೋ' ನಾಚ್ ಬಲಿಯೇ', ಝಲಕ್ ದಿಕ್ಲಾಜಾ, ಕಾಮಿಡಿ ಸರ್ಕಸ್ ಕಾ ನಯಾ ದ್ವಾರ್, ಬಿಗ್ ಬಾಸ್ 4 ಮುಂತಾದ ಹಲವು ಫೇಮಸ್ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇನ್ನು ಶ್ವೇತಾ ತಿವಾರಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 1998ರಲ್ಲಿ ನಟ ರಾಜ್ ಚೌಧರಿ ಅವರನ್ನು ಮದ್ವೆಯಾಗಿರುವ ಶ್ವೇತಾ ತಿವಾರಿ 2000ನೇ ಇಸವಿಯಲ್ಲಿ ಮಗಳು ಪಾಲಕ್ ತಿವಾರಿಗೆ ಪೋಷಕರಾಗಿದ್ದರು. ಇದಾದ ನಂತರ ದಂಪತಿಗಳಲ್ಲಿ ವಿರಸ ಮೂಡಿದ್ದು,  ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದರು. ಇದಾದ ನಂತರ ಇಬ್ಬರು 2007ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ 2013ರಲ್ಲಿ  ನಟ ಅಭಿನವ್ ಕೊಹ್ಲಿಯನ್ನು ಮದುವೆಯಾಗಿದ್ದರು. ಈ ದಾಂಪತ್ಯದ ಫಲವಾಗಿ 2016ರಲ್ಲಿ ಮಗನೋರ್ವ ಜನಿಸಿದ್ದಾನೆ. ಇದಾದ ನಂತರ ಈ ಸಂಬಂಧದಲ್ಲಿಯೂ ವಿರಸ ಮೂಡಿದ್ದು, 2019ರಲ್ಲಿ ದಂಪತಿ ಪರಸ್ಪರ ವಿಚ್ಛೇದನ ಪಡೆದಿದ್ದಾರೆ.  ಇನ್ನು ಈಕೆಯ ಪುತ್ರಿ ಪಾಲಕ್ ತಿವಾರಿ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಖಾನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿದ್ದವು.

ಚಿಕ್ಕ ಡ್ರೆಸ್​ ಹಾಕ್ಕೋಳದ್ಯಾಕೆ- ಈ ಪರಿ ಎಳೆಯೋದ್ಯಾಕೆ? ಇಬ್ರಾಹಿಂ ಒಪ್ಪುತ್ತಾನಾ? ನಟಿ ಪಾಲಕ್ ಸಕತ್​ ಟ್ರೋಲ್
 


 

Follow Us:
Download App:
  • android
  • ios