ಕಿಚ್ಚ ಸುದೀಪ್ ಸಾರಥ್ಯದಲ್ಲಿ Biggboss 11 ಬರ್ತಿದೆ, ಯಾವೆಲ್ಲ ಸೀರಿಯಲ್‌ಗಳಿಗೆ ಹೊಗೆ?
ನೋಡ್ ನೋಡ್ತಿದ್ದ ಹಾಗೆ ಬಿಗ್‌ಬಾಸ್ ತಯಾರಿ ಶುರುವಾಗಿಯೇ ಬಿಟ್ಟಿದೆ. ಇದೀಗ ನಮ್ಮ ಮುಂದಿರೋ ಪ್ರಶ್ನೆ ಈ ನೆವದಲ್ಲಿ ಹೊಗೆ ಹಾಕಿಸಿಕೊಳ್ತಿರೋ ಸೀರಿಯಲ್‌ಗಳು ಯಾವುವು ಅಂತ..
ಈ ಬಾರಿಯ ಬಿಗ್‌ಬಾಸ್ ಬಗ್ಗೆ ಎಂದಿನ ಹಾಗೆ ಒಂದಿಷ್ಟು ಚರ್ಚೆಗಳು ಜೋರಾಗಿ ನಡೆದವು. ಮೊದಲನೇದಾಗಿ ಈ ಸೀರಿಯಲ್ ಅನ್ನು ಕಿಚ್ಚ ಸುದೀಪ್ ಬದಲಿಗೆ ಬೇರ್ಯಾರೋ ಹೋಸ್ಟ್ ಮಾಡ್ತಾರೆ ಅನ್ನೋದು. ಅದಕ್ಕೆ ರಿಷಬ್ ಶೆಟ್ಟಿ, ರಮೇಶ್ ಅರವಿಂದ್, ಧನಂಜಯ ಮೊದಲಾದವರ ಹೆಸರು ಕೇಳಿಬಂದಿತ್ತು. ಈ ಸುದ್ದಿ ಬರೋದಕ್ಕೆ ಕಾರಣ ಏನೋ ಗೊತ್ತಿಲ್ಲ. ಬಹುಶಃ ಬೇರೆ ಭಾಷೆಗಳ ಬಿಗ್‌ಬಾಸ್‌ನಲ್ಲಿ ಹೋಸ್ಟ್ ಗಳು ಬದಲಾಗ್ತಿರೋ ಕಾರಣ ಇಲ್ಲೂ ಅದೇ ಆಗಬಹುದು ಅಂದುಕೊಂಡರೋ ಏನೋ ಏನೋ. ಒಟ್ಟಾರೆ ಬದಲಾವಣೆಯೊಂದು ಅಡಗಿಕೂತಿದೆ ಅನ್ನೋ ಥರ ಬಿಂಬಿಸಲಾಗಿತ್ತು. ಆದರೆ ಕಿಚ್ಚ ಸುದೀಪ್ ಅವರ ಅದ್ಭುತ ಹೋಸ್ಟಿಂಗ್‌ಗೆ ತಲೆಬಾಗಿರೋ ಕನ್ನಡ ಜನತೆ ಬೇರೆ ಯಾರನ್ನೂ ಆ ಪಾತ್ರದಲ್ಲಿ ನೋಡೋದಕ್ಕೆ ಇಷ್ಟ ಪಡ್ಲಿಲ್ಲ ಅನ್ನೋದು ಬೇರೆ ಮಾತು. ಅಲ್ಲದೇ ರಿಷಬ್ ಆ ಹೊತ್ತಿಗೆ ಕಾಂತಾರ ಸೀಕ್ವೆಲ್‌ನಲ್ಲಿ ಬ್ಯುಸಿ ಇರ್ತಾರೆ. ಧನಂಜಯ ಒಪ್ಪಿಕೊಂಡಿರೋ ಸಿನಿಮಾಗಳಲ್ಲಿ ಬ್ಯುಸಿ. ಹೀಗಿರುವಾಗ ಕಿಚ್ಚ ಬಿಟ್ರೆ ಬೇರೆ ಇಲ್ಲ ಅನ್ನೋ ಹಾಗಾಗಿದೆ.
ಇರಲಿ, ಈ ಅನುಮಾನಗಳೆಲ್ಲ ಕಳೆದು ಸುದೀಪ್ ಅವ್ರೇ ಹೋಸ್ಟ್ ಮಾಡೋದು ಕನ್‌ಫಿರ್ಮ್ ಆಗಿದೆ. ಅಷ್ಟೇ ಅಲ್ಲ, ಸ್ಪರ್ಧಿಗಳ ಲಿಸ್ಟ್ ಭರದಿಂದ ಫೈನಲೈಸ್ ಆಗ್ತಿದೆ. ಆದರೆ ಈಗ ನಮ್ಮ ಮುಂದಿರೋ ಪ್ರಶ್ನೆ ಈ ಬಿಗ್‌ಬಾಸ್ ನೆವದಲ್ಲಿ ಯಾವೆಲ್ಲ ಸೀರಿಯಲ್‌ಗಳು ಹೊಗೆ ಹಾಕಿಸ್ಕೊಳ್ಳಬಹುದು ಅನ್ನೋದು.
ಹೈದರಾಬಾದ್ ನಲ್ಲಿ ನಡೆದ ಕನ್ನಡ ಬಿಗ್‌ಬಾಸ್ 11 ಶೂಟಿಂಗ್, ಪ್ರೋಮೋ ರಿಲೀಸ್‌ಗೆ ಮುಹೂರ್ತ ಫಿಕ್ಸ್!
ದೊಡ್ಡಮೀನು ಬಂದಾಗ ಚಿಕ್ಕ ಮೀನುಗಳು ಗುಳುಂ ಆಗೋದು ವಿಕಾಸವಾದ. ಬಿಗ್‌ಬಾಸ್ ಇತಿಹಾಸ ಗಮನಿಸಿದರೂ ಈ ರಿಯಾಲಿಟಿ ಶೋ ಶುರುವಾಗುವ ಸಮಯದಲ್ಲಿ ಎರಡು ಮೂರು ಸೀರಿಯಲ್‌ಗಳು ಮುಕ್ತಾಯವಾಗೋದು ಆರಂಭದಿಂದ ಇರೋ ನಿಯಮ.
ಸೀರಿಯಲ್‌ಗಳನ್ನು ಇನ್ನೊಂದು ವರ್ಷ ಎಳೆಯುವ ಶಕ್ತಿ ನಿರ್ದೇಶಕರಿಗೆ ಇದ್ದರೂ ಬಿಗ್‌ಬಾಸ್ ಎಂಬ ದೊಡ್ಡ ರಿಯಾಲಿಟಿ ಶೋಗಾಗಿ ಈ ಸೀರಿಯಲ್‌ಗಳಿಗೆ ಬೇಗ ಮುಕ್ತಾಯ ಹಾಡಲಾಗುತ್ತದೆ. ಹಾಗಾದರೆ, ಈ ವರ್ಷ ಮುಕ್ತಾಯಗೊಳ್ಳುವ
ಸಾಧ್ಯತೆಯಿರುವ ಮೂರು ಸೀರಿಯಲ್‌ಗಳು ಯಾವುದಿರಬಹುದು?
TV Serial: ಮುಖೇಶ್ ಗೌಡ ಸೇರಿ ಕನ್ನಡದವ್ರೇ ನಟಿಸಿರೋ ತೆಲುಗಿನ ಜನಪ್ರಿಯ ಸೀರಿಯಲ್ ವೈಂಡ್‌ಅಪ್
ಹೆಚ್ಚಿನ ಸೀರಿಯಲ್ ಪ್ರಿಯರ ಊಹೆ ಪ್ರಕಾರ ಮುಕ್ತಾಯಗೊಳ್ಳುವ ಒಂದು ಸೀರಿಯಲ್ ಕೆಂಡಸಂಪಿಗೆ. ಈ ಸೀರಿಯಲ್ ಸಬ್ಜೆಕ್ಟ್ ಎಲ್ಲ ಚೆನ್ನಾಗಿದ್ದರೂ ಯಾಕೋ ಆರಂಭದಿಂದಲೂ ವೀಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಲಿಲ್ಲ. ರೇಟಿಂಗ್ ಬರಲಿಲ್ಲ. ಅದರಲ್ಲೂ ಲೀಡ್ ಪಾತ್ರ ಮಾಡುತ್ತಿದ್ದ ಕಾವ್ಯಾ ಶೈವ ಬದಲಾದ ಮೇಲಂತೂ ಹೊಸ ಕಲಾವಿದೆಗೆ ಜನ ಅಡ್ಜೆಸ್ಟ್ ಆಗಲಿಲ್ಲ. ಹೀಗಾಗಿ ಈ ಸೀರಿಯಲ್ ನಿಲ್ಲೋದು ಪಕ್ಕ ಅನ್ನೋ ಮಾತಿದೆ. ಅದು ಬಿಟ್ಟರೆ ನಿಲ್ಲೋ ಇನ್ನೊಂದು ಸೀರಿಯಲ್ 'ಚುಕ್ಕಿತಾರೆ' ಅನ್ನೋ ಮಾತಿದೆ. ಈ ಸೀರಿಯಲ್ ಮಕ್ಕಳ ಕಥೆ ಆಧರಿಸಿದ್ದು. ನವೀನ್ ಸಜ್ಜು ಇದ್ದಾಗ ಇದ್ದ ಪಾಪ್ಯುಲಾರಿಟಿ ಆಮೇಲೆ ಕಡಿಮೆ ಆಯ್ತು. ಈ ಲೀಸ್ಟ್ನಲ್ಲಿರೋ ಇನ್ನೊಂದು ಸೀರಿಯಲ್ ಅಂತರ್‌ಪಟ. ಇದರಲ್ಲಿ ಇಬ್ಬರೂ ಹೊಸಬರು ನಾಯಕ ನಾಯಕಿ. ಇದಕ್ಕೂ ಅಂಥಾ ಉತ್ತಮ ರೆಸ್ಪಾನ್ಸ್ ಸಿಕ್ತಿಲ್ಲ. ಸೋ ಸದ್ಯದ ಲೆಕ್ಕಾಚಾರದ ಪ್ರಕಾರ ಈ ಮೂರು ಸೀರಿಯಲ್‌ಗಳು ಇನ್ನು ಕೆಲವೇ ದಿನಗಳಲ್ಲಿ ವೈಂಡ್ ಅಪ್ ಆಗುತ್ತವೆ.
ಇನ್ನೊಂದು ಸಂಗತಿ ಅಂದರೆ ಹೀಗೆ ವೈಂಡ್‌ಅಪ್ ಆದ ಸೀರಿಯಲ್ ಕಲಾವಿದರು ಬಿಗ್‌ಬಾಸ್ ಮನೆಗೆ ಹೋಗೋ ಸಾಧ್ಯತೆ ಇದೆ. ಆ ಪ್ರಕಾರ ನವೀನ್ ಸಜ್ಜು, ದಿವ್ಯಶ್ರೀ, ವಿಶಾಲ್, ಜಯಶ್ರೀ, ರಾಧಿಕಾ
ಶ್ರವಂತ್ ಮೊದಲಾದವರು ಬಿಗ್‌ಬಾಸ್‌ಗೆ ಎಂಟ್ರಿ ಕೊಡೋ ಸಾಧ್ಯತೆ ಇದೆ.