Asianet Suvarna News Asianet Suvarna News

ಪ್ರಭಾಸ್-ಶಾರುಖ್ ಫ್ಯಾನ್ಸ್ ಸೋಷಿಯಲ್ ವಾರ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಶಾಂತ್‌ ನೀಲ್!

ಸ್ಟಾರ್ ನಟರು ಎಂದಮೇಲೆ ಫ್ಯಾನ್ಸ್‌-ಫಾಲೋವರ್ಸ್‌ ಸಹಜ. ಆದರೆ, ಒಬ್ಬ ಸ್ಟಾರ್ ಫ್ಯಾನ್ಸ್ ಇನ್ನೊಬ್ಬ ಸ್ಟಾರ್‌ ಅಭಿಮಾನಿಯನ್ನು ದೂಷಿಸುವುದು ತಪ್ಪು. ಇಬ್ಬರೂ ಇಲ್ಲಿ ಕೆಲಸ ಮಾಡುತ್ತಾರೆ, ಇಬ್ಬರೂ ಇಲ್ಲಿ ಉಳಿಯಬಯಸುತ್ತಾರೆ ಅಷ್ಟೇ. 

Prashanth Neel reacts for social media war between Prabhas and Shah Rukh Khan fans srb
Author
First Published Dec 30, 2023, 4:01 PM IST

ಶಾರುಖ್ ಖಾನ್ ನಟನೆಯ ಡಂಕಿ ಹಾಗೂ ಪ್ರಭಾಸ್ ನಟನೆಯ ಸಲಾರ್ ಚಿತ್ರವು ಒಂದು ವಾರದ ಅಂತರದಲ್ಲಿ ಬಿಡುಗಡೆಯಾಗಿದೆ. ಆದರೆ, ಸಲಾರ್‌ ಚಿತ್ರವು ಡಂಕಿ ಚಿತ್ರಕ್ಕಿಂತ ಒಂದು ವಾರ ಮೊದಲೇ ಬಿಡುಗಡೆಯಾಗಿದೆ. ಆದರೆ ಸಲಾರ್ ಚಿತ್ರವು ಡಂಕಿ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್‌ ಮಾಡಿದೆ. ಈ ಸಂಗತಿಯೀಗ ಸೋಷಿಯಲ್ ಮೀಡಿಯಾಗಳಲ್ಲಿ ವಾರ್ ಸೃಷ್ಟಿ ಮಾಡಿದೆ. ಈ ಬಗ್ಗೆ ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. 

'ಡಂಕಿ ಹಾಗೂ ಸಲಾರ್ ಚಿತ್ರಗಳು ಒಂದಕ್ಕೊಂದು ಕಾಂಪಿಟೀಶನ್ ಕೊಡಲು ತೆರೆಗೆ ಬಂದಿಲ್ಲ. ನಟ ಶಾರುಖ್‌ ಖಾನ್ ಹಾಗೂ ನಟ ಪ್ರಭಾಸ್ ಫ್ಯಾನ್ಸ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಅನಾವರ್ಶಯಕ ಕಿತ್ತಾಟ ನಡೆಸುತ್ತಿದ್ದಾರೆ. ನಾನು ಇದನ್ನು ಸ್ವಲ್ಪ ಕಾಲದಿಂದ ಗಮನಿಸುತ್ತಿದ್ದೇನೆ. ನನಗೆ ಅಚ್ಚರಿಯಾಗುತ್ತಿದೆ, ಏಕೆಂದರೆ ಯಾವುದೇ ಸಿನಿಮಾ ಇನ್ನೊಂದು ಸಿನಿಮಾಗೆ ಖಂಡಿತವಾಗಿಯೂ ಸ್ಪರ್ಧೆ ಕೊಡಲು ಬರುವುದಿಲ್ಲ. ಇಬ್ಬರೂ ಒಂದೇ ಉದ್ಯಮದಲ್ಲಿ ಉಳಿಯುವ ಪ್ರಯತ್ನದಲ್ಲಿ ಇದ್ದೀವಿ. ಇಲ್ಲಿ ಯಾರೂ ಯಾರಿಗೂ ಕಾಂಪಿಟೀಟರ್ ಅಲ್ಲವೇ ಅಲ್ಲ. 

ವಿಜಯ್‌ಕಾಂತ್‌ ಅವರದು ಸಹಜ ಸಾವಲ್ಲ, ಕೊಲೆ; ಗಂಭೀರ ಆರೋಪ ಮಾಡಿದ ಖ್ಯಾತ ನಿರ್ದೇಶಕ!

ಸ್ಟಾರ್ ನಟರು ಎಂದಮೇಲೆ ಫ್ಯಾನ್ಸ್‌-ಫಾಲೋವರ್ಸ್‌ ಸಹಜ. ಆದರೆ, ಒಬ್ಬ ಸ್ಟಾರ್ ಫ್ಯಾನ್ಸ್ ಇನ್ನೊಬ್ಬ ಸ್ಟಾರ್‌ ಅಭಿಮಾನಿಯನ್ನು ದೂಷಿಸುವುದು ತಪ್ಪು. ಇಬ್ಬರೂ ಇಲ್ಲಿ ಕೆಲಸ ಮಾಡುತ್ತಾರೆ, ಇಬ್ಬರೂ ಇಲ್ಲಿ ಉಳಿಯಬಯಸುತ್ತಾರೆ ಅಷ್ಟೇ. ಇದು ಕ್ರಿಕೆಟ್ ಮ್ಯಾಚ್ ತರಹ ಯಾರೋ ಒಬ್ಬರು ಗೆಲ್ಲುವ ಬಗ್ಗೆ ಅಲ್ಲ. ಇಬ್ಬರೂ ಗೆಲ್ಲುವ ಬಗ್ಗೆ, ಇಬ್ಬರೂ ಪ್ರೇಕ್ಷಕರನ್ನು ಮನರಂಜಿಸಲು ಬಯಸುವ ಬಗ್ಗೆ ಆಗಿದೆ. ಸಿನಿಮಾ  ಕಲೆಕ್ಷನ್‌ನಲ್ಲಿ ಹೆಚ್ಚುಕಡಿಮೆ ಆಗಬಹುದು. ಆದರೆ, ಖಂಡಿತ ಇದು ಸ್ಪರ್ಧೆ ಅಥವಾ ಯುದ್ಧ ಮಾಡುವ ಸಂಗತಿಯೇ ಅಲ್ಲ. 

ಬಾಕ್ಸಾಫೀಸ್ ನಲ್ಲಿ 305 ಕೋಟಿ ಗಳಿಸಿದ ಕಿಂಗ್ ಖಾನ್ ಶಾರುಖ್ ಡಂಕಿ; ಯಾಕಾಯ್ತು ಕಡಿಮೆ ಕಲೆಕ್ಷನ್?

ನನಗೆ ಅಚ್ಚರಿಯಾಗುವ ಸಂಗತಿ ಎಂದರೆ, ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಕೆಟ್ಟ ಕೆಟ್ಟ ಕಾಮೆಂಟ್‌ಗಳು ಹರಿದಾಡುತ್ತವೆ. ಇದನ್ನು ನಿಲ್ಲಿಸಲು ಪ್ರಯತ್ನ ಪಡುವದು ಅಸಾಧ್ಯ. ಏಕೆಂದರೆ ಅದನ್ನೆಲ್ಲ ಮಾಡುತ್ತಾ ಕುಳಿತಿರಲು ಯಾರಿಗೂ ಸಮಯವಿಲ್ಲ. ಆದರೆ, ಅದು ಹಾಗೇ ಪಾಸ್ ಆಗಲು ಬಿಡುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಏಕೆಂದರೆ, ಸ್ವಲ್ಪ ಸಮಯದ ಬಳಿಕ ಅದು ಹೊರಟುಹೋಗುತ್ತದೆ. ನಿಲ್ಲಿಸಲು ಪ್ರಯತ್ನ ಪಟ್ಟರೆ ಅದು ಎಲ್ಲರ ಗಮನ ಸೆಳೆಯಲು ಶುರು ಮಾಡುತ್ತದೆ. ಆದರೆ, ಒಂದು ಮಾತು ಸತ್ಯ, ಇಲ್ಲಿ ಎಲ್ಲರೂ ಉಳಿಯಬೇಕು, ಬೆಳೆಯಬೇಕು, ಜನರಿಗೆ ಮನರಂಜನೆ ನೀಡುತ್ತಿರಬೇಕು' ಎಂದಿದ್ದಾರೆ ಪ್ರಶಾಂತ್ ನೀಲ್. 

ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ

Follow Us:
Download App:
  • android
  • ios