ಬಿಗ್ ಬಾಸ್‌ಗೆ ಬರ್ತಿಲ್ಲ ಟಿಆರ್‌ಪಿ: ಬೇಕಂತಲೇ ಸ್ಪರ್ಧಿಗಳ ಹಳೇ ಫೋಟೋ, ವೀಡಿಯೋ ಟ್ರೆಂಡ್ ಆಗ್ತಿದ್ಯಾ?
ಈ ಬಾರಿಯ ಬಿಗ್‌ಬಾಸ್ ಮೊದಲ ವಾರದಲ್ಲಿ ಭರ್ಜರಿ ಟಿಆರ್‌ಪಿ ಪಡೆದುಕೊಂಡಿತ್ತು. ಆದರೆ, ನಂತರದ ದಿನಗಳಲ್ಲಿ ಟಿಆರ್‌ಪಿ ಮೊದಲಿನಷ್ಟು ಸದ್ದು ಮಾಡಿರಲಿಲ್ಲ. ಇದರ ಬೆನ್ನಲ್ಲಿಯೇ ಬಿಗ್ ಬಾಸ್ ಮೇಲೆ ದೊಡ್ಡ ಆರೋಪ ಕೇಳಿ ಬಂದಿದೆ.
ಈ ಬಾರಿ ಬಿಗ್ ಬಾಸ್ ವಿಶೇಷ. ಏಕೆಂದರೆ, ಈ ಬಾರಿಯ ಬಿಗ್ ಬಾಸ್ ಕನ್ನಡದ ಮೊದಲ ವಾರದ ಎಪಿಸೋಡ್‌ಗೆ ಹಿಂದೆಂದಿಗಿಂತಲೂ ಹೆಚ್ಚಿನ ಟಿಆರ್‌ಪಿ ಸಿಕ್ಕಿತ್ತು. ಆದರೆ, ಅದನ್ನು ಮುಂದುವರಿಸಿಕೊಂಡು ಹೋಗಲು ಬಿಗ್ ಬಾಸ್ ಶೋಗೆ ಸಾಧ್ಯವಾಗಿಲ್ಲ. ಇದರ ನಡುವೆ ಶೋನ ನಿರೂಪಕ ಕಿಚ್ಚ ಸುದೀಪ್ ಇದೇ ತಮ್ಮ ಕೊನೆಯ ಆವೃತ್ತಿ ಎಂದು ಹೇಳಿರುವುದು, ಇದಕ್ಕೆ ಸಂಘಟಕರ ಮೇಲಿನ ಸಿಟ್ಟು ಕಾರಣ ಎಂದಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಎಲ್ಲದರ ನಡುವೆ ಬಿಗ್ ಬಾಸ್‌ನ ಟಿಆರ್‌ಪಿ ಏರು-ಪೇರು ಆಗುತ್ತಲೇ ಇದ್ದವು. ಸಾಮಾನ್ಯವಾಗಿ ಬಿಗ್ ಬಾಸ್ ಶೋ ಮುಕ್ತಾಯದ ಹಂತ ಬಂದಾಗ ಅಥವಾ ಬಿಗ್‌ಬಾಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಇಲ್ಲದೇ ಇದ್ದಾಗಲೇ ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳ ಅಸಲಿ ಸೀಕ್ರೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಈ ಬಾರಿಯೂ ಅದೇ ರೀತಿ ಆಗಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷದ ಬಿಗ್ ಬಾಸ್ ಸಮಯದಲ್ಲಿ ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವಿನಯ್ ಗೌಡ ಕುರಿತಾದ ಇಂಥದ್ದೇ ವಿಡಿಯೋಗಳು ವೈರಲ್ ಆಗುತ್ತಿದ್ದವು. ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಲು ಆರಂಭ ಮಾಡುತ್ತಿದ್ದಂತೆ 'ಎಷ್ಟೇ ಹಣ ಕೊಟ್ಟರು ನಾನು ಬಿಗ್ ಬಾಸ್ ಮನೆಗೆ ಹೋಗೋದಿಲ್ಲ' ಎಂದು ಸಂಗೀತಾ ಹೇಳಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದವು. ಅದೇ ರೀತಿ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ವಿಡಿಯೋಗಳನ್ನು ಕಾಲ ಕಾಲಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದವು. ಈ ಬಾರಿಯೂ ಅಂಥದ್ದೇ ಘಟನೆಗಳು ಪುನರಾವರ್ತನೆ ಆಗುತ್ತಿದೆ. ಆದರೆ, ಇದ್ಯಾಕೆ ಹೀಗೆ ಅನ್ನೋದನ್ನ ನೋಡೋದಾದರೆ, ಇದರಲ್ಲಿ ಸ್ವತಃ ಬಿಗ್ ಬಾಸ್ ಕೈವಾಡವೂ ಇರಬಹುದು ಅನ್ನೋ ಅನುಮಾನ ಬರಲಾರಂಭಿಸಿದೆ.
ಮೋಕ್ಷಿತಾ ಪೈ ಮಕ್ಕಳ ಕಳ್ಳಿ ಪೋಸ್ಟ್: ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಬಲಿಷ್ಠ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಹಂತದಲ್ಲಿಯೇ 10 ವರ್ಷದ ಹಿಂದೆ 'ಅವರದ್ದು' ಎನ್ನಲಾಗುವ ಕಿಡ್ನಾಪ್ ಕೇಸ್ ಸ್ಟೋರಿ ವೈರಲ್ ಆಗಿದೆ. ಇಲ್ಲಿಯವರೆಗೂ ಅದು ಸುದ್ದಿಯಲ್ಲೇ ಇದ್ದಿರಲಿಲ್ಲ. ಆದರೆ, ಬಿಗ್‌ಬಾಸ್‌ನಲ್ಲಿ ಟಿಆರ್‌ಪಿ ಡೌನ್ ಆಗುವ ಲಕ್ಷಣ ಕಾಣುವಾಗಲೇ ಮೋಕ್ಷಿತಾ ಪೈ ಕಿಡ್ನಾಪ್ ಕೇಸ್‌ನ ವಿಡಿಯೋವನ್ನು ವೈರಲ್ ಆಗಿದೆ. ಇದರಲ್ಲಿ ಮೋಕ್ಷಿತಾ ಹೆಸರು ಐಶ್ವರ್ಯಾ ಅಂತಿದೆ. 2017ರಲ್ಲಿ ಈ ಕೇಸ್ ಇತ್ಯರ್ಥ ಕೂಡ ಆಗಿದೆ. ಇಷ್ಟೆಲ್ಲಾ ಇದ್ದರೂ, ಈ ಹಂತದಲ್ಲಿ ಆಕೆಯ 10 ವರ್ಷದ ಹಿಂದಿನ ಘಟನೆಯನ್ನು ವೈರಲ್ ಮಾಡಿದ್ದು ಯಾರು ಅನ್ನೋದು ಎಲ್ಲರ ಎದುರಿಗೆ ಇರುವ 'ಬಿಗ್' ಪ್ರಶ್ನೆಯಾಗಿದೆ.
ಗೌತಮಿ ಜಾಧವ್ ಮದುವೆಯಲ್ಲಿ ಕಿಚ್ಚ ಸುದೀಪ್: ಬಿಗ್ ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಗಳಾಗಿ ಕಾಣುತ್ತಿರುವ ಮತ್ತೊಬ್ಬ ಸ್ಪರ್ಧಿ ಕಿರುತೆರೆ ನಟಿ ಗೌತಮಿ ಜಾಧವ್. ಪಾಸಿಟಿವ್ ಗೌತಮಿ ಜಾಧವ್ ಎಂದೇ ಟ್ರೆಂಡ್ ಆಗಿರುವ ಗೌತಮಿ ಜಾಧವ್ ಅವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಶೇಷವೇನಿಲ್ಲ. ಆದರೆ, ಕಿಚ್ಚ ಸುದೀಪ್ ಆಕೆಯ ಮದುವೆಗೆ ಬಂದಿದ್ದನ್ನು ವಿನಾಕಾರಣ ವೈರಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಗೌತಮಿ ಜಾಧವ್ ಇತ್ತೀಚೆಗೆ ಮದುವೆ ಆದವರೇನಲ್ಲ. ಆದರೆ, ಆಕೆಯ ಮದುವೆಯ ಕಿಚ್ಚ ಸುದೀಪ್ ಹೋಗಿದ್ದನ್ನೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ಹಿಂದಿರುವ 'ಬಿಗ್' ವ್ಯಕ್ತಿ ಯಾರು ಅನ್ನೋದೇ ಕುತೂಹಲ.
ಶಿಶಿರ್ ಮೊದಲ ಪತ್ನಿ: ಬಿಗ್ ಬಾಸ್ ಮನೆಯಲ್ಲಿರುವ ಮತ್ತೊಬ್ಬ ಸ್ಪರ್ಧಿ ಶಿಶಿರ್‌ಗೆ ಈಗಾಗಲೇ ಮದುವೆಯಾಗಿದೆ. ಅದನ್ನು ಅವರೂ ಕೂಡ ಸ್ವತಃ ಹೇಳಿಕೊಂಡಿದ್ದಾರೆ. ಆದರೆ, ಶಿಶಿರ್ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಹಂತದಲ್ಲಿ ಶಿಶಿರ್ ಅವರ ಮೊದಲ ಪತ್ನಿ ಯಾರು ಅನ್ನೋದರ ವಿವರ ಬಹಿರಂಗವಾಗಿದೆ.
ಬಿಗ್‌ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಮಕ್ಕಳ ಕಳ್ಳಿ? ಪಾರು ಸೀರಿಯಲ್ ನಟಿಯ ಮುಗ್ಧತೆ ಹಿಂದೆ ಕರಾಳ ಮುಖ!
ಈ ಮೂರೂ ವಿಚಾರಗಳನ್ನು ನೋಡುವುದಾದರೆ, ಇವರುಗಳು ಯಾರೂ ಇಂಡಸ್ಟ್ರಿಗಳಿಗೆ ಹೊಸಬರಲ್ಲ. ಆದರೆ, ಅವರ ಬಗ್ಗೆ ಗೊತ್ತಿಲ್ಲದೇ ಇರುವ ವಿಚಾರವನ್ನು ಅವರು ಈಗ ಟ್ರೆಂಡಿಂಗ್‌ನಲ್ಲಿರುವ ಹೊತ್ತಿನಲ್ಲಿ ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟು ಬೇಳೆ ಬೇಯಿಸಿಕೊಳ್ಳುತ್ತಿರುವವರು ಯಾರು ಅನ್ನೋದೇ ಈಗಿರುವ 'ಬಿಗ್' ಪ್ರಶ್ನೆಯಾಗಿದೆ.
ನಮ್ಮ ಮೆಟ್ರೋ ಫೇಸ್-3: ಬೆಂಗಳೂರಿನಲ್ಲಿ 11 ಸಾವಿರಕ್ಕೂ ಅಧಿಕ ಮರದ ಬುಡಕ್ಕೆ ಕೊಡಲಿ!