ಮೋಕ್ಷಿತಾ ಪೈ ಹತ್ತು ವರ್ಷಗಳ ಹಿಂದೆ ಮಗುವಿನ ಅಪಹರಣದಲ್ಲಿ ಭಾಗಿಯಾಗಿದ್ದ ಆರೋಪ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣ ಈ ಹಿಂದೆ ಮುಕ್ತಾಯಗೊಂಡಿದ್ದರೂ, ಬಿಗ್ ಬಾಸ್ ಸ್ಪರ್ಧಿಯಾಗಿರುವ ಮೋಕ್ಷಿತಾ ಗೆಲುವಿನ ಹಂತಕ್ಕೆ ಬರುತ್ತಿರುವಾಗ ಈ ಸುದ್ದಿ ಪುನರುಜ್ಜೀವನಗೊಂಡಿದೆ. ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ಮೋಕ್ಷಿತಾ ಪರ ಬೆಂಬಲ ವ್ಯಕ್ತಪಡಿಸಿ, ಅನಗತ್ಯ ನಕಾರಾತ್ಮಕ ಪ್ರಚಾರದ ಬಗ್ಗೆ ಪ್ರಶ್ನಿಸಿದ್ದಾರೆ.

ಸೋಶಿಯಲ್ ಮೀಡೀಯಾದಲ್ಲಿ (Social Media) ಸದ್ಯ ಭಾರಿ ಸದ್ದು ಮಾಡುತ್ತಿರುವಂತಹ ಸುದ್ದಿ ಅಂದ್ರೆ ಅದು ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿರುತೆರೆ ನಟಿಯಾಗಿರುವ ಮೋಕ್ಷಿತಾ ಪೈ (Mokshitha Pai) ಕುರಿತು. ಮೋಕ್ಷಿತಾ ಹತ್ತು ವರ್ಷಗಳ ಹಿಂದೆ ತನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ ಮಗುವನ್ನು ಕಿಡ್ನಾಪ್ ಮಾಡಿಸಿದ್ದರು ಎನ್ನುವ ವಿಡೀಯೋ, ಹಳೆಯ ಫೋಟೊ, ಸುದ್ದಿಗಳು ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ. ಈ ಕುರಿತಂತೆ, ಪರ, ವಿರೋಧ ಕಾಮೆಂಟ್ ಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೋಕ್ಷಿತ ಕಳೆದ ನಾಲ್ಕು ವರ್ಷಗಳಿಂದ ಪಾರು ಧಾರಾವಾಹಿಯಲ್ಲಿ (Paaru Serial) ನಟಿಸಿದ್ದರು, ಆವಾಗ ಇಲ್ಲದ ಈ ಕಿಡ್ನಾಪ್ ಸುದ್ದಿ, ಇದೀಗ ಬಿಗ್ ಬಾಸ್ ಕೊನೆಯ ಹಂತಕ್ಕೆ ಬರುತ್ತಿರುವ ಹೊತ್ತಿಗೆ, ಈ ರೀತಿಯ ಸುದ್ದಿಗಳು ಹರಿದಾಡುತ್ತಿರುವುದು ಯಾಕೆ ಅನ್ನೋದು ಸಹ ಪ್ರಶ್ನೆಯಾಗಿ ಉಳಿದಿದೆ. 

ಬಿಗ್ ಬಾಸ್‌ಗೆ ಬರ್ತಿಲ್ಲ ಟಿಆರ್‌ಪಿ: ಬೇಕಂತಲೇ ಸ್ಪರ್ಧಿಗಳ ಹಳೇ ಫೋಟೋ, ವೀಡಿಯೋ ಟ್ರೆಂಡ್ ಆಗ್ತಿದ್ಯಾ?

ವಿಷ್ಯ ಏನು ಅನ್ನೋದು ನಿಮಗೂ ಗೊತ್ತಿರುತ್ತೆ. ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಅಂದರೆ ಆವಾಗ ಮೋಕ್ಷಿತಾಗೆ 20ವರ್ಷ, ಆಗಷ್ಟೇ ಬಿ.ಕಾಂ ಮುಗಿಸಿದ್ದರು, ಜೊತೆಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಎಂಬಿಎ ಪದವೀಧರನಾಗಿಯೂ ನಿರುದ್ಯೋಗಿ ಆಗಿದ್ದ ಗೆಳೆಯನಿಗಾಗಿ ಖತರ್ನಾಕ್‌ ಪ್ಲ್ಯಾನ್‌ ಮಾಡಿ ತನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ, 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪ ಇವರ ಮೇಲಿದೆ. ಆ ಸಂದರ್ಭದಲ್ಲಿ ಮೋಕ್ಷಿತಾ ಹೆಸರು ಐಶ್ವರ್ಯ ಪೈ ಎಂದು ಇತ್ತು. ನಂತರ 2017ರಲ್ಲಿ ಇವರ ತಪ್ಪಿಲ್ಲ ಅನ್ನೋದು ಸಾಭೀತಾಗಿ ಕೇಸು ಕೊನೆಗೊಂಡಿದ್ದೂ ಆಗಿದೆ. ಇದೆಲ್ಲಾ ವಿಚಾರ ಇದೀಗ ಬಿಗ್ ಬಾಸ್ ಮುಗಿಯುತ್ತಿರುವ ಹೊತ್ತಿದೆ ಸದ್ದು ಮಾಡುತ್ತಿದೆ. 

ಇದರ ನಡುವೆ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಹಾಗೂ ನಟಿ ಸಂಗೀತ ಶೃಂಗೇರಿ (Sangeetha Sringeri) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಮೆಸೇಜ್ ಬರೆದು ಸ್ಟೋರಿ ಹಾಕಿಕೊಂಡಿದ್ದು, ನಟಿ ಮೋಕ್ಷಿತಾ ಪೈ ವಿರುದ್ಧ ಹರಿದಾಡುತ್ತಿರುವ ಮಾಹಿತಿಯನ್ನು ವಿರೋಧಿಸಿ, ಮೋಕ್ಷಿತಾ ಪರ ಧ್ವನಿ ಎತ್ತಿದಂತಿದೆ. ಸಂಗೀತಾ ಶೃಂಗೇರಿ ಪೋಸ್ಟ್ ಹೀಗಿದೆ. 

ಗುಂಪನ್ನು ಕುರುಡಾಗಿ ನಂಬಬೇಡಿ. ಯಾರ ಬಗ್ಗೆ ಆದರೂ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ ಬೆಂಬಲಿಸಿರಿ. ಕಾಮೆಂಟ್ ಮಾಡುವ ಜನರಿಗೆ ನಿಜವಾದ ಮುಖಗಳಿವೆಯೋ? ಇಲ್ಲವೋ? ಎಂಬುದು ನಿಮಗೆ ಗೊತ್ತಿಲ್ಲ. ಅಪರಿಚಿತ ವ್ಯಕ್ತಿಯ ಹೇಳಿಕೆಯನ್ನು ನಂಬುತ್ತೀರಾ? ಅದು ಯಾವುದೇ ವ್ಯಕ್ತಿಯ ಗೌರವವನ್ನು ಹಾಳು ಮಾಡಲು, ಯಾರಾದರೂ ಹಣ ಕೊಟ್ಟು ಅಥವಾ ಏರ್ಪಡಿಸಿದ ಕೆಲಸ ಆಗಿರಬಹುದಲ್ಲವೇ? 

ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮಕ್ಕಳ ಕಳ್ಳಿ? ಪಾರು ಸೀರಿಯಲ್‌ ನಟಿಯ ಮುಗ್ಧತೆ ಹಿಂದೆ ಕರಾಳ ಮುಖ!

ಇದು ಯಾರನ್ನಾದರೂ ಬೆಂಬಲಿಸಬೇಕೆಂದು ಹೇಳಿದ ಮಾತಲ್ಲ. ಇದು ಕೇವಲ ಒಂದು ಚಿಂತನೆ. ಯಾಕೆ ಈ ರೀತಿ ಸಡನ್ ಆಗಿ ನೆಗೆಟಿವ್ ವಿಷಯಗಳು ಹಲವಾರು ಪೇಜ್ ಗಳಲ್ಲಿ ಪ್ರವಾಹದಂತೆ ಹರಿಯುತ್ತಿದೆ. ಅದಕ್ಕೂ ಪ್ರಸ್ತುತ ಸ್ಥಿತಿಗೂ ಸಂಬಂಧವೇ ಇಲ್ಲ, ಆದರೂ ಯಾಕಿಷ್ಟು ನೆಗೆಟಿವಿಟಿ. ಪ್ರಸ್ತುತ ಪರಿಸ್ಥಿತಿಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ, ಏನೋ ಅರ್ಥಹೀನ ನಕಾರಾತ್ಮಕವಾಗಿ ಹಲವಾರು ಪುಟಗಳಲ್ಲಿ ಏಕೆ ಹರಡುತ್ತೀರಿ? 

ಅದರಲ್ಲೂ ಕೂಡ ಈಗ ನಡೆಯುತ್ತಿರುವ ರಿಯಾಲಿಟಿ ಶೋಗಳಿಗೆ ಸಂಬಂಧಿಸಿದಂತೆ, ಅದೂ ಸಹ ಕೊನೆಯ ಹಂತದಲ್ಲಿರುವಾಗ ಇದೆಲ್ಲಾ ಮಾಡೋದು ಸರೀನಾ ಎಂದು ಪ್ರಶ್ನಿಸಿದ್ದಾರೆ ಸಂಗೀತ ಶೃಂಗೇರಿ. ಜೊತೆಗೆ ನಾನು ಇದನ್ನ ಯಾವುದೇ ನಿರ್ಧಿಷ್ಟ ವ್ಯಕ್ತಿಯನ್ನು ಉದ್ದೇಶಿಸಿ ಹೇಳುತ್ತಿಲ್ಲ ಅಂತಾನೂ ಹೇಳಿದ್ದಾರೆ.