ಕನ್ನಡದವರೇ ನಾಯಕ, ನಾಯಕಿಯಾಗಿರುವ ಜನಪ್ರಿಯ ತೆಲುಗು ಸೀರಿಯಲ್‌ ವೈಂಡ್‌ಅಪ್‌ ಆಗ್ತಿದೆ. ಮೈಸೂರಿನ ಮುಖೇಶ್‌ ಗೌಡ ಅನ್ನೋ ಆಕ್ಟರ್‌ಗೆ ಲೈಫ್‌ ನೀಡಿದ ಸೀರಿಯಲ್‌ ಇದು. 


ತೆಲುಗು ಸೀರಿಯಲ್‌ಗಳಲ್ಲಿ ಕನ್ನಡದ ನಟ ನಟಿಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌. ಕನ್ನಡದ ಅನೇಕ ಜನ ನಟ, ನಟಿಯರು ಅಲ್ಲಿ ಭಲೇ ಫೇಮಸ್ ಆಗಿದ್ದಾರೆ. ಹಾಗಂತ ಸಿನಿಮಾದಲ್ಲೂ ಒಂದು ಕೈ ನೋಡೇ ಬಿಡಾಣ ಅಂತ ಸೀರಿಯಲ್ಲಿಂದ ಹೋದ ನಟರನ್ನು ಮಾತ್ರ ಈ ಟಾಲಿವುಡ್‌ ಕಣ್ಣೆತ್ತಿಯೂ ನೋಡಿಲ್ಲ. ಆದರೆ ಸ್ಯಾಂಡಲ್‌ವುಡ್‌ ಹೀರೋಯಿನ್‌ಗಳು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಕೊಡಗಿನ ಸುಂದರಿಗಿಂತ ದೊಡ್ಡ ಎಕ್ಸಾಂಪಲ್‌ ಬೇಕಾ? ಆದರೆ ಇಲ್ಲಿನ ಸೀರಿಯಲ್‌ಗಳಲ್ಲಿ ಹುಡುಗ ಹುಡುಗಿ ಅನ್ನೋ ಭೇದ ಇಲ್ಲದೇ ಎಲ್ಲರಿಗೂ ದುಡಿಮೆ ಸಿಕ್ಕಿದೆ. ಅದರಲ್ಲೂ ಹೆಚ್ಚಿನ ಸೀರಿಯಲ್‌ಗಳಲ್ಲಿ ನಮ್ಮ ಕನ್ನಡದವರೇ ಹೀರೋ, ಹೀರೋಯಿನ್, ಮೇನ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇಷ್ಟೇ ಆದರೆ ಪರ್ವಾಗಿರುತ್ತಿರಲಿಲ್ಲ. ಒಂದು ತೆಲುಗು ಸೀರಿಯಲ್‌ನಲ್ಲಿ ನಟಿಸಿರೋ ಕನ್ನಡದ ಹುಡುಗ ಹುಡುಗಿ ಅಂದರೆ ತೆಲುಗು ಸೀರಿಯಲ್‌ನ ಹೀರೋ ಹೀರೋಯಿನ್ ಜನರಿಗೆ ಎಷ್ಟು ಇಷ್ಟವಾಗಿದೆ ಅಂದರೆ ದೊಡ್ಡ ದೊಡ್ಡ ಫ್ಯಾನ್ ಬಳಗ ಸೃಷ್ಟಿಯಾಗಿದೆ. ಇವಕ್ಕೆಲ್ಲ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ತೆಲುಗು ರಾಜ್ಯ ಮಾತ್ರಅಲ್ಲ, ಇಡೀ ದೇಶದಲ್ಲಿ ಈ ಹೀರೋ ಹೀರೋಯಿನ್‌ಗೆ ಅಭಿಮಾನಿ ಪಡೆ ಇದೆ. 

ಇತ್ತೀಚೆಗೆ ಒಂದು ಇವೆಂಟ್‌ ಈ ಹೀರೋ ಹೀರೋಯಿನ್ ಹೋಗಿದ್ದಾಗ ರಸ್ತೆ ತುಂಬ ಜನ ನಿಂತು ಇವರನ್ನು ನೋಡಲು ಕಾಯ್ತಾ ಇದ್ರು. ಓಪನ್ ಜೀಪ್ ಮೆರವಣಿಗೆ ಮಾಡಿಸಿ ಜೈಕಾರ ಹಾಕಿದ್ದಿದ್ರು. ಅಷ್ಟಕ್ಕೂ ಇಷ್ಟೆಲ್ಲ ಹೇಳ್ತಿರೋದು ಯಾರ ಬಗ್ಗೆ ಅನ್ನೋ ಅನುಮಾನ ನಿಮಗೆ ಬಂದಿರಬಹುದು. ಮತ್ತು ಅದು ಯಾರು ಅಂತ ಬಹುತೇಕರಿಗೆ ಗೊತ್ತಾಗಿರಬಹುದು. ತೆಲುಗಿನ ಸ್ಟಾರ್ ಮಾ ಚಾನಲ್‌ನಲ್ಲಿ ಬರ್ತಿರೋ 'ಗುಪ್ಪೆಡಂಥಾ ಮನಸು' ಸೀರಿಯಲ್ ಮತ್ತು ಅದರ ಹೀರೋ ಹೀರೋಯಿನ್ ಬಗ್ಗೆ ಈ ಮೇಲಿನ ಮಾತು. ಇವರಿಬ್ಬರೂ ಮೂಲತಃ ಮೈಸೂರಿನವರು. ಈಗ ಬೆಂಗಳೂರಿನಲ್ಲಿ ಹೈದ್ರಾಬಾದ್‌ನಲ್ಲಿ ಓಡಾಡ್ತಿದ್ದಾರೆ. ಮುಖೇಶ್‌ ಗೌಡ ಹಾಗೂ ರಕ್ಷಾ ಗೌಡ ಅಂತ ಹೀರೋ ಹೀರೋಯಿನ್ ಹೆಸರು. ಸೀರಿಯಲ್‌ನಲ್ಲಿ ಇವ್ರು ರಿಷಿ ಸರ್ ಅರ್ಥಾತ್ ರಿಷ್ಯೇಂದ್ರ ಭೂಷಣ್‌ ಮತ್ತು ವಸುಧಾರಾ. ಈ ಸೀರಿಯಲ್ ಇದೀಗ ಕೊನೇ ಹಂತಕ್ಕೆ ಬಂದು ನಿಂತಿದೆ. 

ಕಳೆದ ವೀಕೆಂಡ್‌ನಲ್ಲಿ ಕೊನೇ ಸೀನ್ ಚಿತ್ರೀಕರಣ ಮುಗಿದಿದೆ. ಅಭಿಮಾನಿಗಳ ದೊಡ್ಡ ಪಡೆಯೇ ಕೊನೆಯ ದಿನದ ಶೂಟಿಂಗ್ ವೇಳೆ ಹಾಜರಿದ್ದರು. ಈ ಸಂದರ್ಭ ಟೀಮ್‌ನವ್ರೆಲ್ಲ ಕೇಕ್ ಕಟ್ ಮಾಡಿದ್ದು ಚೆನ್ನಾಗಿತ್ತು. ಈ ನಟ, ನಟಿಯರು ಅನೇಕ ರೀಲ್ಸ್‌ಗಳನ್ನೂ ಮಾಡಿದ್ರು. ಅವೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿವೆ. ಆದರೆ ಈ ಸೀರಿಯಲ್ ನಿಲ್ಲುತ್ತಿರುವುದಕ್ಕೆ ಅಭಿಮಾನಿಗಳಿಗೆ ಬೇಜಾರಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಈ ಸೀರಿಯಲ್ ಪ್ರಸಾರ ಆಗ್ತಿತ್ತು. ಬೆಂಗಾಲಿ ಸೀರಿಯಲ್ ಒಂದರ ರಿಮೇಕ್ ಆದರೂ ಒನ್‌ಲೈನ್ ಅಷ್ಟೇ ತಗೊಂದು ಉಳಿದ ಅಷ್ಟೂ ಕಥಾ ಭಾಗವನ್ನೂ ರಿಕ್ರಿಯೇಟ್ ಮಾಡಲಾಗಿತ್ತು. ಈ ಅವಧಿಯಲ್ಲಿ ಅನೇಕ ಪಾತ್ರಗಳು ಬದಲಾದವು. ಈಗ ಗ್ಲಾಮರ್ ಕ್ವೀನ್ ಆಗಿ ಮಿಂಚುತ್ತಿರುವ ಜ್ಯೋತಿ ರೈ ಈ ಸೀರಿಯಲ್‌ನಲ್ಲಿ ಹೀರೋ ರಿಷ್ಯೇಂದ್ರ ಭೂಷಣ್ ತಾಯಿ ಜಗತಿ ಎಂಬ ಸ್ಟ್ರಾಂಗ್ ಪಾತ್ರದಲ್ಲಿ ಮಿಂಚಿದ್ರು. 

ಸೀರಿಯಲ್‌ನಿಂದ ಸಡನ್ನಾಗಿ ನಾಯಕ ಮುಖೇಶ್‌ ತಿಂಗಳಾನುಗಟ್ಟಲೆ ಮಾಯವಾದ ಮೇಲೆ ಸೀರಿಯಲ್ ಟಿಆರ್ಪಿ ಜರ್ರನೆ ಇಳಿಯಿತು. ಇದೀಗ ಅವರು ವಾಪಾಸ್ ಬಂದರೂ ಟಿಆರ್‌ಪಿಯಲ್ಲಿ ಏರಿಕೆ ಆಗಿಲ್ಲ. ಸೋ, ಅನಿವಾರ್ಯವಾಗಿ ಈ ಸೀರಿಯಲ್‌ಅನ್ನು ವೈಂಡ್‌ಅಪ್ ಮಾಡ್ತಿದ್ದಾರೆ. ಈ ಜೋಡಿ ಸಖತ್ ಫೇಮಸ್ ಆಗಿರುವ ಕಾರಣ ಮತ್ತೆ ಈ ಜೋಡಿಯ ಹೊಸ ಸೀರಿಯಲ್ ಆಸೆಯಲ್ಲಿದ್ದಾರೆ ಇವರ ಫ್ಯಾನ್ಸ್.

View post on Instagram