ಮದ್ವೆನೇ ಬೇಡ ಅಂತಿದ್ದ ಸಂಗೀತಾ ಶೃಂಗೇರಿ; ಡೇಟ್ ಫಿಕ್ಸ್ ಮಾಡೇಬಿಟ್ರು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ!
2024 ಹೇಗಿರಲಿದೆ? ಸಂಗೀತ ಶೃಂಗೇರಿ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಸರಸ್ವತಿ ಗುರೂಜಿ ಮಾತುಗಳು....
ಕಲರ್ಸ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಹೊಸ ವರ್ಷವನ್ನು ಸರಳವಾಗಿ ಆಚರಿಸಿದ್ದಾರೆ. ಶೀಘ್ರದಲ್ಲಿ ಆರಂಭವಾಗುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ಜೊತೆಗೂ ಮಾತನಾಡಿ ಅವರ 2024 ವರ್ಷ ಹೇಗಿರಲಿದೆ ಎಂದು ಹೇಳಿದ್ದಾರೆ. ಸಂಗೀತಾ ಶೃಂಗೇರಿ. ನಮ್ರತಾ ಗೌಡ, ವರ್ತೂರ್ ಸಂತೋಷ, ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ ಮಾತನಾಡಿರುವುದನ್ನು ಮಾತ್ರ ತೋರಿಸಲಾಗಿದೆ.
ಮದುವೆನೇ ಬೇಡ ಎನ್ನುತ್ತಿದ್ದ ಸಂಗೀತಾ ಶೃಂಗೇರಿ ಅಮ್ಮನವರಿಗೆ ಹಾಕಿದ್ದ ಹೂಗಳಲ್ಲಿ ಕೆಲವೊಂದು ದಳಗಳನ್ನು ಕಿತ್ತು ಗುರೂಜಿ ಮುಂದೆ ಇಡುತ್ತಾರೆ. 'ನನ್ನ ಜಾತಕದಲ್ಲಿ ಇರುವುದು ಶ್ರೀದೇವಿ ಅಂತ ಆದರೆ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವುದು ಸಂಗೀತಾ ಶೃಂಗೇರಿ' ಎನ್ನುತ್ತಾರೆ. 'ಎಲ್ಲರದರಲ್ಲೂ ಪ್ರಥಮ ಬೇಕು ಅಂತ ಕೇಳ್ತೀರಾ ಆದರೆ ಮನಸ್ಸಿನಲ್ಲಿ ತುಂಬಾ ಹಿಂಸೆ ಇದೆ. ಬಿಗ್ ಬಾಸ್ ಮನೆಯಲ್ಲಿ ಅಂತಲ್ಲ ಹೊರಗಡೆ ಆಗಲಿಂದಲೂ ಅಷ್ಟೆ. ನಿಮ್ಮ ಏನೋ ಇಂದು ಉದ್ವೇಗ. ಏನೋ ಒಂದು ರೀತಿ ಆತಂಕ ಇದೆ. ಮನಸ್ಸಿಗೆ ಸಂಬಂಧಪಟ್ಟ ವ್ಯಾಕುಲತೆ. ತುಂಬಾ ನಂಬಿಬಿಟ್ಟಿದ್ರಿ. ಅದ್ಯಾಕೋ ಬೇಸರ ಬಂದಿರಬೇಕಲ್ವಾ? ಎಲ್ಲರ ಬದುಕಿನಲ್ಲೂ ಹೀಗೆ ಇರುತ್ತದೆ. ಮುಂದೆ ಹೋಗಬೇಕು' ಎಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಮಾತನಾಡಿದ್ದಾರೆ.
ಎಷ್ಟು ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ: ಸಂಗೀತಾ ಪ್ರಶ್ನೆಗಳಿಗೆ ಅತ್ತಿಗೆ ಖಡಕ್ ಉತ್ತರ, ವಿನಯ್ ಮೌನ!
'ನಿಮ್ಮ ಕೊರೆಗಳನ್ನು ನೀಗಿಸಯವಂತಹ ಮತ್ತೊಬ್ಬ ವ್ಯಕ್ತಿ ಬರಲಿದ್ದಾರೆ. ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಇದ್ಯಾ? ಎಂದು ಗುರೂಜಿ ಕೇಳುತ್ತಾರೆ. ಮದುವೆ ಬೇಡವೇ ಬೇಡ ಮದುವೆ ಆಗಲು ಇಷ್ಟವಿಲ್ಲ ಎನ್ನುತ್ತಾರೆ ಸಂಗೀತಾ. 2024ರಲ್ಲಿ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ. ನಿಮ್ಮ ವೃತ್ತಿ ಜೀವನ ಮೇಲೆ ಹೋಗುತ್ತದೆ. ಕೆಳಗೂ ಬರುತ್ತದೆ. ನಿಮ್ಮ ಕೆರಿಯರ್ ಹಾಗೂ ಪರ್ಸನಲ್ ಲೈಫ್ ಚೆನ್ನಾಗಿ ಹೋಗುತ್ತಾರೆ. 2025ರ ನಂತರ ನಿಮ್ಮ ಮದುವೆ ನಡೆಯಲಿದೆ. ಸಂಗಾತಿ ಬಂದ ಮೇಲೆ ನಿಮ್ಮ ಜೀವನ ಇನ್ನೂ ಚೆನ್ನಾಗಿ ನಡೆಯುತ್ತದೆ' ಎಂದು ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ.
ಮಾತುಕತೆ ಮುಗಿದ ನಂತರ ಆಶೀರ್ವಾದ ಪಡೆಯುವ ಸಮಯದಲ್ಲಿ ಇಲ್ಲಿ ನಾನು ಗೆಲ್ಲುತ್ತೀನಾ ಎಂದು ಸಂಗೀತಾ ಕೇಳಿದಾಗ 'ಅರ್ಹತೆ ಇರುವರು ಖಂಡಿತಾ ಟ್ರೋಫಿ ಗೆಲ್ಲುತ್ತಾರೆ' ಎಂದಿದ್ದಾರೆ.