ಅತಿ ಹೆಚ್ಚು ವೀಕ್ಷಿಸುವ ಕನ್ನಡ ಧಾರಾವಾಹಿಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಇದರಲ್ಲಿ ಅತಿ ಹೆಚ್ಚು ಸ್ಥಾನ ಯಾವುದಕ್ಕೆ ಸಿಕ್ಕಿದೆ ಗೊತ್ತಾ? 

ಯಾವುದೇ ಟಿ.ವಿ.ಕಾರ್ಯಕ್ರಮಗಳಿಗೆ ಟಿಆರ್​ಪಿ ಬಹುಮುಖ್ಯವಾಗಿ ಬೇಕು. ಟಿಆರ್​ಪಿ ಎಂದರೆ Television Rating Point or Target Rating Point. ದಿನಪತ್ರಿಕೆಗಳು ಪ್ರಸಾರ ಸಂಖ್ಯೆಯ ಆಧಾರದ ಮೇಲೆ ಜಾಹೀರಾತು ದರ ನಿಗದಿಯಾದರೆ ಟಿವಿ ಚಾನೆಲ್​ಗಳಲ್ಲಿ ಹೆಚ್ಚೆಚ್ಚು ಜಾಹೀರಾತು ಬೇಕೆಂದರೆ, ಹೆಚ್ಚು ಟಿಆರ್​ಪಿ ಅಗತ್ಯವಾಗಿ ಬೇಕಾಗುತ್ತದೆ. ಇವುಗಳ ಆಧಾರದ ಮೇಲೆ ಜಾಹೀರಾತು ದರ ನಿಗದಿಯಾಗುತ್ತದೆ. ಜನರು ಯಾವ ಚಾನೆಲ್​, ಯಾವ ವೇಳೆ ಎಷ್ಟು ನೋಡುತ್ತಾರೆ ಎನ್ನುವುದರ ಆಧಾರದ ಮೇಲೆ ಇದು ನಿಗದಿಯಾಗುತ್ತದೆ. ಇದನ್ನು ಗಂಟೆ, ದಿನ ಮತ್ತು ವಾರದ ಲೆಕ್ಕದಲ್ಲೂ ಲೆಕ್ಕ ಹಾಕುವುದು ಸಾಮಾನ್ಯವಾದರೂ ಭಾರತದಲ್ಲಿ ಅಂತಾರಾಷ್ಟ್ರೀಯ ಮಾನದಂಡದಂತೆ ನಿಮಿಷದ ಲೆಕ್ಕದಲ್ಲಿ ಟಿಆರ್ ಪಿಯನ್ನು ಲೆಕ್ಕ ಹಾಕಲಾಗುತ್ತದೆ. ಇದು ಧಾರಾವಾಹಿಗಳಿಗೂ ಅನ್ವಯ. ಯಾವ ಚಾನೆಲ್​ನ ಯಾವ ಧಾರಾವಾಹಿ ಎಷ್ಟು ಹೊತ್ತು ನೋಡುತ್ತಾರೆ ಎನ್ನುವ ಆಧಾರದ ಮೇಲೆ ಆಯಾ ಧಾರಾವಾಹಿಗಳ (Serials) ಜಾಹೀರಾತುಗಳ ಬೆಲೆ ನಿಗದಿಯಾಗುತ್ತದೆ. ಇದನ್ನು ಲೆಕ್ಕ ಹಾಕಲು ಬಾರ್ಕ್ ಬಾರೋ ಮೀಟರ್ ಎಂಬ ಉಪಕರಣವನ್ನು 45 ಸಾವಿರ ಮನೆಗಳಲ್ಲಿ ಅಳವಡಿಸಲಾಗುತ್ತದೆ. ಟಿ ಆರ್ ಪಿ ಲೆಕ್ಕ ಹಾಕಲು ಆಯ್ಕೆ ಮಾಡಿದ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಪ್ರತ್ಯೇಕ ಐಡಿ ನೀಡಲಾಗಿರುತ್ತದೆ. ಅವರು ಟಿವಿ ವೀಕ್ಷಿಸುವಾಗ ತಮ್ಮ ಐಡಿ ಬಟನ್ ಒತ್ತಬೇಕು. ಪ್ರತ್ಯೇಕ ಐಡಿಗಳ ಮೂಲಕ ಅವರು ವೀಕ್ಷಿಸಿದ ಕಾರ್ಯಕ್ರಮಗಳು ಮತ್ತು ವೀಕ್ಷಣೆಯ ಸಮಯವನ್ನು ಸಂಗ್ರಹಿಸಲಾಗುತ್ತದೆ.

ಹೀಗೆ ಆಗಾಗ್ಗೆ ಯಾವ ಚಾನೆಲ್​ನ ಯಾವ ಕಾರ್ಯಕ್ರಮ ಅಥವಾ ಧಾರಾವಾಹಿಯನ್ನು ಜನರು ಹೆಚ್ಚು ನೋಡುತ್ತಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ. ಈಗ ಕನ್ನಡದ ಧಾರಾವಾಹಿಯ ವಿಷಯಕ್ಕೆ ಬರುವುದಾದರೆ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಈಗ ತಿಳಿಸಲಾಗಿದೆ. ಧಾರಾವಾಹಿ ವೀಕ್ಷಕರಿಗೆ ತಿಳಿದಿರುವ ಹಾಗೆ ಕಳೆದ ಕೆಲ ವರ್ಷಗಳಿಂದ ನಂ.1 ಸ್ಥಾನದಲ್ಲಿ ಇರುವುದು ಜೀ ಟಿವಿಯ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಆಕೆಯನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳನ್ನು ಪುಟ್ಟಕ್ಕ (ಉಮಾಶ್ರೀ) ಹೇಗೆ ಸಾಕುತ್ತಾಳೆ ಹಾಗೂ ಮಕ್ಕಳು ಆಕೆಗೆ ಆಸರೆಯಾಗಿ ಹೇಗೆ ನಿಲ್ಲುತ್ತಾರೆ ಎನ್ನುವ ಕಥೆ ಹೊಂದಿರುವ ಈ ಧಾರಾವಾಹಿ ನಂ1 ಸ್ಥಾನದಲ್ಲಿಯೇ ಮುಂದುವರೆದಿದೆ. ಈ ಧಾರಾವಾಹಿ 2021ರ ಡಿಸೆಂಬರ್​ 13ರಿಂದ ಆರಂಭವಾಗಿದೆ. 

ಎಷ್ಟು ಸುತ್ತಿನ ಕಾಲುಂಗುರ ಧರಿಸಬೇಕು?; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಲುಂಗುರದ ಮಹತ್ವ

ಇನ್ನು ಜೀ ಕನ್ನಡದಲ್ಲಿಯೇ ಪ್ರಸಾರವಾಗುತ್ತಿರುವ ಗಟ್ಟಿಮೇಳ (Gattimela) ಧಾರಾವಾಹಿಗೆ 2ನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿಯನ್ನು ಕೋರಮಂಗಲ ಅನಿಲ್ ನಿರ್ದೇಶಿಸಿದ್ದಾರೆ ಮತ್ತು ಜೋನಿ ಹರ್ಷ ನಿರ್ಮಿಸಿದ್ದಾರೆ. 2019ರ ಮಾರ್ಚ್ 11ರಿಂದ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ತಮಿಳು ಧಾರಾವಾಹಿ 'ಪೂವೇ ಪೂಚುದವ'ದ ರಿಮೇಕ್ ಆಗಿದೆ. 3ನೇ ಸ್ಥಾನದಲ್ಲಿ ಇರುವುದು ಜೀ ಕನ್ನಡದ ಶ್ರೀರಸ್ತು ಶುಭಮಸ್ತು (Shreemastu Shubhamastu) ಧಾರಾವಾಹಿ. ಇದರಲ್ಲಿ ನಟಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ. ಇದು ಕಳೆದ ಅಕ್ಟೋಬರ್​ನಿಂದ ಆರಂಭವಾಗಿದೆ. 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ (Bhagyalakshmi) ಧಾರಾವಾಹಿ ಕೂಡ ಟಿಆರ್​ಪಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2021ರ ಆಗಸ್ಟ್​ 3ರಿಂದ ಶುರುವಾಗಿರುವ ಈ ಧಾರಾವಾಹಿ ನಂ.3ನೇ ಸ್ಥಾನದಲ್ಲಿದೆ. ಭಾಗ್ಯ ಮತ್ತು ಲಕ್ಷ್ಮಿ ಇಬ್ಬರು ಅಕ್ಕ ತಂಗಿಯರು. ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡ್ರೆ ತುಂಬಾ ಪ್ರೀತಿ. ಇವರಿಬ್ಬರ ಸ್ಟೋರಿಯನ್ನು ಹೊಂದಿದೆ ಈ ಧಾರಾವಾಹಿ. ಇನ್ನು TRPಯ 4ನೇ ಸ್ಥಾನದಲ್ಲಿರುವುದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ. ವಯಸ್ಸಿಗಿಂತ ಅತಿ ಹಿರಿಯನ ಜೊತೆ ಮದುವೆಯಾಗುವ ಯುವತಿಯ ಕಥೆಯನ್ನು ಈ ಧಾರಾವಾಹಿ ಹೊಂದಿದೆ. 2021ರ ಆಗಸ್ಟ್​ ತಿಂಗಳಿನಿಂದ ಇದು ಶುರುವಾಗಿದ್ದು, ಈಗ ನಂ.4 ಸ್ಥಾನ ಪಡೆದುಕೊಂಡಿದೆ. 

Ramachari: ಯಾಕಂದ್ರೆ ನನಗೆ ಮದ್ವೆ ಆಗಿದೆ.. ಎದೇಲಿ ಬಚ್ಚಿಟ್ಟುಕೊಂಡ ಸತ್ಯ ಹೇಳೇಬಿಟ್ಟ ರಾಮಾಚಾರಿ..

ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿ 5ನೇ ಸ್ಥಾನದಲ್ಲಿದೆ. ಗಂಡು ಹುಡುಗನಂತೆ ಬೆಳೆದ ಹುಡುಗಿಯೊಬ್ಬಳು ಸಂಪ್ರದಾಯಸ್ಥ ಕುಟುಂಬದಲ್ಲಿ ಮದುವೆಯಾಗಿ ಹೋದಾಗ ಅನುಭವಿಸುವ ನೋವು-ನಲಿವುಗಳ ಕಥಾಹಂದರವನ್ನು ಇದು ಹೊಂದಿದೆ. ಈ ಧಾರಾವಾಹಿ 2020ರ ಡಿಸೆಂಬರ್​ನಿಂದ ಆರಂಭವಾಗಿದೆ. ಇನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಧಾರಾವಾಹಿ 6ನೇ ಸ್ಥಾನದಲ್ಲಿದೆ. ರಾಮಾಚಾರಿ ಧಾರಾವಾಹಿಯ ಹೀರೋ ರಿತ್ವಿಕ್ ಕೃಪಾಕರ್ ಅವರ ನಿಜ ಜೀವನದ ನೋವಿನ ಕಥೆ ಇದು. ಇತರು ಹೀಯಾಳಿಸಿದ್ದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಆ ಸವಾಲಿನಲ್ಲಿ ಗೆದ್ದಿರುವ ಕಥೆಯನ್ನು ಇದು ಹೊಂದಿದೆ.