Guppedantha Manasu: ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಭುವಿ ಮದುವೆ ಸನ್ನಿವೇಶದಲ್ಲಿ ವೀಕ್ಷಕರು ಸಿಟ್ಟಿಗೆದ್ದಿದ್ದರು, ಸೋಷಿಯಲ್‌ ಮೀಡಿಯಾದಲ್ಲಿ ಹಿಗ್ಗಾಮಗ್ಗ ಝಾಡಿಸುತ್ತಿದ್ದರು. ಅಂಥದ್ದೇ ಪೇಚಿಗೆ ಈಗ ತೆಲುಗು ಸೀರಿಯಲ್‌ ಸಿಲುಕಿದೆ. ಅದಕ್ಕೂ ಕನ್ನಡಕ್ಕೂ ಲಿಂಕ್‌ ಇದೆ. ಅದೇನು? ಏನದರ ಹಿಂದಿನ ಕಥೆ?

ಈಗೇನೋ ಕನ್ನಡತಿ ಸೀರಿಯಲ್ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಒಂದು ಟೈಮಲ್ಲಿ ಈ ಸೀರಿಯಲ್ ಪಾಪ್ಯುಲಾರಿಟಿ ಪೀಕ್‌ನಲ್ಲಿತ್ತು. ಅದು ಹರ್ಷ ಭುವಿ ಮದುವೆ ಸಂದರ್ಭ. ಲವ್ ಪ್ರೊಪೋಸ್ ಮಾಡೋದ್ರಿಂದ ಹಿಡಿದು ಮದುವೆ ಆಗೋವರೆಗೂ ಈ ಸೀರಿಯಲ್‌ನ ಜನ ಉಸಿರು ಬಿಗಿ ಹಿಡಿದು ನೋಡ್ತಿದ್ರು. ಎಮೋಶನಲ್ ಆಗಿ ಸಿಕ್ಕಾಪಟ್ಟೆ ಕನೆಕ್ಟ್ ಆಗಿದ್ರು. ಹೀಗಾಗಿ ನಾಯಕ ಹರ್ಷ ಮತ್ತು ನಾಯಕಿ ಭುವಿಗೆ ಪದೇ ಪದೇ ಬರೋ ಸಮಸ್ಯೆ, ತೊಂದರೆ, ಅಪಾಯ ವೀಕ್ಷಕರನ್ನು ರೊಚ್ಚಿಗೇಳೋ ಹಾಗೆ ಮಾಡಿತ್ತು. ಅದರಲ್ಲೂ ಮದುವೆ ಹಂತವನ್ನು ಭಿನ್ನ ರೀತಿಯಲ್ಲಿ ಚಿತ್ರೀಕರಿಸಲಾಗಿತ್ತು. ಈ ವೇಳೆಗಂತೂ ವೀಕ್ಷಕರ ಬಿಪಿ ಸಿಕ್ಕಾಪಟ್ಟೆ ಏರಿಸಿತ್ತು ಈ ಸೀರಿಯಲ್‌. ಈ ಸೀರಿಯಲ್‌ನ ಬೈಕಾಟ್ ಮಾಡ್ತೀವಿ ಅನ್ನೋ ಬೆದರಿಕೆಗಳು, ಸೀರಿಯಲ್ ಟೀಮ್‌ಗೆ ಬೈಗುಳಗಳೆಲ್ಲ ಪ್ರವಾಹದ ಹಾಗೆ ಹರಿದುಬಂದಿದ್ದವು. ಈ ಲೆವೆಲ್‌ಗೆ ಅಲ್ಲದಿದ್ದರೂ ಹೆಚ್ಚು ಕಮ್ಮಿ ಇದೇ ರೀತಿಯ ಪರಿಸ್ಥಿತಿ ತೆಲುಗು ಸೀರಿಯಲ್‌ ಒಂದಕ್ಕೂ ಬಂದಿದೆ. ಅದಕ್ಕೂ ಕನ್ನಡಕ್ಕೂ ಲಿಂಕ್ ಇದೆ.

ಆ ತೆಲುಗು ಸೀರಿಯಲ್‌ ಹೆಸರು 'ಗುಪ್ಪೆಡಂಥಾ ಮನಸು'. ಟಿಆರ್‌ಪಿ ರೇಟಿಂಗ್‌ನಲ್ಲಿ ಸಾಮಾನ್ಯವಾಗಿ ಎರಡನೇ ಸ್ಥಾನದಲ್ಲಿರುತ್ತೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಈ ಸೀರಿಯಲ್‌ ಯಾವಾಗ್ಲೂ ನಂಬರ್‌ ೧. ಈ ಸೀರಿಯಲ್‌ ಹೀರೋ ಹೀರೋಯಿನ್‌ ಮೇಲೆ ಪ್ರತಿನಿತ್ಯ ನೂರಾರು ರೀಲ್ಸ್‌ ಓಡಾಡ್ತನೇ ಇರ್ತವೆ. ಈ ಸೀರಿಯಲ್‌ ಶೂಟಿಂಗ್‌ ಟೈಮಲ್ಲಿ ಕದ್ದು ಮಾಡಿರೋ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡ್ತಾ ಇರುತ್ತವೆ. ರಿಯಾಲಿಟಿ ಶೋದಲ್ಲಿ ಈ ಜೋಡಿ ಭಾಗವಹಿಸಿದರೆ ಆ ಪ್ರೋಗ್ರಾಂ ರೇಟಿಂಗ್‌ ಗಬಕ್ಕನೆ ಮೇಲಕ್ಕೆ ಹೋಗುತ್ತೆ. ಈ ಪ್ರೋಗ್ರಾಂ ರೀಲ್ಸ್ ಹೈಪ್ ಕ್ರಿಯೇಟ್ ಮಾಡುತ್ತೆ. ರಿಷಿ ಮತ್ತು ವಸುಧಾರ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪಾಪ್ಯುಲರ್.

ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್‌ ಜೊತೆ ಜಗಳ ಮಾಡ್ಕೊಂಡು ಗಿಫ್ಟ್‌ ತೆಗೆಸಿಕೊಂಡ ನಿವೇದಿತಾ ಗೌಡ

ಈ ಸೀರಿಯಲ್‌ಗೂ ಕನ್ನಡಕ್ಕೂ ಎರಡು ಲಿಂಕ್ ಇದೆ. ಮೊದಲನೆಯದು ಈ ಸೀರಿಯಲ್‌ನ ಕನ್ನಡ ವರ್ಶನ್ 'ಹೊಂಗನಸು' ಅನ್ನೋ ಹೆಸರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತೆ. ಡಬ್ಬಿಂಗ್(Dubbing) ಸೀರಿಯಲ್ ಆದ್ರೂ ಇದಕ್ಕೆ ಸಖತ್ ಜನಪ್ರಿಯತೆ ಇದೆ. ಕನ್ನಡಿಗರಲ್ಲಿ ಹಲವರು ತೆಲುಗು ಒರಿಜಿನಲ್ ಸೀರಿಯಲ್‌ ಅನ್ನೂ ನೋಡ್ತಾರೆ. ಭಾಷೆ ಸ್ವಲ್ಪ ಮಟ್ಟಿಗೆ ಅರ್ಥ ಆಗುತ್ತೆ, ಆ ಜೋಡಿಯ ಆಕ್ಟಿಂಗ್ ಸಖತ್ತಾಗಿರುತ್ತೆ ಅಂತಾರೆ ಕನ್ನಡಿಗರು. ಸೋಷಿಯಲ್ ಮೀಡಿಯಾದಲ್ಲಿ ತೆಲುಗು ಪ್ರೊಮೋಗೆ ಕನ್ನಡದಲ್ಲೂ ಸಾಕಷ್ಟು ಕಮೆಂಟ್ಸ್ (comments)ಬರೋದು ಇದಕ್ಕೆ ತಾಜಾ ಉದಾಹರಣೆ. ಮತ್ತೊಂದು ಲಿಂಕ್ ಅಂದರೆ ಈ ಸೀರಿಯಲ್(Serial) ತೆಲುಗು ಭಾಷೆಯದ್ದೇ ಆದರೂ ಇದರ ಹೀರೋ, ಹೀರೋಯಿನ್, ಮುಖ್ಯಪಾತ್ರಧಾರಿಗಳು ಕನ್ನಡಿಗರು. ಮುಖೇಶ್ ಗೌಡ ಹೀರೋ. ಇವರಿಗೆ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಇವ್ರು ಮೈಸೂರಿನವರು. ಹೀರೋಯಿನ್ ಹೆಸರು ರಕ್ಷಾ ಗೌಡ. ಇವರೂ ಸಖತ್ ಫೇಮಸ್. ಜ್ಯೋತಿ ರೈ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೂ ಸಾಕಷ್ಟು ಅಭಿಮಾನಿ ಬಳಗ ಇದೆ.

ಈಗ ಮುಖ್ಯ ವಿಚಾರಕ್ಕೆ ಬಂದರೆ ಈ ಸೀರಿಯಲ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಬೈತಿದ್ದಾರೆ. ಕಾರಣ ಈ ಸೀರಿಯಲ್‌ನಲ್ಲೀಗ ಹೀರೋ ಹೀರೋಯಿನ್ ನಡುವೆ ಅಪನಂಬಿಕೆ ಬೆಳೆಯುತ್ತಿದೆ. ಗಾಢವಾಗಿ ಪ್ರೀತಿಸುತ್ತಿದ್ದ ಇಬ್ಬರೂ ಈಗ ದೂರವಾಗಿದ್ದಾರೆ. ಇಬ್ಬರ ನಡುವಿನ ನೋವು, ಬೇಜಾರುಗಳನ್ನೇ ಪದೇ ಪದೇ ತೋರಿಸಿ ಎಳೆದಾಡಲಾಗ್ತಿದೆ ಅನ್ನೋದು ವೀಕ್ಷಕರ ಕಂಪ್ಲೇಟ್(Complaint). ನೂರಾರು ಜನ ಈ ಸೀರಿಯಲ್‌ಗೆ ಬೈದು ಕಮೆಂಟ್ ಮಾಡ್ತಿದ್ದಾರೆ. ಈ ಸೀರಿಯಲ್‌ ಇನ್ಮುಂದೆ ನೋಡೋದಿಲ್ಲ ಅಂತ ಮುನಿಸಿಕೊಂಡು ಕೂತಿದ್ದಾರೆ. ಸೀರಿಯಲ್ ಟಿಆರ್‌ಪಿಯೂ(TRP) ಇಳಿದಂತಿದೆ. ಹೀಗೆ ಓಡಿಹೋಗುತ್ತಿರುವ ವೀಕ್ಷಕರನ್ನು ಮರಳಿ ಕರೆತರುವ ಟ್ರಿಕ್ ಏನು ಮಾಡ್ತಾರೆ ಈ ಸೀರಿಯಲ್ ಟೀಮ್‌ನವ್ರು ಅನ್ನೋದು ಸದ್ಯದ ಕುತೂಹಲ.

ಡಿಸ್ಟಿಂಕ್ಷನ್‌ನಲ್ಲಿ ಪದವಿ ಮುಗಿಸಿದ ಸಾನ್ಯಾ ಅಯ್ಯರ್; ಕಾಲೇಜ್‌ಗೆ ಹೋಗಿಲ್ಲ ಎಂದವರೆಗೆ ಕ್ಲಾಸ್ ತೆಗೆದುಕೊಂಡ ತಾಯಿ