ಕಿರುತೆರೆಯ ಸಖತ್ ಕ್ಯೂಟ್‌ ಜೋಡಿ ಕವಿತಾ ಮತ್ತು ಚಂದನ್‌ ಮದ್ವೆಯಾಗಿ ಕೆಲವು ದಿನಗಳಾದವು. ಈಗಲೂ ಕವಿತಾ ತಮ್ಮ ಮದುವೆಯ ಕಲರ್‌ಫುಲ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇದ್ದಾರೆ. ಮದುವೆಯ ಸಿಹಿ ಮೆಮೊರಿಯನ್ನು ಮತ್ತೆ ಮತ್ತೆ ಮೆಲುಕು ಹಾಕೋ ಖುಷಿ ಕವಿತಾ ಅವರದ್ದು. ಇಷ್ಟೆಲ್ಲ ಆದ್ಮೇಲೆ ತಮ್ ಹನಿಮೂನ್ ವಿಚಾರ ಹೇಳದೇ ಇರ್ತಾರಾ.. ಯಾವ ಕಡೆ ಹನಿಮೂನ್‌ಗೆ ಹೋಗಬಹುದು ಈ ಬ್ಯೂಟಿಫುಲ್‌ ಜೋಡಿ? ಎನೀ ಗೆಸ್‌..

 ಚಂದನ್‌ ಮತ್ತು ಕವಿತಾ ಗೌಡ ಪರಸ್ಪರ ಭೇಟಿಯಾಗಿದ್ದು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ. ಅದರಲ್ಲಿ ಚಂದನ್‌ ಸಿಟಿಯ ಸ್ಮಾರ್ಟ್‌ ಬ್ಯುಸಿನೆಸ್‌ಮ್ಯಾನ್‌ ಆದರೆ ಕವಿತಾ ಲಕ್ಷ್ಮಿ ಅರ್ಥಾತ್‌ ಚಿನ್ನು ಅನ್ನೋ ಹಳ್ಳಿಯ ಮುಗ್ಧ ಹುಡುಗಿ ರೋಲ್ ಮಾಡಿದ್ರು. ಅದರಲ್ಲಿ ಚಿನ್ನುವಿನ ಇನ್ನೋಸೆಂಟ್‌ ಲುಕ್‌ ನೋಡಿ ಫಿದಾ ಆದ ಹುಡುಗರೆಷ್ಟೋ.. ಆಕಸ್ಮಾತ್‌ ಆಗಿ ಈ ಚಿನ್ನುಗೆ ತಾಳಿ ಕಟ್ಟೋ ಚಂದನ್ ಮುಂದೆ ಅನಿವಾರ್ಯವಾಗಿ ಗೊಂಬೆಯನ್ನು ವರಿಸಬೇಕಾಗುತ್ತೆ. ಈಕೆಯ ಬಗ್ಗೆ ವಿಶೇಷ ಮಮಕಾರ ಮುಂದುವರಿಯುತ್ತೆ.. ಹೀಗೆಲ್ಲ ಸಾಗೋ ಕಥೆ ಅದು. ಆದರೆ ಕ್ರಮೇಣ ಚಂದನ್‌ ಪಾತ್ರಕ್ಕೆ ಶೈನ್‌ ಶೆಟ್ಟಿ ಸೇರಿದಂತೆ ಹೊಸ ಹೊಸ ಹೀರೋಗಳು ಬರುತ್ತಾ ಹೋದರು. ಆದರೆ ಚಿನ್ನು ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದದ್ದು ಮಾತ್ರ ಶುರುವಿನ ಒರಿಜಿನಲ್‌ ಚಂದನ್‌.

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಗೆ ಕನ್ನಡತಿ ರಂಜನಿ ಫಿದಾ ...

ಅವರ ಸ್ನೇಹ ಎಷ್ಟೋ ಕಾಲ ಮುಂದುವರಿದು ಪ್ರೀತಿ ಆಯ್ತು. ಸೀರಿಯಲ್‌ ಟೀಮ್ ಜೊತೆಗೆ ಹೊರಗೆ ಓಡಾಡೋದು, ಬರ್ತ್‌ ಡೇ ಸರ್ಪೈಸ್ ವಿಸಿಟ್ ಕೊಡೋದು ಇತ್ಯಾದಿ ನಡೆಯುತ್ತಲೇ ಇತ್ತು. ಅದಕ್ಕಿಂತ ಮಜಾ ಅನಿಸಿದ್ದು ಇವರ ಟ್ರೆಕ್ಕಿಂಗ್. ಯಾವ್ಯಾವುದೋ ಬೆಟ್ಟ ಹತ್ತಿಳಿಯುತ್ತಾ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ ಮಾಡುತ್ತಾ ಇರ್ತಿದ್ದರು. ಒಂದು ಹಂತದಲ್ಲಿ ಚಂದನ್ ತಾನು ನಟಿಸುತ್ತಿದ್ದ ತೆಲುಗು ಸೀರಿಯಲ್‌ನಿಂದ ಹೊರಬಂದ್ರು. ಯಾಕೆ ಅಂತ ಕೇಳಿದ್ರೆ ಮದ್ವೆ ಆಗ್ತಿದ್ದೀನಿ ಅಂದರು. ಯಾರ ಜೊತೆಗೆ, ಕವಿತಾ ಜೊತೆಗಾ ಅಂದ್ರೆ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೇ ಮಾತಾಡಿದ್ರು. ಇದಾಗಿ ಸ್ಪಲ್ಪ ದಿನಕ್ಕೇ ಎಂಗೇಜ್‌ಮೆಂಟ್ ಆಯ್ತು. 

ಲಾಕ್‌ಡೌನ್‌ ಟೈಮ್‌ ಅಲ್ವಾ, ಇಂಥಾ ಜೋಡಿ ಅದ್ದೂರಿಯಾಗಿಯೇ ಮದುವೆ ಆಗ್ತಾರೆ. ಮದುವೆ ಪೋಸ್ಟ್‌ ಪೋನ್‌ ಆಗುತ್ತೆ ಅಂತೆಲ್ಲ ಮಾತು ಕೇಳಿ ಬಂದಿತ್ತು. ಆದರೆ ಈ ಜೋಡಿ ಸಿಂಪಲ್‌ ಆಗಿ ಮದುವೆ ಆದ್ರು. ಮದುವೆ ಆಗಿ ಆಗಲೇ ಕೆಲವು ದಿನಗಳಾದವು. ಈಗ ಕವಿತಾ ಗೌಡ ದಿನಕ್ಕೊಂದರ ಹಾಗೆ ಮದುವೆ ದಿನದ ಕಲರ್‌ಫುಲ್‌ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಹಾಗೆ ನೋಡಿದ್ರೆ ಇವರಿಬ್ಬರ ಮದುವೆ ಅವರ ಆಪ್ತವರ್ಗಕ್ಕೂ ಮಿಸ್ಸಿಂಗೇ. ಕೇವಲ ನಲವತ್ತು ಜನರಷ್ಟೇ ಮದುವೆಯಲ್ಲಿ ಭಾಗವಹಿಸಿದ್ದು. ಸೋ ಮದುವೆ ಹೇಗೆ ಕಲರ್‌ಫುಲ್‌ ಆಗಿರಬಹುದು ಅನ್ನೋ ಕುತೂಹಲ ಅಭಿಮಾನಿಗಳ ಜೊತೆಗೆ ಅವರ ಆಪ್ತೇಷ್ಟರು ಬಂಧುಗಳಿಗೂ ಇದ್ದೇ ಇರುತ್ತೆ. ಆ ಹಿನ್ನೆಲೆಯಲ್ಲಿ ಈ ಚಂದದ ಫೋಟೋಗಳು ಆ ಕುತೂಹಲ ತಣಿಸುವ ಹಾಗಿವೆ.

ಸೀರಿಯಲ್‌ನಲ್ಲಿ ಬರೀ ರೆಸಾರ್ಟ್ ಸೀನ್ಸ್, ದೊಡ್ಡೋರೆಲ್ಲ ಮಂಗಮಾಯ, ಏಕೆ? ...

ಆಪ್ತವಲಯದಲ್ಲಿ ಕೇಳಿಬಂದಿರುವ ಮಾತಿನ ಪ್ರಕಾರ ಈ ಜೋಡಿ ಲಾಕ್‌ಡೌನ್‌ ತೆರೆದು ಪರಿಸ್ಥಿತಿ ಸುಧಾರಿಸಿದ ಮೇಲೆ ಹನಿಮೂನ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ವಿದೇಶಕ್ಕೆ ಹನಿಮೂನ್‌ಗೆ ಹೋಗೋದು ಬಹುತೇಕ ಖಚಿತ. ಇವರಿಬ್ಬರೂ ಹಸಿರನ್ನು, ಬೆಟ್ಟ ಗುಡ್ಡಗಳನ್ನು ಬಹಳ ಇಷ್ಟ ಪಡುವ ಕಾರಣ ಸ್ವಿಜರ್‌ಲ್ಯಾಂಡ್‌ಗೆ ಹನಿಮೂನ್‌ ಟ್ರಿಪ್ ಹೋಗುವ ಸಾಧ್ಯತೆ ಇದೆ. ಅದು ಬಿಟ್ಟರೆ ಪೆರುವಿನಂಥಾ ಸುಂದರ ದೇಶಕ್ಕೆ ವಿಸಿಟ್‌ ಮಾಡಬಹುದು. ಅಷ್ಟರಲ್ಲಿ ಮಾಲ್ಡೀವ್ ಪ್ರವಾಸಿಗರಿಗೆ ಮುಕ್ತವಾಗಿದ್ದರೆ ಆ ಆಯ್ಕೆಯೂ ಇವರಿಗಿರುತ್ತೆ. 

ಅಂತೂ ಈ ಕವಿತಾ ಗೌಡ- ಚಂದನ್ ಅವರ ಸುಂದರ ಜೋಡಿ ಈಗ ಲಾಕ್‌ಡೌನ್ ಓಪನ್‌ ಆಗಿ ಪರಿಸ್ಥಿತಿ ಸುಧಾರಿಸೋದನ್ನೇ ಕಾಯುತ್ತಿದೆ ಅನ್ನಬಹುದು. 

ಅತೀ ಹೆಚ್ಚು ಸಂಭಾವನೆ ಪಡೆಯೋದು ಮೇಘಾ ಶೆಟ್ಟಿ..! ಕನ್ನಡ ಕಿರುತೆರೆ ನಟಿಯರ ವೇತನ ಎಷ್ಟಿದೆ? ...