- Home
- Entertainment
- TV Talk
- ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!
ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!
ಕಳೆದ ವರ್ಷ ಮದುವೆ ಮಾಡಿಕೊಂಡಿದ್ದ ಶೋಭಿತಾ ಶಿವಣ್ಣ ಅವರು ಇದೀಗ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ...

ಕನ್ನಡದ, ತೆಲುಗು ಕಿರುತೆರೆ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು ಈ ಶೋಭಿತಾ.
ಇನ್ನು ಕಿರುತೆರೆಯಲ್ಲಿ ಬ್ರಹ್ಮಗಂಟು ಹಾಗೂ ನಿನ್ನಿಂದಲೇ ಧಾರಾವಾಹಿಯಲ್ಲಿ ಸಹ ನಟಿಸಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಾ ಅಲ್ಲೇ ಹೈದ್ರಾಬಾದ್‌ನಲ್ಲಿ ನೆಲೆಸಿದ್ದರು.
ಕಳೆದ ವರ್ಷ ಮದುವೆ ಮಾಡಿಕೊಂಡಿದ್ದ ಶೋಭಿತಾ ಶಿವಣ್ಣ ಅವರು ಇದೀಗ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಕರ್ನಾಟಕ, ಹಾಸನ ಜಿಲ್ಲೆ ಸಕಲೇಶಪುರ ಮೂಲದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರೊ ಮಾಹಿತಿ ಇದೆ. ಸದ್ಯ ಫಸ್ಟ್ ಡೇ ಫಸ್ಟ್ ಶೋ ಸಿನಿಮಾದಲ್ಲಿ ನಟಿ ಶೋಭಿತಾ ಶಿವಣ್ಣ ನಟಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿ ಹೈದರಾಬಾದ್‌ನಲ್ಲಿ ಸದ್ಯ ಸೆಟಲ್ ಆಗಿದ್ದರು. ಇನ್ನು ನಟಿ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ನಿನ್ನೆ ರಾತ್ರಿ ನಡೆದಿರೋ ಏನೋ ಘಟನೆ ಎನ್ನುವ ಮಾಹಿತಿ ಇದೆ.
ಮದುವೆ ಆದಾಗಿನಿಂದ ಸಿನಿಮಾ ಇಂಡಸ್ಟ್ರಿಯಿಂದ ಶೋಭಿತಾ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಹೈದರಾಬಾದ್‌ನಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಬೆಂಗಳೂರಿಗೆ ಮೃತದೇಹ ತರೋ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಸನದ ಸಕಲೇಶಪುರದಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ನಟಿ ಶೋಭಿತಾ ಕನ್ನಡದ 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಗಾಳಿಪಟ, ಮಂಗಳಗೌರಿ, ಕೋಗಿಲೆ, ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು ಮತ್ತು ಮನೆದೇವ್ರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾಲ್ಲಿ ಎರಡೊಂದ್ಲ ಮೂರು ಸಿನಿಮಾದಲ್ಲಿ ಚಂದನ್ ಮತ್ತು ಶ್ವೇತಾ ಪಂಡಿತ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು. ಇವರಿಗೆ ಟಿವಿ ಅಥವಾ ಸಿನಿಮಾಗಳಲ್ಲಿ ಕನಸು ಇರಲಿಲ್ಲ ಎನ್ನಲಾಗಿದೆ.
ವಿದ್ಯಾರ್ಥಿ ದಿನಗಳಲ್ಲಿ ನೃತ್ಯ ಮಾಡುವ ಮೂಲಕ ತನ್ನ ಆಸಕ್ತಿ ಹೊಂದಿದ್ದರು. ಇವರ ನಿರಂತರ ಶ್ರಮದಿಂದ ಟಿವಿ ನಿರೂಪಕಿಯಾಗಿ ಬಂದರು. ನಂತರ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದರು.