ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ; ಗಂಭೀರ ಆರೋಪ ಮಾಡಿದ ಖ್ಯಾತ ನಿರ್ದೇಶಕ!
ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ ಎಂದಷ್ಟೇ ಹೇಳದ ಮಲಯಾಳಂ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷೆ ಕೊಡಿ ಎಂದು ಅವರು ರಾಜಕಾರಣಿ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ.
ನಟ ಹಾಗೂ ರಾಜಕಾರಣಿ ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ ಎಂದು ಮಲಯಾಳಂನ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ನಟ ಹಾಗು ವಿಜಯ್‌ಕಾಂತ್ ಅವರು ಸಹಜವಾಗಿ ಸತ್ತಿಲ್ಲ, ಅವರನ್ನು ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ ಎಂದಿದ್ದಾರೆ ಆಲ್ಫೋನ್ಸ್ ಪುತ್ರೇನ್ (Alphones Puthren).ಈ ಬಗ್ಗೆ ಮಲಯಾಳಂ ನಿರ್ದೇಶಕ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವಿಜಯ್‌ಕಾಂತ್ ಅವರದು ಸಹಜ ಸಾವಲ್ಲ, ಕೊಲೆ ಎಂದಷ್ಟೇ ಹೇಳದ ಮಲಯಾಳಂ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷೆ ಕೊಡಿ ಎಂದು ಅವರು ರಾಜಕಾರಣಿ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಕೊಲೆ ಮಾಡಿರುವುದು ಯಾರು ಎಂದೂ ತಾವು ಕೇಳಿರುವುದಾಗಿ ಅವರು ಹೇಳಿದ್ದಾರೆ.
ಕ್ಯಾಪ್ಟನ್ ವಿಜಯ್‌ಕಾಂತ್ ಅವರನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಬೇಕು. ನೀವು ಅದನ್ನು ನಿರ್ಲಕ್ಷ ಮಾಡಿದರೆ, ನಿಮ್ಮ ಹಾಗೂ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈ ಮೊದಲು ಇಂಡಿಯನ್ 2 ಸಿನಿಮಾ ಸೆಟ್‌ನಲ್ಲಿ ಸ್ಟಾಲಿನ್ ಹಾಗೂ ಕಮಲ್ ಹಾಸನ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಈಗ ವಿಜಯ್‌ಕಾಂತ್ ಅವರನ್ನು ಪ್ಲಾನ್ ಮಾಡಿ ಮುಗಿಸಲಾಗಿದೆ. ದಯವಿಟ್ಟು ಇದನ್ನೆಲ್ಲ ಸೀರಿಯಸ್ ಆಗಿ ತೆಗೆದುಕೊಳ್ಳಿ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಮುಗೀತು ಪ್ರಭಾಸ್ ಕಥೆ ಅಂತಿದ್ದವರ ಕೆನ್ನೆಗೆ ಬಿತ್ತು ಭಾರೀ ತಪರಾಕಿ; ಡಾರ್ಲಿಂಗ್ ಮಿಂಚಿಂಗ್!
ಅಂದಹಾಗೆ, ನಟ ಹಾಗು ರಾಜಕಾರಣಿ ವಿಜಯ್‌ಕಾಂತ್ ಅವರು ಡಿಸೆಂಬರ್ 28ರಂದು ನಿಧನರಾಗಿದ್ದಾರೆ. ನಿನ್ನೆ ಚೆನ್ನೈನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ನಟ ರಜನಿಕಾಂತ್ ಸೇರಿದಂತೆ ಬಹಳಷ್ಟು ಜನ ಕಲಾವಿದರು, ರಾಜಕಾರಣಿಗಳು ಹಾಜರಿದ್ದು ಅಗಲಿದ ವಿಜಯ್‌ಕಾಂತ್ ಅವರ ಅಂತಿಮ ದರ್ಶನ ಪಡೆದು ಅವರಿಗೆ ಗೌರವನಮನ ಸಲ್ಲಿಸಿದರು. ಈ ವೇಳೆ ಖ್ಯಾತ ತಮಿಳು ನಟ ದಳಪತಿ ವಿಜಯ್ ಅವರ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದು ಅವಾಂತರ ಮಾಡಿದ್ದಾರೆ. ಇದನ್ನು ಪಕ್ಷಬೇಧ ಮರೆತು ಎಲ್ಲರೂ ಖಂಡಿಸಿದ್ದು ಗಮನಿಸಬೇಕಾದ ಸಂಗತಿ.
ಬಾಕ್ಸಾಫೀಸ್ ನಲ್ಲಿ 305 ಕೋಟಿ ಗಳಿಸಿದ ಕಿಂಗ್ ಖಾನ್ ಶಾರುಖ್ ಡಂಕಿ; ಯಾಕಾಯ್ತು ಕಡಿಮೆ ಕಲೆಕ್ಷನ್?
ಒಟ್ಟಿನಲ್ಲಿ, ಇದೀಗ ಮಲಯಾಳಂ ನಿರ್ದೇಶಕರೊಬ್ಬರು ವಿಜಯ್‌ಕಾಂತ್ ಅವರ ಸಾವು ಆಕಸ್ಮಿಕವಲ್ಲ, ಅದು ಸಹಜ ಸಾವಲ್ಲ, ಕೊಲೆ ಎಂದಿರುವುದು ತೀವ್ರ ಸಂಚಲನ ಸೃಷ್ಟಿಸಿದೆ ಎನ್ನಬಹುದು. ಏಕೆಂದರೆ, ಈ ಹೇಳಿಕೆಯಿಂದ ತಮಿಳು ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಲಿದೆ. ಜತೆಗೆ, ಪಕ್ಷಗಳ ಮಧ್ಯೆ ಕೆಸರೆರಚಾಟ ಆಗಲಿರುವುದು ಪಕ್ಕಾ ಎನ್ನಬಹುದು.
ಚೆನ್ನೈನಲ್ಲಿ ಖ್ಯಾತ ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ; ಕಿಡಿಗೇಡಿ ವಿರುದ್ಧ ತೀವ್ರಗೊಂಡ ಆಕ್ರೋಶ