ನಟಿ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ಭವ್ಯಾ ಹೊಸ ಲುಕ್ ಗೆ ಫ್ಯಾನ್ಸ್ ಖುಷಿಯಾಗಿದ್ದಾರೆ. 

ಸದ್ಯ ಕರ್ಣ ಸೀರಿಯಲ್ (karna serial) ವಿವಾದದಿಂದ ಭವ್ಯಾ ಗೌಡ (Bhavya Gowda) ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡ (Colors Kannada)ದ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನು ಭವ್ಯಾ ಗೌಡ ಮುರಿದಿದ್ದ ಕಾರಣ, ಝೀ ಕನ್ನಡದಲ್ಲಿ ಪ್ರಸಾರ ಆಗ್ಬೇಕಿದ್ದ ಕರ್ಣ ಸೀರಿಯಲ್ ಗೆ ಬ್ರೇಕ್ ಬಿದ್ದಿತ್ತು. ಜೂನ್ 16 ರಿಂದ ಕರ್ಣ ಸೀರಿಯಲ್ ಪ್ರಸಾರ ಆಗುತ್ತೆ ಅಂತ ತುದಿಗಾಲಿನಲ್ಲಿ ಕುಳಿತಿದ್ದ ವೀಕ್ಷಕರಿಗೆ ಅದೇ ದಿನ ಮಾರ್ನಿಂಗ್ ವಾಹಿನಿ ಶಾಕಿಂಗ್ ಸುದ್ದಿ ನೀಡಿತ್ತು. ಅದಾದ್ಮೇಲೆ ಈಗ ಜೀ 5 ನಲ್ಲಿ ಕರ್ಣ ಸೀರಿಯಲ್ ಪ್ರಸಾರ ಆರಂಭಿಸಿತ್ತು. ಈಗಜೀ ಕನ್ನಡದಲ್ಲೂ ಕರ್ಣ ಸೀರಿಯಲ್ ಬರ್ತಿದೆ. ಸೀರಿಯಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಭವ್ಯಾ ಗೌಡ ಈಗ ಕಿವಿ ಚುಚ್ಚಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿವಿ ಚುಚ್ಚಿಸಿಕೊಳ್ಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಚಂದದ ಸಿಲ್ಕ್ ಸೀರೆಯುಟ್ಟು, ಸುಂದರವಾಗಿರುವ ನೆಕ್ಲೇಸ್ ಧರಿಸಿ ಗೊಂಬೆಯಂತೆ ಅಲಂಕಾರಗೊಂಡಿರುವ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಳ್ತಿದ್ದಾರೆ. ಅವರ ಮುಖದಲ್ಲಿ ಟೆನ್ಷನ್ ಸ್ಪಷ್ಟವಾಗಿ ಕಾಣ್ತಿದೆ. ಕೈ ಮುಗಿದು, ಕಣ್ಣು ಮುಚ್ಚಿರುವ ಅವರು ಒಂದು ಬುಲೆಟ್ ಬೀಳ್ತಿದ್ದಂತೆ ಅಯ್ಯೋ, ಅಮ್ಮ ಅಂತ ಕಿರುಚಿಕೊಳ್ತಾರೆ. ಅವ್ರ ಹಿಂದೆ ನಿಂತಿದ್ದ ಅಮ್ಮ, ನಗ್ತಿರೋದನ್ನು ವಿಡಿಯೋದಲ್ಲಿ ನೀವು ಕಾಣ್ಬಹುದು. ಮತ್ತೊಂದು ಕಿವಿ ಚುಚ್ಚುವಾಗ್ಲೂ ಭವ್ಯಾ ಗೌಡ ಕಿರುಚಿಕೊಳ್ತಾರೆ. ಅಯ್ಯೋ, ಉರಿ ಅಂತಾರೆ. ಕಿವಿ ಹಿಡಿದುಕೊಂಡು ತಲೆ ತಗ್ಗಿಸಿರೋದನ್ನು ನೀಡಿದ್ರೆ ಭವ್ಯ ಗೌಡ ಸಾಕಷ್ಟು ನೋವು ತಿಂದಿರೋದು ಸ್ಪಷ್ಟ. ಅವರ ಮುಖ ಉರಿಗೆ ಕೆಂಪಾಗಿದೆ. ಆದ್ರೆ ಹೊಸ ಲುಕ್ ನಲ್ಲಿ ಭವ್ಯಾ ಗೌಡ ಸೌಂದರ್ಯ ಡಬಲ್ ಆಗಿದೆ.

ಈ ವಿಡಿಯೋ ನೋಡಿದ ವೀಕ್ಷಕರು ಹಿಂದೆ ನಿಂತಿದ್ದ ಅಮ್ಮನನ್ನು ಗಮನಿಸಿದ್ದಾರೆ. ಅಮ್ಮ, ಮಗಳು ಕಿವಿ ಚುಚ್ಚಿಸಿಕೊಂಡಿದ್ದನ್ನು ನೋಡಿ ಖುಷಿಯಾಗಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಂದು ಕಿವಿ ಚುಚ್ಚಿಕೊಳ್ಳುವಾಗ ಭವ್ಯ ಕಿರುಚಿದ್ದನ್ನು ಕೇಳಿ ಹಿಂದಿದ್ದ ಸಿಬ್ಬಂದಿ ಬೆಚ್ಚಿದ್ದಾರೆ. ಅದು ಎಲ್ಲಕ್ಕಿಂತ ಕ್ಯೂಟ್ ಆಗಿತ್ತು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮುದ್ದು, ಬ್ಯೂಟಿಫುಲ್ ಎನ್ನುವ ಕಮೆಂಟ್ ಮಧ್ಯೆ ಕೆಲವರು, ಭವ್ಯಾ ಗೌಡ, ಮದುವೆಗೆ ರೆಡಿ ಆಗ್ತಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ.

ಬಿಗ್ ಬಾಸ್ 11 ರ ನಂತ್ರ ಭವ್ಯಾ ಗೌಡ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾವುದೇ ರಿಯಾಲಿಟಿ ಶೋನಲ್ಲೂ ಭವ್ಯಾ ಇರಲಿಲ್ಲ. ಭವ್ಯಾ ಫ್ಯಾನ್ಸ್, ಅವರನ್ನು ಮಿಸ್ ಮಾಡಿಕೊಳ್ತಿದ್ದರು. ಕರ್ಣ ಸೀರಿಯಲ್ ಬರ್ತಿದೆ ಎಂದಾಗ್ಲೇ ಅನೇಕರು ಭವ್ಯಾ ಗೌಡ ಹೀರೋಯಿನ್ ಆಗ್ಬೇಕು ಅಂತ ತಮ್ಮ ವೋಟು ಹಾಕಿದ್ದರು. ನಂತ್ರ ಭವ್ಯಾ ಗೌಡ, ಫ್ಯಾನ್ಸ್ ನಿರೀಕ್ಷೆಯಂತೆ ಖುಷಿ ಸುದ್ದಿ ಹಂಚಿಕೊಂಡಿದ್ದರು. ಕರ್ಣ ಸೀರಿಯಲ್ ಪ್ರೋಮೋ ಸಾಕಷ್ಟು ವೈರಲ್ ಆಗಿತ್ತು. ಆದ್ರೆ ಭವ್ಯಾ ಗೌಡ ಹಾಗೂ ಕಲರ್ಸ್ ಕನ್ನಡ ಮಧ್ಯೆ ನಡೆದ ಒಪ್ಪಂದದಿಂದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿತ್ತು. ಭವ್ಯ ಗೌಡ, ಕರ್ಣ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಎನ್ನುವ ಅನುಮಾನ ಕಾಡಿತ್ತು. ಈಗ ಎಲ್ಲ ಸರಿಯಾದಂತಿದೆ. ಬಿಗ್ ಬಾಸ್ ನಂತ್ರ ಕೆಲ ಸಮಯ ಭವ್ಯ ಗೌಡ ಪ್ರತಿಸ್ಪರ್ಧಿ ಚಾನೆಲ್ ನಲ್ಲಿ ಕಾಣಿಸಿಕೊಳ್ಬಾರದು ಎನ್ನುವ ಒಪ್ಪಂದ ಇತ್ತು. ಅದನ್ನು ಭವ್ಯಾ ಮೀರಿದ್ದರು. ಹಾಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಭವ್ಯಾ ಗೌಡ, ಬಿಗ್ ಬಾಸ್ ಸಂಬಳವನ್ನು ವಾಪಸ್ ಮಾಡಿ, ಕೇಸ್ ನಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಈಗ ಕರ್ಣ ಸೀರಿಯಲ್ ಪ್ರಸಾರವಾಗ್ತಿದೆ. ಕರ್ಣ ಸೀರಿಯಲ್ ನಲ್ಲಿ ಭವ್ಯಾ ನಿಧಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಕರ್ಣನ ಸ್ಟುಡೆಂಟ್ ಆಗಿರುವ ನಿಧಿ, ಮೇಸ್ಟ್ರನ್ನೇ ಪ್ರೀತಿ ಮಾಡ್ತಿದ್ದಾಳೆ. ಕರ್ಣನ ಕಣ್ಣಿಗೆ ಆಗಾಗ ಬೀಳ್ತಿರುವ ನಿಧಿ ಯಾವಾಗ ಕರ್ಣನಿಗೆ ಪ್ರಪೋಸ್ ಮಾಡ್ತಾರೆ ಎಂಬ ಕುತೂಹಲದಲ್ಲಿ ಫ್ಯಾನ್ಸ್ ಇದ್ದಾರೆ.

View post on Instagram