Ramachari: ಯಾಕಂದ್ರೆ ನನಗೆ ಮದ್ವೆ ಆಗಿದೆ.. ಎದೇಲಿ ಬಚ್ಚಿಟ್ಟುಕೊಂಡ ಸತ್ಯ ಹೇಳೇಬಿಟ್ಟ ರಾಮಾಚಾರಿ..
ರಾಮಾಚಾರಿ (Ramachari) ಮನೆಯವರ ಬಳಿ ತಾನು ವಿವಾಹಿತ ಸತ್ಯ ಹೇಳಿದ್ದಾನೆ. ಇತ್ತ ಚಾರುವಿಗೆ ಮದುವೆಯ ನೆವದಲ್ಲಿ ವಿಕಾಸ್ ಕಿರುಕುಳ ಶುರುವಾಗಿದೆ. ಚಾರು ಚಾರಿ ಇನ್ನಾದ್ರೂ ದಂಪತಿಗಳಾಗಿ ಸಂಸಾರ ನಡೆಸ್ತಾರ?
ರಾಮಾಚಾರಿ (Ramachari) ಸೀರಿಯಲ್ (serial) ನೋಡ್ತಿರೋ ವೀಕ್ಷಕರು ಎದುರು ನೋಡ್ತಿರೋ ಕ್ಷಣ ಬಂದೇ ಬಿಟ್ಟಿದೆ. ಒಂಥರಾ ಆಂಜನೇಯನೇ ರಾಮಾಚಾರಿಯಿಂದ ಸತ್ಯ ಬಾಯಿ ಬಿಡಿಸಿದ್ದಾನೆ ಅಂತ ಹೇಳಬಹುದೇನೋ. ಸೋ, ಆಂಜನೇಯನ ದಯದಿಂದ ರಾಮಾಚಾರಿ ಮನೆಯವರ ಮುಂದೆ ಸತ್ಯ ಹೇಳಿಬಿಟ್ಟಿದ್ದಾನೆ. ಆ ಸತ್ಯವನ್ನು ಕೇಳಿದ ಶಾಕ್‌ನಲ್ಲಿ ರಾಮಾಚಾರಿ ಮನೆಮಂದಿ ಬೆಚ್ಚಿಬಿದ್ದಿದ್ದಾರೆ. ಇತ್ತ ಚಾರುಲತಾ ಸಹ ಸತ್ಯ ಹೇಳಲು ಮುಂದಾಗಿದ್ದಾಳೆ. ತನ್ನ ತಾಯಿ ಮಾನ್ಯತಾ ಬಳಿ ಅವಳು ಹೇಳಬೇಕು ಅಂತಿರೋ ಸತ್ಯ ತಾನು ಅಂಧೆ ಅಲ್ಲ, ತನಗೆ ಈಗ ಕಣ್ಣು ಕಾಣಿಸುತ್ತೆ ಅನ್ನೋ ಸತ್ಯ. ಒಂದು ವೇಳೆ ಈ ಸತ್ಯ ಗೊತ್ತಾಗಿ ಬಿಟ್ಟರೆ ಮಾನ್ಯತಾ ಇದನ್ನು ರಾಮಾಚಾರಿಗೂ ಹೇಳದೇ ಇರೋದಿಲ್ಲ. ಈಕೆ ಅಂಧೆ ಅನ್ನೋ ಕಾರಣಕ್ಕೆ ಅನಿವಾರ್ಯಕ್ಕೆ ಬಿದ್ದು ಚಾರು ಕೊರಳಿಗೆ ತಾಳಿ ಕಟ್ಟಿರೋ ರಾಮಾಚಾರಿ ಇದೀಗ ನಿಜ ಬೇರೆ ಇದೆ ಅಂತ ಗೊತ್ತಾದ್ರೆ ಹೇಗೆ ರಿಯಾಕ್ಟ್ ಆಗ್ತಾನೆ?
ಕಲರ್ಸ್ ಕನ್ನಡ (colors kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಮಾಚಾರಿ’ ಸೀರಿಯಲ್‌ಗೆ ಆರಂಭದಿಂದಲೇ ಫ್ಯಾನ್ ಫಾಲೋವಿಂಗ್ ಇದೆ. ರಾಮ್ ಜೀ ನಿರ್ದೇಶನದ ಈ ಸೀರಿಯಲ್ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಈ ಸೀರಿಯಲ್ ಹೀರೋ ರಾಮಾಚಾರಿ ಹಾಗೂ ನಾಯಕಿ ಚಾರುಲತಾ ಮದುವೆಯಾಗಿದ್ದಾರೆ. ಆದರೆ ಈ ರಹಸ್ಯ ಇನ್ನೂ ಕುಟುಂಬಸ್ಥರ ಮುಂದೆ ಬಹಿರಂಗವಾಗಿಲ್ಲ. ಚಾರುಲತಾ ಕೊರಳಿಗೆ ತಾಳಿ ಕಟ್ಟಿರುವ ಸತ್ಯವನ್ನ ಮನೆಯವರ ಮುಂದೆ ಹೇಗೆ ಹೇಳೋದು ಅಂತ ರಾಮಾಚಾರಿ ಯೋಚಿಸುತ್ತಿದ್ದಾನೆ. ಇತ್ತ ತನಗೆ ಕಣ್ಣು ಕಾಣುತ್ತಿರುವ ಸತ್ಯವನ್ನ ಘೋಷಿಸಲು ಚಾರುಲತಾ ಪ್ಲಾನ್ ಮಾಡಿದ್ದಾಳೆ.
ಹಾಗೆ ನೋಡಿದರೆ ಒಂದು ಕಾಲದಲ್ಲಿ ಮೈಯೆಲ್ಲ ದ್ವೇಷ ತುಂಬಿಕೊಂಡ ಹಾಗಿದ್ದವಳು ಚಾರುಲತಾ. ಉದ್ಯಮಿ ಜೈಶಂಕರ್ ಅವರದ್ದು ಶ್ರೀಮಂತ ಕುಟುಂಬ. ಅವರ ಪತ್ನಿ ಮಾನ್ಯತಾ ಹಾಗೂ ಪುತ್ರಿ ಚಾರುಲತಾಗೆ ಅಹಂಕಾರ, ಗರ್ವ, ದುಡ್ಡಿನ ಮದ. ಕೆಲವು ಸನ್ನಿವೇಶಗಳಿಂದಾಗಿ ಮಾನ್ಯತಾ, ಚಾರುಲತಾಗೆ ರಾಮಾಚಾರಿ ಮೇಲೆ ದ್ವೇಷ ಹುಟ್ಟಿಕೊಳ್ತು. ರಾಮಾಚಾರಿಯನ್ನ ಮಟ್ಟ ಹಾಕುವ ಉದ್ದೇಶದಿಂದ ಅಮ್ಮ-ಮಗಳು ಮಾಡಿದ ಕುತಂತ್ರ ಕೆಲಸಗಳು ಒಂದೆರಡಲ್ಲ. ಆದರೆ ಡ್ರಾಮಾ ಮೇಲೆ ಡ್ರಾಮಾ ನಡೆದು ಚಾರುವಿಗೆ ಚಾರಿ ಮೇಲೆ ಸಿಕ್ಕಾಪಟ್ಟೆ ಲವ್ವಾಗಿದೆ. ಅದೇ ಟೈಮಿಗೆ ರಾಮಾಚಾರಿ ದೆಸೆಯಿಂದ ಅವಳ ಕಣ್ಣೂ ಹೋಗಿದೆ. ಅವಳಿಗೆ ಕಣ್ಣು ಬಂದರೆ ರಾಮಾಚಾರಿ ಅವಳನ್ನು ಬಿಟ್ಟು ಹೋಗ್ತಾನೆ. ಬರಲಿಲ್ಲ ಅಂದರೆ ತನ್ನ ತಪ್ಪಿಗೆ ಕೊರಗುತ್ತ ಆದ್ರೂ ಅವಳ ಜೊತೆಗಿರ್ತಾನೆ. ಚಾರಿ ಮೇಲಿನ ಪ್ರೇಮದಿಂದ ಚಾರು ತನಗೆ ಕಣ್ಣು ಬಂದರೂ ತಾನಿನ್ನೂ ಅಂಧೆ ಅಂತ ನಟಿಸುತ್ತಿದ್ದಾಳೆ.
Ramachari: ಚಾರುಗೆ ಮಗ ತಾಳಿ ಕಟ್ಟಿರೋ ವಿಷ್ಯ ಕೇಳಿ ರಾಮಾಚಾರಿ ತಾಯಿಗೆ ಹಾರ್ಟ್ ಅಟ್ಯಾಕ್!
ಅವಳ ಅಮ್ಮ ಅವಳಿಗೆ ವಿಕಾಸ್ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ವಿಕೃತ ಮನಸ್ಸಿನ ವಿಕಾಸ್ ಪಶು ಕಾಮನೆ, ಕಿರುಕುಳವನ್ನು ಚಾರು ಹಲ್ಲುಕಚ್ಚಿ ಸಹಿಸುತ್ತಿದ್ದಾಳೆ. ಇತ್ತ ಚಾರುಲತಾಗೆ ರಾಮಾಚಾರಿ ತಾಳಿ ಕಟ್ಟಿದಂತೆ ಅಜ್ಜಿಗೆ ಕನಸು ಬಿದ್ದಿತ್ತು. ಅದಕ್ಕೇ ಅಜ್ಜಿ ಸಿಕ್ಕಾಪಟ್ಟೆ ಗರಂ ಆಗಿದ್ದರು. ಅಜ್ಜಿ ಆರ್ಭಟದಿಂದ ರಾಮಾಚಾರಿಗೆ ಗಾಬರಿ ಆಗಿದೆ. ಸತ್ಯವನ್ನ ಹೇಗೆ ಹೇಳೋದು ಅಂತ ದಿಕ್ಕೇ ತೋಚದಾಗಿದೆ. ಈ ಹೊತ್ತಿಗೆ ಆಂಜನೇಯ ಅಭಿಷೇಕ ಮಾಡಬೇಕಾಗಿ ಬಂದಿದೆ. ಬ್ರಹ್ಮಚಾರಿಗಳಷ್ಟೇ ಈ ಅಭಿಷೇಕ ಮಾಡಬೇಕು. ಈ ಹೊತ್ತಿಗೆ ಸುಳ್ಳು ಹೇಳಲು ಇಷ್ಟ ಪಡದ ರಾಮಾಚಾರಿ ತಾನು ಪೂಜೆ, ಅಭಿಷೇಕಕ್ಕೆ ಒಲ್ಲೆ ಅಂದಿದ್ದಾನೆ. ಕಾರಣ ಹೇಳಲು ಬಲವಂತಪಡಿಸಿದಾಗ ತಾನೀಗ ವಿವಾಹಿತ ಅನ್ನೋ ಸತ್ಯ ಬಾಯಿ ಬಿಟ್ಟಿದ್ದಾನೆ.
ಅತ್ತ ಚಾರುವೂ ತನಗೆ ಕಣ್ಣು ಕಾಣ್ತಿದೆ ಅನ್ನೋ ಸತ್ಯ ರಿವೀಲ್ ಮಾಡಲು ಮುಂದಾಗಿದ್ದಾಳೆ. ಮುಂದೇನಾಗುತ್ತೋ ಕಾದು ನೋಡಬೇಕು.
Lakshana serial: ಭೂಪತಿ ಮನೆ ಏನು ಧರ್ಮಛತ್ರನಾ? ಶ್ವೇತಾ ಯಾಕಿನ್ನೂ ಆ ಮನೇಲಿದ್ದಾಳೆ?