Asianet Suvarna News Asianet Suvarna News

ಅಪ್ಪನಿಂದ ದೂರವಿರಲು ಮನೆ ಬಿಟ್ಟು ಮುಂಬೈ ಸೇರಿಕೊಂಡಿದ್ದೆ, ಈಗ ಮಗನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ: ವಿನಯ್ ಗೌಡ

ನನಗೆ ಆಗ ಅಪ್ಪನ ಬೆಲೆ, ಅಪ್ಪನ ಮನಸ್ಸಿನ ಉದಾರತೆ, ಅಪ್ಪನ ಮಾತಿನ ಬೆಲೆ, ಅಪ್ಪ ಹೇಳುತ್ತಿದ್ದ ಬುದ್ಧಿಮಾತುಗಳ ಬೆಲೆ ಯಾವುದೂ ಗೊತ್ತಾಗಲಿಲ್ಲ. ಹೋಗಲಿ, ಅಪ್ಪ ಎಂಬ ಜೀವಕ್ಕೆ ಮಗು ಎಂಬುದು ಎಷ್ಟು ಅಮೂಲ್ಯ ಸಂಬಂಧ ಎಂಬುದೂ ಆಗ ತಿಳಿಯಲಿಲ್ಲ. ಆದರೆ, ಈಗ ನನಗೆ ಮಗ ಇರುವಾಗ, ನಾನು ಅಪ್ಪನ ಸ್ಥಾನದಲ್ಲಿ ನಿಂತಿರುವಾಗ ನನಗೆ ಅಪ್ಪ-ಮಗನ ಬಾಂಧವ್ಯ ಅರಿವಾಗುತ್ತಿದೆ.

Vinay gowda talks about his father memory in Bigg Boss season 10 srb
Author
First Published Oct 26, 2023, 7:20 PM IST

ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಆದೇಶದಂತೆ ಎಲ್ಲರೂ ಫೈರ್ ಕ್ಯಾಂಪ್ ಸುತ್ತ ಕುಳಿತು ತಮ್ಮ ತಮ್ಮ ವ್ಯಥೆ ಕತೆಗಳನ್ನು ಹೇಳಿಕೊಂಡಿದ್ದಾರೆ. ಬಹಳಷ್ಟು ಸ್ಪರ್ಧಿಗಳು ತಾವು ಲೈಫಿನಲ್ಲಿ ಮಾಡಿದ ತಪ್ಪುಗಳ ಬಗ್ಗೆಯೇ ಮಾತನಾಡಿದ್ದಾರೆ. ಹಲವರು ತಮ್ಮ ಮನಸ್ಸಿನಲ್ಲಿ ಮಡುಗಟ್ಟಿದ್ದ ನೋವನ್ನು ಹಂಚಿಕೊಂಡಿದ್ದಾರೆ. ಸ್ಪರ್ಧಿಗಳಲ್ಲಿ ಒಬ್ಬರಾದ ವಿನಯ್ ಹಂಚಿಕೊಂಡ ವ್ಯಥೆಯ ಕತೆ ಅಲ್ಲಿದ್ದ ಹಲವರ ಹಾಗೂ ವೀಕ್ಷಕರ ಮನಸ್ಸನ್ನು ಕಲಕಿದೆ. 

ಬಿಗ್ ಬಾಸ್ ಸ್ಪರ್ಧಿ ವಿನಯ್ 'ಸುಮಾರು 21 ವರ್ಷದವನಾಗಿದ್ದಾಗ ನಾನು ನನ್ನ ಅಪ್ಪನ ಜತೆ ವೈಮನಸ್ಯ ಹೊಂದಿದ್ದೆ. ಅದಕ್ಕಾಗಿ ನಾನು ಮನೆ ಬಿಟ್ಟು ಮುಂಬೈ ಸೇರಿಕೊಂಡೆ. ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ನಟನಾಗಿ ಗುರುತಿಸಿಕೊಂಡೆ. ಆದರೆ, ಅಪ್ಪನ ಜತೆ ಹೆಚ್ಚುಕಡಿಮೆ ಮಾತೇ ಆಡುತ್ತಿರಲಿಲ್ಲ. ಆದರೆ ನಾನು ಸೂಪರ್ ಜೋಡಿ ರಿಯಾಲಿಟಿ ಶೋ ಮಾಡಿದಾಗ ಅಪ್ಪ ನನ್ನನ್ನು ಟಿವಿಯಲ್ಲಿ ನೋಡಿ ತುಂಬಾ ಖುಷಿ ಪಟ್ಟರಂತೆ. ಅಷ್ಟೇ ಅಲ್ಲ, ನನ್ನ ಮಗ ಅಂತ ತುಂಬಾ ಜನರ ಬಳಿ ಗರ್ವದಿಂದ ಹೇಳಿಕೊಂಡರಂತೆ. 

ಆದರೆ, ನನಗೆ ಆಗ ಅಪ್ಪನ ಬೆಲೆ, ಅಪ್ಪನ ಮನಸ್ಸಿನ ಉದಾರತೆ, ಅಪ್ಪನ ಮಾತಿನ ಬೆಲೆ, ಅಪ್ಪ ಹೇಳುತ್ತಿದ್ದ ಬುದ್ಧಿಮಾತುಗಳ ಬೆಲೆ ಯಾವುದೂ ಗೊತ್ತಾಗಲಿಲ್ಲ. ಹೋಗಲಿ, ಅಪ್ಪ ಎಂಬ ಜೀವಕ್ಕೆ ಮಗು ಎಂಬುದು ಎಷ್ಟು ಅಮೂಲ್ಯ ಸಂಬಂಧ ಎಂಬುದೂ ಆಗ ತಿಳಿಯಲಿಲ್ಲ. ಆದರೆ, ಈಗ ನನಗೆ ಮಗ ಇರುವಾಗ, ನಾನು ಅಪ್ಪನ ಸ್ಥಾನದಲ್ಲಿ ನಿಂತಿರುವಾಗ ನನಗೆ ಅಪ್ಪ-ಮಗನ ಬಾಂಧವ್ಯ ಅರಿವಾಗುತ್ತಿದೆ. ನನ್ನ ಮಗನ ಜತೆ ನಾನು ಚೆನ್ನಾಗಿರುವಾಗ ನನಗೆ ಆಗುವ ಸಂತೋಷ ನನ್ನ ಅಪ್ಪನಿಗೆ ನಾನು ಕೊಡಲಿಲ್ಲ ಎಂದು ಸಂಕಟವಾಗುತ್ತದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ಪ್ರತಿಯೊಂದು ಧಾರಾವಾಹಿನಲ್ಲೂ ಎರಡೆರಡು ಹೀರೋಯಿನ್, ಥೂ  

ನನ್ನ ಅಪ್ಪ ನನ್ನನ್ನು ಸ್ಕೂಲಿನಿಂದ ಮನೆಗೆ ಕರೆದುಕೊಂಡು ಬರುವಾಗ ನನಗೆ ಬನ್ ಹಾಗೂ ಐಸ್‌ಕ್ರೀಂ ಅಥವಾ ಜ್ಯೂಸ್ ಕೊಡಿಸುತ್ತಿದ್ದರು. ಈಗ ನಾನೂ ನನ್ನ ಮಗನಿಗೆ ಅದನ್ನು ಮಾಡುತ್ತಿದ್ದೇನೆ. ಆದರೆ, ಆಗ ಅದರ ಬೆಲೆ ತಿಳಿಯುತ್ತಿರಲಿಲ್ಲ, ಈಗ ತಿಳಿಯುತ್ತಿದೆ. ನನಗೆ ಅಪ್ಪನ ಜತೆ ಯಾಕೆ ಅಷ್ಟೊಂದು ವೈರತ್ವ ಇತ್ತು ಅನ್ನೋದೇ ನನಗೆ ಇಂದಿಗೂ ಅರ್ಥವಾಗದ ಒಗಟು ಎನ್ನಬಹುದು. ಅಪ್ಪನ ಕೊನೆ ಉಸಿರು ಹೋಗುವ ಮೊದಲು ನನ್ನನ್ನು ನೋಡಬೇಕೆಂದು ಆಸೆ ಪಟ್ಟಿದ್ದೆ, ಆದರೆ ಅದು ಸಾಧ್ಯವಾಗಲೇ ಇಲ್ಲ. ಅಪ್ಪನ ಉಸಿರು ಹೋದ ಮೇಲೆ ನಾನು ಆಸ್ಪತ್ರೆಗೆ ಬಂದೆ. '

ಭಾಗ್ಯಲಕ್ಷ್ಮೀ: ಮನೆಗೇ ನುಗ್ಗಿ ಮನೆಮಂದಿ ಮುಂದೆಯೇ ತಾಂಡವ್‌ ತಬ್ಬಿಕೊಂಡ ಶ್ರೇಷ್ಠಾ, ಮುಂದಿದೆಯಾ ಗ್ರಹಚಾರ?

ವಿನಯ್ ಗೌಡ ಮಾತನ್ನು ಕೇಳುತ್ತಿದ್ದ ಉಳಿದ ಸ್ಪರ್ಧಿಗಳು ಕೂಡ ಕಣ್ಣೀರಾದರು. ಅಲ್ಲಿರುವ ಎಲ್ಲರಿಗೂ ತಮ್ಮತಮ್ಮ ಅಪ್ಪನ ನೆನಪಾಗಿರಬೇಕು. ಅದು ವಿನಯ್ ಗೌಡ ಅವರ ಸ್ಟೋರಿ ಮಾತ್ರ ಅಲ್ಲ, ಹಲವರ ಅನುಭವ ಅದೇ ಆಗಿರುತ್ತದೆ. ಹರೆಯದಲ್ಲಿ ಅರ್ಥವಾಗದ ಹಲವು ಸಂಗತಿಗಳಲ್ಲಿ 'ಅಪ್ಪನ ಪ್ರೀತಿ' ಕೂಡ ಒಂದು ಎನ್ನಬಹುದು. 

Follow Us:
Download App:
  • android
  • ios