ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗ ಕರೋಡ್‌ಪತಿ ಶೋನಲ್ಲಿ ಕನ್ನಡದ ಕತ್ತೆ, ಕುದುರೆ ಬಂದು ಹೋಗಿದೆ. ಸೊಸೆ ಮೇಲೆ ಇದನ್ನೆಲ್ಲ ಪ್ರಯೋಗಿಸುವಂತಿಲ್ಲ ಅಂತ ಮುಸಿ ನಕ್ಕಿದ್ದಾರೆ ಬಿಗ್ ಬಿ.
ಸೋನಿ ಎಂಟರ್‌ಟೇನ್‌ಮೆಂಟ್ ಟೆಲಿವಿಜನ್‌ನಲ್ಲಿ ಪ್ರಸಾರವಾಗುವ ದೇಶ ಎಂದೂ ಮರೆಯದ ಶೋ 'ಕೌನ್ ಬನೇಗ ಕರೋಡ್‌ಪತಿ'. ಕಳೆದ ವಾರ ಇಶಿತಾ ಗುಪ್ತ ಅನ್ನೋ ಬಾಲಕಿ ಕೋಟಿ ಗೆಲ್ತಾಳ ಅನ್ನೋ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಇತ್ತೀಚೆಗೆ ಈ ಶೋನಲ್ಲಿ ಬಾಗಲಕೋಟೆಯ ಚಾ ಮಾರುವ ಯುವಕನೊಬ್ಬ ಐವತ್ತು ಲಕ್ಷ ಗೆದ್ದು ದೇಶದ ಗಮನ ಸೆಳೆದಿದ್ದ. ಅಮಿತಾಬ್ ಬಚ್ಚನ್‌ಗೆ ಲೈಫು ನೀಡಿದ ಈ ಶೋನಲ್ಲಿ ಬಿಗ್‌ಬಿ ಆಗಾಗ ಜೋಕ್, ಫನ್ ಮಾಡುತ್ತಿರುತ್ತಾರೆ. ಸ್ಫರ್ಧಿಗಳ ಜೊತೆಗೆ ಬಹಳ ಸ್ನೇಹದಿಂದ ವ್ಯವಹರಿಸುತ್ತಾರೆ. ಅಂಥಾ ದೊಡ್ಡ ನಟನ ಮುಂದೆ ಕೂರುವುದಕ್ಕೆ ಥ್ರಿಲ್ ಆಗುವ ಸ್ಫರ್ಧಿಗಳಿಗೆ ಅವರು ಫ್ರೆಂಡ್ ಥರ ಮಾತನಾಡಿಸುತ್ತ ಬಹಳ ಕಂಫರ್ಟೇಬಲ್ ಆಗಿ ಮನೆಯ ಸದಸ್ಯನ ಹಾಗೆ ಬಿಹೇವ್ ಮಾಡಿದರೆ ಎಷ್ಟು ಖುಷಿ ಆಗಬಹುದು ಅಲ್ವಾ? ಅಂಥದ್ದೇ ಆಪ್ತತೆಯಲ್ಲಿ ಅಮಿತಾಬ್ ಕನ್ನಡ ಹಾಗೂ ತುಳು ಮಾತನಾಡುವ ಕುಟುಂಬದ ಜೊತೆ ಮಾತನಾಡಿದ್ದಾರೆ. ಅವರ ಮಗಳು ಪ್ರತಿ ಈ ಶೋನ ಸ್ಫರ್ಧಿ. ಜೂನಿಯರ್ ವಿಭಾಗದಲ್ಲಿ ಈ ಹುಡುಗಿ ಸ್ಫರ್ಧೆ ಮಾಡಿದ್ದಳು.
ಅಂದಹಾಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆಯೂ ಮಂಗಳೂರು ಮೂಲದವರು ಅನ್ನೋದನ್ನು ಮತ್ತೆ ಹೇಳಿದ್ರೆ ಐಶ್ವರ್ಯಾ ರೈ ಬಚ್ಚನ್ ಎನ್ನುವ ಅಂತಾರಾಷ್ಟ್ರೀಯ ಮಟ್ಟದ ನಟಿಗೆ ಅವಮಾನ ಮಾಡಿದ ಹಾಗಾಗಬಹುದು. ಆದರೆ ಸದ್ಯಕ್ಕಂತೂ ಅವರ ಫ್ಯಾಮಿಲಿ ಮ್ಯಾಟರ್ ಚರ್ಚೆ ಮಾಡಿ ಮಾಡಿ ಟ್ರೋಲಿಗರು ಸುಸ್ತಾಗಿ ಕೂತಿದ್ದಾರೆ. ಐಶ್ವರ್ಯಾ ಅಭಿಷೇಕ್ ಒಟ್ಟಿಗಿಲ್ಲ ಅಂತ ಮೀಡಿಯಾದಲ್ಲಿ ಸುದ್ದಿ ಮೇಲೆ ಸುದ್ದಿ ಆಗ್ತಿದ್ದ ಹಾಗೆ ಅವರಿಬ್ಬರೂ ಏರ್‌ಪೋರ್ಟಿನಲ್ಲೋ, ಯಾವುದೋ ಕಾರ್ಯಕ್ರಮದಲ್ಲೋ ಮಿಂಚಿನಂತೆ ಜೊತೆಗೆ ಕ್ಯಾಮರ ಮುಂದೆ ಕಾಣಿಸಿಕೊಳ್ತಾರೆ.
ಬಾಲಿವುಡ್ ಶಬಾನಾ ಆಜ್ಮಿ ಕಾಲಿಗೆ ಬಿದ್ದ ಸೌತ್ ಸ್ಟಾರ್ ಸೂರ್ಯನ ಹೆಂಡತಿ ಜ್ಯೋತಿಕಾ!
ಆಮೇಲೆ ಸುದ್ದಿಯೇ ಇರಲ್ಲ. ಇಬ್ಬರು ಐಶ್ ಹಾಗೂ ಅಭಿ ಸಪರೇಟ್ ಆದರು ಅಂತೆಲ್ಲ ಮೊನ್ನೆ ಧಾಂ ಧೂಂ ಸುದ್ದಿ ಆಯ್ತು. ಇದಕ್ಕೆ ಪೂರಕವಾಗಿ ಅಮಿತಾಬ್ ಸೋಷಲ್ ಮೀಡಿಯಾದಲ್ಲಿ ಐಶ್ವರ್ಯಾ ರೈಯನ್ನು ಅನ್ ಫಾಲೋ ಮಾಡಿದ್ದೂ ಆಯ್ತು. ಮೀಡಿಯಾದಲ್ಲಿ ಇವರ ಸಪರೇಶನ್‌ನ ಸುದ್ದಿ, ಅಭಿಷೇಕ್ ಬೇರೆ ನಟಿಯ ಜೊತೆ ರಿಲೇಶನ್‌ಶಿಪ್‌ನಲ್ಲಿರುವ ಗುಸು ಗುಸು ಎಲ್ಲ ಹರಿದಾಡಿ ಆಮೇಲೆ ಐಶ್ ಅಭಿ ಯಾರದೋ ಮದುವೆ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡು ಈ ಸುದ್ದಿ ಮಾಡಿದವರೇ ತಲೆ ಕೆಡಿಸಿಕೊಳ್ಳೋ ಹಾಗಾಯ್ತು.
ಬಾಯ್‌ಫ್ರೆಂಡ್ ಕ್ರೂರವಾಗಿ ಥಳಿಸಿದ ಆ ನಟಿಯ ನೆರವಿಗೆ ನಿಂತವಳು ಐಶ್ವರ್ಯ ರೈ ಮಾತ್ರ!
ಈ ಎಲ್ಲ ಪ್ರೊಸೆಸ್ ನಡುವೆಯೇ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಮುಂದೆ ಕೂತ ಕನ್ನಡಿಗ ಹುಡುಗಿಯ ಮಾತು ಬಹಳ ವೈರಲ್ ಆಗ್ತಿದೆ. ಇದರಲ್ಲಿ ಬಿಗ್ ಬಿ ಪ್ರಶ್ನೆಗಳನ್ನು ಎದುರಿಸಲು ಹಾಟ್ ಸೀಟಲ್ಲಿ ಕೂತ ಮಗಳು ಪ್ರತಿಗೆ ಅವಳ ತಂದೆ, 'ಆಲ್ ದಿ ಬೆಸ್ಟ್ ಕುದುರೆ' ಅಂತ ವಿಶ್ ಮಾಡ್ತಾರೆ. ಆಗ ಅಮಿತಾಬ್ ಅವರ ಮಾತು ಅರ್ಥ ಆಗದೆ ತಲೆ ಕೆಡಿಸಿಕೊಳ್ತಾರೆ. ಆಗ ಕುದುರೆ ಎಂಬುದು ಕನ್ನಡ ಪದ. ಇಂಗ್ಲೀಶ್‌ನ ಹಾರ್ಸ್ ಇದು ಅಂತ ಆ ಹುಡುಗಿ ಹೇಳ್ತಾಳೆ. ಅದೇ ಥರ ತನ್ನನ್ನು ಅಪ್ಪ ಕುಶಾಲಿನಲ್ಲಿ ಕತ್ತೆ ಅಂತಲೂ ಕರೀತಾರೆ ಅಂತಲೂ ಹೇಳ್ತಾಳೆ. ಎರಡು ಕನ್ನಡ ಪದ ಕೇಳಿದ ಅಮಿತಾಬ್, ಇದು ತುಳುವಿನಲ್ಲೂ ಬಳಕೆಯಲ್ಲಿದೆ ಅಲ್ವಾ ಅಂತಾರೆ. ಹೌದು ಅನ್ನೋ ಮಾತು ಬರುತ್ತೆ. ಆಗ ನನ್ನ ಸೊಸೆ ತುಳು ನಾಡಿನವಳು ಅನ್ನುವ ಬಿಗ್‌ಬಿ, ತಮಾಷೆಯಾಗಿ ಅವಳನ್ನು ಈ ಹೆಸರಿನಿಂದ ಅಂತೂ ನಾನು ಕರೆಯೋದಕ್ಕೆ ಆಗಲ್ಲ ಅಂತ ನಗೆಯಾಡ್ತಾರೆ. ಅವರ ಈ ಮಾತು ಸಖತ್ ವೈರಲ್ ಆಗಿದೆ.
