ಸಾವಿಗೆ ಶರಣಾದ ನಟಿ ಶೋಭಿತಾ ಶಿವಣ್ಣ ಎಂಥ ಹುಡುಗಿ ಆಗಿದ್ದಳು?
ಸಾವಿಗೆ ಶರಣಾದ ಕನ್ನಡದ ಕಿರುತೆರೆ ಹಾಗೂ ಸಿನಿಮಾ ನಟಿ ಶೋಭಿತಾ ಶಿವಣ್ಣ ಬಗ್ಗೆ ಸಹಕಲಾವಿದರು ಒಂದೊಂದೇ ಮಾಹಿತಿ ಬಿಚ್ಚಿಡುತ್ತಿದ್ದಾರೆ. ಬ್ರಹ್ಮಗಂಟು, ನಿನ್ನಿಂದಲೇ, ಗಾಳಿಪಟ ಸೇರಿದಂತೆ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಶಿವಣ್ಣ ಎಂಥ ಹುಡುಗಿ ಆಗಿದ್ದರು ಎಂದು ಅವರ ಸಹಕಲಾವಿದರು ಹೇಳಿದ್ದಾರೆ...
ನವೆಂಬರ್ 30ರ ಮಧ್ಯರಾತ್ರಿ ಸಾವಿಗೆ ಶರಣಾದ ಕನ್ನಡದ ಕಿರುತೆರೆ ಹಾಗೂ ಸಿನಿಮಾ ನಟಿ ಶೋಭಿತಾ ಶಿವಣ್ಣ (Shobitha Shivanna) ಬಗ್ಗೆ ಸಹಕಲಾವಿದರು ಒಂದೊಂದೇ ಮಾಹಿತಿ ಬಿಚ್ಚಿಡುತ್ತಿದ್ದಾರೆ. ಬ್ರಹ್ಮಗಂಟು, ನಿನ್ನಿಂದಲೇ, ಗಾಳಿಪಟ, ದೀಪವು ನಿನ್ನದೆ ಗಾಳಿಯು ನಿನ್ನದೆ ಸೇರಿದಂತೆ ಹಲವು ಧಾರಾವಾಹಿಗಳು, ಎರಡೊಂದ್ಲಾ ಮೂರು, ಎಟಿಎಮ್, ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಶಿವಪ್ಪ ಅವರು ತಮ್ಮ ಗಂಡನ ಮನೆಯ ಅಪಾರ್ಟ್‌ಮೆಂಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಶೋಭಿತಾ ಎಂಥ ಹುಡುಗಿ ಆಗಿದ್ದರು ಎಂದು ಹೇಳಿದ್ದಾರೆ ಅವರ ಸಹಕಲಾವಿದರೊಬ್ಬರು!
'ಶೋಭಿತಾ ಹಲವು ಸೀರಿಯಲ್ ಹಾಗೂ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ನಟಿಯಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಕನಸಿತ್ತು. ಧಾರಾವಾಹಿಯಲ್ಲಿ ಮುಖ್ಯ ನಾಯಕಿಯಾಗಿ ನಟಿಸುವ ಕನಸಿತ್ತು ಹಾಗು ಸಿನಿಮಾದಲ್ಲೂ ಉತ್ತಮ ನಟಿಯಾಗಿ ಕನಸಿತ್ತು. ಕೆಲಸದ ವಿಷಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಡೆಡಿಕೇಶನ್ ಇತ್ತು. ಶೂಟಿಂಗ್ ಸೆಟ್‌ನಲ್ಲಿ ಎಲ್ಲರೊಂದಿಗೆ ಮಾತನಾಡುತ್ತ ಬೇರೆಯವರು ಕಷ್ಟ ಹೇಳಿಕೊಂಡಾಗ ಮರುಗುತ್ತಿದ್ದರು. ಸಾಕಷ್ಟು ಬಾರಿ ಪರಿಹಾರವನ್ನೂ ಸೂಚಿಸುತ್ತಿದ್ದರು. ಆದರೆ, ತಮ್ಮ ಕಷ್ಟವನ್ನು ಯಾವತ್ತೂ ಹೇಳಿಕೊಂಡವರಲ್ಲ..'
ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!
ಮತ್ತೊಂದು ಸಂಗತಿ ಎಂದರೆ, ಯಾವತ್ತೂ ಯಾರದೇ ಬಗ್ಗೆ ಗಾಸಿಪ್ ಮಾಡುತ್ತಿರಲಿಲ್ಲ. ಬೇರೆಯವರು ಯಾರೋ ಯಾರ ಬಗ್ಗೆಯೋ ಮಾತನಾಡುತ್ತಿದ್ದರೂ ಅದಕ್ಕೆ ರಿಯಾಕ್ಟ್ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಯಾರೋ ಏನೋ ಹೇಳಿದ್ದಾರಂತೆ ಅಂತ ಯಾರೋ ಮಾತನಾಡುತ್ತಿದ್ದರೆ, ನಿನಗೆ ಗೊತ್ತ ಅವರು ಹಾಗೆ ಹೇಳಿದ್ದಾರೆ ಅಂತ? ನಿಮಗೆ ಅವ್ರು ಹೇಳಿದ್ದಾರೆ ಅಷ್ಟೇ ಅಲ್ವಾ? ಅವೆಲ್ಲಾ ನಂಬಿ ಏನೋ ಮಾತಾಡೋಕೆ ಹೋಗ್ಬೇಡಿ.. ನಿಮಗೇ ಹೇಳಿದಿದ್ರೆ ಮಾತ್ರ ಮಾತಾಡಿ, ರಿಯಾಕ್ಟ್ ಮಾಡಿ. ಎನ್ನುತ್ತಿದ್ದರು' ಎಂದಿದ್ದಾರೆ ಸಹಕಲಾವಿದರು.
ಬೇರೆಯವರ ಸಮಸ್ಯೆ ಆಲಿಸುತ್ತಿದ್ದರು, ಪರಿಹಾರ ಹೇಳುತ್ತಿದ್ದರು. ಆದರೆ ಆ ಸಂಗತಿಯನ್ನು ಮೂರನೆಯವರ ಜೊತೆ ಹಂಚಿಕೊಳ್ಳುತ್ತಿರಲಿಲ್ಲ. ತಮ್ಮ ಸಂಗತಿಯನ್ನು ಯಾರೊಂದಿಗೂ ಸ್ವಲ್ಪವೂ ಹಂಚಿಕೊಳ್ಳುತ್ತಿರಲಿಲ್ಲ ಎಂಬುದೇ ಅವರಲ್ಲಿರುವ ವಿಶೇಷ ಸಂಗತಿಯಾಗಿತ್ತು ಎಂದಿದ್ದಾರೆ ಸಹಕಲಾವಿದ ನಟ ಚಂದು. ಅದರಂತೆ, ಬ್ರಹ್ಮಗಂಟು ಸೀರಿಯಲ್ ಕಲಾವಿದರೂ ಸಹ ಅದೇ ಮಾತನ್ನು ಬೇರೆ ರೀತಿಯಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ, ತಾವಾಯ್ತು ತಮ್ಮ ಕೆಲಸವಾಯ್ತು ಎಂಬಂತೆ ಇದ್ದರು ಎನ್ನಲಾಗುತ್ತಿದೆ. ಜೊತೆಗೆ, ಗಾಸಿಪ್ ಪ್ರಿಯೆ ಅಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ.
ಸ್ವಂತ ಸೀಕ್ರೆಟ್ ಬಿಚ್ಚಿಟ್ಟ ಶ್ರೀಮುರಳಿ, 'ನೆಕ್ಸ್ಟ್ ಲೆವೆಲ್' ಅಂದಿಲ್ಲ ಅಂದ್ರೆ ಬಘೀರನ ಮೇಲಾಣೆ!
ಏನಾದರೇನು, ಆಗಬಾರದ್ದು ಆಗಿಹೋಗಿದೆ ಎನ್ನಬಹುದು. ಅದೇನು ಸಮಸ್ಯೆಯಿಂದ ಬಳಲುತ್ತಿದ್ದರೋ ಏನೋ, ಖಿನ್ನತೆಗೆ ಜಾರಿದ್ದರು ಎನ್ನಲಾಗುತ್ತಿದೆ. ಯಾರೊಂದಿಗೂ ತಮ್ಮ ಸಮಸ್ಯೆ ಹೇಳಿಕೊಂಡಿಲ್ಲ ಎನ್ನಲಾಗುತ್ತಿದೆ. ಎರಡೇ ಎರಡು ವಾಕ್ಯಗಳ ಡೆತ್‌ನೋಟ್ ಸಿಕ್ಕಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ, ಕಾಣಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ ನಟಿ ಶೋಭಿತಾ ಶಿವಣ್ಣ.