ಬಿಗ್ ಬಾಸ್ ಕನ್ನಡ ೧೧ರ ಗ್ರ್ಯಾಂಡ್ ಫಿನಾಲೆಯಲ್ಲಿ ಹನುಮಂತು ಜನಪ್ರಿಯ ಸ್ಪರ್ಧಿಯಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದರೂ ಫೈನಲ್ ತಲುಪಿದ್ದಾರೆ. ಆದರೆ, ಹಿಂದಿನ ಸೀಸನ್‌ಗಳ ಫಲಿತಾಂಶಗಳನ್ನು ಗಮನಿಸಿದರೆ, ಗೆಲುವು ಖಚಿತವಲ್ಲ. ಮೋಕ್ಷಿತಾ ಅಥವಾ ತ್ರಿವಿಕ್ರಮ ಕೂಡ ಪ್ರಬಲ ಸ್ಪರ್ಧಿಗಳು. ಕಲರ್ಸ್ ಕನ್ನಡದ ಅಧಿಕೃತ ಘೋಷಣೆಯೇ ಅಂತಿಮ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಗೇಮ್ ಶೋ ಮುಕ್ತಾಯವಾಗಿ ಇದೀಗ ಗ್ರಾಂಡ್ ಫಿನಾಲೆ ಹಂತದಲ್ಲಿ ಇರುವುದು ಗೊತ್ತೇ ಇದೆ. ಉಳಿದೆಲ್ಲ ಸ್ಪರ್ಧಿಗಳು ಮನೆಯೊಂದ ಹೊರಗೆ ಹೋಗಾಯ್ತು, ಇರೋ ಐದೇ ಐದು ಜನರಲ್ಲಿ ಗೆಲ್ಲೋದು ಯಾರು ಎಂಬುದಷ್ಟೇ ಸದ್ಯ ಪ್ರಶ್ನೆಯಾಗಿ ಉಳಿದಿದೆ. ಆದರೆ, ಸೋಷಿಯಲ್ ಮೀಡಿಯಾ ಹಾಗೂ ಹಳ್ಳಿಹಳ್ಳಿಯ ಹರಟೆಕಟ್ಟೆಯಲ್ಲಿ ಬಿಗ್ ಬಾಸ್ ವಿನ್ನರ್ ಅವ್ರೇ ಅಂತಿದಾರೆ.
ಕಿರುತೆರೆ ವೀಕ್ಷಕರು, ಬಿಗ್ ಬಾಸ್ ಪ್ರಿಯರು ಹೇಳುತ್ತಿರೋ ಹೆಸರು ಹನುಮಂತ (Hanumantha) ಎಂಬುದನ್ನು ಸಪರೇಟಾಗಿ ಹೇಳಬೇಕಿಲ್ಲ. ವೈಯ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಹೊಕ್ಕ ಹನುಮಂತು, ಇಲ್ಲಿಯವರೆಗೆ, ಅಂದರೆ ಗ್ಯಾಂಡ್ ಫಿನಾಲೆಗೆ ಪ್ರವೇಶ ಪಡೆಯುವ ಮೊದಲ ವ್ಯಕ್ತಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಕಲ್ಪನೆಗೂ ಮೀರಿದ ಸಂಗತಿ ನಡೆದೇ ಹೋಯ್ತು. ಸದ್ಯ ಫೈನಲಿಸ್ಟ್ ಆಗಿರುವ 5 ಜನರಲ್ಲಿ ಹನುಮಂತನೇ ಗೆಲ್ಲುವ ಫೇವರೆಟ್ ಎನಿಸಿದ್ದಾನೆ. ಆದರೆ..
ಬಿಗ್ಬಾಸ್ ಚೈತ್ರಾಗೆ ಆಕಳ ಕರುವಿನ ಮುದ್ದು ಸ್ವಾಗತ: ಯಜಮಾನಿಗೆ ಪ್ರೀತಿಯ ಧಾರೆ- ವಿಡಿಯೋ ವೈರಲ್
ಹೌದು, ಹಲವರಲ್ಲಿ ಈ 'ರೇ..' ಸಾಮ್ರಾಜ್ಯ ಮನೆಮಾಡಿದೆ. ಕಾರಣ, ಕಳೆದ 10 ಸೀಸನ್ ನೋಡಿದ ಬಿಗ್ ಬಾಸ್ ವೀಕ್ಷಕರಲ್ಲಿ ಹಲವರಿಗೆ ಹನುಮಂತ ಗೆಲ್ಲೋದರಲ್ಲಿ ಅನುಮಾನವಿದೆ. ಏಕೆಂದರೆ, ಮೊದಲ ಸೀಸನ್ ಉದಾಹರಣೆ ಬೆಸ್ಟ್ ಸಾಕ್ಷಿ ಅಂತಾರೆ. ಸೀಸನ್ ಒಂದರಲ್ಲಿ ಅರುಣ್ ಸಾಗರ್ ಗೆಲ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಗೆದ್ದಿದ್ದು ವಿಜಯ ರಾಘವೇಂದ್ರ. ಇನ್ನೂ ಹಲವು ಸೀಸನ್‌ಗಳಲ್ಲಿ ಹೀಗೇ ಆಗಿವೆ.
ಕಳೆದ ಸೀಸನ್‌ನಲ್ಲಿ ಕೂಡ ಹಲವರು ಡ್ರೋನ್ ಪ್ರತಾಪ್ ಗೆಲ್ತಾರೆ ಎಂದು ಬೆಟ್ ಕಟ್ಟಿದವರೂ ಇದ್ದರು. ಆದರೆ, ಕಾರ್ತಿಕ್ ಮಹೇಶ್ ಗೆದ್ದು ಟ್ರೋಫಿ ಎತ್ತಿದ್ದಾರೆ. ಅದೇ ರೀತಿ ಈಗಲೂ ಆಗುಬಹುದು. ಮನರಂಜನೆ ಕೊಟ್ಟವರೇ ಗೆಲ್ತಾರೆ ಎಂದೇನೂ ಇಲ್ಲ, ಬೇರೆ ಬೇರೆ ಆಯಾಮಗಳಲ್ಲಿ ಬೇರೆ ಒಬ್ಬರು ಗೆಲ್ಲಲೂಬಹುದು ಅಂತಿದಾರೆ ಬಿಗ್ ಬಾಸ್ ಪಂಡಿತರು. ಏನೇನೋ ಲೆಕ್ಕಾಚಾರ ಮಾಡಿ ಕೆಲವರು ಹೇಳೋ ಪ್ರಕಾರ ವಿನ್ನರ್ ಮೋಕ್ಷಿತಾ.
ಗೀತಕ್ಕ..: ಆಪರೇಷನ್ ನಂತ್ರ ಎಲ್ಲಾ ಸರಿಹೋಗಿದೆ ಅಂತ ಹೇಳಿ ಮತ್ತೆ ಹಾರ್ಟ್ ಸಮಸ್ಯೆ ಇದೆ ಅಂದ್ರು!
ಇನ್ನೂ ಹಲವರು ಮೋಕ್ಷಿತಾ ಬದಲು ತ್ರಿವಿಕ್ರಮ ಅಂತಿದಾರೆ. ಹನುಮಂತ ಏನಿದ್ರೂ 'ರನ್ನರ್ ಅಪ್' ಆಗ್ತಾನೆ ಅಷ್ಟೇ. ಮೋಕ್ಷಿತಾ ಅಥವಾ ತ್ರಿವಿಕ್ರಮ ಗೆಲುವು ನಿಶ್ಚಿತ ಅಂತಿದಾರೆ ಬಹಳಷ್ಟು ಮಂದಿ. ಕಾರಣಗಳಲ್ಲಿ ಒಂದು, ಫಸ್ಟ್ ಆಫ್ ಆಲ್ ಹನುಮಂತು ವೈಲ್ಡ್ ಕಾರ್ಡ್ ಎಂಟ್ರಿ, ಜೊತೆಗೆ ಮೊದಲು ಆಯ್ಕೆಯಾದ ಸ್ಪರ್ಧಿ ಅಲ್ಲ. ಜೊತೆಗೆ, ಮನರಂಜನೆ ಕೊಡೋದು ಬೇರೆ, ಗೆಲ್ಲುವ ಸಾಮರ್ಥ್ಯವೇ ಬೇರೆ.
ಅಷ್ಟಕ್ಕೂ, 'ಹನುಮಂತ ಗೆದ್ದಿರುವುದು ಸೋಷಿಯಲ್ ಮೀಡಿಯಾದಲ್ಲಿ ಹೊರತೂ ಕಲರ್ಸ್ ಕನ್ನಡದ ಬಿಗ್ ಬಾಸ್ ಶೋ ಘೋಷಣೆಯಲ್ಲಿ ಅಲ್ಲ..' ಅಂತಿದಾರೆ ಬಹಳಷ್ಟು ಮಂದಿ. ಪಂಚಾಯ್ತಿ ಕಟ್ಟೆ, ಅರಳೀಕಟ್ಟೆ, ಹಳ್ಳಿ ಕಟ್ಟೆ, ಅಥವಾ ಸೋಷಿಯಲ್ ಮೀಡಿಯಾ ಏನೇ ಹೇಳಿದ್ರೂ ಕಲರ್ಸ್ ಕನ್ನಡ ಅಧಿಕೃತ ಘೋಷಣೆ ಮಾಡುವವರೆಗೆ ಕಾಯಲೇಬೇಕು. ಬಿಗ್ ಬಾಸ್‌ನಿಂದ ಅನೌನ್ಸ್‌ಮೆಂಟ್ ಆದವರೇ ಕಟ್ಟಕಡೆಗೆ 'ವಿನ್ನರ್' ತಾನೇ?
'ಅದು ಕೊಡ್ತೀಯಾ' ಎಂದು ಕೇಳುವವರ ಮಧ್ಯೆ ಹುಚ್ಚ ವೆಂಕಟ್ ಒಳ್ಳೆಯ ವ್ಯಕ್ತಿ: ಸೌಮ್ಯಾ ರಾವ್!
