ಬಿಗ್ ಬಾಸ್ ಮನೆಯಿಂದ ಹೋಗುವಾಗ ಕರ್ನಾಟಕದ ಜನತೆಯದಷ್ಟೇ ಅಲ್ಲ, ಕುಟುಂಬಸ್ಥರ ಪ್ರೀತಿಯನ್ನೂ ಮರಳಿ ಪಡೆಯುವ ಉತ್ಸಾಹದಲ್ಲಿದ್ದ ಪ್ರತಾಪ್‌ ಆಸೆಗೆ ಬರ ಸಿಡಿಲೊಂದು ಎರಗಿದೆ. 

ಡ್ರೋನ್ ಪ್ರತಾಪ್ ಈ ಬಾರಿ ಬಿಗ್ ಬಾಸ್ ಸೀಸನ್ 10ಕ್ಕೆ ಜನರಿಂದ ಬೈಸಿಕೊಳ್ಳುತ್ತಲೇ ಬಂದು, ತಮ್ಮ ಮುಗ್ಧತೆಯಿಂದ ಪ್ರೀತಿ ಗಳಿಸಿ, ಫಿನಾಲೆಯತ್ತ ಸಾಗಿರುವ ಸ್ಪರ್ಧಿ. ಗೆಲುವಿನ ಓಟದಲ್ಲಿರುವ ಪ್ರತಾಪ್ ಕೌಟುಂಬಿಕ ವಿಷಯವಾಗಿ ಬದುಕಿನಲ್ಲಿ ಮತ್ತೆ ಸೋಲನುಭವಿಸ್ತಾರಾ? ಹೀಗೊಂದು ಅನುಮಾನ ಮತ್ತೆ ತಲೆ ಎತ್ತಿದೆ. ಇದಕ್ಕೆ ಕಾರಣವೂ ಇದೆ.

ಕೆಲವು ಕಾರಣಗಳಿಂದಾಗಿ ಕಳೆದ 3 ವರ್ಷಗಳಿಂದ ಕುಟುಂಬದಿಂದ ದೂರ ಇರುವುದಾಗಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಇದು ಅವರಿಗೆ ಬಹಳಷ್ಟು ನೋವು ಕೊಟ್ಟಿರುವುದನ್ನು ಸಾಕಷ್ಟು ಬಾರಿ ಬಹಿರಂಗಪಡಿಸಿದ್ದರು. ತಮ್ಮ ತಂದೆ ತಾಯಿಯನ್ನು ನೆನೆದು ಕಣ್ಣೀರು ಸುರಿಸಿದ್ದರು. ಆದರೆ, ಬಿಗ್ ಬಾಸ್ ಮನೆ ಸಾಕಷ್ಟು ಟ್ವಿಸ್ಟ್ಸ್ ಆ್ಯಂಡ್ ಟರ್ನ್‌ಗೆ ಹೆಸರುವಾಸಿ. ಅಂತೆಯೇ ಕಡೆಗೂ ಪ್ರತಾಪ್ ತಂದೆ ಒಂದು ದಿನ ಕರೆ ಮಾಡಿ ಮಗನೊಂದಿಗೆ ಮಾತನಾಡಿದ್ದರು. ಆ ಕ್ಷಣ ಪ್ರತಾಪ್‌ಗಷ್ಟೇ ಅಲ್ಲ, ವೀಕ್ಷಕರಿಗೂ ಸಮಾಧಾನ, ಸಂತೋಷ ತಂದಿತ್ತು.

ಭಯ ಹುಟ್ಟಿಸಿದ ಭವಿಷ್ಯ!
ಕಳೆದ ವಾರ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಒಬ್ಬೊಬ್ಬರಾಗಿ ಎಂಟ್ರಿ ಕೊಟ್ಟು ಸಾಕಷ್ಟು ಭಾವುಕ ಕ್ಷಣಗಳು ಸೃಷ್ಟಿಯಾಗಿದ್ದವು. ಅದರಲ್ಲೂ ಡ್ರೋನ್ ಪ್ರತಾಪ್ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದಾಗ ಬಾಗಿಲು ತೆರೆಯದೆ ಕೇವಲ ಅವರ ದನಿ ಕೇಳಿದಾಗ ಪ್ರತಾಪ್ ಒದ್ದಾಡುವುದನ್ನು ನೋಡಿ ವೀಕ್ಷಕರ ಕಣ್ಣಲ್ಲಿಯೂ ನೀರು ಬಂದಿತ್ತು. ಕಡೆಗೂ ಅವರು ತಮ್ಮ ಪೋಷಕರನ್ನು ಭೇಟಿಯಾಗಿ ಮಾತನಾಡಿದ್ದರು. ಓಹ್ ಎಲ್ಲವೂ ಸರಿಯಾಯಿತು, ಬಿಗ್ ಬಾಸ್ ಮನೆಯಿಂದ ಹೋಗುವಾಗ ಕರ್ನಾಟಕದ ಜನತೆಯದಷ್ಟೇ ಅಲ್ಲ, ಕುಟುಂಬಸ್ಥರ ಪ್ರೀತಿಯನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದ ಪ್ರತಾಪ್‌ ಆಸೆಗೆ ಬರ ಸಿಡಿಲೊಂದು ಎರಗಿದೆ.
ಹೌದು, ಪ್ರತಾಪ್ ಕನಸಿಗೆ ನೀರೆರಚಿದ್ದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯ ಭವಿಷ್ಯ!



ಕಲರ್ಸ್ ಕನ್ನಡ ಚಾನೆಲ್ ಇಂದಿನ(2-1-2024) ಬಿಗ್ ಬಾಸ್ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಿಗ್ ಮನೆಗೆ ದಯ ಮಾಡಿಸಲಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಸ್ಪರ್ಧಿಗಳ ಭವಿಷ್ಯವನ್ನೂ ಹೇಳಲಿದ್ದಾರೆ. 
ಪ್ರೋಮೋದಲ್ಲಿ ಕಾಣುವಂತೆ, ಡ್ರೋನ್ ಪ್ರತಾಪ್‌ಗೆ ಗುರೂಜಿಯ ಭವಿಷ್ಯ ದಂಗು ಬಡಿಸುವಂತಿದೆ. ಏಕೆಂದರೆ, ಕುಟುಂಬದಿಂದ ದೂರವೇ ಇರುವಂತೆ ಪ್ರತಾಪ್‌ಗೆ ಗುರೂಜಿ ಸೂಚಿಸಿದ್ದಾರೆ. 



ಈ ವಿಷಯ ಹೇಳಲು ತಮಗೇ ಸಂಕಟವಾಗುತ್ತದೆ ಎಂದಿರುವ ಗುರೂಜಿ ಪ್ರತಾಪ್ ಕುಟುಂಬ ಜೀವನ ಸರಿಯಿಲ್ಲ. ಹೀಗಾಗಿ, ಕುಟುಂಬದಿಂದ ದೂರವಿದ್ದು ಧೂಪವಾಗ್ಯ್ತೋ, ಹತ್ತಿರವಾಗಿ ಹೇಸಿಗೆಯಾಗ್ತೀಯೋ ನೀನೇ ನಿರ್ಧರಿಸು ಎಂದು ಪ್ರತಾಪ್‌ಗೆ ಹೇಳಿದ್ದಾರೆ. ಇದನ್ನು ಕೇಳಿ ಕಣ್ಣೀರು ಸುರಿಸ್ತಿದಾರೆ ಪ್ರತಾಪ್. 

Kaatera : ನಾಲ್ಕು ದಿನದಲ್ಲಿ 'ಕಾಟೇರ' ಗಳಿಸಿದ್ದೆಷ್ಟು..? ಸಿನಿಮಾ ನೋಡಿ ಮೆಚ್ಚಿದ ಸಚಿವ ಪ್ರಲ್ಹಾದ್ ಜೋಶಿ..!

ನಮ್ರತಾ ಗೌಡ ಬದುಕಲ್ಲಿ ಹೊಸ ಬೆಳಕು!
ಇಷ್ಟೇ ಅಲ್ಲ, ಕಾಲಿಗೆ ಟ್ಯಾಟೂ ಹಾಕಿಸಿಕೊಂಡ ದಿನದಿಂದ ಗ್ರಹಚಾರ ಒಕ್ಕರಿಸಿದೆ ಎಂದು ರೈತ ವರ್ತೂರು ಸಂತೋಷ್‌ಗೆ ಹಾಗೂ ಬದುಕಿನಲ್ಲಿ ಹೊಸ ಬೆಳಕು ಹಾಗೂ ಹೊಸ ವ್ಯಕ್ತಿಯ ಆಗಮನವಾಗುವುದಾಗಿ ನಟಿ ನಮ್ರತಾ ಗೌಡಗೆ ಗುರೂಜಿ ಹೇಳಿದ್ದಾರೆ. ಉಳಿದ ಸ್ಪರ್ಧಿಗಳ ಭವಿಷ್ಯ ಏನು ಹೇಳಿದ್ದಾರೆ, ಯಾರು ವಿನ್ ಆಗಬಹುದು ಇತ್ಯಾದಿ ವಿವರಗಳನ್ನು ತಿಳಿಯಲು ಇಂದಿನ ಸಂಚಿಕೆಯನ್ನು ವೀಕ್ಷಿಸಬೇಕು. 

ಯಾರು ಈ ಸ್ವಾಮೀಜಿ?
ನಿಖರ ಭವಿಷ್ಯ ಹೇಳುವುದರಲ್ಲಿ ನಿಸ್ಸೀಮರೆನಿಸಿರುವ ಶ್ರೀ ವಿದ್ಯಾಶಂಕರ ಸರಸ್ವತಿ ಗುರೂಜಿಯವರು ತಮ್ಮದೇ ಆದ ಶಂಕರಾನಂದ ಟಿವಿ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಇದರಲ್ಲಿ ಜ್ಯೋತಿಷ್ಯ ಸಂಬಂಧ ವಿಚಾರಗಳ ಬಗ್ಗೆ ತಿಳಿಸಿಕೊಡುತ್ತಾ ಜನಪ್ರಿಯರಾಗಿದ್ದಾರೆ.