ಚಿತ್ರೀಕರಣ ಮುಗಿಸಿ ತನ್ನ ಭಾವೀ ಪತಿ ಜೊತೆ ಹೊಟೇಲ್‌ವೊಂದರಲ್ಲಿ ತಂಗಿದ್ದ ನಿರೂಪಕಿ ಚಿತ್ರಾ ನಿಗೂಢ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ನಾನಾ ರೀತಿಯಲ್ಲಿ ತಿರುವು ಪಡೆದುಕೊಂಡರೂ, ಅಭಿಮಾನಿಗಳು, ನಟ-ನಟಿಯರು ಹಾಗೂ ಕುಟುಂಬದ ಒತ್ತಡದಿಂದ ಆರ್‌ಡಿಓ ಅಧಿಕಾರಿಗಳಿಗೆ ವಿಚಾರಣೆ ನಡೆಸಲು ಆದೇಶಿಸಲಾಗಿತ್ತು.

ಖ್ಯಾತ ನಟಿಯ ಆತ್ಮಹತ್ಯೆ: ಗುಟ್ಟಾಗಿ ಮದುವೆಯಾಗಿದ್ದ ಪತಿ ಅರೆಸ್ಟ್ 

ಆರಂಭದಲ್ಲಿ ಖಿನ್ನತೆ, ಒತ್ತಡ ಹಾಗೂ ವರದಕ್ಷಿಣಿ ಕಿರುಕುಳ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿದ್ದ ಕಾರಣ ಆರ್‌ಡಿಓ ಅಧಿಕಾರಿಗಳು ಚಿತ್ರಾಗೆ ಹತ್ತಿರವಾಗಿದ್ದ 15 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ 16 ಪುಟಗಳ ವರದಿ ರೆಡಿ ಮಾಡಲಾಗಿದ್ದು, ಶೀಘ್ರವೇ ಅದರಲ್ಲಿರುವ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ಹೇಳಲಾಗಿದೆ. 

ಚೆನ್ನೈನ ಪೊಲೀಸರು ಚಿತ್ರಾ ಮೊಬೈಲ್‌ನ ಪೋನ್‌ ಕಾಲ್‌ ಹಾಗೂ ಮೆಸೇಜ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದರಲ್ಲಿ ಚಿತ್ರಾ ತನ್ನ ಭಾವೀ ಪತಿ ಬಗ್ಗೆ ಮಾತನಾಡಿರುವ ವಾಯ್ಸ್‌ ನೋಟ್‌ ಸಿಕ್ಕಿದ್ದು, ಹೇಮಂತ್ ಅದನ್ನು ಡಿಲೀಟ್ ಮಾಡಿದ್ದರು. ಆದರೆ ಸೈಬರ್ ಕ್ರೈಂ ಪೊಲೀಸರು ಅದನ್ನು ರಿಟ್ರೀವ್ ಮಾಡುವ ಮೂಲಕ ವಾಯ್ಸ್‌ ನೋಟ್‌ ಪಡೆದುಕೊಂಡಿದ್ದಾರೆ. ಒಂದು ವಾಯ್ಸ್‌ ಮೆಸೇಜ್‌ನಲ್ಲಿ ಚಿತ್ರಾ ತಮ್ಮ ಪತಿ ಹೇಮಂತ್‌, ಮಾವನೊಟ್ಟಿಗೆ ಅಸಭ್ಯವಾಗಿ ನಡೆದುಕೊಳ್ಳುವ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. 

ಇತ್ತೀಚೆಗಷ್ಟೇ ನಡೆದಿತ್ತು ನಿಶ್ಚಿತಾರ್ಥ: ನಟಿ ಚೈತ್ರಾ ಆತ್ಮಹತ್ಯೆ ಬಗ್ಗೆ ಭಾವೀ ವರ ಹೇಳಿದ್ದಿಷ್ಟು 

ಪಾಂಡಿಯನ್ ಸ್ಟೋರ್ಸ್‌ ಟಿವಿ ಸೀರಿಸ್‌ ಚಿತ್ರೀಕರಣದ ವೇಳೆ ಚಿತ್ರಾ ಅನೇಕ ಬಾರಿ ಹೇಮಂತ್‌ ಜೊತೆ ಫೋನಿನಲ್ಲಿ ಮಾತನಾಡುವಾಗ ಕಿರುಚಾಡಿರುವುದನ್ನು ಸೆಟ್‌ನಲ್ಲಿದ್ದವರು ಗಮನಿಸಿದ್ದಾರೆ. ಸಾಕಷ್ಟು ಬಾರಿ ಇದರಿಂದ ಹೊರ ಬರಲು ಸಹಾಯ ಮಾಡುವಂತೆ ಮಾವನನ್ನು ಬೇಡಿಕೊಳ್ಳುತ್ತಿದ್ದರು, ಎಂಬ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಚಿತ್ರಾ ಪರ ನಿಂತಿರುವ ಅಭಿಮಾನಿಗಳು 16 ಪುಟದ ಮಾಹಿತಿಗಾಗಿ ಕಾಯುತ್ತಿದ್ದಾರೆ.