ಸ್ವಂತ ಸೀಕ್ರೆಟ್ ಬಿಚ್ಚಿಟ್ಟ ಶ್ರೀಮುರಳಿ, 'ನೆಕ್ಸ್ಟ್ ಲೆವೆಲ್' ಅಂದಿಲ್ಲ ಅಂದ್ರೆ ಬಘೀರನ ಮೇಲಾಣೆ!

ದೊಡ್ಡ ಮಾಮ ಡಾ ರಾಜ್‌ಕುಮಾರ್ ಅವರ ಮನೆಗೆ ಹೋಗೋದು, ಅವರ ಜೊತೆ ಒಡನಾಡೋಡುದು ಇವೆಲ್ಲಾ ನಮಗೆ ಸಾಮಾನ್ಯ ಸಂಗತಿಗಳೇ ಆಗಿದ್ದವು. ನನ್ನ ಅಣ್ಣ ಚಿಕ್ಕವನಿದ್ದಾಗಲೇ ನಟನೆ ಮಾಡಿ, ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದವನು. ಆದರೆ, ಮನೆಯಲ್ಲಿ ಸಾಮಾನ್ಯರಂತೆ ಇರುತ್ತಿದ್ದೆವು...

Sandalwood actor Sri Murali talks about dr rajkumar and puneeth rajkumar srb

'ಬಘೀರ' ಚಿತ್ರದ ಮೂಲಕ ಇತ್ತೀಚಿಗಷ್ಟೇ ತೆರೆಯ ಮೇಲೆ 'ದರ್ಶನ' ಕೊಟ್ಟಿದ್ದ ನಟ ಶ್ರೀಮುರಳಿ (Srimurali) ಅವರು ಮಾತನಾಡಿರೊ ಸಂದರ್ಶನವೊಂದು ವೈರಲ್ ಆಗುತ್ತಿದೆ. ರಾಪಿಡ್ ರಶ್ಮಿ (Rapid Rashmi) ಅದರಲ್ಲಿ ಅವರು ಹತ್ತು ಹಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅವರ ದೊಡ್ಡ ಮಾಮ ಅಂದರೆ, ಡಾ ರಾಜ್‌ಕುಮಾರ್ ಅವರ ಬಗ್ಗೆ ಸಹ ಮಾತನಾಡಿದ್ದಾರೆ. ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಎಲ್ಲರ ಬಗ್ಗೆಯೂ ಮಾತನಾಡಿದ್ದು, ಅಲ್ಲಿ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

ಹಾಗಿದ್ರೆ ನಟ ಶ್ರೀಮುರಳಿ ಅವರು ಏನಂದಿದ್ದಾರೆ? ಇಲ್ಲಿದೆ ನೋಡಿ.. 'ನಾವೆಲ್ಲ ಚಿಕ್ಕ ವಯಸ್ಸಿನ ಹುಡುಗರು ಅಂದು ಸುಮಾರು ಮೈವತ್ತು ಜನರು ಒಟ್ಟಿಗೇ ಆಡುತ್ತಿದ್ದೆವು, ಊಟ-ತಿಂಡಿ ಮಾಡುತ್ತಿದ್ದೆವು. ನಮಗೆ ನಮ್ಮ ಬ್ಯಾಕ್‌ಗ್ರೌಂಡ್, ನಾವು ಅಣ್ಣಾವ್ರ (Dr Rajkumar) ಫ್ಯಾಲಿಗೆ ಸೇರಿದವರು, ದೊಡ್ಮನೆ ಸಂಬಂಧಿಕರು ಅನ್ನೋ ಯಾವುದೇ ಭಾವನೆಯೇ ಇರಲಿಲ್ಲ. ಹಲವರು ನಮ್ಮನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ಹೊರಗಡೆ ಹೋದಾಗ ನಮ್ಮನ್ನು ಮಾತನಾಡಿಸುತ್ತಿದ್ದರು ಅನ್ನೋದು ಬಿಟ್ಟರೆ ನಮಗೆ ಹೆಚ್ಚಿನ ವಿಶೇಷವಾದ ಭಾವನೆ ಇರಲಿಲ್ಲ. ನಮಗೆ ಅನ್ನೋ ಬದಲು ನನಗೆ ಅನ್ನಬಹುದು. ಆಗಲೂ ನಾನು ಹೀಗೇ ಇದ್ದೆ, ಈಗಲೂ ಹಾಗೇ ಇದ್ದೇನೆ!

ಅಪ್ಪ ನೋಡಿದ್ದ ಬ್ಯೂಟೀನಾ ಮಗನೂ ನೋಡ್ಬಹುದು; ಮತ್ತೆ ಬರಲಿದ್ದಾರೆ ಸಿಲ್ಕ್‌ ಸ್ಮಿತಾ!

ದೊಡ್ಡ ಮಾಮ ಡಾ ರಾಜ್‌ಕುಮಾರ್ ಅವರ ಮನೆಗೆ ಹೋಗೋದು, ಅವರ ಜೊತೆ ಒಡನಾಡೋಡುದು ಇವೆಲ್ಲಾ ನಮಗೆ ಸಾಮಾನ್ಯ ಸಂಗತಿಗಳೇ ಆಗಿದ್ದವು. ನನ್ನ ಅಣ್ಣ ಚಿಕ್ಕವನಿದ್ದಾಗಲೇ ನಟನೆ ಮಾಡಿ, ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದವನು. ಆದರೆ, ಮನೆಯಲ್ಲಿ ಸಾಮಾನ್ಯರಂತೆ ಇರುತ್ತಿದ್ದೆವು. ನಮಗೆ ನಾವೇನೋ ಮಾಡಿದೀವಿ, ಗ್ರೇಟ್ ಅನ್ನೋ ಭಾವನೆ ಯಾವತ್ತೂ ಇರಲಿಲ್ಲ. ನಾನು ನನ್ನ ಬಗ್ಗೆ ಮಾತ್ರ ಮಾತನಾಡಬೇಕು ಎಂದರೆ ನನಗಂತೂ ಇರಲೇಇಲ್ಲ. ಎಲ್ಲರಂತೆ, ಸಾಮಾನ್ಯರಂತೆ ಬೆಳೆದೆ, ನಟನೆಗೆ ಬಂದೆ, ನನಗೆ ಸಿಕ್ಕ ಅವಕಾಶ ಬಳಸಿಕೊಂಡೆ ಅಷ್ಟೇ.

ನನ್ನ 'ಚಂದ್ರ ಚಕೋರಿ' ಚಿತ್ರ (Chandra Chakori) ತೆರೆಗೆ ಬಂದಾಗ ಅದನ್ನು ದೊಡ್ಡ ಮಾಮ ನೋಡಲು ಆಗಲಿಲ್ಲ. ಅವರಿಗಾಗ ವಿಪರೀತ ಕಾಲು ನೋವಿತ್ತು. ಅವರನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟೆವಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ನನ್ನ ಮೊದಲ ಚಿತ್ರ ಚಂದ್ರ ಚಕೋರಿ ನೋಡಲಿಲ್ಲ. ಆದರೆ, ಅದರ ಒಂದು ಹಾಡು ನೋಡಿ 'ಪರ್ವಾಗಿಲ್ಲ, ಚೆನ್ನಾಗಿ ಕಾಣಿಸ್ತೀಯ..' ಅಂದಿದ್ರು. ಅದು ಬಿಟ್ರೆ, ಸಿನಿಮಾ ಬಗ್ಗೆ ಅಥವಾ ಬೇರೆ ಏನೂ ಮಾತುಕತೆ ಇರಲಿಲ್ಲ. ನೆಂಟರ ಮನೆಗೆ ಹೋದಾಗ ಹೇಗಿರುತ್ತೋ ಹಾಗೆ. 

ಶಿವ ಮಾಮ, ಪುನೀತ್ ಮಾಮ, ರಾಘು ಮಾಮ ಎಲ್ಲರೂ ನಾವು ಮಾತನಾಡಿಕೊಂಡು, ಆಡಿಕೊಂಡು ಹಾಯಾಗಿ ಕಾಲ ಕಳೆದಿದ್ದೇವೆ. ಅವರಂತೆ ಅಥವಾ ಯಾರಂತೆ ಆಗಲು ನಾನು ಯಾವತ್ತೂ ಪ್ರಯತ್ನ ಪಟ್ಟವನಲ್ಲ. ದೊಡ್ಡ ಮಾಮನ ನಟನೆಯಾಗಲೀ ಅಥವಾ ಪುನೀತ್ ಮಾಮ (Puneeth Rajkumar) ಸೇರಿದಂತೆ ಚಿಕ್ಕ ಮಾಮಂದಿರ ನಟನೆಯನ್ನಾಗಲೀ ನಾನು ಕಾಪಿ ಮಾಡಿಲ್ಲ. ನಾನು ನಾನಾಗಿದ್ದೇನೆ, ನನ್ನಂತೆ ನಾನಿದ್ದೇನೆ. ಹೀಗಿರು ಹಾಗಿರು ಅಂತ ನನಗೆ ನಮ್ಮನೆಯಲ್ಲಿ ಅಥವಾ ಬೇರೆ ಯಾರೂ ಹೇಳಿ ಕೊಟ್ಟಿಲ್ಲ. ನನಗೆ ಬೇಕಾದಂತೆ ನಾನಿದೀನಿ ಅಷ್ಟೇ. 

ವೈರಲ್ ವಿಡಿಯೋದಲ್ಲಿ ಕಿಚ್ಚ ಸುದೀಪ್ ಮಾತು ಕೇಳಿ ಫ್ಯಾನ್ಸ್ ಏನ್ ಅಂತಿದಾರೆ?

ಇಲ್ಲಿ ಯಾರನ್ನೂ ಯಾರೂ ಕಾಪಿ ಮಾಡುವ ಅಗತ್ಯವಿಲ್ಲ ಅನ್ನೋದು ನನ್ನ ಭಾವನೆ. ಅದು ನನ್ನ ಅಣ್ಣನೇ ಆಗಿರಲಿ ಅಥವಾ ಮಾಮಂದಿರೇ ಆಗಿರಲೀ, ಕಾಪಿ ಬದುಕು ಅಗತ್ಯವಿಲ್ಲ..' ಎಂದಿದ್ದಾರೆ ಶ್ರೀಮುರಳಿ. ಅಂದಹಾಗೆ, ಬಘೀರ ಚಿತ್ರವು ನಿರೀಕ್ಷೆಗೆ ತಕ್ಕ ಫಲ ಕೊಡಲಿಲ್ಲ ಎನ್ನಬಹುದಾದರೂ ನಿರಾಸೆಯನ್ನೂ ಮಾಡಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸುವ ನಟ ಶ್ರೀಮುರಳಿ ಅವರು 'ದೋಣಿ ಸಾಗಲಿ ಮುಂದೆ ಹೋಗಲಿ..' ಎಂಬಂತೆ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನಬಹುದು. 

 

Latest Videos
Follow Us:
Download App:
  • android
  • ios